ಸಿನಿಮಾ

ನಟ ಯಶ್ ಮನೆ ಮುಂದೆ ಆತ್ಮಹತ್ಯಗೆ ಯತ್ನಿಸಿದ ಅಭಿಮಾನಿ..!

384

ಕನ್ನಡ ಚಿತ್ರಗಳನ್ನು ಕೀಳುಮಟ್ಟದಲ್ಲಿ ನೋಡುತ್ತಿದ್ದ ಪರಭಾಷಿಕರನ್ನು ಕನ್ನಡ ಚಿತ್ರರಂಗದ ಕಡೆ ನೋಡುವಂತೆ ಮಾಡಿದ ರಾಕಿಂಗ್ ಸ್ಟಾರ್ ಯಶ್ ಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ.ಇದನು ಯಶ್ ರವರ ಹುಟ್ಟು ಹಬ್ಬವಾಗಿದ್ದು ಯಶ್ ರವರನ್ನು ನೋಡಲು ಅಭಿಮಾನಿಯನ್ನು ಬಿಡದ್ದಕ್ಕೆ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ರವಿ ಆತ್ಮಹತ್ಯೆಗೆ ಯತ್ನಿಸಿದ ಯಶ್ ಅಭಿಮಾನಿ. ರವಿ ನೆಲಮಂಗಲ ತಾಲೂಕಿನ ಶಾಂತಿನಗರ ನಿವಾಸಿಯಾಗಿದ್ದು, ಇಂದು ತನ್ನ ನೆಚ್ಚಿನ ನಟನ ಹುಟ್ಟುಹಬ್ಬ ಇರುವ ಕಾರಣ ಯಶ್ ಅವರನ್ನು ಭೇಟಿ ಮಾಡಲು ಬೆಂಗಳೂರಿನ ಹೊಸಕೆರೆಹಳ್ಳಿ ಮನೆಗೆ ಆಗಮಿಸಿದ್ದ.

ಮನೆಗೆ ಆಗಮಿಸಿದರೂ ಭೇಟಿಗೆ ಅವಕಾಶ ಸಿಗದಕ್ಕೆ ಯಶ್ ನಿವಾಸದ ಮುಂಭಾಗದಲ್ಲೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ರವಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಯಶ್ ಪ್ರತಿ ವರ್ಷ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಆಚರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಅಂಬರೀಶ್ ಅವರು ನಿಧನರಾದ ಹಿನ್ನೆಲೆಯಲ್ಲಿ ತಾವು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದರು.

ಯಶ್ ಅವರು ತಂದೆಯಾದ ಬಳಿಕ ಇದು ಅವರ ಮೊದಲನೇ ಹುಟ್ಟುಹಬ್ಬವಾಗಿದ್ದು, ಭಾನುವಾರ ಯಶ್ ಟ್ವಿಟ್ಟರಿನಲ್ಲಿ ಲೈವ್ ವಿಡಿಯೋ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿ, ಈ ವರ್ಷ ಜನ್ಮದಿನ ಆಚರಿಸುತ್ತಿಲ್ಲ. ಅಭಿಮಾನಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಅಳಿಯ ಚಿರು ಸರ್ಜಾ ಕುರಿತು ಅರ್ಜುನ್ ಸರ್ಜಾ ಅವರ ನೋವಿನ ಮಾತು.

    ನಟ ಚಿರಂಜೀವಿ ಸರ್ಜಾ ಅವರ ಹಠಾತ್‌ ನಿಧನದಿಂದ ಇಡೀ ಚಿತ್ರರಂಗವೇ ಕಂಬನಿಗರೆದಿದೆ. ಚಿಕ್ಕ ವಯಸ್ಸಿನಲ್ಲೇ ಅವರು ನಿಧನರಾಗಿದ್ದು ನಿಜಕ್ಕೂ ದುರದೃಷ್ಟಕರ. ಸರ್ಜಾ ಕುಟುಂಬದ ಮುದ್ದಿನ ಮಗನಾಗಿದ್ದ ಚಿರು ಅವರನ್ನು ಕಂಡರೆ ಅವರ ಮಾವ, ನಟ ಅರ್ಜುನ್ ಸರ್ಜಾ ಅವರಿಗೆ ಅಪಾರ ಪ್ರೀತಿ. ಇದೀಗ ತಮ್ಮ ಪ್ರೀತಿಯ ಅಳಿಯನ ಕುರಿತು ನೋವಿನ ಮಾತೊಂದನ್ನು ಹೇಳಿಕೊಂಡಿದ್ದಾರೆ ಅರ್ಜುನ್. ಜೂನ್‌ 7ರ ಭಾನುವಾರ ಮಧ್ಯಾಹ್ನ ಚಿರು ನಿಧನರಾದಾಗ ಅರ್ಜುನ್‌ ಚೆನ್ನೈನಲ್ಲಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಅವರು, ಕುಟುಂಬದೊಂದಿಗೆ ಹೊರಟು ಬಂದಿದ್ದರು. ತಮ್ಮ ಕಣ್ಣ ಮುಂದೆ ಬೆಳೆದಿದ್ದ…

  • ಸುದ್ದಿ

    29 ವರ್ಷದ ಯುವಕನ ದೇಹದಲ್ಲಿತ್ತು ಗರ್ಭಕೋಶ …ನಂತರ ಏನಾಯ್ತು?

    ಮುಂಬಯಿಯ ಜೆ.ಜೆ. ಹಾಸ್ಪಿಟಲ್‌ಗೆ ಕಳೆದ ತಿಂಗಳು 29 ವರ್ಷದ ಯುವಕನೊಬ್ಬ ಬಂದಿದ್ದ. ಅವನ ಸಮಸ್ಯೆ ಬಂಜೆತನ. ಪರೀಕ್ಷೆ ವೇಳೆ ಆತನ ವೃಷಣ ಹೊಟ್ಟೆಯೊಳಗಿರುವುದು ಕಂಡುಬಂತು! ಯಾಕೆ ಹೀಗಿದೆ ಎಂದು ಎಂಆರ್‌ಐ ನಡೆಸಿದಾಗ ಕಂಡದ್ದೇ ಬೇರೆ! ಯುವಕನ ದೇಹದಲ್ಲಿ ಸ್ತ್ರೀಯರಲ್ಲಿ ಇರುವ ಸಂತಾನೋತ್ಪತ್ತಿಗೆ ಸಂಬಂಧಿಸಿದ ಅಂಗಗಳೆಲ್ಲವೂ ಇದ್ದವು! ಅಂದರೆ, ಗರ್ಭಕೋಶ, ಫ್ಯಾಲೋಪಿಯನ್‌ ನಳಿಗೆಳು, ಗರ್ಭಾಶಯ ಮಾತ್ರವಲ್ಲ ಅರೆಬರೆಯಾದ ಮರ್ಮಾಂಗವೂ ಇತ್ತು! ಹಾಗಂತ ಇವ್ಯಾವುವೂ ಕೆಲಸ ಮಾಡುತ್ತಿರಲಿಲ್ಲ. ಮೂತ್ರ ಸಂಬಂಧಿ ಸಮಸ್ಯೆಗಳ ವಿಭಾಗದ ಸರ್ಜನ್‌ ಡಾ. ವೆಂಕಟ್‌ ಗೀತೆ ಅವರಲ್ಲಿಗೆ…

  • ಸುದ್ದಿ

    ಬಿಗ್ ಬಾಸ್ ರಲ್ಲಿ ದೀಪಿಕಾನ ಅಪ್ಪಿಕೊಂಡು ಸ್ವಿಮ್ಮಿಂಗ್ ಪೂಲ್‍ಗೆ ಬಿದ್ದ ಕಿಶನ್,.!

    ಸೋಮವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಮನರಂಜನೆ ಸಲುವಾಗಿ ‘ಚಕ್ರವ್ಯೂಹ’ ಎಂಬ ಟಾಸ್ಕ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಕ್ಯಾಪ್ಟನ್ ಶೈನ್ ಗಾರ್ಡನ್ ಏರಿಯಾದಲ್ಲಿ ಇರಿಸಲಾಗಿದ್ದ ಚಕ್ರವನ್ನು ತಿರುಗಿಸಬೇಕಿತ್ತು. ಈ ವೇಳೆ ಮುಳ್ಳಿನ ಬಳಿ ಯಾರ ಹೆಸರು ನಿಲ್ಲುತ್ತದೋ ಅವರು ಮನೆಯ ಸದಸ್ಯರು ಹೇಳುವಂತೆ ಮಾಡಬೇಕು ಎಂದು ಹೇಳಿದ್ದರು. ಶೈನ್ ಮೊದಲು ಚಕ್ರ ತಿರುಗಿಸಿದಾಗ ಚಂದನಾ ಅವರ ಹೆಸರು ಬಂತು. ಆಗ ಮನೆಯ ಸದಸ್ಯರು ಚಂದನಾರಿಗೆ ಕುಡಿದ ನಶೆಯಲ್ಲಿ ಇರುವಂತೆ ನಟಿಸಬೇಕು ಎಂದಿದ್ದರು. ಚಂದನಾ ಮನೆಯ ಸದಸ್ಯರು…

  • ಉಪಯುಕ್ತ ಮಾಹಿತಿ

    ಲೈಫಲ್ಲಿ ಹೇಗೆ ಗೆಲ್ಲಬೇಕು ಅನ್ನೋರು..! ಮಿಸ್ ಮಾಡದೇ ಈ ಲೇಖನ ಓದಿ…

    ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..!

  • ಸುದ್ದಿ

    ಈ 24 ಕಂಡೀಷನ್‌ಗಳನ್ನ ಪಾಲಿಸಿದರೆ ಸರ್ಕಾರದವರೇ ಮದುವೆ ಮಾಡಿಸ್ತಾರೆ..! ಯಾವಾಗ ಗೊತ್ತಾ?

    ಮುಜರಾಯಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿದ್ದು, ಸರ್ಕಾರದಿಂದಲೇ ಸಾಮೂಹಿಕ ವಿವಾಹ ಯೋಜನೆ ರೂಪಿಸುವ ಬಗ್ಗೆ ಮಾತನಾಡಿದ್ದಾರೆ. ಎ-ದರ್ಜೆಯ ದೇಗುಲಗಳಲ್ಲಿ ವಿವಾಹಕ್ಕೆಅವಕಾಶ ಮಾಡಿಕೊಡಲಾಗುವುದು. ಧಾರ್ಮಿಕ ದತ್ತಿ ಇಲಾಖೆಯ100 ದೇಗುಲ ಆಯ್ಕೆ ಮಾಡಿಕೊಂಡಿದ್ದೇವೆ. ಏ.26,ಮೇ 24ರಂದು ವಿವಾಹ ನಡೆಸಲು ನಿರ್ಧಾರ ಮಾಡಲಾಗಿದೆ. ಇದರ ಬಗ್ಗೆ ಸುತ್ತೋಲೆಗಳನ್ನ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ. ಇನ್ನು ಮದುವೆಯ ರೂಲ್ಸ್‌ ಬಗ್ಗೆ ಮಾತನಾಡಿದ ಪೂಜಾರಿ, ವಿವಾಹಕ್ಕೊಳಗಾಗುವವರಿಗೆ ನಿಯಮ ಮಾಡಿದ್ದೇವೆ. 30 ದಿನಕ್ಕೂ ಮೊದಲೇ ನೊಂದಣಿ ಮಾಡಿಕೊಳ್ಳಬೇಕು. ಎರಡನೇ ಮದುವೆಗೆ ಇಲ್ಲಿ ಅವಕಾಶವಿಲ್ಲ. ವಧು- ವರರ…

  • inspirational, ಸುದ್ದಿ

    ಕೇವಲ ಒಂದು ಸೇಬಿಗಾಗಿ ಬಿಗ್ ಮನೆಯಲ್ಲಿ ಸ್ಪರ್ಧಿಗಳ ರಂಪಾಟ..!

    ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಒಂದು ಸೇಬಿಗಾಗಿ ಇಡೀ ದಿನ ಜಗಳವಾಡಿದ್ದು, ಮನೆಯಲ್ಲಿ ದೊಡ್ಡ ರಂಪಾಟವೇ ನಡೆದು ಹೋಗಿದೆ. ಮೊನ್ನೆ ರಾತ್ರಿ ಚೈತ್ರ ಕೋಟೂರು ಒಂದು ಆಪಲ್ ತಿಂದಿದ್ದಾರೆ. ಆಪಲ್ ತಿನ್ನುವ ಮುನ್ನ ಅಡುಗೆ ಮನೆಯ ಡಿಪಾರ್ಟ್ಮೆಂಟ್ ಗೆ ಸೇರಿದ್ದ ಚಂದನ್ ಆಚಾರ್ ಪರ್ಮಿಶನ್ ಕೇಳಿದ್ದಾರೆ. ಚೈತ್ರ ಕೋಟೂರುಗೆ ಚಂದನ್ ಆಚಾರ್ ಅನುಮತಿ ನೀಡಿ ಸುಜಾತ ಅವರಿಗೆ ಈ ವಿಷಯವನ್ನು ತಿಳಿಸಲು ಹೇಳುತ್ತಾರೆ. ಆಪಲ್ ತಿನ್ನುವಾಗ ಅದೇ ಚಂದನ್ ಆಚಾರ್, ಪ್ರತಾಪ್, ರಾಜು ತಾಳಿಕೋಟೆ ಜೊತೆಗೂ ಹಂಚಿಕೊಂಡು ತಿಂದಿದ್ದಾರೆ….