ನಮ್ಮ ಹಿರಿಯರು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಬಾರದು ಎಂದು ನಮಗೆ ತಿಳಿಸುತ್ತಾರೆ. ಸಾಮಾನ್ಯವಾಗಿ ಪೂರ್ವ ದಿಕ್ಕಿಗೆ ಅಥವಾ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿಕೊಳ್ಳುವುದು ನಮ್ಮ ಹಿಂದೂ ಧರ್ಮದಲ್ಲಿ ವಾಡಿಕೆಯಾಗಿದೆ.
ನಾವು ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದರೆ ಭೂತ ಪ್ರೇತಗಳು ನಮ್ಮನ್ನು ಆವರಿಸುತ್ತವೆ ಎಂಬ ಮೂಢನಂಬಿಕೆಗಳಿವೆ. ಅಲ್ಲದೆ ಪುರಾಣದಲ್ಲಿ ಗಣೇಶನಿಗೆ ತೊಡಿಸಿದ ಆನೆಯ ತಲೆಯನ್ನು ಕಡಿದಿದ್ದು ಸಹ ಅದು ಉತ್ತರಕ್ಕೆ ತಲೆ ಹಾಕಿ ಮಲಗಿದ್ದರಿಂದ.
ಈ ಕಾರಣಕ್ಕೆ ನಾವು ಉತ್ತರಕ್ಕೆ ತಲೆ ಹಾಕಿ ಮಲಗಿದರೆ ನಮ್ಮ ಪ್ರಾಣಕ್ಕೂ ಸಂಚಕಾರ ಬರುತ್ತದೆ ಎಂಬ ಕಲ್ಪನೆಗಳು ಮೂಢನಂಬಿಕೆಗಳು ಇವೆ. ಆದರೆ ಇದರ ಹಿಂದಿನ ನಿಜವಾದ ವೈಜ್ಞಾನಿಕ ಕಾರಣ ಇಲ್ಲಿದೆ ನೋಡಿ.
ನಿಜ, ನಾವು ಉತ್ತರಕ್ಕೆ ಅಥವಾ ಪಶ್ಚಿಮಕ್ಕೆ ತಲೆಹಾಕಿ ಮಲಗುವುದು ಒಳ್ಳೆಯದಲ್ಲ. ನೀವು ಗಮನಿಸಬಹುದು ಬಹುತೇಕ ಆಸ್ಪತ್ರೆಗಳಲ್ಲಿ ರೋಗಿಗಳು ದಕ್ಷಿಣಕ್ಕೆ ಅಥವಾ ಪೂರ್ವಕ್ಕೆ ತಲೆ ಹಾಕಿ ಮಲಗುವಂತೆ ವ್ಯವಸ್ಥೆ ಮಾಡಲಾಗಿರುತ್ತದೆ. ನಾವು ಸಹ ನಮ್ಮ ಹಿರಿಯರ ನಂಬಿಕೆಯಂತೆ ಅದನ್ನೇ ಪಾಲಿಸುತ್ತೇವೆ.
ಈ ನಂಬಿಕೆ ಹಿಂದೆ ಇದೆ ನೋಡಿ ಅದ್ಭುತವಾದ ಮಹತ್ವ.
ಭೂಮಿಗೆ ಶಕ್ತಿಶಾಲಿಯಾದ ಕಾಂತಿಯ ಕ್ಷೇತ್ರ (ಮ್ಯಾಗ್ನೆಟಿಕ್ ಫೀಲ್ಡ್ )ಇರುತ್ತದೆ. ನಮ್ಮ ದೇಹಕ್ಕೂ ಸಹ ತನ್ನದೇ ಆದ ಒಂದು ಮ್ಯಾಗ್ನೆಟಿಕ್ ಫೀಲ್ಡ್ ಇರುತ್ತದೆ. ನಾವು ದಕ್ಷಿಣಕ್ಕೆ ತಲೆಹಾಕಿ ಮಲಗಿದಾಗ ಭೂಮಿಯ ಹಾಗೂ ನಮ್ಮ ದೇಹದ ವಿರುದ್ಧ ಧ್ರುವಗಳು ಆಕರ್ಷಣೆಗೆ ಒಳಪಡುತ್ತವೆ. ಮತ್ತು ನಾವು ಬೆಳಗ್ಗೆ ಎದ್ದಾಗ ನಮಗೆ ಹಿತಕರವಾದ ಸಂವೇದನೆ ಯಾಗುತ್ತದೆ ಮತ್ತು ನಾವು ತುಂಬಾ ಆರೋಗ್ಯವಾಗಿ ಇದ್ದಂತೆ ನಿರಾಳವಾಗಿ ಇದ್ದಂತೆ ಭಾಸವಾಗುತ್ತದೆ. ಮನಸ್ಸು ದೇಹವು ಹಗುರಾಗುತ್ತದೆ.
ಹಾಗೆ ನಾವು ಪೂರ್ವಕ್ಕೆ ತಲೆಹಾಕಿ ಮಲಗಿದಾಗ ಸೂರ್ಯೋದಯದ ಸಮಯದಲ್ಲಿ ಸೂರ್ಯನ ಬೆಳಕು ನಮ್ಮ ತಲೆಯ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿ ನಮ್ಮ ಪಾದಗಳ ಮೂಲಕ ಹೊರಗಡೆ ಹೋಗುತ್ತದೆ. ಹೀಗಾಗಿ ನಾವು ಏಳುವಾಗ ತಲೆಯ ಭಾಗವು ತಣ್ಣಗೆ ಹಾಗೂ ಕಾಲಿನ ಭಾಗವು ಬೆಚ್ಚಗೆ ಇದ್ದಂತೆ ಆಗುತ್ತದೆ.
ಅದೇ ನಾವು ಪಶ್ಚಿಮಕ್ಕೆ ತಲೆಹಾಕಿ ಮಲಗಿದಾಗ ಸೂರ್ಯನ ಕಿರಣಗಳು ನಮ್ಮ ಪಾದದ ಮೂಲಕ ನಮ್ಮ ದೇಹವನ್ನು ಪ್ರವೇಶಿಸಿ ತಲೆಯ ಮೂಲಕ ಹೊರಗಡೆ ಹೋಗುತ್ತದೆ ಇದರಿಂದ ತಲೆಯ ಭಾಗವು ಬಿಸಿಯಾಗಿ ಪಾದಗಳು ತಣ್ಣಗಿರುತ್ತವೆ.
ಇದರಿಂದ ದುಷ್ಪರಿಣಾಮಗಳು ಬೀರುತ್ತವೆ. ಇದರಿಂದ ತಲೆನೋವಿನಂತಹ ಕಾಯಿಲೆಗಳು ಉಲ್ಬಣಗೊಳ್ಳುತ್ತವೆ.ಮತ್ತು ನಾವು ಉತ್ತರಕ್ಕೆ ತಲೆ ಹಾಕಿ ಮಲಗುವುದರಿಂದ ಭೂಮಿಯ ಹಾಗೂ ನಮ್ಮ ದೇಹದ ಕಾಂತಿಯ ಧ್ರುವಗಳು ಘರ್ಷಣೆಗೆ ಒಳಗಾಗಿ ನಮ್ಮ ದೇಹದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತದೆ. ಇದರಿಂದ ನಮಗೆ ಹಿತಕರವಾದ ಸಂವೇದನೆ ಉಂಟಾಗುತ್ತದೆ.
ಇದು ನಮ್ಮ ದೇಹದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ತಲೆನೋವು, ಪಾರ್ಕಿಂಗ್ ಸನ್ ಮೊದಲಾದ ಕಾಯಿಲೆಗಳು ಬರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ನಮ್ಮ ಹಿರಿಯರ ಮಾತಿನಂತೆ ಪೂರ್ವಕ್ಕೆ ಇಲ್ಲವೇ ದಕ್ಷಿಣಕ್ಕೆ ತಲೆಹಾಕಿ ಮಲಗುವುದು ಅತ್ಯುತ್ತಮ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಗರ್ಭಿಣಿ ಮಹಿಳೆಯರಿಗೆ ಈ ಆಹಾರ ತಿನ್ನು, ಇದನ್ನು ತಿನ್ನಬೇಡ ಎಂದು ಮನೆಯವರು, ಸ್ನೇಹಿತರು ಸಲಹೆ ನೀಡುತ್ತಾರೆ. ವೈದ್ಯರು ಕೂಡ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು, ಯಾವುದನ್ನು ತಿನ್ನದಿರುವುದು ಸೂಕ್ತ ಎಂಬ ಮಾಹಿತಿ ನೀಡುತ್ತಾರೆ. ಏಕೆಂದರೆ ಗರ್ಭಿಣಿ ಮಹಿಳೆಯರ ಆಹಾರಕ್ರಮ ಗರ್ಭದಲ್ಲಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕಾಂಶಗಳಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಳುಗಳನ್ನು ತಿನ್ನುವಂತೆ ಹೇಳುತ್ತಾರೆ. ಕಾಳುಗಳಲ್ಲಿ ಒಂದು ಬಗೆಯಾದ ಚೆನ್ನಾ ಕೂಡ ಗರ್ಭಿಣಿಯರಿಗೆ ಸೇವಿಸಲು ಸೂಕ್ತವಾದ ಆಹಾರವಾಗಿದ್ದು…
ಚಂದನವನಕ್ಕೆ ರಾಧಿಕಾ ಮತ್ತೆ ಬ್ಯಾಕಪ್ ಆಗಿದ್ದಾರೆ.ಈಗ ದಮಯಂತಿ’ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ ಬರೋಬ್ಬರಿ 10 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಚಿತ್ರದ ಶೇಕಡ 80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.ತಾವು ನಟಿಸುತ್ತಿರುವ ದಮಯಂತಿ ಚಿತ್ರಕ್ಕಾಗಿ 80 ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಈಗಾಗಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ…
ಈ ಬಾರಿಯ ವಿಶ್ವಕಪ್ನ ಹೈವೋಲ್ಟೇಜ್ ಪಂದ್ಯ ಭಾನುವಾರ ನಡೆಯಲಿದ್ದು, ಭಾರತ ಪಾಕಿಸ್ತಾನ ವಿರುದ್ಧ ಸೆಣಸಾಡಲಿದೆ. ಈ ಬಾರಿಯ ವಿಶ್ವಕಪ್ ಪಂದ್ಯಗಳಿಗೆ ಮಳೆರಾಯನೇ ವಿಲನ್ ಆಗುತ್ತಿದ್ದು, ಭಾನುವಾರವೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶ್ವಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ಇದುವರೆಗೆ 6 ಪಂದ್ಯಗಳಲ್ಲಿ ಸೆಣಸಾಡಿದ್ದು, ಆರು ಬಾರಿಯೂ ಭಾರತವೇ ಗೆದ್ದು ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಭಾನುವಾರ 7ನೇ ಪಂದ್ಯ ನಡೆಯಲಿದ್ದು ವಿಜಯಲಕ್ಷ್ಮಿ ಯಾರ ಪರವಾಗಿದ್ದಾಳೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ವಿಶ್ವಕಪ್ ಪಂದ್ಯಾವಳಿಯಲ್ಲಿ ಬೆಂಗಳೂರಿನ…
ಮೇಷ ರಾಶಿ ಭವಿಷ್ಯ (Sunday, November 21, 2021) ಮೇಷ ರಾಶಿಯವರಿಗೆ ಇಂದು ಆರೋಗ್ಯ ಪರಿಪೂರ್ಣವಾಗಿರುತ್ತದೆ. ಹೂಡಿಕೆ ಮಾಡುವುದು ಅನೇಕ ಬಾರಿ ನಿಮಗೆ ಪ್ರಯೋಜನಕಾರಿಯೆಂದು ಸಾಬೀತುಪಡಿಸುತ್ತದೆ, ಇಂದು ನಿಮಗೆ ಈ ಮಾತು ಅರ್ಥವಾಗಬಹುದು ಏಕೆಂದರೆ ಯಾವುದೇ ಹಳೆಯ ಹೂಡಿಕೆಯಿಂದ ನೀವು ಪ್ರಯೋಜನವನ್ನು ಪಡೆಯಬಹುದು ಸ್ನೇಹಿತರು ಮತ್ತು ಸಂಬಂಧಿಗಳೊಡನೆ ಆನಂದಿಸಿ. ಮನ್ಮಥನ ಬಾಣದಿಂದ ತಪ್ಪಿಸಿಕೊಳ್ಳುವ ಅವಕಾಶ ಕಡಿಮೆಯಿದೆ. ನೀವಿಂದು ತಾರೆಯಂತೆ ಪ್ರಕಾಶಿಸಿ – ಆದರೆ ಕೇವಲ ಪ್ರಶಂಸಾರ್ಹ ಕೆಲಸಗಳನ್ನು ಮಾತ್ರ ಮಾಡಿ. ಇಂದು, ನಿಮ್ಮ ಸಂಗಾತಿ ಅವರ ಅದ್ಭುತವಾದ…
ಬಿಗ್ ಬಾಸ್ 7ನೇ ಸೀಸನ್ ಈಗ 7ನೇ ವಾರಕ್ಕೆ ಕಾಲಿಡುತ್ತಿದೆ .ಕಳೆದ ಎಪಿಸೋಡ್ ನಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ನಟಿ ರಕ್ಷಾ ಸೋಮಶೇಖರ್ ಬೆನ್ನಲ್ಲೇ ಮತ್ತೊಬ್ಬ ಸದ್ಯಸ್ಯರು ಬಿಗ್ ಬಾಸ್ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಬಿಗ್ಬಾಸ್ ಮನೆಯ ಸ್ಪರ್ಧಿಗಳಿಗೆ ಎರಡನೇ ಶಾಕ್ ನೀಡಿದ್ದಾರೆ. 6 ನೇ ವಾರಂತ್ಯದಲ್ಲಿ ಮನೆಯಿಂದ ನಟಿ ಸುಜಾತ ಅವರು ಹೊರ ಹೋಗಿದ್ದೇ ತಡ ಹೊಸ ಸದ್ಯರೊಬ್ಬರನ್ನು ಬಿಗ್ ಬಾಸ್ 2ನೇ ವೈಲ್ಡ್ ಕಾರ್ಡ್ಎಂಟ್ರಿ ಮೂಲಕ ಮನೆಯೊಳಕ್ಕೆ ಕರೆಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಗೆ…
ಮುಧೋಳ ಹೌಂಡ್ / ಮುಧೋಲ್ ಹೌಂಡ್, ಇದನ್ನು ಮರಾಠಾ ಹೌಂಡ್, ಪಾಶ್ಮಿ ಹೌಂಡ್ ಮತ್ತು ಕ್ಯಾಥೆವಾರ್ ಡಾಗ್ ಎಂದೂ ಕರೆಯುತ್ತಾರೆ, ಇದು ಭಾರತದಿಂದ ದೃಷ್ಟಿಗೋಚರ ತಳಿಯಾಗಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಷನಲ್ ಕೆನಲ್ ಕ್ಲಬ್ (ಐಎನ್ಕೆಸಿ) ಈ ತಳಿಯನ್ನು ವಿವಿಧ ತಳಿಗಳ ಹೆಸರಿನಲ್ಲಿ ಗುರುತಿಸುತ್ತವೆ. ಕೆಸಿಐ ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸಿದರೆ, ಐಎನ್ಕೆಸಿ ಮುಧೋಲ್ ಹೌಂಡ್ ಹೆಸರನ್ನು ಬಳಸುತ್ತದೆ ರಾಜ್ಯದ ಬಾಗಲಕೋಟೆ ಜಿಲ್ಲೆಯ ಸಣ್ಣ ಪಟ್ಟಣ ಮುಧೋಳ ಎಂಬ ಊರಿನ ಹೆಸರನ್ನು…