ಸಿನಿಮಾ

ಸ್ಯಾಂಡಲ್ ವುಡ್ ನಟರ ಮನೆಯ ಮೇಲೆ ಐಟಿ ದಾಳಿ…ರೊಚ್ಚಿಗೆದ್ದ ಅಭಿಮಾನಿಗಳು ಮೋದಿಯವರಿಗೆ ಹೇಳಿದ್ದೇನು ಗೊತ್ತೆ?

504

ಇಂದು ಮುಂಜಾನೆ ಸ್ಯಾಂಡಲ್ ವುಡ್ ಸ್ಟಾರ್ ನಟರು ಗಳಾದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ , ಪವರ್ ಪುನೀತ್ ರಾಜಕುಮಾರ್, ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಮನೆಯ ಮೇಲೆ ಐಟಿ ದಾಳಿ ನಡೆದಿದೆ. ಅಲ್ಲದೆ ನಿರ್ಮಾಪಕರುಗಳಾದ ಕೆಜಿಎಫ್ ಖ್ಯಾತಿಯ ಸ್ಟಾರ್ ನಿರ್ಮಾಪಕರಾದ ಕಿರಂಗದೂರ್ ವಿಜಯ್, ಮನೋಹರ್, ರಾಕ್ ಲೈನ್ ವೆಂಕಟೇಶ್ ಅವರ ಮನೆಯ ಮೇಲೂ ಸಹ ದಾಳಿ ನಡೆದಿದೆ.

ಸಿನಿಮಾ ಕ್ಷೇತ್ರದಲ್ಲಿ ಬ್ಲ್ಯಾಕ್ ಮನಿಯನ್ನು ವೈಟ್ ಮನಿ ಆಗಿ ಬದಲಾವಣೆ ಮಾಡಲಾಗುತ್ತಿದೆ ಎಂಬ ಅನುಮಾನಗಳು ಮೂಡಿ ಬಂದಿದ್ದು, ಕೆಲವು ವರು ನಿರ್ಮಾಪಕರ ಮೂಲಕ ಕಪ್ಪು ಹಣವನ್ನು ಸಿನಿಮಾದಲ್ಲಿ ಹೂಡಿಕೆ ಮಾಡಲಾಗುತ್ತಿದೆ ಎಂಬ ಅನುಮಾನದ ಮೇರೆಗೆ ಐಟಿ ದಾಳಿ ಮಾಡಲಾಗಿದೆ ಎನ್ನಲಾಗಿದೆ. ಇದಕ್ಕೆ ತುಂಬಾ ದಿನಗಳಿಂದ ಸಿದ್ಧತೆ ನಡೆದಿತ್ತು ಇಂದು ಮುಂಜಾನೆ ಇನ್ಕಮ್ ಟ್ಯಾಕ್ಸ್ ಇಲಾಖೆ ಈ ಸ್ಟಾರ್ ಗಳ ಮನೆ ಮೇಲೆ ದಾಳಿ ನಡೆಸಿದೆ.

ಆದರೆ ಈ ಸ್ಟಾರ್ ನಟರ ಗಳ ಅಭಿಮಾನಿಗಳು ಮಾತ್ರ ರೊಚ್ಚಿಗೆದ್ದಿದ್ದಾರೆ. ಕರ್ನಾಟಕವನ್ನು ಗುರಿಯಾಗಿರಿಸಿಕೊಂಡು ದಾಳಿಯನ್ನು ಮಾಡಲಾಗುತ್ತಿದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಐ ಟಿ ಯು ಕೇಂದ್ರ ಸರ್ಕಾರದಿಂದ ಪೂರ್ವಗ್ರಹಪೀಡಿತ ವಾಗಿದ್ದು ಇದರ ಹಿಂದೆ ಮೋದಿ ಇದ್ದಾರೆ ಎಂದು ಭಾವಿಸಿರುವ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನೀವು ನಮ್ಮ ನೆಚ್ಚಿನ ನಟರ ಗಳನ್ನು ಟಾರ್ಗೆಟ್ ಮಾಡಿದ್ದೀರಿ..ನೋಡುತ್ತಿರಿ ಮುಂದೆ ಬರುವ ಲೋಕಸಭಾ ಚುನಾವಣೆಗೆ ನಾವು ನಿಮ್ಮನ್ನು ಟಾರ್ಗೆಟ್ ಮಾಡುತ್ತೇವೆ ನಿಮಗೆ ಮತ ಹಾಕುವುದಿಲ್ಲ ಬಿಜೆಪಿ ಮುಕ್ತ ಕರ್ನಾಟಕ ವನ್ನು ಮಾಡುತ್ತೇವೆ ಎಂದು ಆಕ್ರೋಶ ಪಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್ ಅವರು ಐಟಿ ಗೆ ತನ್ನದೇ ಆದ ನಿಯಮ ಗಳು ಇರುತ್ತವೆ ಅದು ಅದನ್ನು ಪಾಲಿಸಿದೇ ಅಷ್ಟೇ. ಕೆಜಿಎಫ್ , ವಿಲ್ಲನ್ ಹಾಗೂ ನಟಸಾರ್ವಭೌಮ ಚಿತ್ರಗಳು ಬಾರಿ ಹೆಸರು ಮಾಡುತ್ತಿದ್ದು ಈ ಚಿತ್ರಕ್ಕೆ ಭಾರಿ ಹಣ ಖರ್ಚು ಮಾಡುವುದರಿಂದ ಈ ಕಾರಣಕ್ಕೆ ಐಟಿ ದಾಳಿ ಆಗಿರಬಹುದು ಸಾಕ್ಷ್ಯಾಧಾರಗಳಿಲ್ಲದೆ ನಾವು ಯಾರನ್ನೂ ದೂರುವುದಿಲ್ಲ, ಐಟಿ ಇಲಾಖೆ ಒಂದು ಪಕ್ಷಕ್ಕೆ ಸೀಮಿತವಾದ ದಲ್ಲ. ಇದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

ಸ್ಯಾಂಡಲ್ ವುಡ್ ಇತಿಹಾಸದಲ್ಲೇ ಇದು ಬಹು ದೊಡ್ಡ ಐಟಿ ದಾಳಿ ಯಾಗಿದ್ದು.. ಮುಂದೆ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತವೆ , ಮುಂದೆ ಜನರಿಂದ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ