ಒಂದು ಕಾಲಕ್ಕೆ ಜನಮನ ಗೆದ್ದ ನಟ, ಯಾವುದೇ ಗಾಡ್ ಫಾದರ್ ಇಲ್ಲದೆ ಕನ್ನಡ ಚಿತ್ರರಂಗದಲ್ಲಿ ಸ್ಟಂಟ್ ಮಾಸ್ಟರ್ ಆಗಿ, ಖಳನಟನಾಗಿ, ನಾಯಕನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕ, ನಿರ್ದೇಶಕನಾಗುವ ಮೂಲಕ ಆಲ್ ರೌಂಡರ್ ಆಗಿದ್ದವರು. ಫ್ರೇಜರ್ ಟೌನ್ ನ ಆ್ಯಂಥೋನಿ ಎಂಬ ಕಟ್ಟುಮಸ್ತಾದ ಯುವಕ ಕನ್ನಡ ಚಿತ್ರರಂಗದಲ್ಲಿ ಟೈಗರ್ ಪ್ರಭಾಕರ್ ಆಗಿದ್ದರ ಹಿಂದೆ ಅಗಾದ ನೋವು, ನಲಿವು, ಸೋಲು, ಗೆಲುವು ಎಲ್ಲವೂ ಇದೆ. ಪ್ರಭಾಕರ್ ಹುಟ್ಟು ಫೈಟರ್ ಆಗಿಯೇ ಬೆಳೆದವರು..ಸ್ಟಂಟ್ ಮ್ಯಾನ್ ಆಗಿದ್ದ ಪ್ರಭಾಕರ್ ಹೀರೋ ಆಗಲು ದೀರ್ಘಕಾಲದ ಶ್ರಮ ಇತ್ತು. ಫೈಟ್ ಅನ್ನು ಇಷ್ಟ ಪಡುವ ಪ್ರಭಾಕರ್ ಅದ್ಭುತವಾಗಿ ಫೈಟ್ ಮಾಡೋದು ಇನ್ನೊಂದು ವಿಶೇಷ. ತನಗೂ ಸೇರಿದಂತೆ ಹಲವಾರು ಸ್ಟಾರ್ ಗಳಿಗೂ ಫೈಟ್ ಅನ್ನು ಕಂಪೋಸ್ ಮಾಡುತ್ತಿದ್ದರು. ತನ್ನ 14ನೇ ವಯಸ್ಸಿನಲ್ಲಿಯೇ ಬಾಕ್ಸರ್ ಅನ್ನು ಎರಡು ಬಾರಿ ನೆಲಕ್ಕೆ ಕೆಡುವಿಹಿದ ಬಲಿಷ್ಠ ದೇಹಿ ಅವರಾಗಿದ್ದರು.
ಸುಮಾರು ನಾಲ್ಕು ದಶಕಗಳ ಹಿಂದೆ ಪ್ರಭಾಕರ್ ಕನ್ನಡ ಸಿನಿಮಾ ರಂಗದಲ್ಲಿ ಸ್ಟಂಟ್ ಮ್ಯಾನ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಹೀಗೆ ಸ್ಟಂಟ್ ಮಾಸ್ಟರ್ ಆಗಿ ಖ್ಯಾತರಾಗಿದ್ದರು. ತನ್ನ ಫೈಟ್ಸ್ ನೋಡಲಿಕ್ಕಾಗಿಯೇ ಪ್ರೇಕ್ಷಕರು ತನ್ನ ಸಿನಿಮಾ ನೋಡಲು ಬರುತ್ತಾರೆ ಎಂಬ ಹೆಮ್ಮೆ ಪ್ರಭಾಕರ್ ಅವರಿಗೆ ಇತ್ತಂತೆ. ಅವೆಲ್ಲಕ್ಕಿಂತ ಹೆಚ್ಚಾಗಿ ಪ್ರಭಾಕರ್ ಡ್ಯೂಪ್ ಇಲ್ಲದೇ ಸಾಹಸ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಎಲ್ಲಾ ಫೈಟ್ ದೃಶ್ಯಗಳನ್ನು ತಾನೇ ಖುದ್ದಾಗಿ ಮಾಡುತ್ತಿದ್ದರು. ಇದರಿಂದಾಗಿಯೇ ತಾನು ಇಂದು ಸೋತು ಹೋದ ವ್ಯಕ್ತಿಯಾಗಿದ್ದೇನೆ. ನನ್ನೆಲ್ಲಾ ಮುರಿದ ಮೂಳೆಗಳು ಸರ್ಜರಿಯಲ್ಲಿ ನಿಂತಿವೆ ಎಂದು ಸಂದರ್ಶನವೊಂದರಲ್ಲಿ ಪ್ರಭಾಕರ್ ಹೇಳಿದ್ದರು.
ಟೈಗರ್ ಪ್ರಭಾಕರ್ ಖಳನಟ, ನಿರ್ದೇಶಕ, ನಿರ್ಮಾಪಕ, ಹೀರೋ ಎಲ್ಲಕ್ಕಿಂತ ಹೆಚ್ಚಾಗಿ ಅವರೊಬ್ಬ ಹೃದಯವಂತ ವ್ಯಕ್ತಿ. ಕನ್ನಡ, ತೆಲುಗು, ತಮಿಳು ಸೇರಿ 450 ಸಿನಿಮಾಗಳಲ್ಲಿ ನಟಿಸಿದ್ದ ಅವರು ಬಹುತೇಕರಿಂದ ಮೋಸಕ್ಕೊಳಗಾಗಿದ್ದ ವ್ಯಕ್ತಿ ಟೈಗರ್. ಸಾಮಾಜಿಕ ಕಳಕಳಿ ಹೊಂದಿದ್ದ ಅವರು ಅನೇಕ ಕಲಾವಿದರಿಗೆ, ಅನಾಥಾಶ್ರಮಗಳಿಗೆ, ಸಂಘ, ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು. ಬೈಕ್ ಅಪಘಾತದ ಬಳಿಕ ಪ್ರಭಾಕರ್ ಆರೋಗ್ಯ ಹದಗೆಡ ತೊಡಗಿತ್ತು..ನಿಧಾನಕ್ಕೆ ಸ್ಟಾರ್ ವ್ಯಾಲ್ಯೂ ಕೂಡಾ ಕಡಿಮೆಯಾಗತೊಡಗಿತ್ತು.
ಅಧಿಕೃತವಾಗಿ ಮೂರು ಮದುವೆಯಾಗಿದ್ದ ಟೈಗರ್ ಗೆ ಇಬ್ಬರು ಪುತ್ರಿಯರು ಭಾರತಿ ಮತ್ತು ಗೀತಾ ಹಾಗೂ ಪುತ್ರ ವಿನೋದ್(ಮೊದಲ ಹೆಂಡತಿ ಮಕ್ಕಳು), 2ನೇ ವಿವಾಹವಾಗಿದ್ದು ನಟಿ ಜಯಮಾಲಾ ಜೊತೆ. ಇವರಿಗೆ ಸೌಂದರ್ಯ ಎಂಬ ಮಗಳು ಹುಟ್ಟಿದ್ದಳು. ಮೂರನೆಯ ಮದುವೆ ಅಂಜು ಜೊತೆ..ಈಕೆಗೆ ಅರ್ಜುನ್ ಎಂಬ ಮಗ ಜನಿಸಿದ್ದ. 2 ಮದುವೆಗಳು ವಿವಾಹ ವಿಚ್ಛೇದನದಲ್ಲಿ ಕೊನೆಗೊಂಡಿತ್ತು. ತಾನೇನಿದ್ದರೂ ನೇರವಾಗಿ ಮಾತನಾಡುವ ಮನುಷ್ಯ ಎಂದೇ ಹೇಳಿಕೊಳ್ಳುತ್ತಿದ್ದ ಪ್ರಭಾಕರ್ ಅದೇ ರೀತಿ ಬದುಕಿದ್ದರು. ತನ್ನ ವೈಯಕ್ತಿಕ ಸೇರಿದಂತೆ ಎಲ್ಲಾ ವಿಚಾರವನ್ನು ಮುಚ್ಚಿಡದೇ ಹೇಳುತ್ತಿದ್ದ ನಟ ಅವರಾಗಿದ್ದರು. ವಿಪರ್ಯಾಸ ಎಂಬಂತೆ ಟೈಗರ್ ಕೊನೆಗಾಲದಲ್ಲಿ ಅವರ ಜೊತೆ ಮಗ ವಿನೋದ್ ಬಿಟ್ಟರೆ ಬೇರೆ ಯಾರೂ ಇರಲಿಲ್ಲವಾಗಿತ್ತು. ತನಗೆ ಎಲ್ಲಾ ಮೋಸ ಮಾಡಿಬಿಟ್ಟರು ಎಂಬುದಾಗಿ ಕೊನೆಯ ದಿನಗಳಲ್ಲಿ ಮಗನ ಜೊತೆ ಟೈಗರ್ ಹೇಳಿಕೊಂಡಿದ್ದರಂತೆ. ಕೊನೆಗೆ 1948ರಲ್ಲಿ ಜನಿಸಿದ್ದ ಟೈಗರ್ ಬಹುಅಂಗಾಂಗ ವೈಫಲ್ಯದಿಂದ ತನ್ನ 52ನೇ ವಯಸ್ಸಿನಲ್ಲಿ (2001ರ ಮಾರ್ಚ್ 25ರಂದು ) ವಿಧಿವಶರಾಗಿದ್ದರು. ಸುಮಾರು ನಾಲ್ಕು ವರ್ಷಗಳ ಬಳಿಕ ಟೈಗರ್ ನಿರ್ದೇಶಿಸಿದ್ದ ಗುಡ್ ಬ್ಯಾಡ್ ಅಂಡ್ ಅಗ್ಲಿ ಸಿನಿಮಾ ತೆರೆಕಂಡಿತ್ತು..ಅದು ಪ್ರಭಾಕರ್ ಅವರ ಬದುಕು ಮತ್ತು ಅಂತ್ಯಕ್ಕೆ ಮುನ್ನುಡಿ ಬರೆದಂತೆ ಇತ್ತು..ಇವೆಲ್ಲದರ ನಡುವೆ ಟೈಗರ್ ಇನ್ನೂ ಚಿತ್ರರಸಿಕರ ಮನದಲ್ಲಿ ಉಳಿದಿದ್ದಾರೆ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಹುವಾವೇ ಮೊಬೈಲ್ ಬಳಕೆ ಮಾಡ್ತಿರೋ ಗ್ರಾಹಕರೇ ಗಮನಿಸಿ. ಇನ್ಮುಂದೆ ಹುವಾವೇ ಮೊಬೈಲ್ ಗಳಿಗೆ ಗೂಗಲ್ ಪ್ಲೇ, ಗೂಗಲ್ ಪ್ಲೇ ಸ್ಟೋರ್, ಜಿ ಮೇಲ್, ಗೂಗಲ್ ಮ್ಯಾಪ್ ಹಾಗೂ ಯೂಟೂಬ್ ಆಪ್ ಗಳು ಲಭ್ಯವಾಗಲ್ಲ. ಕಾರಣ ಚೀನಾದ ಹುವಾವೇ ಸಂಸ್ಥೆಯೊಂದಿಗೆ ಗೂಗಲ್ ಸಂಸ್ಥೆ ಸಂಬಂಧ ಕಡಿದುಕೊಂಡಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಹುವಾವೇ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಿತ್ತು. ಇದೀಗ ಗೂಗಲ್ ಕೂಡಾ ಈ ನಿರ್ಧಾರ ತೆಗೆದುಕೊಂಡಿದ್ದು, ಹುವಾವೇ ಕಂಪನಿಯೊಂದಿಗೆ ವ್ಯವಹಾರಗಳನ್ನು ಕಡಿತಗೊಳಿಸಿದೆ. ಸದ್ಯ ಗ್ರಾಹಕರು ಈಗ…
ಉತ್ತರಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ವಾತಿ ಸಿಂಗ್ ಅವರು ಬಿಯರ್ ಬಾರ್ವೊಂದನ್ನು ಉದ್ಘಾಟಿಸಿದ ಫೋಟೋಗಳು ದೇಶಾದ್ಯಂತ ವೈರಲ್ ಆಗಿದ್ದು, ನೂತನ ಬಿಜೆಪಿ ಸರ್ಕಾರ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತೀವ್ರ ಮುಜುಗರ
ಮೈತ್ರಿ ಸರ್ಕಾರದ ಪರವಾಗಿ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಯಾಯ್ವರು ಸಾಕಷ್ಟು ಏಳು ಬೀಳುಗಳ ನಡುವೆಯೂ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿರುವ ಮುಖ್ಯಮಂತ್ರಿಗಳಿಗೆ ಈಗೊಂದು ಸಂಕಷ್ಟ ಎದುರಾಗಿದೆ. ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಕಳೆದ ವಿಧಾನಸಭೆ ಚುನಾವಣೆ ವೇಳೆ ಸಲ್ಲಿಸಿದ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಈ ದೂರು ಪುರಸ್ಕರಿಸಿರುವ ನ್ಯಾಯಾಲಯ, ದೂರಿನ ವಿಚಾರಣೆಯನ್ನು ಬರುವ ಮೇ 2ಕ್ಕೆ ಮುಂದೂಡುವಂತೆ ಮಂಗಳವಾರ ಆದೇಶಿಸಿದೆ.ಕಳೆದ 2018ರಲ್ಲಿ ನಡೆದ ವಿಧಾನಸಭಾ…
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಸೋಮವಾರ, 16 ಏಪ್ರಿಲ್ 2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…ಪಂಡಿತ್ ಸುದರ್ಶನ್ ಭಟ್ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಚಿಂತಕರು ನಿಮ್ಮ ಜೀವನದ ನಿಖರವಾದ ಭವಿಷ್ಯ ತಿಳಿಸುತ್ತಾರೆ ಹಾಗೂ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ಮಕ್ಕಳು ವ್ಯವಹಾರ ಹಣಕಾಸು ಸಮಸ್ಯೆಗಳಿಗೆ ಪರಿಹಾರ ಸೂಚಿಸುವರು 9663542672 ಸೂರ್ಯೋದಯ06:06:55 ಸೂರ್ಯಾಸ್ತ18:46:52 ಹಗಲಿನ ಅವಧಿ12:39:56 ರಾತ್ರಿಯ ಅವಧಿ11:19:11 ಚಂದ್ರೋದಯ06:33:51 ಚಂದ್ರಾಸ್ತ19:10:54 ಋತು:ವಸಂತ ಆಯನ:ಉತ್ತರಾಯಣ ಸಂವತ್ಸರ:ವಿಲಂಬಿ…