ಕೇಸರಿ ಸೇವನೆಯ ಆರೋಗ್ಯಕರ ಪ್ರಯೋಜನಗಳು
ಕೇಸರಿ’ ಭಾರತೀಯ ಅಡಿಗೆಯಲ್ಲಿ ಅತ್ಯಂತ ಪ್ರಸಿದ್ಧವಾಗಿದ್ದು ದುಬಾರಿ ಮಸಾಲೆ ಪದಾರ್ಥವಾಗಿದೆ. ಕೇಸರಿ ಬೆರೆಸಿದ ಹಾಲು ಅಥವಾ ಕೇಸರಿ ಹಾಲನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಶಕ್ತಿ ಮತ್ತು ಹಸಿವು ಸುಧಾರಿಸುವುದಷ್ಟೇ ಅಲ್ಲದೇ, ನಿಮಗೆ ಆರೋಗ್ಯ ಮತ್ತು ಹೊಳೆಯುವ ಚರ್ಮವನ್ನೂ ನೀಡುತ್ತದೆ ನಿಮ್ಮ ಹೃದಯಕ್ಕೆ ಒಳ್ಳೆಯದು ಒಂದು ದಳ ಕೇಸರಿಯನ್ನು ಹಾಲಿನಲ್ಲಿ ಸೇರಿಸುವುದರಿಂದ ಅದು ನಿಮ್ಮ ಹೃದಯಕ್ಕೆ ಅದ್ಭುತವಾಗಿರುತ್ತದೆ. ’ಗುಣಕಾರಕ ಆಹಾರಗಳು’ ಎನ್ನುವ ಪುಸ್ತಕದ ಪ್ರಕಾರ ಇದು ರಕ್ತ ಪರಿಚಲನೆಯನ್ನು ಪ್ರಚೋದಿಸುತ್ತದೆ, ರಕ್ತನಾಳಗಳು ಗಟ್ಟಿಯಾಗುವುದನ್ನು ತಡೆಯುತ್ತದೆ. ಇದು ಕ್ರೊಸೆಟಿನ್ ಎನ್ನುವ ಸಕ್ರಿಯ…