ನಟ ರಾಕಿಂಗ್ ಸ್ಟಾರ್ ಯಶ್ ಹಾಸನದಲ್ಲಿ ಮನೆ ಹಾಗೂ 80 ಎಕರೆ ತೋಟ ಖರೀದಿಸಿದ್ದಾರೆ. ಹಾಸನ ದೊಡ್ಡಕೊಂಡಗೋಳ ಯಶ್ ತಾಯಿ ಪುಷ್ಪಾ ಅವರ ತವರಾಗಿದೆ.ಯಶ್ ಜನಿಸಿದ್ದು ಹಾಸನ ಜಿಲ್ಲಾಸ್ಪತ್ರೆಯಲ್ಲಿ. ಈ ನಂಟಿನಿಂದ ಹುಟ್ಟೂರು ಹಾಸನದಲ್ಲಿ ಮನೆ ಹಾಗೂ ತೋಟವನ್ನು ಅವರು ಖರೀದಿಸಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ಈಗಾಗಲೇ ತನ್ನುರಿನ ಕೆರೆಯನ್ನು ಕೋಟಿಗಳ ವೆಚ್ಛದಲ್ಲಿ ಹೂಳು ತೆಗೆಸಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಗೆ ಕುಡಿಯುವ ನೀರಿನ ತೊಂದರೆಯನ್ನು ಹೋಗಲಾಡಿಸಿದ್ದರು. ಈಗ ಅದರ ಜೊತೆಗೆ ತನ್ನ ಹುಟ್ಟೂರಿನಲ್ಲಿ ಜಮೀನು ಮತ್ತು ಮನೆ ಖರೀದಿ ಮಾಡಿ ರೈತರಿಗೆ ನೆರವಾಗಲು ಉಂದಾಗಿದ್ದಾರೆ.
ಯಶ್ ಜನಿಸಿದ್ದು ಹಾಸನದಲ್ಲಿ, ಮೈಸೂರಿನಲ್ಲಿ ಬೆಳೆದು ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಮೈಸೂರಿನಲ್ಲಿ ಮನೆ ಮಾಡುವ ಒತ್ತಾಯವಿತ್ತಾದರೂ, ಹುಟ್ಟೂರು ಹಾಸನದಲ್ಲಿ ಮನೆ, ಮನೆಯಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿ 80 ಎಕರೆ ತೋಟ ಖರೀದಿಸಿದ್ದಾರೆ.
ರೈತರು ಬೆಲೆ ಬೆಳಯಲು ಸಾಲ ಮಾಡಿ ಕೊನೆಗೆ ಸರಿಯಾಗಿ ಬೆಳೆಯಾಗದೆಯೋ ಅಥವಾ ಸರಿಯಾದ ಬೆಲೆ ಸಿಗದೆಯೋ ಆತ್ಮಹತ್ಯಗೆ ಶರಣಾಗುತ್ತಿದ್ದಾರೆ. ಇದನ್ನೆಲ್ಲಾ ತಪ್ಪಿಸಲು ತನ್ನುರಿನಲ್ಲೇ ಜಮೀನು ಖರೀದಿ ಮಾಡಿರುವ ಯಶ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೃಷಿ ಮಾಡಿ ಜೊತೆ ಈ ಎಲ್ಲಾ ತಂತ್ರಜ್ನ್ಯಾನಗಳನ್ನು ರೈತರಿಗೆ ಪರಿಚಯಿಸಿ ಇದರ ಮುಖಾಂತ ಉತ್ತಮ ಇಳುವರಿ ತೆಗೆಯುವುದು ಹೇಗೆ ಎಂಬತ್ಯಾಧಿಗಳನ್ನು ರೈತರಿಗೆ ಪರಿಚಯಿಸಲು ಜಮೀನು ಖರೀದಿಸಿದ್ದು ಅದರ ಜೊತೆಗೆ ಬೆಂಗಳೂರಿನಿಂದ ಬಂದಾಗ ವಾಸ ಮಾಡಲು ಮನೆಯನ್ನು ಸಹ ಖರೀದಿಸಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಸೈಕಲ್ ಕದ್ದ ಆರೋಪ ಮಾಡಿ ಜನರಿಂದ ಥಳಿತಕ್ಕೊಳಗಾದ ಮರು ದಿನ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಶನಿವಾರ ಜಾರ್ಖಂಡ್ ನಲ್ಲಿ ನಡೆದಿದೆ.ಸಾರ್ವಜನಿಕರು 24 ವರ್ಷದ ಶಾಮ್ಸ್ ತಬ್ರೆಜ್ ಗೆ ಜಾರ್ಖಂಡ್ ನ ಸೀರೈಕೆಲ- ಖರ್ಸವಾನ್ ಹಾಗೂ ಸಿಂಘ್ಬುಮ್ ಜಿಲ್ಲೆಯಲ್ಲಿ ಥಳಿಸಿದ್ದಾರೆ. ಮಂಗಳವಾರ ಸಂಜೆ ಸಾರ್ವಜನಿಕರು ಶಾಮ್ಸ್ ನನ್ನು ಕಂಬಕ್ಕೆ ಕಟ್ಟಿ ಸುಮಾರು 7 ಗಂಟೆಗಿಂತಲೂ ಹೆಚ್ಚು ಕಾಲ ಚೆನ್ನಾಗಿ ಥಳಿಸಿದ್ದರು. ಅಲ್ಲದೆ ಇದೇ ವೇಳೆ ಶ್ರೀರಾಮ್’,ಜೈ ಹನುಮಾನ್’ ಎಂದು ಪಠಿಸುವಂತೆ ಒತ್ತಾಯ ಮಾಡಿದ್ದರು. ಬಳಿಕ ಅಂದರೆ ಬುಧವಾರ ಬೆಳಗ್ಗೆ…
ನವೆಂಬರ್ 1ರವರೆಗೆ ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಪಟಾಕಿಗಳ ಮಾರಾಟಕ್ಕೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದೆ. ರಾಜಧಾನಿ ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ದೀಪಾವಳಿ ಆಚರಣೆ ವೇಳೆ ಸಿಡಿಮದ್ದು ಮಾರಾಟವನ್ನು ಸುಪ್ರೀಂಕೋರ್ಟ್ ನಿಷೇಧಿಸಿರುವುದನ್ನು ಯೋಗಗುರು ಬಾಬಾ ರಾಮ್ ದೇವ್ ಮತ್ತು ಶಿವಸೇನೆ ತೀವ್ರವಾಗಿ ಖಂಡಿಸಿದ್ದಾರೆ.
ಎದೆಯುರಿಯು ಸಾಮಾನ್ಯ ಜೀರ್ಣ ಸಮಸ್ಯೆಯಾಗಿದೆ. ಅದನ್ನು ಆಮ್ಲ ಹಿಮ್ಮುಖ ಹರಿವು ಎಂದೂ ಕರೆಯಲಾಗುತ್ತದೆ ಮತ್ತು ಜಠರಾಮ್ಲವು ಅನ್ನನಾಳದಲ್ಲಿ ದೂಡಲ್ಪಟ್ಟಾಗ ಈ ಸಮಸ್ಯೆಯು ಉದ್ಭವವಾಗುತ್ತದೆ. ನಿದ್ರೆಯ ಕೊರತೆ,ಸೂಕ್ತವಲ್ಲದ ಆಹಾರ,ಧೂಮ್ರಪಾನ,ಸೋಂಕು ಇತ್ಯಾದಿಗಳು ಎದೆಯುರಿಯನ್ನುಂಟು ಮಾಡುತ್ತವೆ. ಇದರಿಂದ ಪಾರಾಗಲು ಕೆಲವು ಸರಳ ಉಪಾಯಗಳಿಲ್ಲಿವೆ. ►ಆಗಾಗ್ಗೆ ಸಣ್ಣ ಊಟಗಳನ್ನು ಮಾಡಿ ಸಣ್ಣ ಊಟಗಳನ್ನು ಆಗಾಗ್ಗೆ ಮಾಡುವುದು ಎದೆಯುರಿಯಿಂದ ಪಾರಾಗಲು ಅತ್ಯಂತ ಸರಳ ಉಪಾಯವಾಗಿದೆ. ಏಕೆಂದರೆ ನಾವು ಒಂದೇ ಬಾರಿಗೆ ಅತಿಯಾಗಿ ಆಹಾರ ಸೇವಿಸುವುದರಿಂದ ಕೆಳ ಅನ್ನನಾಳದ ಭಾಗದಲ್ಲಿರುವ ಕವಾಟದಂತಹ ಸ್ನಾಯು ‘ಸ್ಫಿಂಕ್ಟರ್ (ಎಲ್ಇಎಸ್)…
1. ಕಬ್ಬಿನ ಹಾಲು ದೇಹಕ್ಕೆ ಶಕ್ತಿ ತುಂಬುವುದರ ಜತೆಗೆ ಮಾನಸಿಕ ಒತ್ತಡವನ್ನು ನಿವಾರಿಸುವಲ್ಲಿ ಸಹಕಾರಿ 2. ಕಬ್ಬಿನ ಹಾಲು ಕುಡಿದರೆ ನಿದ್ದೆ ಚೆನ್ನಾಗಿ ಬರುವುದು. ತಾಜಾ ಕಬ್ಬಿನ ರಸವನ್ನು ನಿಯಮಿತವಾಗಿ ಸೇವಿಸಿದರೆ ಇನ್ಸೊಮ್ನಿಯ(ನಿದ್ರೆ ಹೀನತೆ) ಸಮಸ್ಯೆಯೂ ದೂರವಾಗುತ್ತದೆ. 3. ತೂಕ ಕಡಿಮೆ ಮಾಡಿಕೊಳ್ಳುವವರಿಗೂ ಶುಗರ್ಕೇನ್ ಜ್ಯೂಸ್ ಬೆಸ್ಟ್. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ನೈಸರ್ಗಿಕ ಸಕ್ಕರೆ ಕೊಬ್ಬು ಕರಗಿಸುವಲ್ಲಿ ಸಹಕಾರಿ. 4. ಕಬ್ಬಿನ ಹಾಲು ಕಾಮಾಲೆ ರೋಗದಿಂದ ಗುಣವಾಗಲು ಉತ್ತಮ ಮನೆಮದ್ದು. ದಿನಕ್ಕೊಂದು ಲೋಟ ಕಬ್ಬಿನಹಾಲು ಕುಡಿಯುವುದರಿಂದ ಯಕೃತ್…
ಪ್ರತಿವರ್ಷದ ಹಾಗೆಯೇ ಈ ವರ್ಷವು ಕೂಡ ಗೂಗಲ್ ನಲ್ಲಿ ಸರ್ಚ್ ಆದವರು ಯಾರು ? ಎಂಬ ಪ್ರಶ್ನೆಗೆ ಅಚ್ಚರಿಯ ಉತ್ತರವೊಂದು ಸಿಕ್ಕಿದೆ ಏನಪ್ಪಾ ಅದು ಅಂತೀರಾ? ಹೌದು ಈ ವರ್ಷದ ಅರ್ಧದಷ್ಟು ಭಾಗ ಈಗಾಗಲೇ ಮುಗಿದಿದೆ. ಇನ್ನೂ ಈ ವರ್ಷದಲ್ಲಿ ಅತೀ ಹೆಚ್ಚು ಗೂಗಲ್ ನಲ್ಲಿ ಸರ್ಚ್ ಆದವರು ಯಾರು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಆದರೆ ಈ ಭಾರಿ ಅತಿ ಹೆಚ್ಚು ಸರ್ಚ್ಗೊಳಗಾದವರು ಯಾರು ಎಂಬ ಪ್ರಶ್ನೆಗೆ ನಿಮ್ಮ ಉತ್ತರ ಮೋದಿ ಎಂದಾಗಿದ್ದಲ್ಲಿ ತಪ್ಪು. ಇಷ್ಟಕ್ಕೂ…