ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೊಪ್ಪಳ: ತಲ್ಲೂರು ಕೆರೆ ಯಾರಿಗೆ ನೆನಪಿಲ್ಲ ಹೇಳಿ.. ನಟ ಯಶ್ ಆ ಜಿಲ್ಲೆಯ ತಲ್ಲೂರು ಕೆರೆಯನ್ನು ಅಭಿವೃದ್ದಿ ಪಡಿಸಿ ಅಧುನಿಕ ಭಗಿರಥನಾಗಿದ್ದರು. ಈ ಕಾರಣಕ್ಕಾಗಿಯೇ ತಲ್ಲೂರು ಕೆರೆ ಜನಮಾನಸದಲ್ಲಿ ಉಳಿದಿದೆ. ಆದ್ರೆ ಇದೇ ಕೆರೆಯಲ್ಲಿ ಯಶ್ ಅಭಿವೃದ್ದಿ ಪಡಿಸುವ ಮೊದಲು ಅದೊಂದು ಇಲಾಖೆ ಬರೊಬ್ಬರಿ ಒಂದು ಕೋಟಿ ಖರ್ಚು ಮಾಡಿದೆ ಅಂತಾ ಹಣ ಗುಳುಂ ಮಾಡಿದೆ.
ನಟ ಯಶ್ 2017ರಲ್ಲಿ ತಮ್ಮ ಯಶೋಮಾರ್ಗ ಫೌಂಡೇಶನ್ ವತಿಯಿಂದ ಸ್ವಂತ ಖರ್ಚಿನಲ್ಲಿ ಬರೊಬ್ಬರಿ 70 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿ ತಲ್ಲೂರು ಕೆರೆ ಅಭಿವೃದ್ದಿ ಪಡಿಸಿದ್ರು. ಅವರ ಶ್ರಮದಂತೆ ತಲ್ಲೂರು ಕೆರೆಯೂ ಸಂಪೂರ್ಣವಾಗಿ ಭರ್ತಿಯಾಗಿ 25 ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯೋ ನೀರು ಒದಗಿಸುತ್ತಿದೆ. ಆದ್ರೆ ಕೊಪ್ಪಳದ ಸಣ್ಣನೀರಾವರಿ ಇಲಾಖೆ ಮಾತ್ರ 2015-16ರಲ್ಲಿ ಕಾಟಾಚಾರಕ್ಕೆ ಅಲ್ಪಸ್ವಲ್ಪ ಕಾಮಗಾರಿ ನಡೆಸಿ ಬರೊಬ್ಬರಿ 1 ಕೋಟಿ ಹಣ ಗುಳುಂ ಮಾಡಿದ್ದಾರೆ. ಈ ಬಗ್ಗೆ ಟಿವಿ5ಗೆ ದಾಖಲೆಗಳು ಲಭ್ಯವಾಗಿದ್ದು, ಸಣ್ಣನೀರಾವರಿ ಇಲಾಖೆ ಕೆರೆಯನ್ನು ಅಭಿವೃದ್ದಿ ಪಡಿಸಿದ್ರೆ, ಯಶ್ ಯಾಕೆ ಇಲ್ಲಿ ಬಂದು ಅಷ್ಟೊಂದು ಹಣ ಖರ್ಚು ಮಾಡಿ ಕೆರೆ ಅಭಿವೃದ್ದಿ ಪಡಿಸ್ತಾ ಇದ್ರು ಎನ್ನುವ ಮಾತುಗಳು ಕೇಳಿಬಂದಿದೆ.
ಇಲಾಖೆಯ ಅಧಿಕಾರಿಗಳು ತಲ್ಲೂರು ಕೆರೆಯ ತಡೆಗೊಡೆ ನಿರ್ಮಾಣ, ಊಳೆತ್ತುವುದು ಸೇರಿದಂತೆ ಕೆರೆಗೆ ನೀರು ಹರಿಯುವುದಕ್ಕೆ ಕಾಲುವೆಗಳನ್ನು ನಿರ್ಮಾಣ ಮಾಡಿದ್ಧೇವೆ ಅಂತಾ ಬರೊಬ್ಬರಿ 1 ಕೋಟಿ 4 ಲಕ್ಷ ರೂ ಹಣ ಎತ್ತುವಳಿ ಮಾಡಿದ್ದಾರೆ. ಕೇವಲ 5 ರಿಂದ 10 ಲಕ್ಷ ರೂ ಹಣ ಮಾತ್ರ ಅಧಿಕಾರಿಗಳು ಖರ್ಚು ಮಾಡಿ ಕೋಟಿ ರೂ ಹಣ ಕಮಾಯ್ ಮಾಡಿದ್ದಾರೆ. ತಕ್ಷಣ ಈ ಬಗ್ಗೆ ಸಣ್ಣನೀರಾವರಿ ಇಲಾಖೆಯ ಸಚಿವರು ಇತ್ತ ಕಡೆ ಗಮನಹರಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಈ ಹಿಂದೆ ಕೊಪ್ಪಳ ಸಣ್ಣನೀರಾವರಿ ಇಲಾಖೆಯ ನಡೆದಿದ್ದ ಹಗರಣ ಸಿಐಡಿ ತನಿಖೆಯಲ್ಲಿ ಇರುವಾಗಲೇ ಮತ್ತೊಂದು ಹಗರಣ ಬೆಳಕಿಗೆ ಬಂದಿದ್ದು, ಇಲಾಖೆಯ ವಿರುದ್ದ ಜನ್ರು ಛೀಮಾರಿ ಹಾಕ್ತಾ ಇದ್ದಾರೆ.. ಈಗಲಾದ್ರೂ ಯಶ್ ನ ಕನಸಿನ ಕೂಸು ತಲ್ಲೂರು ಕೆರೆಯ ಹಗರಣವನ್ನು ಸಣ್ಣನೀರಾವರಿ ಸಚಿವರಾದ ಸಿ.ಎಸ್ ಪುಟ್ಟರಾಜು ತನಿಖೆ ನಡೆಸ್ತಾರಾ ಕಾದು ನೋಡಬೇಕಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ಇದ್ದಾಗಲೇ ಸಚಿವ ಡಿಕೆ ಶಿವಕುಮಾರ್ ಅವರು ವಿದೇಶಕ್ಕೆ ಹೊರಟಿದ್ದು, ಇದೀಗ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೌದು. ಏನೇ ಸಮಸ್ಯೆ ಇದ್ದರೂ ನಾನೀದ್ದೇನೆ ಎಂದು ಹೇಳುತ್ತಾ, ಸರ್ಕಾರದ ಹಿತ ಕಾಯಲು ನಿಂತಿದ್ದ ಟ್ರಬಲ್ ಶೂಟರ್ ಸಂಕಷ್ಟದ ಸಮಯದಲ್ಲೇ ಕೈ ಕೊಟ್ರಾ ಅನ್ನೋ ಅನುಮಾನವೊಂದು ಮೂಡಿದೆ. ರಾಜ್ಯ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಇನ್ನು 7 ದಿನಗಳ ಕಾಲ ನಾಟ್ ರೀಚೆಬಲ್ನಲ್ಲಿ ಇರಲಿದ್ದಾರೆ. ಭಾನುವಾರ ರಾತ್ರಿ ದೆಹಲಿಯಿಂದ ಕುಟುಂಬ ಸಮೇತ ಆಸ್ಟ್ರೇಲಿಯಾ…
ಬಾಲಿವುಡ್ ನಟಿ ಅಲಿಯಾ ಭಟ್ ಇದೀಗ ಅಂಡರ್ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ಆ ಫೋಟೋಗಳಲ್ಲಿ ಮಿಂಚುತ್ತಿರುವ ಅಲಿಯಾ ಭಟ್ ಈಗ ವೈರಲ್ ಆಗುತ್ತಿದ್ದಾರೆ. ಇತ್ತೀಚೆಗೆ ಅಲಿಯಾ ವೋಗ್ ಮ್ಯಾಗಜೀನ್ಗಾಗಿ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋಗಳನ್ನು ಅಲಿಯಾ ಹಾಗೂ ವೋಗ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಅಲಿಯಾ ಚಿಕ್ ಮೊನೊಕಿನಿ ಧರಿಸಿದ್ದಾರೆ. ಅಲಿಯಾ ಫೋಟೋಶೂಟ್ನಲ್ಲಿ ನಿಯಾನ್ ಗ್ರೀನ್, ಶಿಮರಿ ಬ್ಲೂ ಹಾಗೂ ಗುಲಾಬಿ ಬಣ್ಣದ ಮೊನೊಕಿನಿಯನ್ನು ಧರಿಸಿದ್ದಾರೆ. ಅಂಡರ್ವಾಟರ್ನಲ್ಲಿ ಫೋಟೋಗಳಿಗೆ ಬೇರೆ ಬೇರೆ ರೀತಿ ಪೋಸ್ಗಳನ್ನು ನೀಡುವ ಮೂಲಕ ಹಾಟ್ ಆಗಿ…
ಹೊರಗಡೆ ಗಂಡನಾದವನು ಎಷ್ಟೇ ಫೇಮಸ್ ಆಗಿದ್ರೂ ಹೆಂಡತಿಗೆ ಮಾತ್ರ ಗಂಡನೇ ಎಂಬ ಗಾದೆಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹೊಸ ‘ಸಾಕ್ಷಿ’ಯಾಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಕೂಲ್ ಕ್ಯಾಪ್ಟನ್ ಮಾತ್ರ ಅಲ್ಲ, ಹೆಂಡತಿಗೆ ಒಳ್ಳೆ ಪತಿ ಕೂಡ ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ. ಟೀಂ ಇಂಡಿಯಾದ ಮಾಜಿ ನಾಯಕನಾದರೂ ಸಾರ್ವಜನಿಕ ಸ್ಥಳದಲ್ಲಿ ಪತ್ನಿ ಸಾಕ್ಷಿ ಕಾಲಿಗೆ ಚಪ್ಪಲಿ ತೊಡಿಸುವ ಮೂಲಕ ಧೋನಿ ಸರಳತೆ ಮೆರೆದಿದ್ದಾರೆ. ಧೋನಿ ಪತ್ನಿ ಕಾಲಿಗೆ ಚಪ್ಪಲಿ…
ವಿಶ್ವ ಮಹಿಳಾ ದಿನದಂದು ಬಾಲಿವುಡ್ ಸ್ಟಾರ್ಸ್ ಪತ್ನಿಯರ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಬಾಲಿವುಡ್ ನ ಕೆಲ ನಟರ ಪತ್ನಿಯರು ಕೇವಲ ಸ್ಟಾರ್ಸ್ ಪತ್ನಿಯರಾಗಿ ಗುರುತಿಸಲ್ಪಡುವುದಿಲ್ಲ. ತಮ್ಮದೇ ಬ್ಯುಸಿನೆಸ್ ಶುರು ಮಾಡಿ, ಅದ್ರಲ್ಲಿ ಹೆಸ್ರು ಮಾಡಿದವರ ಸಂಖ್ಯೆ ಸಾಕಷ್ಟಿದೆ. ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್. ನಟನೆ ಮೂಲಕ ಕೋಟ್ಯಾಂತರ ಅಭಿಮಾನಿಗಳ ಮನಸ್ಸು ಕದ್ದವರು ರಜನಿಕಾಂತ್. ಅವ್ರ ಪತ್ನಿ ಲತಾ ತಮ್ಮ ವೃತ್ತಿ ಜೀವನದಲ್ಲಿ ತುಂಬಾ ಬ್ಯುಸಿಯಾಗಿರ್ತಾರೆ. ಲತಾ, ಮಕ್ಕಳ ಶಿಕ್ಷಣಕ್ಕಾಗಿ ದಿ ಆಶ್ರಮ ಹೆಸರಿನ…
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಪುನೀತ್ ರಾಜ್ ಕುಮಾರ್ ಅಭಿನಯದ ‘ಯುವರತ್ನ’ ಚಿತ್ರೀಕರಣ ಭರದಿಂದ ಸಾಗಿದೆ. ‘ರಾಜಕುಮಾರ’ ಬಳಿಕ ಸಂತೋಷ್ ಆನಂದರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ‘ಯುವರತ್ನ’ ಭಾರಿ ನಿರೀಕ್ಷೆ ಮೂಡಿಸಿದೆ. ‘ಯುವರತ್ನ’ ಚಿತ್ರೀಕರಣ ನಡೆದಿರುವಾಗಲೇ ಪುನೀತ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ‘ಭರ್ಜರಿ’ ಚೇತನ್ ಕುಮಾರ್ ನಿರ್ದೇಶನದ ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ಅಭಿನಯಿಸಲಿದ್ದಾರೆ. ಬಹಳ ಹಿಂದೆಯೇ ‘ಜೇಮ್ಸ್’ ಚಿತ್ರದ ಮೋಷನ್ ಪೋಸ್ಟರ್…
ಜೀವನದ ಪಾಠವನ್ನು ಹಸಿವು ಅನ್ನೊದ್ದು ಅತಿ ಬೇಗನೆ ಕಲಿಸಿ ಕೊಡುತ್ತದೆ ಅನ್ನಬಹುದು. ಬಡತನದಲ್ಲಿ ಬೆಂದು ನೊಂದು ಹಲವರ ಬಾಯಲ್ಲಿ ಬೋಯಿಸಿಕೊಂಡು ಜೀವನವನ್ನು ಸಾಗಿಸುತ್ತ, ಇವುಗಳ ಮದ್ಯೆ ತನ್ನ ಮಗನನ್ನು ಐಎಎಸ್ ಅಧಿಕಾರಿಯನ್ನಾಗಿ ಮಾಡಬೇಕು ಅನ್ನೋ ಕನಸನ್ನು ಹೊತ್ತು ಶ್ರಮ ಪಟ್ಟ ಆ ಶ್ರಮ ಜೀವಿಗೆ ಆ ದೇವರು ಪ್ರತಿ ಫಲವನ್ನು ಕೊಟ್ಟಿದ್ದಾನೆ.