News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಓಂ “ॐ ” ಮಂತ್ರ ಪಠಿಸಿ, ಸರ್ವ ರೋಗ ನಿವಾರಿಸಿ !
ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲವೇ! ಹಾಗಾದರೆ ಹೀಗೆ ಮಾಡಿ
ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಆರಂಭ!
ರೇಷನ್ ಹಣದ Status Check ಮಾಡಲು ಈ ಲಿಂಕ್ ಮೂಲಕ ಪರೀಕ್ಷಿಸಿಕೊಳ್ಳಿ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-30 ಸಾವಿರ ದಂಡ
ಈ ಲಿಂಕ್‌ ಕ್ಲಿಕ್‌ ಮಾಡಿದರೆ ಗೃಹಲಕ್ಷ್ಮೀ ಯೋಜನೆಯ ಅರ್ಜಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
ಉಪಯುಕ್ತ ಮಾಹಿತಿ

ಈ ಜಾಗಗಳಲ್ಲಿ ಮೊಬೈಲ್ ಫೋನ್ ಗಳನ್ನು ಇಟ್ಟು ಕೊಳ್ಳಲೇಬೇಡಿ…

419

ನೀವು ಮೊಬೈಲ್ ಪ್ರಿಯರೇ? ಮೊಬೈಲ್ ಇಲ್ಲದೆ ನಿಮಗೆ ನಿದ್ದೆ ಬರುವುದಿಲ್ಲವೇ? ನೀವು ಹೋದಲ್ಲೆಲ್ಲ ಮೊಬೈಲ್ ಬೇಕೇ ಬೇಕೆನಿಸುತ್ತದೆಯೆ? ಹಾಗಿದ್ದರೇ ಇಲ್ಲಿ ಕೇಳಿ….ಯಾವುದೇ ಕಾರಣಕ್ಕೂ ಈ ಎಂಟು ಕಡೆ ನಿಮ್ಮ ಮೊಬೈಲನ್ನು ಬಳಸಲೇಬೇಡಿ. ನಿಮ್ಮ ಹತ್ತಿರಕ್ಕೂ ಇಟ್ಟುಕೊಳ್ಳಬೇಡಿ.

ನೀವು ಮಲಗುವ ಕೊಠಡಿ : ಸಾಮಾನ್ಯವಾಗಿ ಮಲಗುವ ಕೋಣೆಯಲ್ಲಿ ಮೊಬೈಲನ್ನು ಎಲ್ಲರೂ ಇಟ್ಟುಕೊಂಡೇ ಇರುತ್ತಾರೆ. ಕಾರಣ ಬರುವ ಮೆಸೇಜ್ ಗಳನ್ನು ಓದುವುದು, ರಾತ್ರಿ ಮೆಸೇಜುಗಳನ್ನು ಓದಿಯೇ ಮಲಗುವುದು. ಇದೆಲ್ಲದರ ಜೊತೆಗೆ ಅಲಾರಾಂ ಇಟ್ಟುಕೊಳ್ಳುವುದು ಅಭ್ಯಾಸ ಆಗಿ ಬಿಟ್ಟಿರುತ್ತದೆ. ಆದರೆ ನೆನಪಿಡಿ ಇದು ಒಳ್ಳೆಯ ಬೆಳವಣಿಗೆಯಲ್ಲ ನಿಮ್ಮ ಆರೋಗ್ಯಕ್ಕಿಂತ ಯಾವುದೂ ಮುಖ್ಯವಲ್ಲ. ಹಾಗಾಗಿ ಮೊಬೈಲ್ ಗಿಂತ ಆರೋಗ್ಯ ಮುಖ್ಯವೆಂದು ನೀವೇ ಮನಗಾಣಿ. ಮೊಬೈಲ್ ತರಂಗಗಳು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಇದು ಇಲ್ಲಿ ಮಾತ್ರವಲ್ಲ ಇನ್ನೂ ಏಳು ಕಡೆ ಬಗ್ಗೆ ವಿವರ ಕೊಡುತ್ತೇವೆ.

ಜೇಬುಗಳಲ್ಲಿ ಇಟ್ಟುಕೊಳ್ಳುವುದು ತುಂಬಾ ಅಪಾಯ

ನೀವು ಹಿಂದಿನ ಅಥವಾ ಮುಂದಿನ ಜೇಬುಗಳಲ್ಲಿ ಮೊಬೈಲ್ ಇಟ್ಟುಕೊಳ್ಳುವುದು ತುಂಬಾ ಅಪಾಯಕಾರಿ. ಇದು ನಿಮ್ಮ ಹೊಟ್ಟೆ ನೋವು ಅಥವಾ ಕಾಲು ನೋವಿಗೆ ಕಾರಣವಾದೀತು. ಮೊಬೈಲ್ ಸದಾ ಇಂಟರ್ನೆಟ್‌ ಸಂಪರ್ಕ ಹೊಂದಿರುವ ಕಾರಣ ಅದು ಸಾಕಷ್ಟು ತರಂಗಗಳನ್ನು ಉಂಟು ಮಾಡುತ್ತಿರುತ್ತದೆ. ಇದು ನಿಮ್ಮ ದೇಹದ ವಿವಿಧ ಭಾಗಗಳಿಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ. ಅಲ್ಲದೆ ಕ್ಯಾನ್ಸರ್ ಗೆ ಕಾರಣವಾಗುವ ಸಂಭವ ಹೆಚ್ಚಿದೆ.

ದಿಂಬಿನ ಕೆಳಗೆ ಇಟ್ಟುಕೊಳ್ಳಬೇಡಿ : ದಿಂಬಿನ ಕೆಳಗೆ ಮೊಬೈಲನ್ನು ಇಟ್ಟುಕೊಳ್ಳುವುದರಿಂದ ನಿಮಗೆ ಸುಖ ನಿದ್ರೆಗೆ ಭಂಗ ಉಂಟಾಗುತ್ತದೆ. ಅಲ್ಲಿ ಬರುವ ನೀಲಿ ಬಣ್ಣದ ದ್ವೀಪವು ನಿಮ್ಮ ನಿದ್ದೆಗೆ ಅಡ್ಡಿ ಮಾಡುತ್ತದೆ. ಅಲ್ಲದೇ ಬೇಗ ಏಳಲು ಆಗದ ಪರಿಸ್ಥಿತಿ ನಿಮ್ಮದಾಗುತ್ತದೆ. ಇದರಿಂದ ಸೋಮಾರಿತನವೂ ಹೆಚ್ಚುತ್ತ ಹೋಗುತ್ತದೆ.

ನಿಮ್ಮ ಶರ್ಟಿನ ಇಲ್ಲವೇ ಬ್ರಾ ಒಳಗೆ ಇಟ್ಟುಕೊಳ್ಳಬೇಡಿ : ನೀವು ಹೀಗೆ ಮಾಡುವುದರಿಂದ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆಗಳು ಹೆಚ್ಚಿರುತ್ತದೆ. ಅಲ್ಲದೆ ವೈಬ್ರೆಟ್ ಮೋಡ್ನಲ್ಲಿ ಇಟ್ಟುಕೊಂಡರೆ ಇನ್ನೂ ಅಪಾಯಕಾರಿ. ನಿಮ್ಮ ಚರ್ಮ ತುಂಬಾ ಸೂಕ್ಷ್ಮವಾಗಿರುವುದರಿಂದ ಅದಕ್ಕೆ ಹಾನಿ ಉಂಟಾಗುತ್ತವೆ.

ಮುಖಕ್ಕೆ ತಾಗಿಸಿ ಹಿಡಿದುಕೊಳ್ಳಬೇಡಿ : ನೀವು ಮೊಬೈಲ್ ಕರೆ ಸ್ವೀಕರಿಸುವಾಗ ಯಾವುದೇ ಕಾರಣಕ್ಕೂ ಮುಖಕ್ಕೆ ತಾಗುವಂತೆ ಇಟ್ಟುಕೊಳ್ಳಬೇಡಿ. ಯಾಕೆಂದರೆ ನಮ್ಮ ಫೋನಿನಲ್ಲಿ ಬ್ಯಾಕ್ಟೀರಿಯಾ ಬಹಳವಾಗಿ ಇರುತ್ತವೆ. ಇದು ನಿಮ್ಮ ಮುಖದ ತ್ವಚೆಯ ಮೇಲೆ ಪರಿಣಾಮ ಬೀರುತ್ತದೆ. ಚರ್ಮಕ್ಕೆ ಸೋಂಕು ತಾಗುವುದಲ್ಲದೇ ತುರಿಕೆಯೂ ಪ್ರಾರಂಭವಾಗುತ್ತದೆ. ಹೀಗಾಗಿ ಈ ತೊಂದರೆಯಿಂದ ಅಲ್ಪ ಪ್ರಮಾಣದಲ್ಲಿ ಆದರೂ ಪಾರಾಗಬೇಕೆಂದರೆ ಇಯರ್ ಫೋನನ್ನು ಬಳಸಿ.

ಇದು ಬಾತ್ ರೂಮ್ ರಹಸ್ಯ : ಬಾತ್ ರೂಮ್ ಗೆ ನಾವು ಹೋಗುವುದೇ ನಮ್ಮ ಮೈಯಲ್ಲಿರುವ ಕೊಳೆಯನ್ನು ಹೋಗಲಾಡಿಸುವ ಸಲುವಾಗಿ. ಹೀಗಿರುವಾಗ ನಿಮ್ಮ ಮೊಬೈಲನ್ನು ನೀವು ಅಲ್ಲಿಗೇ ಕೊಂಡೊಯ್ದರೆ ಅಲ್ಲಿರುವ ಬ್ಯಾಕ್ಟೀರಿಯಾ ನಿಮ್ಮ ಮೊಬೈಲ್ ಸೇರುವುದಿಲ್ಲವೆ? ಹೀಗಾಗಿ ಅಲ್ಲಿಗೆ ತೆಗೆದುಕೊಂಡು ಹೋಗುವ ಮುನ್ನ ಒಮ್ಮೆ ಯೋಚಿಸಿ.

ಕಾರಿನ ಗ್ಲೋ ಕಂಪಾರ್ಟ್ ಮೆಂಟ್ ನಲ್ಲಿ ಬೇಡ : ಕಾರಿನ ಗ್ಲೋ ಕಂಪಾರ್ಟ್ ಮೆಂಟ್ ನಲ್ಲಿ ಇಡುವುದರಿಂದ ಫೋನಿಗೆ ಸಾಕಷ್ಟು ಹಾನಿಯಾಗುವುದಲ್ಲದೆ, ತರಂಗಗಳಿಂದ ನಿಮ್ಮ ದೇಹಕ್ಕೆ ಭಾರೀ ಹಾನಿಯಾಗುತ್ತದೆ. ಅಲ್ಲದೇ ಕೆಲವೊಂದು ರಾಸಾಯನಿಕಗಳು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿರುವುದರಿಂದ ಇಂತಹ ದುಸ್ಸಾಹಸಕ್ಕೆ ಕೈ ಹಾಕಬೇಡಿ.

ಸ್ಟ್ರಾಲರ್ ಗಳಲ್ಲಿ ಇಡುವುದು ಒಳ್ಳೆಯದಲ್ಲ : ಸ್ಟ್ರಾಲರ್ ಗಳು ಇರುವುದು ಮಕ್ಕಳನ್ನು ಹೊತ್ತೊಯ್ಯಲು. ಅಲ್ಲಿಗೆ ಅಪ್ಪಿತಪ್ಪಿ ನಿಮ್ಮ ಮೊಬೈಲನ್ನು ಇಡಲು ಹೋಗಲೇಬೇಡಿ. ಕಾರಣ ನಿಮ್ಮ ಮಗುವಿನ ಆರೋಗ್ಯ ಉತ್ತಮವಾಗಿ ಇದರಲ್ಲಿನ ಹಾನಿಕಾರಕ ತರಂಗಗಳು ಮಕ್ಕಳಿಗೆ ಹಾನಿ ಮಾಡುತ್ತವೆ. ಅವರ ಬೆಳವಣಿಗೆಗಳ ಮೇಲೆ ದುಷ್ಪರಿಣಾಮ ಬೀರುತ್ತವೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ

  • ದೇಗುಲ ದರ್ಶನ

    ಅಚ್ಚರಿ ಮೂಡಿಸುವ ಸಹಸ್ರಾರು ಶಿವಲಿಂಗಗಳು..!ಎಲ್ಲಿ ಗೊತ್ತಾ.?ಹೆಚ್ಚಿನ ಮಾಹಿತಿಗೆ ಈ ಲೇಖನ ಓದಿ ಶೇರ್ ಮಾಡಿ…

    ಸಹಸ್ರ ಲಿಂಗವು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಶಿರಸಿಯಿಂದ ಸುಮಾರು 12 ಕಿ.ಮೀ ದೂರದಲ್ಲಿ ಮುಖ್ಯ ರಸ್ತೆಯಿಂದ 0.5 ಕಿ.ಮೀ ದೂರದಲ್ಲಿದೆ. ಶಾಲ್ಮಲಾ ನದಿಯ ಹರಿವಿನಲ್ಲಿ ಇರುವ ಕಲ್ಲು ಬಂಡೆಗಳ ಮೇಲೆ ಬಹಳಷ್ಟು ಲಿಂಗ ಮತ್ತು ನಂದಿ ವಿಗ್ರಹಗಳನ್ನು ಕೆತ್ತಿದ್ದಾರೆ. ಇದರಿಂದಾಗಿ ಇದಕ್ಕೆ ಸಹಸ್ರಲಿಂಗ ಎಂಬ ಹೆಸರು ಬಂದಿದೆ. ಈ ಪ್ರವಾಸಿ ತಾಣವು ಸೋಂದಾ ಮತ್ತು ಸ್ವರ್ಣವಲ್ಲಿ ಮಠಗಳಿಗೆ ತುಂಬಾ ಹತ್ತಿರದಲ್ಲಿದೆ. ಈ ಲಿಂಗಳನ್ನು ಕೆಳದಿ ನಾಯಕರ ಕಾಲದಲ್ಲಿ ಕೆತ್ತಲಾಗಿದೆ ಎಂದು ಹೇಳುತ್ತಾರೆ, ಕೆಲವು ಲಿಂಗಗಳು ಪ್ರಾಕೃತಿಕ ರಚನೆಯಂತೆಯೂ ಕಾಣುತ್ತದೆ. ಶಿರಸಿ-ಯಲ್ಲಾಪುರ ನಡುವಿನ…

  • ಸುದ್ದಿ

    ಪೇಪರ್ ಮಾರಿ ಜೀವನ ಸಾಗಿಸುತ್ತಿದ್ದ ವ್ಯಕ್ತಿ ಇಂದು ಹೇಗಿದ್ದಾನೆ ಗೊತ್ತ…?

    ವಿಶ್ವದ ಅತ್ಯಂತ ದೊಡ್ಡ ಕಂಪನಿ ಆಪಲ್ ನ ಸಿಇಒ ಟಿಮ್ ಕುಕ್ 23,700 ಷೇರುಗಳನ್ನು ದಾನ ಮಾಡಿದ್ದಾರೆ. ಕಂಪನಿ ಈ ಬಗ್ಗೆ ಮಾಹಿತಿ ನೀಡಿದೆ. ದಾನ ಮಾಡಿದ ಷೇರಿನ ಮೌಲ್ಯ 36 ಕೋಟಿ ರೂಪಾಯಿ ಎನ್ನಲಾಗಿದೆ. ಯಾರಿಗೆ ದಾನ ಮಾಡಲಾಗಿದೆ ಎಂಬುದನ್ನು ಕಂಪನಿ ಬಹಿರಂಗಪಡಿಸಿಲ್ಲ. ಹಿಂದಿನ ವರ್ಷ ಇಷ್ಟೇ ಷೇರನ್ನು ಕುಕ್, ಚಾರಿಟಿ ಟ್ರಸ್ಟ್ ಒಂದಕ್ಕೆ ದಾನ ಮಾಡಿದ್ದರು. ಆಪಲ್ ಪ್ರಕಾರ, ಕುಕ್ ಬಳಿ 854,849 ಷೇರುಗಳಿವೆ. ಇದ್ರ ಬೆಲೆ 17.6 ಕೋಟಿ ಡಾಲರ್ ಅಂದ್ರೆ ಸುಮಾರು…

  • ಆರೋಗ್ಯ, ಉಪಯುಕ್ತ ಮಾಹಿತಿ

    ನೆನಸಿದ ಕಡಲೆಕಾಳು ತಿನ್ನೋದ್ರಿಂದ ಆಗೋ ಪ್ರಯೋಜನಗಳನ್ನ ಕೇಳಿದ್ರೆ, ಈಗ್ಲೇ ತಿನ್ನೋಕೆ ಸ್ಟಾರ್ಟ್ ಮಾಡ್ತೀರಾ..!

    ಕಡಲೆಯಿಂದ ನಾವು ಅನೇಕ ಅಡುಗೆಗಳನ್ನು ಮಾಡುತ್ತೇವೆ. ಇದರಲ್ಲಿ ಪಲ್ಯ ಮಾಡುತ್ತೇವೆ. ಕಾಳಿನಂತೆ ಬೇಯಿಸಿಕೊಂಡು ತಿನ್ನುತ್ತೇವೆ. ಹಲವು ಖಾದ್ಯಗಳನ್ನು ಮಾಡುತ್ತಾರೆ. ಅದೆಷ್ಟೋ ಆಹಾರದಲ್ಲಿ ಕಡಲೆ ಬಳಸುತ್ತಾರೆ. ಕಡಲೆ ಕಾಳಿನಲ್ಲಿ ಸಾಕಷ್ಟು ಪೋಷಕಾಂಶವಿದೆ ಎಂಬುದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಗೊತ್ತು. ದುಬಾರಿ ಬೆಲೆಯ ಬಾದಾಮಿ, ಒಣ ಹಣ್ಣುಗಳಿಗಿಂತ ಇದು ಬಹಳ ಒಳ್ಳೆಯದು. ನೆನಸಿದ ಕಡಲೆ ಕಾಳಿನಲ್ಲಿ ಪ್ರೋಟೀನ್, ಫೈಬರ್, ಮಿನರಲ್ ಹಾಗೂ ವಿಟಮಿನ್ ಬಹಳ ಪ್ರಮಾಣದಲ್ಲಿರುತ್ತದೆ. ನೆನಸಿದ ಕಡಲೆಕಾಳು ಸೇವನೆ ಮಾಡುವುದರಿಂದ ಅನೇಕ ರೋಗಗಳು ದೂರವಾಗುವ ಜೊತೆಗೆ ದೇಹಕ್ಕೆ ಹೆಚ್ಚಿನ…

  • ಸುದ್ದಿ

    ನೀವು ಎಲ್ಲಾದರೂ ಹಣ ಹೂಡಿಕೆ ಮಾಡುತ್ತೀರಾ,ಹಾಗಾದರೆ ಹೂಡಿಕೆಗೂ ಮುನ್ನ ನಿಮ್ಮನ್ನು ನೀವು ಈ ಪ್ರಶ್ನೆಗಳನ್ನು ಕೇಳಿಕೊಳ್ಳಿ,.!

    ಸಾಮಾನ್ಯವಾಗಿ  ಎಲ್ಲರೂ ಯಾವುದೊ ಒಂದು ಕಡೆ ಅಥವಾ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಾರೆ . ಮುಖ್ಯವಾಗಿ  ಹೆಚ್ಚಿನ ಆದಾಯ ಬರುವ  ಭರವಸೆಗಳನ್ನು ನೀಡುವ ಕಡೆ ಮೊರೆ ಹೋಗುತ್ತಾರೆ. ಆದಾಯವನ್ನು ನೋಡುತ್ತಾರೆ ಹೊರತು ಕಂಪನಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡಿರುವುದಿಲ್ಲ, ಮತ್ತು  ಏಜೆಂಟ್‌ಗಳ ಮೂಲಕ ತಮ್ಮಉತ್ಪನ್ನಗಳನ್ನು ಮಾರಾಟ ಮಾಡಿ ಮೋಸಮಾಡಿರುವ ಕಂಪನಿಗಳ ಉದಾಹರಣೆಯು  ಸಹ ಸಾಕಷ್ಟಿದೆ.ಹಣ ಹೂಡಿಕೆ ಮಾಡಿದ ನಂತರ ಲಾಭವನ್ನು ಗಳಿಸದೆ, ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಾಗದೆ ಪರದಾಡುವ ಜನರು ಸಾಕಷ್ಟಿದ್ದಾರೆ. ಸಮಾಜದಲ್ಲಿ ಒಂದೇ ಬಾರಿಗೆ ಹಣ ಡಬಲ್ಆಗಬೇಕೆಂದು…

  • ಸುದ್ದಿ

    ಇನ್ಮುಂದೆ ಭರಚುಕ್ಕಿಯನ್ನು ನೋಡಬಯಸುವರು ಬಯೋ ಡೈವರ್ಸಿಟಿ ಪಾರ್ಕ್‌ಗೂ ಹೋಗಿ ಬರುವ ಅವಕಾಶ,.!ಏನಿದು ಬಯೋ ಡೈವರ್ಸಿಟಿ ಪಾರ್ಕ್‌ ಗೊತ್ತಾ?

    ಭರಚುಕ್ಕಿ ಎಂದರೆ ಎಲ್ಲರಿಗು ಇಷ್ಟವಾದ ಜಾಗ ಎನ್ನಬಹುದು ಯಾಕೆಂದರೆ ಇಲ್ಲಿನ ಸೊಬಗು ನೋಡಲುತುಂಬಾ ಆಕರ್ಷಕವಾಗಿರುತ್ತದೆ ಮತ್ತು ಎತ್ತರದಿಂದ ಹರಿಯುವ ನೀರನ್ನು ನೋಡಲು ಜನರು ಸಾಕಷ್ಟು ದೂರದಿಂದ ಬರುತ್ತಾರೆ. ಈ ಸೊಬಗನ್ನು ಧಾರೆಯೆರೆಯುತ್ತಿದ್ದ ಭರಚುಕ್ಕಿ ಈಗ ಮತ್ತಷ್ಟು ರೋಮಾಂಚಕ ಅನುಭವ ನೀಡಲು ಸಜ್ಜಾಗುತ್ತಿದೆ. ಗಡಿಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನಲ್ಲಿರುವ ಶಿವನಸಮುದ್ರ ಬಳಿಯ ಭರಚುಕ್ಕಿ ಜಲಪಾತವಿಶ್ವದ ಗಮನ ಸೆಳೆಯಲು ಅಣಿಯಾಗುತ್ತಿದೆ.ಶೀಘ್ರದಲ್ಲೇ ಇಲ್ಲಿ ಪ್ರವಾಸಿ ಆಕರ್ಷಣೆಯೊಂದು ಸೇರ್ಪಡೆಗೊಳ್ಳಲಿದ್ದು, ರಾಜ್ಯ ಅರಣ್ಯ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಭರಚುಕ್ಕಿ ಬಯೋಡೈವರ್ಸಿಟಿ ಪಾರ್ಕ್‌…

  • ಆರೋಗ್ಯ, ಉಪಯುಕ್ತ ಮಾಹಿತಿ

    ನಿಮ್ಮ ಉತ್ತಮ ನಿದ್ರೆಗಾಗಿ ಸೇವಿಸಬಹುದಾದ ಆಹಾರಗಳು ಯಾವುವು ಗೊತ್ತಾ ..?ತಿಳಿಯಲು ಈ ಲೇಖನ ಓದಿ…

    ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.