ಇನ್ನುಮುಂದೆ ಎಲ್ಲಾ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಲಿದೆ. ಒಂದೊಮ್ಮೆ ನಿಮ್ಮ ವಾಹನಗಳಲ್ಲಿ ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಟಿ ಮುಂದೆ ಹೋಗಬೇಕಾಗುತ್ತದೆ. ಹೌದು ಇದು ಸತ್ಯ, ಡಿಸೆಂಬರ್‌ನಲ್ಲಿ ಈ ನಿಯಮ ದೇಶಾದ್ಯಂತ ಜಾರಿಗೆ ಬರಲಿದೆ.ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಹಾಗೂ ಕಾಯುವ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಟೋಲ್ನ ಎಲ್ಲ ಲೇನ್‌ಗಳನ್ನೂ ಫಾಸ್ಟ್‌ಟ್ಯಾಗ್ ಲೇನ್‌ಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.
ಡಿಸೆಂಬರ್ 1 ರಿಂದ ಇದು ಜಾರಿಗೆ ಬರಲಿದೆ. ಫಾಸ್ಟ್ ಟ್ಯಾಗ್‌ನಲ್ಲಿ ಸ್ವಯಂಚಾಲಿತವಾಗಿ ಟೋಲ್ ಶುಲ್ಕ ಕಡಿತಗೊಳ್ಳುತ್ತದೆ.ಇದೇ ವೇಳೆ ಒಂದು ಹೈಬ್ರಿಡ್ ಲೇನ್ ಕೂಡ ಇರಲಿದ್ದು, ಇದರಲ್ಲಿ ಫಾಸ್ಟ್‌ಟ್ಯಾಗ್ ಜೊತೆಗೆ ನಗದು ರೂಪದಲ್ಲೂ ಹಣ ಪಡೆಯಲಾಗುತ್ತದೆಮುಂದಿನ ದಿನಗಳಲ್ಲಿ ಈ ಲೇನ್‌ಗಳಲ್ಲಿ ಕೇವಲ ಫಾಸ್ಟ್‌ಟ್ಯಾಗ್‌ಗಳನ್ನು ಮಾತ್ರ ಸಮ್ಮತಿಸಲಾಗುತ್ತದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳು ಈ ಲೇನ್‌ಗಳ ಮೂಲಕ ಹಾದುಹೋಗುವುದಾದರೆ ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತದೆ. ಟೋಲ್ ಬಳಿ ವಾಹನವನ್ನು ನಿಲ್ಲಿಸಿ ಹಣ ನೀಡಿ ರಸೀದಿ ತೆಗೆದುಕೊಳ್ಳುವ ಕಿರಿಕಿರಿಯನ್ನು ಇದು ನಿವಾರಿಸುತ್ತದೆ.
ಸದ್ಯ ಎಲ್ಲ ಟೋಲ್‌ಗಳಲ್ಲೂ ಕೆಲವು ಲೇನ್‌ಗಳನ್ನು ಫಾಸ್ಟ್‌ಟ್ಯಾಗ್ ಸಿದ್ಧವಾಗಿಸಿದ್ದು, ಇಂತಹ ಲೇನ್‌ಗಳಲ್ಲಿ ನಗದು ಪಾವತಿ ಮಾಡುವವರೂ ಆಗಮಿಸುವುದರಿಂದಾಗಿ ಫಾಸ್ಟ್‌ಟ್ಯಾಗ್‌ನ ಮೂಲ ಉದ್ದೇಶವೇ ವಿಫಲವಾಗಿದೆ. ಹೀಗಾಗಿ ಈ ಬಗ್ಗೆ ಅಧ್ಯಯನ ನಡೆಸಲೂ ಸಚಿವಾಲಯ ಮುಂದಾಗಿದೆ. ಹಾಗೆಯೇ ಟೋಲ್ ಪ್ಲಾಜಾದ ಕೊನೆಯ ಒಂದು ಲೈನನ್ನು ಫಾಸ್ಟ್‌ಟ್ಯಾಗ್ ರಹಿತ ವಾಹನಗಳಿಗಾಗಿ ಮೀಸಲಿಡಲಾಗಿದೆ. ಟೋಲ್ ಪ್ಲಾಜಾಗಳಲ್ಲಿ ಸುಗಮ ಸಂಚಾರ ಹಾಗೂ ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಕಾರು, ಜೀಪು, ಲಘು ವಾಹನಗಳು, ಮಿನಿ ಬಸ್ ಏಕಮುಖ ಪ್ರಯಾಣ ದರ ಅಷ್ಟೇ ಇರಲಿದೆ. ಆದರೆ ನಿತ್ಯದ ಬಸ್ ಪಾಸಿನ ದರ ಮಾತ್ರ ಐದು ರೂ ಹೆಚ್ಚಳವಾಗಿದೆ. ಕಾರು, ಜೀಪುಗಳ ತಿಂಗಳ ಪಾಸಿನ ದರ 50 , ಲಘು ವಾಹನಗಳು, ಮಿನಿಬಸ್ ಪಾಸಿನ ದರ 75 ರೂ, ಬಸ್, ಟ್ರಕ್‌ಗಳ ದರವೂ ಏರಿಕೆಯಾಗಿದೆ. ದ್ವಿಚಕ್ರ ವಾಹನಗಳಿಗೆ ಯಾವುದೇ ಟೋಲ್ ಇಲ್ಲ. ಬೆಂಗಳೂರಿನ ನವಯುಗ ಟೋಲ್ ಪ್ರೈವೇಟ್ ಲಿಮಿಟೆಡ್ ಭಾನುವಾರ ಟೋಲ್ ದರ ಪ್ರಕಟಿಸಿದೆ. 19.5 ಕಿ.ಮೀಗೆ ದರ ಪರಿಷ್ಕರಣೆ ಮಾಡಿದೆ.
ನಿತ್ಯ 45,000 ವಾಹನಗಳು ಸಂಚರಿಸುತ್ತವೆ. ಇತ್ತೀಚೆಗೆ ಎಲೆಕ್ಟ್ರಾನಿಕ್ಸ್‌ಸಿಟಿ, ಅತ್ತಿಬೆಲೆ ಮಾರ್ಗದ ಟೋಲ್ ದರ ಹೆಚ್ಚಳ ಮಾಡಲಾಗಿತ್ತು. ದ್ವಿಚಕ್ರ ವಾಹನ ಸವಾರರು ಎರಡೂ ಮಾರ್ಗಗಳಿಗ ಸೇರಿ 20-30 , ನಾಲ್ಕು ಚಕ್ರ ವಾಹನ ಸವಾರರು 45-70 ನೀಡಬೇಕಿದೆ.ಮಾಸಿಕ ಪಾಸಿನ ದರವನ್ನು ಕೂಡ ದ್ವಿಚಕ್ರ ವಾಹನ ಸವಾರರಿಗೆ 20 ರೂ ಹಾಗೂ ಕಾರಿಗೆ 40, ಎಸ್‌ಯುವಿಗೆ 60 ರೂ , ಟ್ರಕ್ಸ್, ಬಸ್‌ಗಗಳಿಗೆ 120 ರೂ ನೀಡಬೇಕಿದೆ.
ಈಗ ದ್ವಿಚಕ್ರ ವಾಹನ ಸವಾರರು 620 ರೂ , ಕಾರಿಗೆ 1,405, ವಾಣಿಜ್ಯ ವಾಹನಗಳು 1,965 ಟ್ರಕ್ ಬಸ್ ಗಳು 3,930 ರೂ ಪಾವತಿಸುತ್ತಿದ್ದಾರೆ. ಎಲೆಕ್ಟ್ರಾನಿಕ್ಸ್ ಸಿಟಿ, ಅತ್ತಿಬೆಲೆ ಮಾರ್ಗದಲ್ಲಿ ನಿತ್ಯ ಸಂಚರಿಸುವವರು ಜುಲೈ 1 ರಿಂದ ಟೋಲ್ ದರ ಹೆಚ್ಚಳವಾಗಿದೆ. ಎಲೆಕ್ಟ್ರಾನಿಕ್ಸ್ ಸಿಟಿಯಿಂದ ನಗರಕ್ಕೆ ಬರುವವರು ಹೋಗುವ ಮಾರ್ಗದಲ್ಲಿ 5 ರೂ, ಹಿಂದಿರುಗುವಾಗ 5 ರೂ ಒಟ್ಟು 10 ರೂ ಹೆಚ್ಚಿಗೆ ಹಣ ಪಾವತಿಸಬೇಕಿದೆ. ದ್ವಿಚಕ್ರ ವಾಹನ ಸವಾರರು ಎರಡೂ ಮಾರ್ಗಗಳಿಗ ಸೇರಿ 20-30 , ನಾಲ್ಕು ಚಕ್ರ ವಾಹನ ಸವಾರರು 45-70 ನೀಡಬೇಕಿದೆ. ಮಾಸಿಕ ಪಾಸಿನ ದರವನ್ನು ಕೂಡ ದ್ವಿಚಕ್ರ ವಾಹನ ಸವಾರರಿಗೆ 20 ರೂ ಹಾಗೂ ಕಾರಿಗೆ 40, ಎಸ್‌ಯುವಿಗೆ 60 ರೂ , ಟ್ರಕ್ಸ್, ಬಸ್‌ಗಳಿಗೆ 120 ರೂ ನೀಡಬೇಕಿದೆ.
ಈಗ ದ್ವಿಚಕ್ರ ವಾಹನ ಸವಾರರು 620 ರೂ , ಕಾರಿಗೆ 1,405, ವಾಣಿಜ್ಯ ವಾಹನಗಳು 1,965 ಟ್ರಕ್ ಬಸ್ ಗಳು 3,930 ರೂ ಪಾವತಿಸುತ್ತಿದ್ದಾರೆ. ಐಟಿ ಸಿಬ್ಬಂದಿಗಳು ಬೆಂಗಳೂರು ನಗರದಿಂದ ನಿತ್ಯ ಎಲೆಕ್ಟ್ರಾನಿಕ್ಸ್ ಸಿಟಿ ಕಡೆಗೆ ಹೋಗುತ್ತಾರೆ. 18 ಕಿ.ಮೀ ರಸ್ತೆಯಲ್ಲಿ 55,000 -60 ಸಾವಿರ ವಾಹನಗಳು ಸಂಚರಿಸುತ್ತವೆ. ಹೋಲ್‌ಸೇಲ್ ಇಂಡೆಕ್ಸ್ ಪ್ರೈಸ್ ಪ್ರಕಾರ ಟೋಲ್ ಮೊತ್ತವನ್ನು ಏರಿಕೆ ಮಾಡಲಾಗುತ್ತಿದೆ. ಟೋಲ್ ದರ ಹೆಚ್ಚಾದರೆ ಆ ಮಾರ್ಗದಲ್ಲಿ ಸಂಚರಿಸುವ ಬಸ್ ಟಿಕೆಟ್ ದರ ಕೂಡ ಹೆಚ್ಚಾಗಲಿದೆ