ಸುದ್ದಿ

ಬ್ರೆಕಿಂಗ್ ನ್ಯೂಸ್!ಇನ್ನು ಮುಂದೆ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಸಿಗಲಿದೆ ಶಬರಿಮಲೈ ಅಯ್ಯಪ್ಪ ಸ್ವಾಮಿಯ ದರ್ಶನ ಭಾಗ್ಯ…

153

ಶಬರಿಮಲೈ  ಅಯ್ಯಪ್ಪ ಸ್ವಾಮಿ ದೇವಸ್ಥಾನವನ್ನು ನೋಡಿಕೊಳ್ಳುವ ತಿರುವಂಕೂರ್ ದೇವಸ್ವಂ ಮಂಡಳಿ (ಟಿಡಿಬಿ) ತನ್ನ ನಿಲುವನ್ನು ಬದಲಾಯಿಸಿಕೊಂಡಿದ್ದು, ಸುಪ್ರೀಂ ಕೋರ್ಟ್ ತೀರ್ಪನ್ನು ಯಥಾವತ್ ಆಗಿ ಪಾಲಿಸುತ್ತೇವೆ ಎಂದು ತಿಳಿಸಿದೆ.

ಸುಪ್ರೀಂಕೋರ್ಟ್ ಮುಖ್ಯನಾಯಾಧೀಶ ರಂಜನ್ ಗೊಗೋಯ್ ಅವರ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಇಂದು ಶಬರಿಮಲೆಗೆ ಮಹಿಳೆಯರ ಪ್ರವೇಶದ ಕುರಿತು ವಿಚಾರಣೆ ನಡೆಸಿತು. ಈ ವೇಳೆ ದೇವಸ್ಥಾನದ ಆಡಳಿತ ಮಂಡಳಿ, ನಾವು ನಮ್ಮ ನಿಲುವನ್ನು ಬದಲಾಯಿಸಿದ್ದೇವೆ. ಧರ್ಮ ಗ್ರಂಥದಲ್ಲಿ ಸ್ತ್ರೀಯರನ್ನು ಹೊರಗಿಡಬೇಕೆಂದು ಹೇಳಿಲ್ಲ. ಹೀಗಾಗಿ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಎಲ್ಲಾ ಸ್ತ್ರೀಯರಿಗೆ ಪ್ರವೇಶಕ್ಕೆ ಅವಕಾಶ ನೀಡುತ್ತೇವೆ ಎಂದು ಹೇಳಿಕೆ ನೀಡಿದೆ.

ಶಬರಿಮಲೆಗೆ ಮಹಿಳೆಯರಿಗೆ ಪ್ರವೇಶಕ್ಕೆ ಅವಕಾಶ ಕೊಡುವ ಸುಪ್ರೀಂಕೋರ್ಟ್ ತೀರ್ಪನ್ನು ಮರುಪರಿಶೀಲನೆ ಮಾಡುವಂತೆ 54 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್, ಎ.ಎಂ.ಖಾನ್ವಿಲ್ಕರ್, ಡಿ.ವೈ.ಚಂದ್ರಚೂಡ್ ಹಾಗೂ ಇಂದೂ ಮಲ್ಹೋತ್ರಾ ಅವರ ಪೀಠವು ಮರಪರಿಶೀಲನಾ ಅರ್ಜಿಯನ್ನು ಇಂದು ವಿಚಾರಣೆ ನಡೆದಿದರು.

ಕೇರಳ ಸರ್ಕಾರದ ಅಧೀನದಲ್ಲಿ ನಡೆಯುವ ಶಬರಿಮಲ ದೇವಸ್ಥಾನ ಮಂಡಳಿಯು 2018 ಸೆಪ್ಟೆಂಬರ್ ನಲ್ಲಿ ಸುಪ್ರೀಂಕೋರ್ಟ್ ತೀರ್ಪನ್ನು ವಿರೋಧಿಸಿತ್ತು. ಬಳಿಕ ನವೆಂಬರ್ ವರೆಗೆ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಕೇಳಿತ್ತು. ಆದರೆ ಈಗ ದೇವಸ್ಥಾನಕ್ಕೆ ಮಹಿಳೆಯರಿಗೆ ಯಾವುದೇ ವಯೋಮಿತಿ ಇಲ್ಲ. ಎಲ್ಲರಿಗೂ ಮುಕ್ತ ಅವಕಾಶ ನೀಡಲಾಗುತ್ತದೆ ಎಂದು ಒಪ್ಪಿಕೊಂಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಮಹಾಲಯ ಅಮಾವಾಸ್ಯೆ ಕಳೆದು ಒಂದು ತಿಂಗಳ ನಂತರ ದಸರಾ ಯಾಕೆ ಬರುತ್ತಿದೆ !

    ಭಾರತೀಯ ಪ್ರಜೆಗಳಲ್ಲಿ ಬಹು ಸಂಖ್ಯಾತರು ಎನಿಸಿಕೊಂಡ ಹಿಂದೂ ಧರ್ಮೀಯರು ಪ್ರತೀ ಮಾಸದಲ್ಲಿ ಯಾವುದಾದರು ಎಳೆಯಲ್ಲಿ ಧಾರ್ಮಿಕ ಹಬ್ಬವನ್ನು ಆಚರಣೆ ಮಾಡುವುದು ಸಂಪ್ರದಾಯ ಮತ್ತು ಇದನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಕೂಡ.ಸಾಮಾನ್ಯವಾಗಿ ಎಲ್ಲಾ ಜನಾಂಗದವರು ಆಚರಿಸುವ ಪಿತೃಪಕ್ಷ ಮಹಾಲಯ ಅಮಾವಾಸ್ಯೆ ಮುಗಿದ ತಕ್ಷಣ ನವರಾತ್ರಿ ಆರಂಭವಾಗಿ ಹತ್ತನೇಯ ದಿನ ದಸರಾ ಆಚರಣೆ ಮಾಡುವುದು ನಿಯಮವಾಗಿದೆ.ಆದರೆ ಈ ವರ್ಷ ಅಶ್ವಿಜ ಮಾಸ ಅಧಿಕ ಬಂದಿರುವುದರಿಂದ ಅಂದರೆ ನಿಜ ಅಶ್ವಿಜ, ಅಧಿಕ ಅಶ್ವಿಜ ಎಂದು ಎರಡು ಮಾಸಗಳು ಬಂದಿರುವುದರಿಂದ ದಸರಾ ಹಬ್ಬ ಮಹಾಲಯ…

  • ಮನರಂಜನೆ

    ವಿಷ್ಣು ಹಾಡಿಗೆ ಅವಮಾನ ಮಾಡಿದ್ರ!ಹಾಗಾದ್ರೆ ದಿವಾಕರ್ ನಿವೇದಿತಾ ನಡುವೆ ನಡೆದ ವಾಗ್ವಾದ ಏನು?ತಿಳಿಯಲು ಮುಂದೆ ಓದಿ…

    ನಿನ್ನೆಯ ಬಿಗ್‌ಬಾಸ್ ಸಂಚಿಕೆಯಲ್ಲಿ ಚರ್ಚೆಗೆ ಗ್ರಾಸವಾಗಿದ್ದೆ ನಿವೇದಿತಾ-ದಿವಾಕರ್ ಮಧ್ಯೆ ನಡೆದ ವಾಗ್ವಾದ! ಸದಸ್ಯರೆಲ್ಲ‌ ಸೇರಿ ಕೊನೆಗೂ ವಿಷ್ಣುವರ್ಧನ್ ಅವರ ಹಾಡನ್ನು ನಿರಾಕರಿಸಿ,

  • ಉಪಯುಕ್ತ ಮಾಹಿತಿ

    ಬಯಲುಸೀಮೆ ಕೋಲಾರದ ಈಗಿನ ಬರಗಾಲದ ಪರಿಸ್ಥಿತಿಗೆ ಇದು ಮುಖ್ಯ ಕಾರಣ ಇರಬಹುದಾ? ನೀವೇನಂತೀರಾ?

    ಇದು ಬಯಲುಸೀಮೆಯ ಗಡಿನಾಡು ಕೋಲಾರ ಜಿಲ್ಲೆಯ ಸ್ಥಿತಿ. ಒಂದು ಕಾಲದಲ್ಲಿ ಅತಿ ಹೆಚ್ಚು ಕೆರೆಗಳ ನಾಡು ಎಂದು ಪ್ರಸಿದ್ಧಿ ಪಡೆದು ಸದಾ ಹಸಿರಿನಿಂದ ಕೂಡಿದ್ದ ಜಿಲ್ಲೆಯಾಗಿತ್ತು ಕೋಲಾರ. ಕಾಲಾಂತರ ಮಳೆರಾಯನ ಮುನಿಸು ಜಿಲ್ಲೆಯ ಮೇಲೆ ಬಂದಿದ್ರಿಂದ ಇಲ್ಲಿನ ರೈತರು ಪರ್ಯಾಯ ಹಾಗೂ ಆಧುನಿಕ ಕೃಷಿಯತ್ತ ಮುಂದಾದ್ರು. ಇದ್ರಿಂದ ಹೆಚ್ಚು ಲಾಭ ಹಾಗೂ ಕಡಿಮೆ ಶ್ರಮವುಳ್ಳ ನೀಲಗಿರಿ ಸಸಿಗಳನ್ನು ನೆಡಲು ರೈತ್ರು ಮುಂದಾದ್ರು. ಇದ್ರಿಂದ ಭೂಮಿಯಲ್ಲಿ ಇರುವ ನೀರಿನ ಪ್ರಮಾಣವನ್ನು ಈ ಮರಗಳು ತೆಗೆದುಕೊಂಡು ನೆಲವನ್ನು ಬರಡುಗೊಳಿಸಿತು. ಇದರಿಂದ ಅಂತರ್ಜಲಮಟ್ಟ ತೀವ್ರ ಕುಸಿದಿದೆ.

  • ಸುದ್ದಿ

    50 ಸಾವಿರ ಉದ್ಯೋಗಾವಕಾಶವನ್ನು ಸೃಷ್ಟಿಸಿ ಘೋಷಣೆ ಮಾಡಿದ ಮೋದಿ ಸರ್ಕಾರ…!

    ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡುತ್ತಿದ್ದ ವಿಧಿ 370ರ ರದ್ಧತಿ ಬಳಿಕ ಮಹತ್ವದ ಹೆಜ್ಜೆಯನ್ನಟ್ಟಿರುವ ಕೇಂದ್ರ ಸರ್ಕಾರ ಇದೀಗ ಕಣಿವೆ ರಾಜ್ಯದ ಯುವಕರಿಗೆ 50 ಸಾವಿರ ಉದ್ಯೋಗ ಕಲ್ಪಿಸುವ ಘೋಷಣೆ ಮಾಡಿದೆ.  ಈ ಕುರಿತಂತೆ ಇಂದು [ಬುಧವಾರ] ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಅವರು ಮಾಹಿತಿ ನೀಡಿದ್ದು, ಕಣಿವೆ ರಾಜ್ಯದ ಯುವಕರಿಗಾಗಿ ರಾಜ್ಯದಲ್ಲಿ 50 ಸಾವಿರ ಉದ್ಯೋಗ ಸೃಷ್ಟಿಸಲಾಗುತ್ತಿದೆ ಎಂದು ಹೇಳಿದರು.  ಈ ಕುರಿತಂತೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದು, ಮುಂದಿನ 2 ಅಥವಾ 3…

  • ಆರೋಗ್ಯ

    ಬೋರಲಾಗಿ ಮಲಗುವುದು ನಿಜಕ್ಕೂ ಕೆಟ್ಟದ್ದೇ..?ತಿಳಿಯಲು ಈ ಲೇಖನ ಓದಿ..

    ಈ ಪ್ರಶ್ನೆಗೆ ಹೌದು ಎಂದು ಉತ್ತರಿಸಬೇಕಾಗುತ್ತದೆ. ಬೋರಲಾಗಿ ಅಂದರೆ ಹೊಟ್ಟೆ ಅಡಿಯಾಗಿ ಮಲಗುವದರಿಂದ ನಿಮ್ಮ ಬೆನ್ನು ಮತ್ತು ಕುತ್ತಿಗೆ ದುಬಾರಿ ಬೆಲೆಯನ್ನು ತೆರಬೇಕಾಗುತ್ತದೆ. ಇದು ನಿದ್ರೆಯನ್ನು ಕೆಡಿಸುವ ಜೊತೆಗೆ ನಿಮ್ಮ ಶರೀರಕ್ಕೂ ಅನಾನುಕೂಲವನ್ನುಂಟು ಮಾಡುತ್ತದೆ.

  • ಸುದ್ದಿ

    ಹುಚ್ಚ ವೆಂಕಟ್‍ಗೆ ಕಿಚ್ಚ ಸುದೀಪ್ ನೆರವು, ವೆಂಕಟ್ ಕಂಡರೆ ಈ ನಂಬರ್‌ಗೆ ಕಾಲ್ ಮಾಡಿ.

    ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಮಾನಸಿಕ ಸಮತೋಲನ ಕಳೆದುಕೊಂಡು ಓಡಾಡುತ್ತಿದ್ದಾರೆ. ಇವರ ಸ್ಥಿತಿಯನ್ನು ನೋಡಿ ಕೆಲವರು ವಿಡಿಯೋ ಮಾಡಿ ಲೇವಡಿ ಮಾಡುತ್ತಿದ್ದಾರೆ. ಇನ್ನೂ ಕೆಲವರು ವೆಂಕಟ್ ಸ್ಥಿತಿಗೆ ಮರುಗುತ್ತಿದ್ದಾರೆ. ಸದ್ಯ ಊಟ ಇಲ್ಲದೆ ಕೆಲವರಿಂದ ಹಲ್ಲೆಗೊಳಗಾಗಿರುವ ವೆಂಕಟ್‍ಗೆ ಸುದೀಪ್ ಚಿಕಿತ್ಸೆಗೆ ನೆರವಾಗಲು ಮುಂದಾಗಿದ್ದಾರೆ. ಕಿಚ್ಚ ಚಾರಿಟೇಬಲ್ ಸೊಸೈಟಿ ಈ ಬಗ್ಗೆ ಮಾಹಿತಿ ನೀಡಿದ್ದು, ಜನರು ಸ್ವಲ್ಪ ಸಂಯಮದಿಂದ ವರ್ತಿಸಬೇಕೆಂದು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ವತಿಯಿಂದ ಮನವಿ ಮಾಡಿದ್ದಾರೆ. ಆತ್ಮೀಯರೆ ಕಳೆದ ಕೆಲ ದಿನಗಳಿಂದ ಮಾನಸಿಕವಾಗಿ ಜರ್ಜಿರಿತರಾಗಿ…