ಸುದ್ದಿ

ನಡೆದಾಡುವ ದೇವರ ಆರೋಗ್ಯ ಗಂಭೀರ!ಚಿಕಿತ್ಸೆ ಫಲಕಾರಿ ಆಗತ್ತೋ ಇಲ್ವೋ ಎಂದ ಡಾ. ಪರಮೇಶ್?

124

ಸಿದ್ದಗಂಗಾ ಶ್ರೀಗಳ ಆರೋಗ್ಯ ಗಂಭೀರವಾಗಿದ್ದು, ಹಳೆ ಮಠದಲ್ಲೇ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ಹೇಳಿದ್ದಾರೆ.

ಶ್ರೀಗಳ ಆರೋಗ್ಯದ ಕುರಿತಾಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ 2 ಗಂಟೆಗಳಲ್ಲಿ ಶ್ರೀಗಳ ಆರೋಗ್ಯದ ಬಗ್ಗೆ ಅಪ್‍ಡೇಟ್ಸ್ ಕೊಡುತ್ತೇವೆ. ಭಾನುವಾರ ರಾತ್ರಿಯಿಂದ ಶ್ರೀಗಳ ಬಿಪಿ ಹಾಗೂ ಶ್ವಾಸಕೋಶದಲ್ಲಿ ಏರುಪೇರುಗಳಾಗುತ್ತಿವೆ. ಹೀಗಾಗಿ ನಮ್ಮ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದ್ದೇವೆ.

ಇದರಲ್ಲಿ ಎಷ್ಟು ಪ್ರಮಾಣದಲ್ಲಿ ಸಕ್ಸಸ್ ಆಗುತ್ತೇವೆ ಅಂತ ಹೇಳಲು ಸಾಧ್ಯವಿಲ್ಲ. ಯಾಕಂದ್ರೆ ಸ್ವಲ್ಪ ಗಂಭೀರ ಸ್ಥಿತಿಯಲ್ಲೇ ಅವರು ಇದ್ದಾರೆ. ಹೀಗಾಗಿ ಅವರಿಗೆ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಕೊಡುತ್ತಲೇ ಇದ್ದೇವೆ. ಸದ್ಯ ಬೇರೆ ವೈದ್ಯರು ಬಂದಿಲ್ಲ ಎಂದು ತಿಳಿಸಿದರು.

ಇನ್ನು ಶ್ರೀಗಳ ಆಪ್ತ ವೈದ್ಯ ಡಾ.ಪರಮೇಶ್ ನೇತೃತ್ವದ ತಂಡ ಶ್ರೀಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಶ್ರೀಗಳು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೆಳಗಿನ ಜಾವ ಸುಮಾರು 4 ಗಂಟೆಗೆ ಶ್ರೀಗಳಿಗೆ ರಕ್ತದ ಒತ್ತಡ ಮತ್ತು ಉಸಿರಾಟದಲ್ಲಿ ಕೊಂಚ ಏರುಪೇರು ಕಂಡು ಬಂದಿದ್ದು, ತಕ್ಷಣ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೂ ಮತ್ತೆ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬಂದಿದೆ.

ಈಗ ಶ್ರೀಗಳಿಗೆ ಕೃತಕ ಉಸಿರಾಟ ನೀಡಲಾಗುತ್ತಿದೆ. ಆದರೆ ಶ್ರೀಗಳಿಗಳಿಗೆ ನಿಶ್ಯಕ್ತಿ ತುಂಬಾ ಕಡಿಮೆ ಇದ್ದು, ಕಳೆದ ದಿನ ಆರ್ಯುವೇದಿಕ್ ಚಿಕಿತ್ಸೆ ನೀಡಲಾಗಿದೆ. ಈಗ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಮಠಕ್ಕೆ ನಿಯೋಜನೆ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ತಮ್ಮನ್ನು ನೋಡಲು ಬಂದ ಭಕ್ತರನ್ನು ಕಣ್ತೆರೆದು ವೀಕ್ಷಿಸಿದ್ದರು. ಅಷ್ಟೇ ಅಲ್ಲದೆ ಕಿರಿಯ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಶ್ರೀಗಳ ಪಾದ ಸ್ಪರ್ಶಿಸಿ ನಮಸ್ಕರಿಸಿದ ವೇಳೆ ಕಣ್ಣು ತೆರೆದು ಮುಗುಳ್ನಕ್ಕಿದ್ದರು. ಕಿರಿಯ ಶ್ರೀಗಳ ಸಹಾಯದೊಂದಿಗೆ ಇಷ್ಟಲಿಂಗ ಪೂಜೆಯಲ್ಲಿ ನಡೆದಾಡುವ ದೇವರು ಭಾಗಿಯಾಗಿ, ಅವರ ಪಕ್ಕದಲ್ಲೇ ಕುಳಿತು ಕಿರಿಯ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದ್ದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಆರೋಗ್ಯ

    ಮನೆಯಲ್ಲಿರುವ ಇದನ್ನು ದಿನಕ್ಕೊಂದು ತಿಂದರೆ ಏನೆಲ್ಲಾ ಆಗುತ್ತೆ ಗೊತ್ತಾ!!!

    ಹಸಿ ತರಕಾರಿಗಳ ಸೇವನೆಯಿಂದ ನಿಮ್ಮ ದೇಹಕ್ಕೆ ಬೇಕಾದ ಆರೋಗ್ಯ ಶಕ್ತಿ ದೊರೆಯುತ್ತದೆ ಎಂಬುದು ವೈದ್ಯಲೋಕ ತಿಳಿಸಿರುವ ಮಾಹಿತಿಯಾಗಿದೆ. ತರಕಾರಿಗಳನ್ನು ಬೇಯಿಸಿದಾಗ ಅದಲ್ಲಿರುವ ಪೋಷಕಾಂಶಗಳು ನಷ್ಟವಾಗುತ್ತವೆ ಎಂಬುದು ಸಂಶೋಧನೆಗಳಿಂದ ತಿಳಿದು ಬಂದಿದ್ದು ಆದಷ್ಟು ತರಕಾರಿಗಳನ್ನು ಹಸಿಹಸಿಯಾಗಿಯೇ ನಿಮ್ಮ ನಿತ್ಯದ ಆಹಾರ ಕ್ರಮದಲ್ಲಿ ಬಳಸುವುದರಿಂದ ಲಾಭ ನಿಮಗೇ ಉಂಟಾಗಲಿದೆ.

  • ಉಪಯುಕ್ತ ಮಾಹಿತಿ, ಸೌಂದರ್ಯ

    17 ವರ್ಷಗಳ ನಂತರ ಭಾರತಕ್ಕೆ ಒಲಿದ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ..!ತಿಲಿಲಿಯಲು ಈ ಲೇಖನ ಓದಿ ..

    17 ವರ್ಷಗಳ ನಂತರ ಭಾರತ ವಿಶ್ವ ಸುಂದರಿ ಪಟ್ಟವನ್ನು ತನ್ನದಾಗಿಸಿಕೊಂಡಿದೆ. ಚೀನಾದ ಸಾನ್ಯಾ ಸಿಟಿಯಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧೀಕರಿಸಿದ್ದ ಮಾನುಷಿ ಚಿಲ್ಲರ್ 2017 ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

  • ಸುದ್ದಿ

    ಅನಾಥ ಯುವತಿಯರನ್ನು ಮದುವೆಯಾದ ಅಂಕೋಲದ ಯುವಕರು ವಿಜೃಂಭಣೆಯಿಂದ, ಶಾಸ್ತ್ರೋಕ್ತವಾಗಿ ಧಾರೆಯೆರೆದು ಕೊಟ್ಟ ಮಾತೃಛಾಯಾ ಟ್ರಸ್ಟ್…!

    ಕನಸನ್ನು ಹೊತ್ತಿರುವ ಅನಾಥರ ಬಾಳಲ್ಲಿ ಬೆಳಗುವ ದೀಪದಂತೆ ಅವರ ಜೀವನ ಸಾಕಾರಗೊಳಿಸುವ ನಿಟ್ಟಿನಲ್ಲಿ ಹುಬ್ಬಳ್ಳಿಯ ಸೇವಾಭಾರತಿ ಟ್ರಸ್ಟ್​ನಿಂದ ಕಳೆದ 25 ವರ್ಷಗಳಿಂದ ಆರಂಭಿಸಿರುವ ಮಾತೃಛಾಯಾ ಬಾಲ ಕಲ್ಯಾಣ ಕೇಂದ್ರದ ಆಶ್ರಯದಲ್ಲಿ ಬೆಳೆದ ಇಬ್ಬರು ಹೆಣ್ಣು ಮಕ್ಕಳ ಬಾಳಿಗೆ ಇಂದು ಹೊಸ ಜೀವನ ನೀಡಲಾಯಿತು. ಚಿಕ್ಕಂದಿನಿಂದಲೂ ಮನೆಯ ಮಕ್ಕಳಂತೆ ಮಾತೃಛಾಯಾ ಟ್ರಸ್ಟ್ ಆಶ್ರಮದಲ್ಲಿ ಬೆಳೆದ ಜಾಹ್ನವಿ ಹಾಗೂ ಸಂಜನಾ ಎಂಬ ಯುವತಿಯರು ಇವತ್ತು ಅಂಕೋಲಾ ಮೂಲದ ಹುಡುಗರನ್ನು ವರಿಸಿದರು. ಮನೆಯ ಮಕ್ಕಳಂತೆ ಪೋಷಣೆ ಮಾಡಿದ್ದ ಟ್ರಸ್ಟ್ ಇಂದು ಅತ್ಯಂತ…

  • ರಾಜಕೀಯ

    ಇವರು ಹೇಳಿರುವ ಪ್ರಕಾರ 2019ಕ್ಕೆ ಭಾರತದ ಜನರಿಗೆ ಬಿಜೆಪಿ ಮತ್ತು ಜಿಯೋ ಮಾತ್ರ ಆಪ್ಷನ್ ಆಗುತ್ತಾ!

    ರಿಪಬ್ಲಿಕ್ ಆಫ್ ಇಂಡಿಯಾ ಚಾನೆಲ್ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿ ಟ್ವೀಟ್ ಮಾಡಿರುವ ಪ್ರಕಾರ 2019ಕ್ಕೆ ಭಾರತ ಬಿಜೆಪಿಮಯವಾಗಲಿದೆಯಾ? ಹಾಗೂ ಭಾರತದ ಜನರಿಗೆ ಜಿಯೋ ಮಾತ್ರ ಆಪ್ಷನ್ ಆಗುತ್ತಾ?

  • ರಾಜಕೀಯ

    20ಕ್ಕೂ ಅಧಿಕ ಕೈ ಶಾಸಕರಿಂದ ಬಿಎಸ್‍ವೈಗೆ ಕರೆ!

    ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದು,ಮಾಜಿ ಸಿಎಂ ಯಡಿಯೂರಪ್ಪ ಹೇಳಿದಂತೆ ರಾಜ್ಯದ 22 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಳ್ಳುತ್ತಿದೆ. ಅಲ್ಲದೆ ಕಾಂಗ್ರೆಸ್ 4 ಕ್ಷೇತ್ರದಲ್ಲಿ ಲೀಡ್‍ನಲ್ಲಿದ್ದರೆ, ಜೆಡಿಎಸ್ 1 ಕ್ಷೇತ್ರದಲ್ಲಿ ಮುನ್ನಡೆಯಲ್ಲಿದೆ. ಇತ್ತ ಒಟ್ಟಾರೆಯಾಗಿ ಬಿಜೆಪಿ 340 ಕ್ಷೇತ್ರದಲ್ಲಿ ಲೀಡ್‍ನಲ್ಲಿ ಇದೆ. ದೇಶದ ಬಹುತೇಕ ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿಯಾಗಿ ಬಹುಮತ ಪಡೆಯುವ ಮೂಲಕ ಮುನ್ನಡೆ ಸಾಧಿಸುತ್ತಿದೆ. ಅದೇ ರೀತಿ ಕರ್ನಾಟಕದಲ್ಲೂ ಬಿಜೆಪಿ ಮುನ್ನಡೆ ಸಾಧಿಸುತ್ತಿದೆ. ಈ ಮೂಲಕ ಮತ್ತೆ ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಲು ರೆಡಿಯಾಗುತ್ತಿದ್ದಾರ ಎನ್ನುವ ಪ್ರಶ್ನೆ…

  • ಸುದ್ದಿ

    ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಒಂದೇ ವರ್ಷದೊಳಗೆ ಕಳೆದುಕೊಂಡ ದೆಹಲಿ……!

    ಸುಶ್ಮಾ ಸ್ವರಾಜ್ ಮಂಗಳವಾರ ರಾತ್ರಿ ನಿಧನರಾಗುವುದರೊಂದಿಗೆ ರಾಷ್ಟ್ರೀಯ ರಾಜಧಾನಿ ದಿಲ್ಲಿ ಒಂದು ವರ್ಷದೊಳಗೆ ತನ್ನ ಮೂವರು ಮಾಜಿ ಮುಖ್ಯಮಂತ್ರಿಗಳನ್ನು ಕಳೆದುಕೊಂಡಂತಾಗಿದೆ. 1998ರ ಅಕ್ಟೋಬರ್-ಡಿಸೆಂಬರ್‌ನಲ್ಲಿ ಅಲ್ಪ ಅವಧಿಗೆ ದಿಲ್ಲಿಯ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಸುಶ್ಮಾ ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ಮೃತಪಟ್ಟರು.  ಮೂರು ಬಾರಿ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ, ಕಾಂಗ್ರೆಸ್‌ನ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಈ ವರ್ಷದ ಜುಲೈನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ದೀಕ್ಷಿತ್ ಹಾಗೂ ಸುಶ್ಮಾ ಸ್ವರಾಜ್ ಒಂದು ತಿಂಗಳ ಅಂತರದಲ್ಲಿ ವಿಧಿವಶರಾಗಿದ್ದಾರೆ. 1993ರಿಂದ 96ರ ತನಕ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ…