ಉಪಯುಕ್ತ ಮಾಹಿತಿ

ನೀವೂ ಈ ಕೆಲಸ ಮಾಡಿದ್ದೇ ಆದ್ರೆ ಬಂದ್ ಆಗುತ್ತೆ ನಿಮ್ಮ ವಾಟ್ಸಾಪ್ ಖಾತೆ..!ಏಕೆ ಗೊತ್ತಾ..?

141

ಭಾರತದಲ್ಲಿ ಜನಸಂಖ್ಯೆಯಂತೆಯೇ ವಾಟ್ಸಾಪ್ ಬಳಕೆದಾರರ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ನ ದುರ್ಬಳಕೆ ಹೆಚ್ಚಾಗುತ್ತಿದ್ದು, ತಪ್ಪು ಮಾಹಿತಿ, ಸುಳ್ಳು ಸುದ್ದಿಗಳನ್ನು ಹರಡುವ ಪ್ರಬಲ ಜಾಲ ತಾಣವಾಗಿ ಮಾರ್ಪಟ್ಟಿದೆ.

ಅಷ್ಟೇ ಅಲ್ಲದೆ ಚೈಲ್ಡ್ ಪೋರ್ನೋಗ್ರಫಿಯೂ ಶೇರ್ ಆಗುತ್ತಿದೆ. ಇಂತಹ ದುಷ್ಕೃತ್ಯಗಳ ಮೂಲ ಪತ್ತೆ ಹಚ್ಚುವಲ್ಲಿ ವಾಟ್ಸಾಪ್ ಕಂಪನಿಯೂ ಹರ ಸಾಹಸ ಮಾಡುತ್ತಿದೆ.ಇದೀಗ ವಾಟ್ಸಾಪ್ ಬಳಕೆದಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಯಾವ ಖಾತೆಯಿಂದ ತಪ್ಪು ಮಾಹಿತಿ, ಸುಳ್ಳು ಸುದ್ದಿ, ಕಾನೂನು ಬಾಹಿರ ಪೋರ್ನ್ ಸಂದೇಶಗಳು ರವಾನೆಯಾಗುವುದೋ ಅಂತಹ ಖಾತೆಗಳನ್ನು ಮುಲಾಜಿಲ್ಲದೆ ರದ್ದುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ. ಕಳೆದ ಮೂರು ತಿಂಗಳಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಈ ರೀತಿಯಲ್ಲಿ ರದ್ದುಪಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ರಿಜಿಸ್ಟ್ರೇಷನ್ ವೇಳೆಯೇ ರದ್ದು : ನೀವು ಮೊದಲ ಬಾರಿ ವಾಟ್ಸಾಪ್ ಬಳಸುವ ವೇಳೆ ರಿಜಿಸ್ಟ್ರೇಷನ್ ಮಾಡಬೇಕಾಗುತ್ತದೆ. ನೀವು ಬಳಸುವ ಮೊಬೈಲ್ ನಂಬರ್ ಗೆ ಕಂಪನಿ ವೆರಿಫಿಕೇಶನ್ ನಂಬರ್ ಅನ್ನು ಎಸ್ಎಂಎಸ್ ಅಥವಾ ಕರೆಯ ಮೂಲಕ ತಿಳಿಸುತ್ತದೆ. ಅದನ್ನು ನೀವು ಎಂಟರ್ ಮಾಡಿದ ಬಳಿಕವೇ ನಿಮ್ಮ ಖಾತೆ ಚಾಲೂ ಆಗುವುದು. ಆದರೆ ನಿಮ್ಮ ಮೊಬೈಲ್ ಸಂಖ್ಯೆಯು ಈ ಹಿಂದೆ ಯಾವುದಾದರೂ ಕಾನೂನು ಬಾಹಿರ ಕೃತ್ಯದಲ್ಲಿ ಭಾಗಿಯಾಗಿದ್ದು ಗಮನಕ್ಕೆ ಬಂದಲ್ಲಿ ನಿಮ್ಮ ಖಾತೆಯು ತಕ್ಷಣ ರದ್ದಾಗುತ್ತದೆ.

ಸಂದೇಶ ರವಾನೆ ವೇಳೆ ರದ್ದು : ನೀವು ರಿಜಿಸ್ಟ್ರೇಷನ್ ಆದ ಬಳಿಕ ಕಂಪನಿ, ಆಪ್ ನಲ್ಲಿ ನಿಮ್ಮ ಪ್ರತಿಯೊಂದು ನಡೆಯನ್ನು ಗಮನಿಸುತ್ತಿರುತ್ತದೆ. ನೀವು ನೋಂದಣಿ ಆದ 15 ಸೆಕೆಂಡುಗಳಲ್ಲಿ 100ಕ್ಕೂ ಅಧಿಕ ಸಂದೇಶಗಳನ್ನು ಕಳಿಸಲು ಪ್ರಯತ್ನಿಸಿದ್ದೇ ಆದಲ್ಲಿ ತಾನಾಗಿಯೇ ಖಾತೆ ರದ್ದಾಗಲಿದೆ. ಇನ್ನು ನೋಂದಣಿಯಾದ ಐದು ನಿಮಿಷದ ಒಳಗಾಗಿ ಡಝನ್ ಗ್ರೂಪ್ ಗಳನ್ನು ಕ್ರಿಯೇಟ್ ಮಾಜಿ ಸಾವಿರ ಬಳಕೆದಾರರನ್ನು ಸೇರಿಸಿದ್ದೇ ಆದಲ್ಲಿ ಖಾತೆ ರದ್ದಾಗಲಿದೆ. ನಿಮ್ಮ ಖಾತೆಗೆ ಕಾನೂನು ಬಾಹಿರ ಸಂದೇಶಗಳು ಬರುತ್ತಿದ್ದರೆ ಅಂತಹ ಖಾತೆಗಳನ್ನು ಬ್ಲಾಕ್ ಮಾಡಿ ಕಂಪನಿಯ ಗಮನಕ್ಕೆ ತರಬಹುದು. ಕಂಪನಿಯು ಆ ಸಂಖ್ಯೆಯ ಮೇಲೆ ನಿಗಾ ಇರಿಸುತ್ತದೆ. ಆ ಸಂಖ್ಯೆ ಬಗ್ಗೆ ನಿರಂತರವಾಗಿ ನೆಗೆಟಿವ್ ಅಭಿಪ್ರಾಯಗಳು ಬಂದರೆ ಕಂಪನಿಯು ಖಾತೆಯನ್ನು ರದ್ದುಗೊಳಿಸುತ್ತದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸರ್ಕಾರದ ಯೋಜನೆಗಳು

    ಖಾತೆಯಲ್ಲಿ 10 ಸಾವಿರ ಇರುವವರು ಬಡವರಲ್ಲ..!ಹೇಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಮಿಶನ್‌ ಅಂತ್ಯೋದಯ ಯೋಜನೆ ಅಡಿ 50 ಸಾವಿರ ಗ್ರಾಮ ಪಂಚಾಯತ್‌ಗಳಲ್ಲಿ ಬಡತನ ನಿವಾರಣೆಗೆ ನಿರ್ಧರಿಸಿದ್ದು, ಇದರ ಅಡಿಯಲ್ಲಿ ಬಡತನದ ಮಾನದಂಡಗಳನ್ನು ಇದೀಗ ನಿಗದಿಸಲಾಗಿದೆ. ಒಂದು ಕುಟುಂಬದಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಬ್ಯಾಂಕ್‌ ಖಾತೆಯಲ್ಲಿ 10 ಸಾವಿರಕ್ಕಿಂತ ಹೆಚ್ಚು ಮೊತ್ತವನ್ನು ಇಟ್ಟುಕೊಂಡಿದ್ದರೆ, ಆ ಕುಟುಂಬ ಬಡತನ ಅನುಭವಿಸುತ್ತಿಲ್ಲ ಎಂದು ಪಂಚಾಯತ್‌ಗಳು ನಿರ್ಧರಿಸಬಹುದಾಗಿದೆ.

  • ಸುದ್ದಿ

    ಇದ್ದಿದ್ದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು- ಸಚಿವರಿಗೆ ತಿರುಗೇಟು ಹರ್ಷಿಕಾ ಪೂನಚ್ಚ….!

    ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ಎಂಬುವುದು ನನ್ನ ಪರಿಸ್ಥತಿ. ನಾನು ಯಾರನ್ನು ದೋಷಿಸಿಲ್ಲ. ಕೊಡಗು ಸಂತ್ರಸ್ಥರಿಗೆ ಸರ್ಕಾರ ಚೆನ್ನಾಗಿರುವ ಮನೆ ನಿರ್ಮಿಸಿ ಕೊಡಲಿ ಎಂದು ಮನವಿ ಮಾಡಿದ್ದು ಎಂದು ಸಚಿವ ಸಾರಾ ಮಹೇಶ್‍ಗೆ ನಟಿ ಹರ್ಷಿಕಾ ಪೂಣಚ್ಚ ತಿರುಗೇಟು ನೀಡಿದ್ದಾರೆ.ವಿಡಿಯೋ ಮೂಲಕ ಶನಿವಾರ ತಾವು ಕೊಡಗು ಸಂಸ್ರಸ್ಥರ ಬಗ್ಗೆ ನೀಡಿದ ಹೇಳಿಕೆಗೆ ಹರ್ಷಿಕಾ ಪೂಣಚ್ಚ ಸ್ಪಷ್ಟನೆ ನೀಡಿದ್ದಾರೆ. ವಿಡಿಯೋದಲ್ಲಿ ಇದ್ದಿದ್ದು ಇದ್ದ ಹಾಗೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ನನ್ನ…

  • ಜ್ಯೋತಿಷ್ಯ

    ತಾಮ್ರದ ಚೂರನ್ನು ಮನೆಯ ಈ ಭಾಗದಲ್ಲಿ ಇಟ್ಟು ನಂತರ ನಡೆಯುವ ಚಮತ್ಕಾರ ನೋಡಿ…

    ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ರತ್ನಗಳ ಬಗ್ಗೆ ಹೇಳಲಾಗಿದೆ. ಯಾವ ರತ್ನ ಧಾರಣೆ ಮಾಡಿದ್ರೆ ಏನು ಲಾಭ ಎಂಬುದನ್ನು ವಿವರಿಸಲಾಗಿದೆ. ಹಾಗೆ ತಾಮ್ರಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ. ಮನೆಯಲ್ಲಿ ತಾಮ್ರದ ವಸ್ತುಗಳಿದ್ರೆ ನಕಾರಾತ್ಮಕ ಶಕ್ತಿಗಳು ಮನೆ ಪ್ರವೇಶ ಮಾಡುವುದಿಲ್ಲವಂತೆ. ವಾಸ್ತು ಶಾಸ್ತ್ರದಲ್ಲಿ ತಾಮ್ರದ ವಸ್ತುಗಳು ಯಾವ ಜಾಗದಲ್ಲಿದ್ದರೆ ನಕಾರಾತ್ಮಕ ಶಕ್ತಿ ಪ್ರಭಾವ ಕಡಿಮೆಯಾಗುತ್ತದೆ ಎಂಬುದನ್ನೂ ಹೇಳಲಾಗಿದೆ. ತಾಮ್ರ ಕಠಿಣ ಕೆಲಸವನ್ನು ಸುಲಭ ಮಾಡುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗಲು ಇದು ಕಾರಣವಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿದ್ದರೆ ವಾಸ್ತುದೋಷ…

  • ರಾಜಕೀಯ

    ಇವಿಎಂನಲ್ಲಿದ್ದ ವೋಟ್ ಗಳನ್ನು ಡಿಲೀಟ್ ಮಾಡಿದ ಅಧಿಕಾರಿಗಳು…!

    ಡಮ್ಮಿ ವೋಟ್ ಗಳನ್ನು ಡಿಲೀಟ್ ಮಾಡುವ ಬದಲು ಅಸಲಿ ಮತಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ.ಹಿಮಾಚಲ ಪ್ರದೇಶದಲ್ಲಿ ಭಾನುವಾರ ಕೊನೆ ಹಂತದ ಮತದಾನ ನಡೆದಿದ್ದು, ಈ ಸಂದರ್ಭದಲ್ಲಿ ಇವಿಎಂನಲ್ಲಿದ್ದ ಡಮ್ಮಿ ಮತಗಳನ್ನು ಡಿಲೀಟ್ ಮಾಡುವ ಬದಲು ಅಸಲಿ ಮತಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ. ಹೀಗೆ ಕರ್ತವ್ಯಲೋಪವೆಸಗಿದ 20 ಚುನಾವಣೆ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತು ಮಾಡುವ ಸಾಧ್ಯತೆ ಇದೆ. ಮತಗಟ್ಟೆಗಳಲ್ಲಿ ಮತದಾನ ಆರಂಭಕ್ಕೆ ಮೊದಲು ಇವಿಎಂಗಳ ಪರೀಕ್ಷೆಗಾಗಿ ಡಮ್ಮಿ ವೋಟಿಂಗ್ ಮಾಡಲಾಗುತ್ತದೆ. ಮತದಾನ ಆರಂಭವಾದಾಗ ಡಮ್ಮಿ ವೋಟ್ ಗಳನ್ನು…

  • ಸುದ್ದಿ

    ಶಾಕಿಂಗ್ ನ್ಯೂಸ್!ಯಶ್ ಹತ್ಯೆಗೆ ಸಂಚು ರೂಪಿಸಿದ್ದ ಕಿಲ್ಲರ್ಸ್ ಅರೆಸ್ಟ್!ಸುಪಾರಿ ಕೊಟ್ಟದ್ದು ಯಾರು ಗೊತ್ತಾ..?

    ಕನ್ನಡದ ಪ್ರಸಿದ್ದ ನಟರೊಬ್ಬರನ್ನ ಹತ್ಯೆ ಮಾಡಲು ಸಂಚು ರೂಪಿಸಿದ್ದ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶೇಷಾದ್ರಿಪುರಂನ ನಿತೇಶ್, ನಿತ್ಯಾನಂದ, ವಿಜಯನಗರದ ಮಧು ಹಾಗೂ ಪಿಜಿಹಳ್ಳಿಯ ಪೃಥ್ವಿ ಬಂಧಿತ ಆರೋಪಿಗಳು. ಸಿಸಿಬಿ ಪೊಲೀಸರು ಶೇಷಾದ್ರಿಪುರಂ ಠಾಣೆಯ ಬಿಡಿಎ ಕಚೇರಿ ಬಳಿ ಆರೋಪಿಗಳನ್ನ ಬಂಧಿಸಿದ್ದಾರೆ, ಮಾರ್ಚ್ 7 ರಂದು ಎಸಿಪಿ ಬಾಲರಾಜ್ ನೇತೃತ್ವದಲ್ಲಿ ಸಿಸಿಬಿ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. ಬಂಧಿತ ನಾಲ್ವರ ಬಳಿಯೂ ಲಾಂಗು ಮತ್ತು ಡ್ರಾಗರ್ ಸೇರಿ ಮಾರಕಾಸ್ತ್ರಗಳು ಪತ್ತೆಯಾಗಿವೆ. ಸಿಸಿಬಿ ದಾಳಿ ವೇಳೆ ಐದು ಮಂದಿ…