ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಸಹಸ್ರ ಲಿಂಗವು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ 0.5 ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ. ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ.
ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣವಲ್ಲಿ ಮಠಗಳಿಗೆ ತುಂಬಾ ಹತ್ತಿರದಲ್ಲಿದೆ. ಈ ಲಿಂಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ, ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಶಿರಸಿ-ಯಲ್ಲಾಪುರ ನಡುವಿನ ರಸ್ತೆಯಲ್ಲಿ ಈ ಪ್ರದೇಶವಿದ್ದು , ಶಾಲ್ಮಲಾ ನದಿಯ ಒಟ್ಟು ಜಾಗವನ್ನು ಸಂರಕ್ಷಿತ ಪ್ರದೇಶವೆಂದು ಘೋಶಿಸಲಾಗಿದೆ. ದಾರಿಯುದ್ದಕ್ಕೂ ಪಕ್ಷಿಗಳ ಕಲರವ, ಮತ್ತೆ ಮತ್ತೆ ಸವಯಬೇಕೆನ್ನುವ ಕಾಡು ಹಣ್ಣುಗಳು,ಸುವಾಸಿತ ಹೂವುಗಳು ಜನರನ್ನು ಸೆಳೆಯುತ್ತದೆ.
ಶಿರಸಿಯಿಂದ ಬಾಡಿಗೆಗೆ ಜೀಪುಗಳನ್ನು ಪಡೆದು ಇಲ್ಲಿಗೆ ತೆರಳುವುದು ಬಲು ಸೂಕ್ತ. ಇನ್ನುಳಿದಂತೆ ನಿಮ್ಮ ಸ್ವಾಂತ ವಾಹನಗಳಿದ್ದರೆ ಸಾಕಷ್ಟು ಅನುಕೂಲ, ಏಕೆಂದರೆ ಇದರ ಸುತ್ತಮುತ್ತಲೂ ಸಾಕಷ್ಟು ಇತರೆ ನೈಸರ್ಗಿಕ ಆಕರ್ಷಣೆಗಳನ್ನು ಆನಂದದಿಂದ ನೋಡಬಹುದು.
ಇನ್ನುಳಿದಂತೆ, ಇಲ್ಲಿ ಯಾವುದೆ ರೀತಿಯ ಉಪಹಾರಗೃಹಗಳಿಲ್ಲ. ಕಾರಣ ನೀವು ಶಿರಸಿಯಿಂದಲೆ ಊಟದ ವ್ಯವಸ್ಥೆ ಮಾಡಿಕೊಂಡು ಬಂದಿದ್ದಲ್ಲಿ ಇಲ್ಲಿನ ಪ್ರಶಾಂತ ಹಾಗೂ ರಮಣೀಯ ಪರಿಸರದ ಮಧ್ಯೆ ಹಾಯಾಗಿ ವಿಶ್ರಾಂತಿ ತೆಗೆದುಕೊಳ್ಳುತ್ತ ಊಟ ಸವಿಯಬಹುದು. ಆದರೆ ದಯವಿಟ್ಟು ಈ ಸ್ಥಳದಲ್ಲಿ ಗಲೀಜು ಮಾಡದಂತೆ ನೋಡಿಕೊಂಡರೆ ಸಾಕು.
ಶಿರಸಿ ಪ್ರದೇಶದಲ್ಲಿ ಹಿಂದೆ 1678-1718 ರ ಸಮಯದಲ್ಲಿ ಆಳುತ್ತಿದ್ದ ಸದಾಶಿವರಾಯ ಅರಸನು ಈ ಶಿವಲಿಂಗಗಳ ನಿರ್ಮಾತೃ ಎನ್ನಲಾಗಿದೆ. ಶಿವನ ಪರಮ ಭಕ್ತನಾಗಿದ್ದ ಇತ ಇಲ್ಲಿ ಹರಿದಿರುವ ಶಲ್ಮಲಾ ನದಿಯ ತಟದ ಕಲ್ಲುಗಳ ಮೇಲೆ, ನೀರೊಳಗಿನ ಕಲ್ಲುಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ಶಿವಲಿಂಗಗಳನ್ನು ಕೆತ್ತಿಸಿದ್ದಾನೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದಲ್ಲಿ ತಮ್ಮದೇ ಸರ್ಕಾರ ಇದ್ದರೂ ಕೇವಲ ಒಂದು ಸ್ಥಾನ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಪುನಶ್ಚೇತನ ಕೊಡಲು ಕಾಂಗ್ರೆಸ್ ಹೈ ಕಮಾಂಡ್ ಮುಂದಾಗಿದೆ. ರಾಜ್ಯ ಉಸ್ತುವಾರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಚಿಂತನೆ ಆರಂಭವಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ. ಕೆಪಿಸಿಸಿಯ ಜವಾಬ್ದಾರಿ ಹೊರಲು ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಸೂಕ್ತ ಅನ್ನೋದು ಹೈ ಕಮಾಂಡ್ ನಂಬಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ನೇರವಾಗಿ ಡಿ.ಕೆ ಶಿವಕುಮಾರ್ ಬಳಿ ಮಾತನಾಡಿದೆ. ಈ ಮೂಲಕ ಪರೋಕ್ಷವಾಗಿ…
ಇಂದು ಮಹಾಶಿವರಾತ್ರಿ ಮಂಗಳವಾರ, 13/02/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ದೇವಸ್ಥಾನದ ಮುಂದೆ ಭಿಕ್ಷಾಟನೆ ನಡೆಸುತ್ತಿರುವ ಓರ್ವ ಮಹಿಳೆ ದೇವಸ್ಥಾನದ ನವೀಕರಣಕ್ಕಾಗಿ ಎರಡು ಲಕ್ಷ ರೂ. ದೇಣಿಗೆ ನೀಡಿ ನಿಬ್ಬೆರಗಾಗುವಂತೆ ಮಾಡಿದ್ದಾಳೆ. ಮೈಸೂರು ಅರಮನೆಯ
ಮುಂಭಾಗದಲ್ಲಿರುವ ಪ್ರಸಿದ್ದ ಪ್ರಸನ್ನ ಅಂಜನೇಯ ದೇವಾಲಯದ ಮುಂದೆ ಭಿಕ್ಷೆ ಬೇಡುತ್ತಿರುವ ಎಂ.ವಿ.ಸೀತಾ, ದೇವಸ್ಥಾನದ ನವೀಕರಣಕ್ಕೆ ದೇಣಿಗೆ ನೀಡಿದ ಮಹಾನ್ ಭಕ್ತೆ.
ನಟ “ಸುದೀಪ್”ರವರು ಭಾರತದ ಪ್ರಮುಖ ನಟರಲ್ಲಿ ಒಬ್ಬರಾಗಿದ್ದಾರೆ. ಹಾಗಾಗಿ ಅವರು ಸದಾ ಸುದ್ದಿಯೇಲ್ಲಿರುತ್ತಾರೆ. ಇದಕ್ಕೆ ಇನ್ನೊಂದು ಕಾರಣ ಅವರು ಹೆಚ್ಚಾಗಿ ಬಳುಸುವ ಸಾಮಾಜಿಕ ಜಾಲತಾಣ ಟ್ವಿಟ್ಟರ್. ಕನ್ನಡದ ಬೇರೆಲ್ಲಾ ನಟರಿಗಿಂತ ಸುದೀಪ್ರವರು ಟ್ವಿಟ್ಟರ್ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ಮೊಬೈಲ್ ಪರಿಚಯವಾದ ಮೇಲೆ ಜಗತ್ತಿನ ಜನರ ದಿನಚರಿಯೇ ಬದಲಾಗಿದೆ. ಕೆಲವರಿಗಂತೂ ಒಂದು ಅರ್ಧ ತಾಸು ಮೊಬೈಲ್ ಬಿಟ್ಟಿರು ಎಂದರೆ ಬಿಟ್ಟಿರಲು ಸಾಧ್ಯವಾಗುವುದಿಲ್ಲ. ಯಾರು ಮೆಸೇಜ್ ಮಾಡಿರಬಹುದು,ಯಾರು ಕಾಲ್ ಮಾಡಿರಬಹುದು ಎಂದು ಮನಸ್ಸು ಆ ಕಡೆ ಸೆಳೆಯುತ್ತಿರುತ್ತದೆ, ಮೊಬೈಲ್ ಬಳಸುವುದು ಎಲ್ಲರಲ್ಲಿ ಒಂದು ಚಟವಾಗಿ ಬಿಟ್ಟಿದೆ ಎಂದು ತಪ್ಪಾಗಲಾರದು. ಇನ್ನು ನಮ್ಮ ದಿನನಿತ್ಯದ ಎಷ್ಟೋ ಕೆಲಸ ಕಾರ್ಯಗಳಿಗೆ ಮೊಬೈಲ್ ಅನ್ನೇ ಅವಲಂಬಿಸಿದ್ದೇವೆ. ಬ್ಯಾಂಕ್ ವ್ಯವಹಾರದಿಂದ ಹಿಡಿದು ಮನೆಗೆ ದಿನಸಿ ತರುವುದಕ್ಕೂ ಮೊಬೈಲ್ ಬೇಕೇಬೇಕು. ನಮ್ಮ ಬಹುತೇಕ ವ್ಯವಹಾರಗಳು ಆನ್‌ಲೈನ್…
ಲೋ ಬಿಪಿ ಸರ್ವೇ ಸಾಮಾನ್ಯ ಸಮಸ್ಯೆ. ಇದನ್ನು ಕಂಟ್ರೋಲ್ ಮಾಡಲು ಹಲವು ಔಷಧಗಳ ಮೊರೆ ಹೋಗುವುದು ಸಹಜ. ಆದರೆ ಮನೆಯಲ್ಲೇ ಸಿಗೋ ಕೆಲವು ಸಾಮಗ್ರಿಗಳಿಂದ ಕಡಿಮೆ ರಕ್ತದೊತ್ತಡವನ್ನು ಹತೋಟಿಯಲ್ಲಿಡಬಹುದು. ಅದು ಹೇಗೆ ಅಂತ ನೋಡಿ. ಉಪ್ಪಿನಲ್ಲಿನರುವ ಸೋಡಿಯಂ ಅಂಶ ರಕ್ತದೊತ್ತಡ ಹೆಚ್ಚುವಂತೆ ಮಾಡುತ್ತದೆ. ಹಾಗಾಗಿ ಉಪ್ಪಿನ ನೀರು ಕುಡಿಯಬೇಕು. ಅತಿಯಾದ ಉಪ್ಪಿನಂಶ ಇದ್ದರೂ ಒಳ್ಳೆಯದಲ್ಲ. ಹಾಗಾಗಿ ಮಿತವಾಗಿ ಬಳಸಿ. ರಕ್ತದೊತ್ತಡ ಕಡಿಮೆಯಾದಾಗ ಸ್ಟ್ರಾಂಗ್ ಕಾಫಿ ಕುಡಿದಲ್ಲಿ ತಕ್ಷಣ ಪ್ರಭಾವ ಬೀರುತ್ತದೆ. ಇದರ ಹೊರತಾಗಿ ಚಾಕ್ಲೆಟ್, ಕೋಲ ಮತ್ತು…