ಸುದ್ದಿ

ಜಾತಿ ವಿಚಾರ ಮಾತನಾಡಿದ ಜೆಡಿಎಸ್ ಶಿವರಾಮೇಗೌಡರಿಗೆ ಟಾಂಗ್ ಕೊಟ್ಟ MTB ನಾಗರಾಜ್..!

165

ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೌಡ್ತಿಯಲ್ಲ ನಾಯ್ಡು ಎಂದು ಸಂಸದ ಶಿವರಾಮೇಗೌಡ ಮಾಡುತ್ತಿರುವ ಜಾತಿ ರಾಜಕೀಯಕ್ಕೆ ಸಚಿವ ಎಂಟಿಬಿ ನಾಗರಾಜ್ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಹೌದು, ಮಂಡ್ಯ ಚುನಾವಣಾ ಅಖಾಡದಲ್ಲಿ ಜಾತಿ ರಾಜಕಾರಣದ ಕೆಸರೆರಚಾಟ ತೀವ್ರಗೊಂಡಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್‍ ಗೌಡ್ತಿಯಲ್ಲ, ನಾಯ್ಡು ಎಂದು ಮಾತಿನುದ್ದಕ್ಕೂ ಶಿವರಾಮೇಗೌಡ ವಾಗ್ದಾಳಿ ನಡೆಸಿದ್ರು. ಇದೀಗ ಶಿವರಾಮೇಗೌಡ ಮಾಡ್ತಿರೋ ಜಾತಿ ರಾಜಕಾರಣಕ್ಕೆ ಸಚಿವ ಎಂಟಿಬಿ ನಾಗರಾಜ್‍ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇವನಹಳ್ಳಿಯಲ್ಲಿ ಮಾತನಾಡಿದ ಎಂಟಿಬಿ ನಾಗರಾಜ್‍, ಯಾವುದೇ ಹೆಣ್ಣಿಗೂ ಮದುವೆಯಾಗಿ ಒಂದು ಮಗುವಾದ ಮೇಲೆ ಪತಿ ಜಾತಿಯೇ ಬರುತ್ತೆ ಹೊರತು ಆಕೆಯ ತಾಯಿಯ ಮನೆಯ ಜಾತಿಯಲ್ಲ. ಹೀಗಾಗಿ ರಾಜಕೀಯದಲ್ಲಿ ಜಾತಿಯನ್ನು ತರಬೇಡಿ. ನಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಹಿಡಿದು ಜನರ ಮುಂದೆ ಮತ ಯಾಚಿಸಬೇಕು ಎಂದಿದ್ದಾರೆ.

ಕೆಲವರು ಜನರ ಭಾವನೆಗಳನ್ನು ಕೆರಳಿಸುವ ನಿಟ್ಟಿನಲ್ಲಿ ಈ ರೀತಿ ಜಾತಿ ರಾಜಕೀಯವನ್ನು ಮಾಡಲು ಮುಂದಾಗಿದ್ದು, ಯಾರೊಬ್ಬರೂ ಜಾತಿ ರಾಜಕೀಯ ಮಾಡಲು ಮುಂದಾಗಬಾರದು ಎಂದು ಸಲಹೆ ನೀಡಿದರು. ಈ ಬಾರಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದು, ಸರ್ಕಾರದ ಸಾಧನೆಗಳನ್ನು ಹೇಳಿ ಕೈ ಮುಗಿದು ಜನರ ಮುಂದೆ ಮತಯಾಚನೆ ಮಾಡಬೇಕು ಎಂದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ತಾಯಿ ಚಾಮುಂಡಿಯನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ ನೋಡಿ

    ಮೇಷ ರಾಶಿ ಭವಿಷ್ಯ (Friday, December 31, 2021) ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ-ಧ್ಯಾನ ಮತ್ತು ಯೋಗ ಲಾಭ ತರುತ್ತವೆ. ನೀವು ಮನೆಯಿಂದ ಹೊರ ಇದ್ದು ಉದ್ಯೋಗ ಅಥವಾ ಅಧ್ಯಯನ ಮಾಡುತ್ತಿದ್ದರೆ, ನಿಮ್ಮ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವಂತಹ ಜನರಿಂದ ದೂರವಿರುವುದು ಕಲಿತುಕೊಳ್ಳಬೇಕು. ನೀವು ಮಕ್ಕಳು ಅಥವಾ ನಿಮಗಿಂತ ಕಡಿಮೆ ಅನುಭವಿಯಾಗಿರುವವರ ಜೊತೆ ತಾಳ್ಮೆಯಿಂದಿರಬೇಕು. ಪ್ರಣಯದ ನಡತೆಗಳು ಫಲ ನೀಡುವುದಿಲ್ಲ. ಕಣ್ಣುಗಳು ಎಂದಿಗೂ ಸುಳ್ಳು ಹೇಳುವುದಿಲ್ಲ, ಮತ್ತು ನಿಮ್ಮ ಸಂಗಾತಿಯ ಕಣ್ಣುಗಳು ಇಂದು ನಿಮಗೆ ಏನೋ…

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(10 ಫೆಬ್ರವರಿ, 2019) ನಿಮ್ಮ ಪೋಷಕರು ನೀಡಿದ ಬೆಂಬಲದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾದಂತೆನಿಸುತ್ತವೆ. ನೀವು ಅಪರೂಪಕ್ಕೆಭೇಟಿ ಮಾಡುವ…

  • ಸುದ್ದಿ

    ಪಿಂಚಣಿ ಹಣಕ್ಕಾಗಿ 100 ವರ್ಷ ವಯಸ್ಸಿನ ತಾಯಿಯನ್ನ ಮಂಚದ ಸಮೇತ ಬ್ಯಾಂಕಿಗೆ ಕರೆತಂದ ಮಗಳು.

    100 ವರ್ಷ ವಯಸ್ಸಿನ ವೃದ್ಧ ತಾಯಿಯ ಪಿಂಚಣಿ ಹಣಕ್ಕಾಗಿ ಮಗಳು ಮಂಚದ ಸಮೇತ ಆಕೆಯನ್ನು ಬ್ಯಾಂಕಿಗೆ ಕರೆತಂದ ಘಟನೆಯೊಂದು ನಡೆದಿದೆ. ಮಗಳು ತನ್ನ ತಾಯಿಯನ್ನು ಮಂಚದ ಸಮೇತ ಕರೆದೊಯ್ಯುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪಿಂಚಣಿ ಹಣವನ್ನು ಡ್ರಾ ಮಾಡಲು ಆಕೆಯೇ ಬರಬೇಕು ಎಂದು ಬ್ಯಾಂಕ್ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಆದರೆ ತಾಯಿಗೆ ಎದ್ದು ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಬ್ಯಾಂಕಿಗೆ ಬರಲು ಆಗುತ್ತಿಲ್ಲ ಎಂದು ಹೇಳಿದರೂ ಸಿಬ್ಬಂದಿ…

  • ವಿಚಿತ್ರ ಆದರೂ ಸತ್ಯ

    ನಿಮ್ಮಲ್ಲಿ ಈ 5 ಲಕ್ಷಣಗಳಿದ್ರೆ, ವಿಜ್ಞಾನದ ಪ್ರಕಾರ ನೀವು ಜಾಸ್ತಿ ಬುದ್ಧಿವಂತರು!ಹೇಗೆ ಗೊತ್ತಾ???

    ತುಂಬಾ ಸರ್ತಿ ಜೀವನದಲ್ಲಿ ನಮ್ಮನ್ನ ನಾವೇ ಕಡೆಗಾಣಿಸ್ಕೊತೀವಿ. ನಮ್ಮ ಮನೆಯೋರು ಕೂಡ ನಮ್ಮನ್ನ ಎಷ್ಟೋ ಸರ್ತಿ ನೀನು ಸೋಮಾರಿ, ಒಂದು ಕೆಲಸ ಕೂಡ ಗಮನ ಇಟ್ಟು ಮಾಡಲ್ಲಾ ಅಂತೆಲ್ಲಾ ಬೈತಿರ್ತರೆ.

  • ಜ್ಯೋತಿಷ್ಯ

    ಹೊರನಾಡು ಅನ್ನಪೂರ್ಣೇಶ್ವರಿಯನ್ನು ನೆನೆಯುತ್ತ ನಿಮ್ಮ ಇಂದಿನ ರಾಶಿ ಭವಿಷ್ಯದ ಬಗ್ಗೆ ತಿಳಿಯಿರಿ

    ಮೇಷ ರಾಶಿ ಭವಿಷ್ಯ (Friday, November 26, 2021) ಪ್ರತಿ ವ್ಯಕ್ತಿಯನ್ನೂ ಆಲಿಸಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಬಹುದು. ಇಂದು ಮನೆಯಿಂದ ಹೊರಗೆ ಹಿರಿಯರ ಆಶೀರ್ವಾದವನ್ನು ತೆಗೆದುಕೊಂಡು ಹೋಗಿ, ಇದರಿಂದ ನೀವು ಹಣದ ಲಾಭವನ್ನು ಪಡೆಯಬಹುದು. ಗೃಹ ಜೀವನ ಶಾಂತಿಯುತ ಮತ್ತು ಉತ್ತಮವಾಗಿರುತ್ತದೆ ಪ್ರೀತಿಯಲ್ಲಿ ಬೀಳುವುದು ಇಂದು ನಿಮಗೆ ಕೆಟ್ಟದಾಗಿರಬಹುದಾದ್ದರಿಂದ ನೀವು ಜಾಗರೂಕರಾಗಿರಿ. ಹೆಚ್ಚಿನ ಕೆಲಸದ ಹೊರೆತಾಗಿಯೂ ಇಂದು ಕೆಲಸದ ಸ್ಥಳದಲ್ಲಿ ನಿಮ್ಮಲ್ಲಿ ಶಕ್ತಿಯನ್ನು ನೋಡಬಹುದು. ಇಂದು ನಿಮಗೆ ನೀಡಲಾಗಿರುವ ಕೆಲಸವನ್ನು ನಿರ್ಧರಿಸಿರುವ ಸಮಯಕ್ಕಿಂತ ಮೊದಲೇ ಪೂರೈಸಬಹುದು….