ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಟ ರಾಕಿಂಗ್ ಸ್ಟಾರ್ ಯಶ್ ಅವರ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೇ ವೇಳೆ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಯಶ್ ಅವರು ಹೊಂದಿರುವ ಕೊಠಡಿಯನ್ನು ಕೂಡ ಪರಿಶೀಲಿಸಿದ್ದಾರೆ.

ಯಶ್ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದು, ಐಟಿ ದಾಳಿಯ ಮಾಹಿತಿ ತಿಳಿದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಯಶ್, ಅಲ್ಲಿಂದ ನೇರವಾಗಿ ಹೋಟೆಲ್ ಗೆ ತೆರಳಿದ್ದಾರೆ.

ಯಶ್ ಅವರು ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಪ್ರತ್ಯೇಕ ಕೊಠಡಿಯನ್ನು ಹೊಂದಿದ್ದಾರೆ. ಐಟಿ ಅಧಿಕಾರಿಗಳು ಹೋಟೆಲ್ ನಲ್ಲಿ ಮ್ಯಾನೇಜರ್ ಮತ್ತು ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು, ಅವರ ಕೊಠಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಕಾಯುತ್ತಿದ್ದ ಕಾರಣ ಯಶ್ ನೇರವಾಗಿ ಹೋಟೆಲ್ ಗೆ ತೆರಳಿದ್ದಾರೆ. ಹೋಟೆಲ್ ನಲ್ಲಿ ತನಿಖೆ ಮುಗಿದ ಬಳಿಕ ಅವರು ಕತ್ರಿಗುಪ್ಪೆಯ ನಿವಾಸಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಹುಂಗೇನಹಳ್ಳಿ ಗ್ರಾಮ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನಲ್ಲಿದೆ.ಇದರ ಮೂಲ ಹೆಸರು ಹೊಂಗೇನಹಳ್ಳಿ.ಮಾಲೂರು ಕೋಲಾರ ಮುಖ್ಯರಸ್ತೆಯಿಂದ ಸುಮಾರು ಒಂದು ಕಿಮೀ ದೂರದಲ್ಲಿದೆ. ಗ್ರಾಮದ ಸುತ್ತಲೂ ಮೂರು ಕೆರೆಗಳಿಗೆ ಗ್ರಾಮದ ಗ್ರಾಮಸ್ಥರಿಗೆ (ರೈತರಿಗೆ) ಈ ಕೆರೆಗಳ ಅಚ್ಚುಕಟ್ಟೆನಲ್ಲಿ ಜಮೀನು ಇದೆ.ಹಸಿರಿನಿಂದ ತುಂಬಿದ ಗ್ರಾಮ.ಹುಂಗೇನಹಳ್ಳಿಯ ರೈತರು ಪ್ರಗತಿಪರ ರೈತರಾಗಿದ್ದರು.ಮೊದಲಿನಿಂದಲೂ ತಾಲ್ಲೂಕಿನ ಮಾದರಿ ಗ್ರಾಮವಾಗಿದೆ.ಹುಂಗೇನಹಳ್ಳಿಯಲ್ಲಿ ಶ್ರೀ ವ್ಯಾಸರಾಯರಿಂದ ಸ್ಥಾಪಿತವಾದ ಆಂಜನೇಯ ಸ್ವಾಮಿ ದೇವಸ್ಥಾನ ಕೋಟೆ ಹೊರಗಡೆ ಇದೆ.ಕೋಟೆ ಒಳಗಡೆ ಊರಬಾಗಿಲಿನಲ್ಲಿ ಮಾರಿಕಾಂಬಾ ದೇವಸ್ಥಾನ ಇದೆ. ನಮಗೆ ತಿಳಿದ ಪ್ರಕಾರ ನಮ್ಮ ಹಿರಿಯರು ಮದ್ರಾಸ್…
ಬಿಗ್ ಬಾಸ್ ಮನೆಗೆ ಕಾಮನ್ ಮ್ಯಾನ್ ಆಗಿ ಎಂಟ್ರಿ ಪಡೆದವರಲ್ಲಿ ದಿವಾಕರ್ ಕೂಡ ಒಬ್ಬರು.. ಇವರ ಜೊತೆ ರಿಯಾಜ್ ಕೂಡ ಕಾಮನ್ ಮ್ಯಾನ್ ಲಿಸ್ಟ್ ನಿಂದ ಬಂದವರೇ.. ಸೆಲೆಬ್ರಿಟಿ ಹಾಗೂ ಕಾಮನ್ ಮ್ಯಾನ್ ನಡುವೆ ಬಿರುಕು ಉಂಟಾದಾಗ ದಿವಾಕರ್ ಪರ ನಿಂತರವೇ ರಿಯಾಜ್.
ಈರುಳ್ಳಿ ಬೆಲೆ ದುಬಾರಿಯಾಗಿ ಸರ್ಕಾರವೇ ಉರುಳಿರುವ ಉದಾಹರಣೆಗಳು ನಮ್ಮ ಇತಿಹಾಸದ ಪುಟಗಳಲ್ಲಿದೆ. ಈ ಘಟನೆಗಳಿಂದ ಎಚ್ಚೆತ್ತುಕೊಂಡಂತಿರುವ ದೆಹಲಿ ಸರ್ಕಾರ ಸಾಮಾನ್ಯ ಜನರಿಗೆ ಈರುಳ್ಳಿಯನ್ನು ಕಡಿಮೆ ಬೆಲೆಯಲ್ಲಿ ತಲುಪಿಸಲು ಮುಂದಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಕೆಜಿ ಈರುಳ್ಳಿಗೆ ನಲವತ್ತು ರೂಪಾಯಿಗಳಿಂದ ಎಪ್ಪತ್ತು ರೂಪಾಯಿವರೆಗೆ ಏರಿಕೆ ಕಂಡಿದೆ. ಈ ಬೆಳವಣಿಗೆ ಗ್ರಾಹಕರಿಗೆ ಹೊರೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರ ಈರುಳ್ಳಿಯನ್ನು ಮೊಬೈಲ್ ವ್ಯಾನ್ ಮೂಲಕ ಕಡಿಮೆ ದರದಲ್ಲಿ ಜನರಿಗೆ ತಲುಪಿಸಲು ಚಿಂತನೆ ನಡೆಸಿದೆ. ಪ್ರತಿ ಕೆಜಿಗೆ 24 ರೂಪಾಯಿಯಂತೆ ತಲುಪಿಸುವ…
ನೋಡಿದ ಕೂಡಲೇ ಮುಖ ಸಿಂಡರಿಸಿಕೊಂಡರೂ ರುಚಿ ನೋಡಿದ ಮೇಲೆ ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಹುಟ್ಟಿಸುವ “ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಔಷಧೀಯ ಗುಣವನ್ನು ಕೂಡ ಹೊಂದಿರುವ ಪಪ್ಪಾಯಿ ಹಲವು ಖಾಯಿಲೆಗಳಿಗೆ ಔಷಧಿಯಾಗಿಯೂ ಬಳಕೆಯಾಗುತ್ತಿದೆ
ಸ್ಯಾಂಡಲ್ ವುಡ್ ನ ಖ್ಯಾತ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಅವರ ಪುತ್ರಿಯ ಫೋಟೋ ಕೊನೆಗೂ ಬಹಿರಂಗವಾಗಿದೆ. ಅಕ್ಷಯ ತೃತೀಯ ದಿನ ಮಂಗಳವಾರದಂದು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಮಗಳ ಫೋಟೋ ಹಾಕಿ ಸಂಭ್ರಮಿಸಿದ್ದಾರೆ. ನಾವಿನ್ನೂ ಅವಳಿಗೆ ಹೆಸರಿಟ್ಟಿಲ್ಲ, ಅಲ್ಲಿಯವರೆಗೆ ಬೇಬಿ ವೈಆರ್ ಎಂದು ಕರೆಯೋಣ, ನಿಮ್ಮ ಪ್ರೀತಿ, ಹಾರೈಕೆ ಆಕೆಯ ಮೇಲೆಯೂ ಸದಾ ಇರಲಿ ಎಂದು ರಾಧಿಕಾ ಪಂಡಿತ್ ಕೋರಿದ್ದಾರೆ.ಯಶ್-ರಾಧಿಕಾ ಪಂಡಿತ್ ದಂಪತಿಗೆ ಕಳೆದ ವರ್ಷ ಡಿಸೆಂಬರ್ 2ರಂದು ಹೆಣ್ಣು ಮಗು…
ಕಿಮೊಥೆರಪಿ ಹಾಗು ರೇಡಿಯೇಶನ್ ಥೆರಪಿ ಮಾಡಿಸಿಕೊಂಡಲ್ಲಿ ಕೂದಲು ಉದುರುವಿಕೆ ಅಥವಾ ಅಲೋಪಿಶಿಯಾವು ಒಂದು ಪ್ರಧಾನ ಅಡ್ಡ ಪರಿಣಾಮವಾಗಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಕೂದಲು ಉದುರುವಿಕೆಯು ಭಾಗಶಃ ಕಾಣಿಸಿಕೊಳ್ಳಬಹುದು ಅಥವಾ ಮುಖ, ಕೈ, ತಲೆ, ಕಾಲು, ಕಂಕುಳು ಹಾಗು ಜನನಾಂಗದ ಭಾಗದ ಮೇಲಿರುವ ಕೂದಲುಗಳೆಲ್ಲಾ ಸಹ ಉದುರಲು ಆರಂಭಿಸಬಹುದು.