ಸುದ್ದಿ

ಎಲ್ಲರಿಗೂ ಟಾರ್ಗೆಟ್ ಆದ ‘ರಾಧಾ ರಮಣ’ ಸೀರಿಯಲ್ ನಟಿ ಸುಜಾತ…!

58

‘ರಾಧಾರಮಣ’ ಧಾರಾವಾಹಿಯಲ್ಲಿ ಸಿತಾರಾ ದೇವಿ ಆಗಿ ಅಭಿನಯಿಸುತ್ತಿದ್ದ ಸುಜಾತ ನಿಜ ಜೀವನದಲ್ಲಿ ‘ವಿಲನ್’ಅಲ್ಲ. ಆಕೆ ಅನ್ನಪೂರ್ಣೇಶ್ವರಿ ಅಂತೆಲ್ಲಾ ‘ಅಗ್ನಿಸಾಕ್ಷಿ’ ಚಂದ್ರಿಕಾ ಖ್ಯಾತಿಯ ಪ್ರಿಯಾಂಕಾ ಹಾಡಿ ಹೊಗಳುತ್ತಿದ್ದರು. ಯಾಕಂದ್ರೆ, ಅಡುಗೆ ಮನೆಯ ನೇತೃತ್ವ ವಹಿಸಿಕೊಂಡಿದ್ದ ಸುಜಾತಾ ರುಚಿರುಚಿಯಾಗಿ ಮಾಡುತ್ತಿದ್ದ ಅಡುಗೆ ಪ್ರಿಯಾಂಕಾಗೆ ಇಷ್ಟ ಆಗಿತ್ತು.

ಮೊದಲವಾರ ಸುಜಾತ ಜೊತೆ ಕ್ಲೋಸ್ ಆಗಿದ್ದವರು ಪ್ರಿಯಾಂಕಾ. ಇದೀಗ ಅದೇ ಪ್ರಿಯಾಂಕಾ ಎರಡನೇ ವಾರದ ನಾಮಿನೇಷನ್ ನಲ್ಲಿ ಸುಜಾತಾರನ್ನ ಟಾರ್ಗೆಟ್ ಮಾಡಿದ್ದಾರೆ.ಅವಶ್ಯಕತೆ ಇಲ್ಲದೇ ಇದ್ದರೂ ಸುಜಾತಾ ಕೂಗಾಡಿದ್ರಂತೆ. ಇದನ್ನೇ ನೆಪ ಮಾಡಿಕೊಂಡು ಸುಜಾತಾ ರನ್ನ ಪ್ರಿಯಾಂಕಾ ನಾಮಿನೇಟ್ ಮಾಡಿದ್ದಾರೆ. ಹಾಗಾದ್ರೆ, ಎರಡನೇ ವಾರ ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗಲು ಯಾರೆಲ್ಲಾ ನಾಮಿನೇಟ್ ಆಗಿದ್ದಾರೆ ಅಂದ್ರಾ.? 

‘ಬಿಗ್ ಬಾಸ್’ ನೀಡಿದ್ದ ಚಟುವಟಿಕೆಗಳಲ್ಲಿ ಉತ್ತಮ ಪರ್ಫಾಮೆನ್ಸ್ ಕೊಟ್ಟಿದ್ದ ದುನಿಯಾ ರಶ್ಮಿ ಈ ವಾರ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಕ್ಯಾಪ್ಟನ್ರಶ್ಮಿ.. ಪ್ರಿಯಾಂಕಾ ರನ್ನ ನೇರವಾಗಿ ನಾಮಿನೇಟ್ ಮಾಡಿದರು. ‘ಬಿಗ್ ಬಾಸ್’ ಮನೆಯಿಂದ ಹೊರಗೆಹೋಗುವ ಮುನ್ನ ಗುರುಲಿಂಗ ಸ್ವಾಮೀಜಿ ಅವರಿಗೆ ವಿಶೇಷ ಅಧಿಕಾರ ಲಭಿಸಿತ್ತು.

ಅದರ ಅನ್ವಯ ಚಂದನ್ ಆಚಾರ್ ರನ್ನ ಗುರುಲಿಂಗ ಸ್ವಾಮೀಜಿ ಡೈರೆಕ್ಟಾಗಿ ನಾಮಿನೇಟ್ ಮಾಡಿದರು. ”ಅವಶ್ಯಕತೆ ಇಲ್ಲದೆ ಹೋದರೂ ತುಂಬಾ ಕಿರುಚಾಡುತ್ತಾರೆ” ಎಂಬ ಕಾರಣ ಕೊಟ್ಟು ಭೂಮಿ ಶೆಟ್ಟಿ, ರಾಜು ತಾಳಿಕೋಟೆ, ಚೈತ್ರ ಕೊಟ್ಟೂರು ಮತ್ತು ಪ್ರಿಯಾಂಕಾ.. ಸುಜಾತಾ ರನ್ನ ನಾಮಿನೇಟ್ ಮಾಡಿದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆಧ್ಯಾತ್ಮ, ವಿಜ್ಞಾನ

    ವ್ಯಾಸ ಮಹರ್ಷಿಗಳು ಆ ಕಾಲದಲ್ಲೇ ಹೇಳಿದ್ದನ್ನು, ಕಂಡುಹಿಡಿಯುತ್ತಿರುವ ವಿಜ್ಞಾನಿಗಳು..!ನಿಜ..!ತಿಳಿಯಲು ಈ ಲೇಖನ ಓದಿ…

    ವಿಜ್ಞಾನಿಗಳು ಆಧುನಿಕ ಉಪಕರಣಗಳಿಂದ ಕಂಡುಹಿಡಿಯುತ್ತಿರುವ ಎಷ್ಟೋ ಸಂಶೋಧನೆಗಳನ್ನು, ನಮ್ಮ ಋಷಿ ಮುನಿಗಳು ಆಗಿನ ಕಾಲದಲ್ಲೇ ಕಂಡುಹಿಡಿದಿದ್ದರು ಅನ್ನೋದಕ್ಕೆ ಹಲವಾರು ನಿದರ್ಶನಗಳಿವೆ.

  • ಹಣ ಕಾಸು

    “ಪ್ರಧಾನ ಮಂತ್ರಿ ಅವಾಸ್ ಯೋಜನೆ”ಅಡಿಯಲ್ಲಿ ಸ್ವಂತ ಮನೆ ಪಡೆಯುವುದು ಹೇಗೆ?

    ಸ್ವಂತ ಮನೆ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಜೀವನದ ಕನಸಾಗಿರುತ್ತದೆ.ಆದರೆ ಆರ್ಥಿಕವಾಗಿ ಸಬಲರಲ್ಲದ ಅನೇಕ ಜನರ ಸ್ವಂತ ಮನೆ ಕನಸು, ಕನಸಾಗೆ ಉಳಿದುಬಿಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಹೀಗಾಗಿ ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.

  • ವಿಚಿತ್ರ ಆದರೂ ಸತ್ಯ

    ಈ ವಿಮಾನದಲ್ಲಿ ಪ್ರಯಾಣಿಸಲು ಬಟ್ಟೆ ಬಿಚ್ಚಿ ಹೋಗ ಬೇಕು..!ತಿಳಿಯಲು ಈ ಲೇಖನ ಓದಿ..

    ನೀವು ಹೊಟೇಲುಗಳಲ್ಲಿ ಹೆಸರಿಗೆ ತೋರಿಸಿಕೊಳ್ಳಲು ಬಟ್ಟೆ ಧರಿಸಿದವರನ್ನು ನೀವು ನೋಡಿರಬಹುದು. ಆದರೆ ಜರ್ಮನಿಯಲ್ಲಿ ಟ್ರಾವೆಲ್ ಏಜೆನ್ಸಿಯೊಂದು ಜಗತ್ತಿನ ಮೊದಲ ನ್ಯೂಡ್ ಏರ್‌ಲೈನ್ಸನ್ನು ಲಾಂಚ್ ಮಾಡಿದೆ. ಇದರಲ್ಲಿ ನೀವು ಬಟ್ಟೆಹಾಕಿಕೊಂಡು ಪ್ರಯಾಣಿಸುವಂತಿಲ್ಲ. ಇದರಲ್ಲಿ ಪ್ರಯಾಣಿಸುವವರು 30 ಸಾವಿರ ಅಡಿ ಎತ್ತರಕ್ಕೆ ಹಾರಿದ ಮೇಲೆ ಬಟ್ಟೆ ತೆಗೆಯುತ್ತಾರೆ.

  • ವಿಸ್ಮಯ ಜಗತ್ತು

    7 ವರ್ಷದ ಈ ಪುಟ್ಟ ಪೋರ, ತನ್ನ ದೇಹವನ್ನು 8 ಪ್ಯಾಕ್ ಮಾಡಿದ್ದಾನೆ! ಇದು ತಮಾಷೆ ವಿಚಾರ ಅಲ್ಲ !!!

    ಈಗಂತೂ ಜಿಮ್’ಗೆ ಹೋಗಿ ತಮ್ಮ ದೇಹವನ್ನು ಕಟ್ಟುಮಸ್ತಾಗಿ ಹುರಿಗೊಳಿಸುವುದು ಸಾಮಾನ್ಯ. ಇದರಲ್ಲಿ 6 ಪ್ಯಾಕ್ ,8 ಪ್ಯಾಕ್ ಹೀಗೆ ಏನೇನೋ ಇದೆ. ಈ ವಿಷಯ ಯಾಕೆ ಈಗ ಅಂತೀರಾ! ವಿಷಯ ಇದೆ. ಏನು ಗೊತ್ತಾ? ಏಳು ವರ್ಷದ ಪುಟ್ಟ ಬಾಲಕನೊಬ್ಬ ತನನ ಚಿಕ್ಕ ವಯಸ್ಸಿನಲ್ಲೇ ತನ್ನ ದೇಹವನ್ನು 8 ಪ್ಯಾಕ್ ಮಾಡಿದ್ದಾನೆ. ಇದೇನಪ್ಪ ಏಳು ವರ್ಷದ ಪೋರ 8 ಪ್ಯಾಕ್ ಮಾಡೋದು ಅಂದ್ರೆ ಏನು ಸುಮ್ನೆ ತಮಾಷೆ ವಿಚಾರ ಅಲ್ಲ ಆದ್ರೂ ಈ ಪೋರ ಇಂತ ದಾಖಲೆ ಮಾಡಿ ವಿಶ್ವದ ಗಮನ ಸೆಳೆದ ಪುಟ್ಟ ಪೋರ ಯಾರು ಅಂತೀರಾ ಇಲ್ಲಿದೆ ನೋಡಿ.

  • ಸುದ್ದಿ

    ಟ್ರೋಲ್‍ ವಾಸಣ್ಣ ಪ್ರಸಿದ್ದಿಯ ಮಲ್ಪೆ ವಾಸುಗೆ ಖಡಕ್ ವರ್ನಿಗ್ ಕೊಟ್ಟ ಪೊಲೀಸರು!ಅಸಲಿಗೆ ಯಾರಿದು ವಾಸಣ್ಣ ಗೊತ್ತಾ?

    ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿರುವ ಹೆಸರು ಟ್ರೋಲ್‍ ವಾಸಣ್ಣ. ಮೂಲತಃ ಮಲ್ಪೆಯವರಾದ ವಾಸು ಅವರಿಗೆ ಇದೀಗ ಸೈಬರ್ ಪೊಲೀಸರು ಖಡಕ್‍ ಎಚ್ಚರಿಕೆ ನೀಡಿದ್ದಾರೆ. ವಾಸು ಅವರು ರಾಜಕೀಯ ಪ್ರೇರಿತ ಮಾತುಗಳು, ರಾಜಕೀಯ ನಾಯಕರನ್ನು, ಪಕ್ಷಗಳನ್ನು ಅಪಹಾಸ್ಯ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್‍ ಆಗಿವೆ. ಹೀಗಾಗಿ ಸದ್ಯ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ವಾಸು ಅವರನ್ನು ಕರೆಸಿ ಸೈಬರ್ ಕ್ರೈಂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಅಭಿಮಾನಿಯಾಗಿರುವ ವಾಸು ಅವರಿಂದ ಕೆಲ ಕಿಡಿಗೇಡಿಗಳು…

  • ಸುದ್ದಿ

    ಬಿಹಾರದ ರಣಬಿಸಿಲಿಗೆ 117 ಜನ ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ……!

    ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್…