ಸಿನಿಮಾ

ಭಾರತದ ಸಾವಿರಾರು ತಿಯೇಟರ್ ಗಳಲ್ಲಿ ರಿಲೀಜ್ ಆಗುತ್ತಿರುವ KGF ಚಿತ್ರಕ್ಕೆ, ಚಿತ್ರೀಕರಣ ನಡೆದ KGFನಲ್ಲೇ ಈ ಚಿತ್ರದ ಬಿಡುಗಡೆ ಭಾಗ್ಯವಿಲ್ಲ..!

176

ಭಾರತದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ಯಶ್ ಅಭಿನಯದ ‘ಕೆಜಿಎಫ್’ ಚಿತ್ರ ದೇಶಾದ್ಯಂತ ಪಂಚ ಭಾಷೆಯಲ್ಲಿ ನಾಳೆ ಬಿಡುಗಡೆಯಾಗಲಿದೆ. ಆದರೆ ಚಿತ್ರೀಕರಣ ನಡೆದ ಕೆಜಿಎಫ್ ನಲ್ಲಿ ಈ ಚಿತ್ರದ ಬಿಡುಗಡೆಗೆ ಭಾಗ್ಯವಿಲ್ಲದಂತಾಗಿದೆ.

ಕೆಜಿಎಫ್‍ನಲ್ಲಿ ಸಿನಿಮಾ ಚಿತ್ರೀಕರಣಗೊಂಡರೂ ಚಿತ್ರಮಂದಿರದ ಮಾಲೀಕರು ಚಿತ್ರದ ಬಾಕ್ಸ್ ಬಜೆಟ್ ನಿಂದ ದೂರ ಸರಿದಿದ್ದಾರೆ. ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆ ಮಾಡಲು ಮಾಲೀಕ 25 ಲಕ್ಷ ರೂ. ಕೇಳಿದ್ದಾರೆ. ಹಾಗಾಗಿ ಕೆಜಿಎಫ್‍ನ ಲಕ್ಷ್ಮೀ ಮತ್ತು ಒಲಿಂಪಿಯಾ ಚಿತ್ರಮಂದಿರಗಳಲ್ಲಿ ಚಿತ್ರದ ಬಿಡುಗಡೆಯಾಗುತ್ತಿಲ್ಲ. ಈ ಸುದ್ದಿ ಕೇಳಿ ಯಶ್ ಹಾಗೂ ಕೆಜಿಎಫ್ ಅಭಿಮಾನಿಗಳು ನಿರಾಶೆಯಲ್ಲಿದ್ದಾರೆ.

ಕೋಲಾರದ ಕೆಜಿಎಫ್ ನಲ್ಲಿ ಹುಟ್ಟುವ ಮಗು ಮುಂಬೈನಲ್ಲಿ ತನ್ನ ಹೆಜ್ಜೆಯನ್ನು ಮೂಡಿಸುತ್ತಾನೆ. ನೀನು ಹೇಗೆ ಬಾಳ್ತಿಯಾ ನನಗೆ ಗೊತ್ತಿಲ್ಲ. ಆದ್ರೆ ಸಾಯುವ ಮುನ್ನ ನೀನೊಬ್ಬ ಶ್ರೀಮಂತ, ಅತ್ಯಂತ ಶಕ್ತಿಯುಳ್ಳವನಾಗಿರಬೇಕು ಎಂದು ಮಗನಿಂದ ಮಾತು ಪಡೆದುಕೊಳ್ಳುವ ತಾಯಿ.

ಮುಂಬೈ ಸೇರಿದ ಮೇಲೆ ಬದಲಾಗುವ ಬದುಕು. ಮತ್ತೆ ಕೋಲಾರ ಸೇರುವ ಹುಡುಗ. ಹೀಗೆ ಕಥೆಯ ಒಂದೊಂದು ಎಳೆಯನ್ನು ಟ್ರೇಲರ್ ನಲ್ಲಿ ತೋರಿಸಲಾಗಿದೆ. ಅದೇ ರೀತಿಯಲ್ಲಿ ಇತರೆ ಕಲಾವಿದರ ಪಾತ್ರವನ್ನು ಇಲ್ಲಿ ಪರಿಚಯಿಸಲಾಗಿದೆ.

ಕೆಜಿಎಫ್ ಚಿತ್ರವನ್ನು ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಕೆಜಿಎಫ್ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗದಲ್ಲಿ ನಟಿ ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಮಾಳವಿಕಾ ಅವಿನಾಶ್, ಅನಂತ್ ನಾಗ್ ಹಾಗೂ ವಸಿಷ್ಠ ಸಿಂಹ ನಟಿಸಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್ ಸೈನೆಡ್ ಗುಡ್ಡದ ಮೇಲೆ ಚಿತ್ರತಂಡ ಎರಡು ತಿಂಗಳ ಕಾಲ ಸತತವಾಗಿ ಚಿತ್ರೀಕರಣ ಮಾಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ