ಉಪಯುಕ್ತ ಮಾಹಿತಿ

ನೀವೂ ಈ ಕೆಲಸ ಮಾಡಿದ್ದೇ ಆದ್ರೆ ಬಂದ್ ಆಗುತ್ತೆ ನಿಮ್ಮ ವಾಟ್ಸಾಪ್ ಖಾತೆ..!ಏಕೆ ಗೊತ್ತಾ..?

122

ಭಾರತದಲ್ಲಿ ಜನಸಂಖ್ಯೆಯಂತೆಯೇ ವಾಟ್ಸಾಪ್ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ನ ದುರ್ಬಳಕೆ ಹೆಚ್ಚಾಗುತ್ತಿದ್ದು, ತಪ್ಪು ಮಾಹಿತಿ, ಸುಳ್ಳು ಸುದ್ದಿಗಳನ್ನು ಹರಡುವ ಪ್ರಬಲ ಜಾಲ ತಾಣವಾಗಿ ಮಾರ್ಪಟ್ಟಿದೆ.

ಅಷ್ಟೇ ಅಲ್ಲದೆ ಚೈಲ್ಡ್ ಪೋರ್ನೋಗ್ರಫಿಯೂ ಶೇರ್ ಆಗುತ್ತಿದೆ. ಇಂತಹ ದುಷ್ಕೃತ್ಯಗಳ ಮೂಲ ಪತ್ತೆ ಹಚ್ಚುವಲ್ಲಿ ವಾಟ್ಸಾಪ್ ಕಂಪನಿಯೂ ಹರ ಸಾಹಸ ಮಾಡುತ್ತಿದೆ.ಇದೀಗ ವಾಟ್ಸಾಪ್ ಬಳಕೆದಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಯಾವ ಖಾತೆಯಿಂದ ತಪ್ಪು ಮಾಹಿತಿ, ಸುಳ್ಳು ಸುದ್ದಿ, ಕಾನೂನು ಬಾಹಿರ ಪೋರ್ನ್ ಸಂದೇಶಗಳು ರವಾನೆಯಾಗುವುದೋ ಅಂತಹ ಖಾತೆಗಳನ್ನು ಮುಲಾಜಿಲ್ಲದೆ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಕಳೆದ ಮೂರು ತಿಂಗಳಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಈ ರೀತಿಯಲ್ಲಿ ರದ್ದುಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ರಿಜಿಸ್ಟ್ರೇಷನ್ ವೇಳೆಯೇ ರದ್ದು : ನೀವು ಮೊದಲ ಬಾರಿ ವಾಟ್ಸಾಪ್ ಬಳಸುವ ವೇಳೆ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ. ನೀವು ಬಳಸುವ ಮೊಬೈಲ್ ನಂಬರ್ ಗೆ ಕಂಪನಿ ವೆರಿಫಿಕೇಶನ್ ನಂಬರ್ ಅನ್ನು ಎಸ್ಎಂಎಸ್ ಅಥವಾ ಕರೆಯ ಮೂಲಕ ತಿಳಿಸುತ್ತದೆ. ಅದನ್ನು ನೀವು ಎಂಟರ್ ಮಾಡಿದ ಬಳಿಕವೇ ನಿಮ್ಮ ಖಾತೆ ಚಾಲೂ ಆಗುವುದು. ಆದರೆ ನಿಮ್ಮ ಮೊಬೈಲ್ ಸಂಖ್ಯೆಯು ಈ ಹಿಂದೆ ಯಾವುದಾದರೂ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗಿದ್ದು ಗಮನಕ್ಕೆ ಬಂದಲ್ಲಿ ನಿಮ್ಮ ಖಾತೆಯು ತಕ್ಷಣ ರದ್ದಾಗುತ್ತದೆ.

ಸಂದೇಶ ರವಾನೆ ವೇಳೆ ರದ್ದು : ನೀವು ರಿಜಿಸ್ಟ್ರೇಷನ್ ಆದ ಬಳಿಕ ಕಂಪನಿ, ಆಪ್ ನಲ್ಲಿ ನಿಮ್ಮ ಪ್ರತಿಯೊಂದು ನಡೆಯನ್ನು ಗಮನಿಸುತ್ತಿರುತ್ತದೆ. ನೀವು ನೋಂದಣಿ ಆದ 15 ಸೆಕೆಂಡುಗಳಲ್ಲಿ 100ಕ್ಕೂ ಅಧಿಕ ಸಂದೇಶಗಳನ್ನು ಕಳಿಸಲು ಪ್ರಯತ್ನಿಸಿದ್ದೇ ಆದಲ್ಲಿ ತಾನಾಗಿಯೇ ಖಾತೆ ರದ್ದಾಗಲಿದೆ. ಇನ್ನು ನೋಂದಣಿಯಾದ ಐದು ನಿಮಿಷದ ಒಳಗಾಗಿ ಡಝನ್ ಗ್ರೂಪ್ ಗಳನ್ನು ಕ್ರಿಯೇಟ್ ಮಾಜಿ ಸಾವಿರ ಬಳಕೆದಾರರನ್ನು ಸೇರಿಸಿದ್ದೇ ಆದಲ್ಲಿ ಖಾತೆ ರದ್ದಾಗಲಿದೆ. ನಿಮ್ಮ ಖಾತೆಗೆ ಕಾನೂನು ಬಾಹಿರ ಸಂದೇಶಗಳು ಬರುತ್ತಿದ್ದರೆ ಅಂತಹ ಖಾತೆಗಳನ್ನು ಬ್ಲಾಕ್ ಮಾಡಿ ಕಂಪನಿಯ ಗಮನಕ್ಕೆ ತರಬಹುದು. ಕಂಪನಿಯು ಆ ಸಂಖ್ಯೆಯ ಮೇಲೆ ನಿಗಾ ಇರಿಸುತ್ತದೆ. ಆ ಸಂಖ್ಯೆ ಬಗ್ಗೆ ನಿರಂತರವಾಗಿ ನೆಗೆಟಿವ್ ಅಭಿಪ್ರಾಯಗಳು ಬಂದರೆ ಕಂಪನಿಯು ಖಾತೆಯನ್ನು ರದ್ದುಗೊಳಿಸುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ