ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹಿಂದಿನ ಕಾಲದಲ್ಲಿ ಹಿಂದೂ ಸಮಾಜದಲ್ಲಿ ಅಮಾವಾಸ್ಯೆಯಂದು ತಿಂಗಳ ರಜೆಯನ್ನಾಗಿ ನೀಡಲಾಗುತ್ತಿತ್ತು. ಪ್ರತಿತಿಂಗಳೂ ಅವಮಾಸ್ಯೆಯಂದು ರಜೆ ಇತ್ತು. ಅಮಾವಾಸ್ಯೆಯು ಶುಭವಲ್ಲವೆಂದು ಯಾರೂ ಕೆಲಸ ಮಾಡುತ್ತಿರಲಿಲ್ಲ. ಪ್ರಯಾಣವನ್ನೂ ಕೂಡಾ ಅಮವಾಸ್ಯೆಯಂದು ಮಾಡುತ್ತಿರಲಿಲ್ಲ.ಚಂದ್ರನ ಚಕ್ರವು ಜಲಮೂಲಗಳ ಮೇಲೆಯೂಪ್ರಭಾವ ಬೀರುತ್ತದೆ ಇದರಿಂದಾಗಿ ಸಮುದ್ರದಲ್ಲೂ ಉಬ್ಬರವಿಳಿತಗಳೂ ಕಂಡು ಬರುತ್ತದೆ. ಮನುಷ್ಯನನಡವಳಿಕೆಯ ಮೇಲೂ ಚಂದ್ರನು ಪ್ರಭಾವಬೀರುವುದರಿಂದ ವ್ಯಕ್ತಿಯು ಪ್ರಕ್ಷುಬ್ಧನಾಗಬಹುದು, ಇತರರಿಗೆ ಕಿರಿಕಿರಿಯುಂಟು ಮಾಡಬಹುದುಅಥವಾ ಇತರರಿಗೆ ಕೆಟ್ಟವನಾಗಬಹುದು. ಆದ್ದರಿಂದ ಅಮಾವಾಸ್ಯೆ ಹಾಗೂ ಹುಣ್ಣಿಯ ಕುರಿತುಹಲವಾರು ಆಚರಣೆಗಳು, ನಂಬಿಕೆಗಳು ಇವೆ.
ಅಮಾವಾಸ್ಯೆ ಒಳ್ಳೆಯದೇ? : ಅನೇಕರಲ್ಲಿ ಅಮಾವಾಸ್ಯೆಯ ದಿನ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಅಮಾವಾಸ್ಯೆಯ ದಿನ ದುಷ್ಟ ಶಕ್ತಿಗಳು ಶಕ್ತಿ ಪಡೆಯುತ್ತದೆ ಹಾಗೂ ಸ್ವತಂತ್ರವಾಗಿ ಓಡಾಡುತ್ತದೆ ಎನ್ನುತ್ತಾರೆ. ಮಾಟ ಮಂತ್ರಗಳನ್ನು ಮಾಡುವವರಿಗೆ ಅಮಾವಾಸ್ಯೆ ಸೂಕ್ತ ದಿನ ಎನ್ನಲಾಗುತ್ತದೆ. ದೀಪಾವಳಿಯಂದು ಬರುವ ಅಮಾವಾಸ್ಯೆಯನ್ನೂ ಅತ್ಯಂತ ದೋಷ ಪೂರಿತ ಅಮವಾಸ್ಯೆ ಎಂದು ಕರೆಯುತ್ತಾರೆ. ಹಾಗಾಗಿ ದೀಪಾವಳಿಯಂದು ದೇವರನ್ನು ಪೂಜಿಸಿ, ದುಷ್ಟಶಕ್ತಿಗಳು ಬರದಂತೆ ದೀಪಗಳನ್ನು ಹಚ್ಚುತ್ತಾರೆ. ದೇಶದ ಕೆಲವೊಂದು ಭಾಗಗಳಲ್ಲಿ ಮಹಾಕಾಳಿಯು ದುಷ್ಟಶಕ್ತಿಗಳನ್ನು ನಾಶ ಮಾಡುವುದರಿಂದ ಅಮಾವಾಸ್ಯೆಯಂದು ಮಹಾಕಾಳಿಯನ್ನು ಆರಾಧಿಸುತ್ತಾರೆ.
ಹುಣ್ಣಿಮೆ : ಹುಣ್ಣಿಮೆ ಅಥವಾ ಪೌರ್ಣಮಿಯು ಸಮೃದ್ಧಿ ಹಾಗೂ ದೈವತ್ವಕ್ಕೆ ಸಂಬಂಧಿಸಿದೆ. ಅಮವಾಸ್ಯೆಯಂದು ಯಾವುದೇ ಶುಭಕಾರ್ಯಗಳನ್ನು ಮಾಡದಿದ್ದರೂ, ಹುಣ್ಣಿಮೆಯಂದು ಮಾಡುವ ಶುಭಕಾರ್ಯಗಳು ಅಥವಾ ಕೆಲಸಗಳು ಯಶಸ್ವಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಅಮವಾಸ್ಯೆಯು ಶುಭವಲ್ಲವೆಂದೂ, ಬುಧವಾರ ಅಮಾವಾಸ್ಯೆ ಬಿದ್ದರೆ ಕಾಲಸರ್ಪದೋಷ ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯನ್ನು ಯಾರಾದರೂ ಕಾಳಸರ್ಪದೋಷದಿಂದ ಬಳಲುತ್ತಿದ್ದರೆ ಈ ದೋಷವನ್ನು ಪರಿಹರಿಸಲು ಅಮವಾಸ್ಯೆಯಂದು ಪೂಜೆ ಮಾಡುತ್ತಾರೆ. ಈ ಪೂಜೆಯು ರಾಹುವನ್ನು ನಿಯಂತ್ರಿಸುತ್ತದೆ ಹಾಗೂ ಕಾಲಸರ್ಪದ ದೋಷವನ್ನು ಶೇಕಡಾ ಎಪ್ಪತ್ತರಷ್ಟು ಕಡಿಮೆಗೊಳಿಸುತ್ತದೆ
ಹುಣ್ಣಿಮೆಯಂದು ಉಪವಾಸ : ಹುಣ್ಣಿಮೆ ಅಂದರೆ ಪೂರ್ಣ ಚಂದಿರನ ದಿನವನ್ನು ಹಿಂದೂಗಳು ಮಹತ್ತರವಾದ ದಿನವೆಂದು ನಂಬುತ್ತಾರೆ. ಹಾಗಾಗಿ ಹುಣ್ಣಿಮೆಯಂದು ಉಪವಾಸ ಮಾಡಿ ಶ್ರೀ ವಿಷ್ಣುವನ್ನು ಆರಾಧಿಸುತ್ತಾರೆ. ಇಡೀ ದಿನ ಉಪವಾಸವಿದ್ದು ಪ್ರಾರ್ಥನೆ ಮಾಡಿ ನಂತರ ನದಿಯಲ್ಲಿ ಮಿಂದ ನಂತರವೇ ಮುಸ್ಸಂಜೆಯ ವೇಳೆ ಲಘು ಆಹಾರವನ್ನು ಸೇವಿಸುತ್ತಾರೆ. ಹುಣ್ಣಿಮೆ ಹಾಗೂ ಅಮಾವಾಸ್ಯೆಯಂದು ಉಪವಾಸ ಅಥವಾ ಲಘು ಆಹಾರ ಸೇವನೆ ಒಳ್ಳೆಯದು ಎನ್ನುತ್ತಾರೆ ಯಾಕೆಂದರೆ ಇದು ನಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿನ ಆಮ್ಲೀಯತೆಯನ್ನು ಕಡಿಮೆ ಮಾಡುತ್ತದೆ. ಹಾಗೂ ಚಯಾಪಚಯ ಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ. ಇದು ದೇಹ ಮತ್ತು ಮನಸ್ಸಿನ ಸಮತೋಲನವನ್ನು ಪುನಃಸ್ಥಾಪಿಸುತ್ತದೆ..
ಅಮಾವಾಸ್ಯೆಯಂದು ಹೀಗೆ ಮಾಡಿ, : ಅಮಾವಾಸ್ಯೆಯಂದು ಉಪವಾಸ ಮಾಡುವುದರಿಂದ ಎಲ್ಲಾ ಋಣಾತ್ಮಕ ಶಕ್ತಿಗಳನ್ನು ದೂರವಿರಿಸಬಹುದು. ಇದು ದುಷ್ಟ ಶಕ್ತಿಗಳ ದೃಷ್ಟಿ ನಿಮ್ಮ ಮೇಲೆ ಬೀಳದಂತೆ ಹಾಗೂ ಋಣಾತ್ಮಕ ಶಕ್ತಿ ಹತ್ತಿರ ಸುಳಿಯದಂತೆ ಮಾಡುತ್ತದೆ. ಅಮಾವಾಸ್ಯೆಯಂದು ಮಾಡುವ ವೃತದಿಂದ ದುಷ್ಟಶಕ್ತಿಗಳನ್ನು ನಿಗ್ರಹಿಸುವ ದೇವತಾ ಶಕ್ತಿಗಳ ಆಶೀರ್ವಾದವು ದುಷ್ಟಶಕ್ತಿಗಳ ನೆರಳೂ ನಿಮ್ಮ ಮೇಲೆ ಬೀಳದಂತೆ ತಡೆಯುತ್ತದೆ ಹಾಗೂ ನಿಮಗೆ ಅದೃಷ್ಟವನ್ನು ದಯಪಾಲಿಸುತ್ತದೆ. ನಂಬಿಕೆಯ ಪ್ರಕಾರ ಅಮಾವಾಸ್ಯೆಯಂದು ಉಪವಾಸ ಮಾಡಿದರೆ ನಿಮ್ಮ ಆಸೆ, ಆಕಾಂಕ್ಷೆಗಳೆಲ್ಲವೂ ಈಡೇರುತ್ತದೆ ಎನ್ನಲಾಗುತ್ತದೆ. ಪೂರ್ವಜರಿಗಾಗಿ ಉಪವಾಸ ಮಾಡಿದರೆ ನೀವು ಯಾವ ಅದೃಷ್ಟವನ್ನು ಬಯಸುತ್ತೀರೋ ಅದು ನಿಮ್ಮೆಡೆಗೆ ಬರುತ್ತದೆ.
ಅಮಾವಾಸ್ಯೆಯಂದು, ನಿಂಬೆ ಹಣ್ಣನ್ನು ನಾಲ್ಕು ಭಾಗಗಳಾಗ ಕತ್ತರಿಸಿ, ನಿಮ್ಮ ನಾಲ್ಕು ದಿಕ್ಕು ಅಂದರೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ದಿಕ್ಕುಗಳಿಗೆ ಎಸೆಯಿರಿ, ನಿಮಗೆ ನಿರುದ್ಯೋಗ ಸಮಸ್ಯೆಯಿದ್ದರೆ ಈ ಪರಿಹಾರವನ್ನು ಅನುಸರಿಸಿ. ಈ ವಿಧಾನವನ್ನು ಅನುಸರಿಸುವಾಗ ನಾಲ್ಕು ದಿಕ್ಕುಗಳಿಗೂ ಅಡ್ಡವಾಗಿ ನಿಂತಿರುವುದನ್ನು ಹಾಗೂ ನಿಮ್ಮನ್ನು ಯಾರೂ ನೋಡುತ್ತಿಲ್ಲವೆಂದೂ ಖಚಿತಪಡಿಸಿಕೊಳ್ಳಿ. ಈ ವಿಧಾನವನ್ನು ಯಾರಿಗೂ ಗೊತ್ತಾಗದಂತೆ ಮಾಡಿ. ಅಮಾವಾಸ್ಯೆಯಂದು ವೃತವನ್ನು ಮಾಡುವುದರಿಂದ ಆರೋಗ್ಯ ಸಂಬಂಧಿತ ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗುವುದು. ಹಾಗೂ ದೈಹಿಕವಾಗಿ, ಮಾನಸಿಕವಾಗಿ ಸಾಮರ್ಥ್ಯವನ್ನು ವೃದ್ಧಿಸಬಹುದು. ಜೊತೆಗೆ ಅನಾರೋಗ್ಯ ಹಾಗೂ ಆರ್ಥಿಕ ಸಮಸ್ಯೆಗಳು ಎಂದಿಗೂ ಎದುರಾಗದು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕಂಪ್ಯೂಟರ್‌ಗಳು, ಕಂಪನಿಯ ಸರ್ವರ್‌ಗಳನ್ನು ಹ್ಯಾಕ್ ಮಾಡುವುದನ್ನು ಕೇಳಿದ್ದೇವೆ. ಆದರೆ ಸೂರತ್‌ನಲ್ಲಿ ಕಂಡುಕೇಳರಿಯದ ಪ್ರಕರಣವೊಂದು ವರದಿಯಾಗಿದೆ. ಮನೆಯೊಂದರ ಬೆಡ್‌ರೂಂನಲ್ಲಿ ಅಳವಡಿಸಲಾಗಿದ್ದ ಸ್ಮಾರ್ಟ್ ಟೀವಿಯನ್ನು ಹ್ಯಾಕ್ ಮಾಡಿ, ದಂಪತಿಯ ಲೈಂಗಿಕ ಕ್ರಿಯೆ ದೃಶ್ಯಗಳನ್ನು ಸೆರೆ ಹಿಡಿದು, ಅಶ್ಲೀಲ ಜಾಲತಾಣಕ್ಕೆ ಅಪ್‌ಲೋಡ್ ಮಾಡಲಾಗಿರುವ ಘಟನೆ ನಡೆದಿದೆ. ತನ್ನದೇ ವಿಡಿಯೋ ಆನ್‌ಲೈನ್ ಅಶ್ಲೀಲ ಜಾಲತಾಣದಲ್ಲಿರುವುದನ್ನು ಪತಿ ನೋಡಿದ ಬಳಿಕ ಈ ಅಕ್ರಮ ಬಯಲಾಗಿದೆ. ಇದು ಸ್ಮಾರ್ಟ್ ಟೀವಿ ಬಳಕೆದಾರರಿಗೆ ಎಚ್ಚರಿಕೆ ಗಂಟೆಯಾಗಿದೆ. ಪೊಲೀಸರಿಗೆ ದೂರು ನೀಡಿದರೆ ಮುಜುಗರಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಈ…
ಮಂಗಳಮುಖಿಯರು ಕೂಡ ನಮ್ಮ ಸಮಾಜದ ಒಂದು ಭಾಗವಾಗಿದ್ದಾರೆ, ಆದರೆ ಎಷ್ಟೋ ಮಂದಿ ಇಂದು ಅವರಿಗೆ ಸಲ್ಲಬೇಕಾದ ಸ್ಥಾನಮಾನ ನೀಡಲು ಒಪ್ಪಿಕೊಳ್ಳುವುದಿಲ್ಲ ಮತ್ತು ಅವರನ್ನು ಕೀಳಾಗಿ ಅಥವಾ ಕೆಟ್ಟ ಕೆಲಸಗಳನ್ನು ಮಾಡಲು ಉಪಯೋಗಿಸಿಕೊಳ್ಳುತ್ತಾರೆ. ನಿಮಗೆ ಗೊತ್ತಿರಲಿ ಹಿಂದೊಂದುದಿನ ಅಂದರೆ ಪುರಾಣ ಕಾಲದಲ್ಲಿಯೂ ಕೂಡ ಮಂಗಳ ಮುಖಿಯರಿಗೆ ಉತ್ತಮ ಸ್ಥಾನ ನೀಡಲಾಗಿತ್ತು,ಶಾಸ್ತ್ರಗಳ ಪಕಾರ ಮಂಗಳಮುಖಿಯರಿಗೆ ದಾನಮಾಡುವುದರಿಂದ ಭಗವಾನ್ ವಿಷ್ಣುವಿನ ಕ್ರಪೆಸಿಗುತ್ತದೆ ಎಂದು ಹೇಳಲಾಗುತ್ತದೆ ಮತ್ತುವಿಷ್ಣುವಿನ ಆಶೀರ್ವಾದ ಮತ್ತು ಗ್ರಹಗಳ ಸಂಚಾರದಲ್ಲಿಸಿಗುತ್ತದೆ ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇಷ್ಟೇ ಅಲ್ಲದೆ ಇವರಿಗೆ ಯಾವವಸ್ತುಗಳನ್ನು…
ಇತಿಹಾಸ ಪ್ರಸಿದ್ಧ ಹಾಸನಾಂಬ ದೇವಿ ದೇವಸ್ಥಾನದ ಬಾಗಿಲು ಅ.17ರಿಂದ ತೆರೆಯಲಿದ್ದು, ಭಕ್ತರಿಗೆ 13 ದಿನಗಳ ಕಾಲ ದೇವಿಯ ದರ್ಶನ ಭಾಗ್ಯ ಲಭಿಸಲಿದೆ. ಅಕ್ಟೋಬರ್ 17ರ ಗುರುವಾರ ಮಧ್ಯಾಹ್ನ 12.30ಕ್ಕೆ ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಲಿದ್ದಾರೆ. ಆದ್ದರಿಂದ, ಜಿಲ್ಲಾಡಳಿತ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ. ದೇವಿಯ ದರ್ಶನಕ್ಕೆ ರಾಜ್ಯ, ಹೊರ ರಾಜ್ಯದಿಂದಲೂ ಸಹಸ್ತ್ರಾರು ಸಂಖ್ಯೆಯ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆ ಕಲ್ಪಿಸಲು ಜಿಲ್ಲಾಧಿಕಾರಿ ಗಿರೀಶ್, ಅಪರ ಜಿಲ್ಲಾಧಿಕಾರಿ ನಾಗರಾಜ್, ತಹಸೀಲ್ದಾರ್…
ಹಣದ ಯಾರಿಗೆ ತಾನೇ ಬೇಡ ಹೇಳಿ.ಇದರ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ.ಆರ್ಥಿಕವಾಗಿ ಬಲಗೊಳ್ಳಲು ದಿನಪೂರ್ತಿ ದುಡಿಯುವ ಜನರಿದ್ದಾರೆ. ಬರೀ ಕೆಲಸ ಮಾಡಿದ್ರೆ ಸಾಲದು. ದೇವರ ಕೃಪೆ ಕೂಡ ನಮ್ಮ ಮೇಲಿರಬೇಕು. ಹಾಗಾಗಿ ಧನ ಪ್ರಾಪ್ತಿಗಾಗಿ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪ್ರತಿದಿನ ಅಥವಾ ಪ್ರತಿ ಶುಕ್ರವಾರ ಶ್ರೀಸೂಕ್ತ ಅಥವಾ ಲಕ್ಷ್ಮಿ ಸ್ತೋತ್ರವನ್ನು ಪಠಣ ಮಾಡಿ. ಪ್ರತಿ ವಾರ ಮನೆ ಕ್ಲೀನ್ ಮಾಡುವಾಗ ನೀರಿಗೆ ಉಪ್ಪು ಬೆರೆಸಿ ಮನೆಯನ್ನು ಸ್ವಚ್ಛಗೊಳಿಸಿ. ಇದ್ರಿಂದ ಕೀಟಾಣುಗಳು ನಾಶವಾಗುವ ಜೊತೆಗೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ಪ್ರತಿ…
ಜಾಮ್ ಬಾಟ್ಲಿಯ ಮುಚ್ಚಳ ತೆಗೆಯುವುದು ಸಾಹಸದ ಕೆಲಸ. ಎರಡೂ ಕೈಗಳನ್ನು ಚೆನ್ನಾಗಿ ಸೋಪು ನೀರಿನಲ್ಲಿ ತೊಳೆದು ಒಣ ಬಟ್ಟೆಯಲ್ಲಿ ಒರೆಸಿ. ಈಗ ಒಣಗಿದ ಕೈಗಳಿಂದ ಬಾಟ್ಲಿಯ ಮುಚ್ಚಳವನ್ನು ತಿರುಗಿಸಿದರೆ ಸುಲಭವಾಗಿ ತೆರೆಯುವುದು.
ಪ್ರಸ್ತುತ ದಿನಗಳಲ್ಲಿ ಎಲ್ಲರನ್ನು ಆಕರ್ಷಿಸುತ್ತಿರುವ ಮೊಬೈಲ್ ಫೋನ್ ಒಂದು ಕ್ಷಣ ಇಲ್ಲ ಅಂದರೆ ಇರಲು ಸಾಧ್ಯವಿಲ್ಲವೇನೋ ಅನ್ನೋ ರೀತಿಯಲ್ಲಿ ಜನ ಅದಕ್ಕೆ ಅವಲಂಬಿತರಾಗಿದ್ದಾರೆ. ಹೀಗುರುವಾಗ ಇದರ ಮೇಲೆ ಒಂದು ಸಮೀಕ್ಷೆ ನಡೆಸಿದಾಗ ಭಾರತೀಯರು ಮೊಬೈಲ್ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಅನ್ನೋದನ್ನ ತಿಳಿಯಲಾಗಿದೆ. ಭಾರತೀಯರು ತಮ್ಮ ಬೇಸರವನ್ನು ನಿವಾರಿಸಿಕೊಳ್ಳಲು ಏನು ಮಾಡುತ್ತಾರೆ ಗೊತ್ತಾ..? ಒಂದು ಸಮೀಕ್ಷೆ ಹೇಳುವ ಪ್ರಕಾರ ಭಾರತದ ಶೇ.72ರಷ್ಟು ಮಂದಿ ತಮ್ಮ ಬೇಸರ ನಿವಾರಿಸಿಕೊಳ್ಳುವುದಕ್ಕಾಗಿಯೇ ಸಂದೇಶ, ಕರೆ ಮತ್ತು ಯಾವುದೇ ಸಕಾರಣವಿಲ್ಲದೆಯೇ ತಮ್ಮ ಮೊಬೈಲ್ ನೋಡುತ್ತಾರಂತೆ….