ಆರೋಗ್ಯ

ಹುಳುಕು ಹಲ್ಲಿನ ಸಮಸ್ಯೆಗೆ ಇಲ್ಲಿದೆ ನೋಡಿ ಮನೆಮದ್ದು.

474

ಹುಳುಕು ಹಲ್ಲಿನ ಸಮಸ್ಯೆ ದೊಡ್ಡೋರಿಂದ ಚಿಕ್ಕವರವರೆಗೆ ಇದ್ದೆ ಇರುತ್ತದೆ ಈ ಸಮಸ್ಯೆಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಮನೆಯಲ್ಲಿಯೇ ಇದೆ ಮನೆಮದ್ದು ಇದನ್ನು ಹೇಗೆ ಬಳಸಿ ಇದರ ಅನುಕೂಲತೆಯನ್ನು ಪಡೆದುಕೊಳ್ಳಬಹುದು ಅನ್ನೋದನ್ನ ಇಲ್ಲಿ ನೋಡಿ. ಇತ್ತೀಚಿಗೆ ಮಕ್ಕಳು ಹೆಚ್ಚು ಸಿಹಿ ತಿನ್ನೋದು ಅಥವಾ ಚಾಕೊಲೇಟ್ ತಿನ್ನುವುದು ಅಭ್ಯಾಸವಾಗಿದೆ. ಅದನ್ನು ತಿನ್ನುವುದು ಹೆಚ್ಚಾದಂತೆ ಹಲ್ಲುಗಳು ಕೂಡ ಹುಳುಕು ಆಗುತ್ತವೆ. ಆದ್ದರಿಂದ ಕೆಲಸಂದರ್ಭದಲ್ಲಿ ನಾವು ಹಲ್ಲನ್ನೇ ತೆಗೆಸಿ ಬಿಡುತ್ತೇವೆ. ಆದ್ದರಿಂದ ಅದಕ್ಕಿಂತ ನಿಮ್ಮ ಮನೆಯಲ್ಲಿ ಇವೆ ಈ ಸಮಸ್ಯೆಗೆ ಮದ್ದು.

ಈರುಳ್ಳಿ ಬೀಜಗಳನ್ನು ಸುಟ್ಟು ಆ ಹೊಗೆಯನ್ನು ಹುಳು ಆಗಿರುವ ಹಲ್ಲುಗಳಿಗೆ ಕೊಟ್ಟರೆ ಹುಳಗಳು ಸತ್ತು ಹಲ್ಲು ಸ್ವಚ್ಛವಾಗುತ್ತವೆ. ಹಲ್ಲು ತೂತಾಗಿ ಹುಳು ಆಗಿದ್ದರೆ ಇಂಗನ್ನು ನೀರಲ್ಲಿ ಕುದಿಸಿ ಆ ನೀರಿನಿಂದ ಬಾಯಿ ಮುಕ್ಕಳಿಸಿದರೆ ಹುಳು ಬಿದ್ದು ಹೋಗಿ ಹಲ್ಲು ಸ್ವಚ್ಛಗೊಳ್ಳುತ್ತವೆ. ಹುಳುಕು ಹಲ್ಲುಗಳ ನಿವಾರಣೆಗೆ ಈ ಮನೆಮದ್ದು ಕೂಡ ಸಹಕಾರಿಯಾಗಿದೆ ,ಸಾಸಿವೆ ಎಣ್ಣೆ ಮತ್ತು ಸೈಂಧವ ಉಪ್ಪು ಸೇರಿಸಿ ಪೇಸ್ಟ್‌ ಮಾಡಿ ಹಲ್ಲಿನ ನಡುವೆ ಇಟ್ಟರೆ ಹುಳುಗಳು ಕಡಿಮೆಯಾಗುತ್ತವೆ. 2 ರಿಂದ 3 ಲವಂಗದ ಪುಡಿಯನ್ನು ಹಲ್ಲುಗಳಿಗೆ ತುಂಬಿದರೆ ಹುಳುಗಳು ನಿವಾರಣೆಯಾಗುತ್ತವೆ.

dental pain female

ಬೆಳ್ಳುಳ್ಳಿ ಅನ್ನೋದು ಬರಿ ಅಡುಗೆಗೆ ಮಾತ್ರ ಸೀಮಿತವಾಗದೆ ಹಲ್ಲುಗಳ ಸಮಸ್ಯೆಗೆ ಕೂಡ ಉಪಯೋಗಕಾರಿ ಬೆಳ್ಳುಳ್ಳಿ ಮತ್ತು ಸೈಂಧವ ಉಪ್ಪು ಸೇರಿಸಿ ಜಗಿದರೆ ಹಲ್ಲು ನೋವು ಕಡಿಮೆಯಾಗಿ ಹುಳುಗಳು ನಿವಾರಣೆಯಾಗುತ್ತದೆ. ಜಾಯಿಕಾಯಿ ಎಣ್ಣೆಯಲ್ಲಿ ಹತ್ತಿಯನ್ನು ಅದ್ದಿ ಹಲ್ಲುಗಳ ನಡುವೆ ಇಟ್ಟುಕೊಂಡರೆ ಹುಳುಗಳು ನಾಶವಾಗುತ್ತವೆ. ಬೇವಿನ ಎಲೆಗಳ ಕಷಾಯಕ್ಕೆ ಅರಿಶಿನ ಸೇರಿಸಿ ಬಾಯಿ ಮುಕ್ಕಳಿಸಿದರೆ ಹುಳುಕು ಹಲ್ಲು ಕಡಿಮೆಯಾಗುತ್ತದೆ. ವೀಟ್‌ಗ್ರಾಸ್‌ ಎಲೆಗಳನ್ನು ಅಗಿಯುತ್ತಿದ್ದರೆ ಹಲ್ಲಿನ ಹುಳುಗಳು ನಿವಾರಣೆಯಾಗುತ್ತದೆ. ಪ್ರತಿ ದಿನ ಬೆಳಗ್ಗೆ ಸ್ವಲ್ಪ ಬಿಸಿ ನೀರಿಗೆ ಎಳ್ಳೆಣ್ಣೆ ಸೇರಿಸಿ ಬಾಯಿ ಮುಕ್ಕಳಿಸಿದರೆ ಎಲ್ಲಾ ತರಹದ ಹಲ್ಲು ಮತ್ತು ಒಸಡಿನ ಸಮಸ್ಯೆಯಿಂದ ದೂರವಿರಬಹುದು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ