ಸುದ್ದಿ

ವೆಹಿಕಲ್ ಬಿಟ್ಟು ಇನ್ಮುಂದೆ ವಾಕಿಂಗ್ ಸ್ಟಾರ್ಟ್ ಮಾಡಿ ಈ ಆ್ಯಪ್‌ಗಳೇ ನಿಮ್ಮಗೆ ದುಡ್ಡು ಕೊಡುತ್ತದೆ,.!

95

ನಾವು ಪ್ರತಿದಿನ ನಡೆಯುತ್ತೇವೆ. ಆದರೆ, ಹೀಗೆ ಸುಮ್ಮನೆ ನಡೆಯೋಕೆ ಯಾರಾದ್ರೂ ದುಡ್ಡು ಕೊಡ್ತಾರಾ? ನಾವು ಕೊಡ್ತೀವಿ ಅಂತಿದಾವೆ ಈ ವಾಕಿಂಗ್ ಆ್ಯಪ್‌ಗಳು. ಮತ್ತೇಕೆ ತಡ? ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ, ವಾಕ್ ಮಾಡೋಕೆ ಶುರು ಹಚ್ಕೊಳ್ಳಿ… ಹಣ ಮತ್ತು ಆರೋಗ್ಯ ಎರಡೂ ಗಳಿಸಿ. ವ್ಯಾಯಾಮ, ವಾಕಿಂಗ್, ರನ್ನಿಂಗ್- ಯಾವುದೇ ಆಗಲಿ, ನಮ್ಮ ಆರೋಗ್ಯಕ್ಕಾಗಿ, ಖುಷಿಗಾಗಿ ಮಾಡುತ್ತೇವೆ ಅಲ್ಲವೇ? ಆದರೆ, ಅದಕ್ಕೂ ಯಾರಾದರೂ ಹಣ ಕೊಡ್ತಾರೆ ಅಂದ್ರೆ? ಡಬಲ್ ಖುಷಿ ಆಗ್ದೇ ಇರುತ್ತಾ?

ಇದಕ್ಕಾಗಿ ನೀವು ಹೆಚ್ಚೇನು ಕಷ್ಟ ಪಡಬೇಕಾಗಿಲ್ಲ. ಈ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡ್ರೆ ಸಾಕು. ಹಾಗಂತ ಹಣ ಮಾಡೋಕಂತಾನೇ ವಾಕ್ ಮಾಡ್ಬೇಡಿ, ಏಕೆಂದರೆ ಇದು ನಿಮ್ಮ ಪಾಕೆಟ್ ಮನಿಯಾಗುತ್ತದೆಯೇ ಹೊರತು ಸ್ಯಾಲರಿಯಲ್ಲ. ಈ ಆ್ಯಪ್‌ಗಳ ನಡುವೆ ಹಲವು ಒಂದೇ ತರ ಇದ್ದರೂ ರಿವಾರ್ಡ್ ಪಾಯಿಂಟ್ಸ್ ಕೊಡುವುದರಲ್ಲಿ, ಪೇಮೆಂಟ್ ವಿಧಾನಗಳಲ್ಲಿ ವ್ಯತ್ಯಾಸವಿದೆ. ಇಷ್ಟಕ್ಕೂ ನೀವು ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ಏನಾಗುತ್ತಂದ್ರೆ, ನಿಮಗೂ ವಾಕಿಂಗ್‌ಗೆ ಮೂಡ್ ಬರುತ್ತದೆ, ರಿವಾರ್ಡ್‌ನಿಂದಾಗಿ ನಿಮ್ಮ ಗೆಳೆಯರನ್ನೂ ಫಿಟ್ನೆಸ್ ಕಡೆ ಸೆಳೆಯುತ್ತೀರಿ ಅಲ್ಲದೆ, ಸುಮ್ಮನೇ ದಿನಾ ಮಾಡುವ ಕೆಲಸಕ್ಕೇ ಯಾರೋ ದುಡ್ಡು ಕೊಡ್ತಾರಂದ್ರೆ ಖುಷೀನೇ ತಾನೇ? ಅವೆಲ್ಲ ಏನು, ಯಾವ ಅಪ್ಲಿಕೇಶನ್‌ಗಳಿವು ಎಂದು ನೋಡಿ ಬರೋಣ.

1. ಸ್ವೆಟ್‌ಕಾಯ್ನ್ :ಇದು ವಾಕ್ ಮಾಡಲು ದುಡ್ಡು ನೀಡುವ ಆ್ಯಪ್‌ಗಳಲ್ಲಿ ಬಹಳ ಜನಪ್ರಿಯವಾದುದು. ಇದು ಫೋನ್‌ನಲ್ಲಿ ರನ್ ಮೋಡ್‌ನಲ್ಲಿದ್ದರೆ ಸಾಕು, ನೀವು ದಿನದಲ್ಲಿ ಎಷ್ಟು ಹೆಜ್ಜೆ ನಡೆದಿರು ಎಂಬುದನ್ನಿದು ಲೆಕ್ಕ ಹಾಕುತ್ತಿರುತ್ತದೆ. ಓಡಿದರೆ ಬಹಳ ಬೇಗ ಹೆಚ್ಚು ಸ್ವೆಟ್‌ಕಾಯಿನ್ಸ್ ಪಡೆಯಬಹುದು. ಈ ಕರೆನ್ಸಿಯನ್ನುರಿವಾರ್ಡ್ ಅಥವಾ ಕ್ಯಾಶ್ ಆಗಿ ಪಡೆದುಕೊಳ್ಳಬಹುದು. ಗಿಫ್ಟ್ ಕಾರ್ಡ್ ಆಯ್ಕೆ ಕಡಿಮೆ ಇದೆ. ಆದರೆ, 20,000 ಸ್ವೆಟ್‌ಕಾಯಿನ್ಸ್ ಒಟ್ಟು ಮಾಡಿದರೆ ಪೇಪಲ್ ಮೂಲಕ 1 ಸಾವಿರ ಡಾಲರ್ ಹಣವನ್ನು ಪಡೆಯಬಹುದು. ನೆನಪಿರಲಿ, ಇದು ನೀವು ಮನೆಯೊಳಗೆ ನಡೆದ ಹೆಜ್ಜೆಗೆಲ್ಲ ಲೆಕ್ಕ ಕೊಡೋಲ್ಲ. ಏನಿದ್ದರೂ ಹೊರಾಂಗಣದಲ್ಲೇ ನಡೆಯಬೇಕು. ಫೋನ್‌ನ ಜಿಪಿಎಸ್ ಬಳಸಿಕೊಳ್ಳುತ್ತದೆ. ಈ ಅಪ್ಲಿಕೇಶನ್ ಬಳಸಿ ನಿಮ್ಮ ದೈನಂದಿನ ಖರ್ಚಷ್ಟನ್ನಾದರೂ ವರ್ಷದಲ್ಲಿ ಪಡೆಯಬಹುದು.

2. ಲೈಫ್ ಕಾಯಿನ್ : ಇದು ಕೂಡಾ ಸ್ವೆಟ್‌ಕಾಯಿನ್‌ನಂತೆಯೇ ಕೆಲಸ ಮಾಡುತ್ತದೆ. ಇಲ್ಲಿ ಕೂಡಾ ಲೈಫ್‌ಕಾಯಿನ್ ಬದಲಾಗಿ ಕರೆನ್ಸಿ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಇದನ್ನು ಗಿಫ್ಟ್ ಕಾರ್ಡ್, ಕ್ರೀಡಾ ವಸ್ತುಗಳು, ಆ್ಯಪಲ್ ಐಫೋನ್ ಎಕ್ಸ್, ಆ್ಯಪಲ್ ಏರ್‌ಪಾಡ್ಸ್, ಆ್ಯಪಲ್ ವಾಚ್, ಹಾಗೂ ಅಮೇಜಾನ್, ಪೇಪಲ್‌ನಲ್ಲಿ ಬ್ಯಾಲೆನ್ಸ್ ಆಗಿ ಬದಲಾಯಿಸಿಕೊಳ್ಳಬಹುದು. ಇದರ ಅಂಬಾಸಿಡರ್ ಪ್ರೋಗ್ರಾಂನ ಸದಸ್ಯರಾದರೆ ಮತ್ತಷ್ಟು ಹಣವನ್ನು ಗಳಿಸಬಹುದು. 

3. ಅಚೀವ್‌ಮೆಂಟ್ :ವಾಕಿಂಗ್, ಸ್ವಿಮ್ಮಿಂಗ್,. ಬೈಕಿಂಗ್ ಅಥವಾ ಸುಮ್ಮನೆ ಆಟವಾಡುವುದಕ್ಕೆ ಈ ಆ್ಯಪ್ ನಿಮಗೆ ಹಣ ನೀಡುತ್ತದೆ. ರಿಜಿಸ್ಟರ್ ಮಾಡಿದ್ದಕ್ಕೆ 6 ಪಾಯಿಂಟ್ಸ್, ಅಲ್ಲದೆ, ಪ್ರತಿದಿನ ನಿಮ್ಮ ಫುಡ್ ಇಂಟೇಕ್, ನಿದ್ರಾ ಸೈಕಲ್, ತೂಕಇಳಿಕೆ, ಸಾಧನೆಗಳನ್ನು ಸೋಷ್ಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುವುದಕ್ಕೂ ಪಾಯಿಂಟ್ಸ್ ನೀಡುತ್ತದೆ. ಪ್ರತಿದಿನ ನಿಮ್ಮ ಚಟುವಟಿಕೆಗಳನ್ನು ಈ ಆ್ಯಪ್‌ನಲ್ಲಿ ಹಾಕುವುದಕ್ಕೆ ಗರಿಷ್ಠ 80 ಪಾಯಿಂಟ್ಸ್ ಹಾಗೂ ನಡಿಗೆಗೆ ಮತ್ತಷ್ಟು ಪಾಯಿಂಟ್ಸ್ ಸಿಗುತ್ತದೆ. 10000 ಪಾಯಿಂಟ್ಸ್‌ಗೆ 10 ಡಾಲರ್ ನೀಡಲಾಗುತ್ತದೆ. 

4. ಸ್ಟೆಪ್‌ಬೆಟ್ : ಇದೂ ಕೂಡಾ ವಾಕಿಂಗ್‌ಗೆ ಹಣ ನೀಡುವ ಪಾಪುಲರ್ ಆ್ಯಪ್. ನಿಮ್ಮ ವರ್ಕೌಟ್ ರೂಟಿನ್‌ನಿಂದ ಹಣ ಗಳಿಸಬೇಕೆಂದರೆ ಇದು ನಿಮಗೆ ಪರ್ಫೆಕ್ಟ್ ಆ್ಯಪ್. ಇದರಲ್ಲಿ ನೀವು ಗುರಿ ಸಾಧಿಸಿ ಹಣ ಪಡೆಯಲೂ ಅವಕಾಶವಿದೆ, ಗುರಿ ಸಾಧಿಸದೆ ಹೋದರೆ ಹಣ ಕಳೆದುಕೊಳ್ಳಲೂಬೇಕಾಗುತ್ತದೆ. ಪ್ರೊಫೈಲ್ ಸೆಟ್ ಮಾಡಿದ ಕೂಡಲೇ ಆ್ಯಪ್ ನಿಮ್ಮ ಫಿಟ್ನೆಸ್ ಲೆವೆಲ್ ಅಳೆಯುತ್ತದೆ. ಪ್ರತಿ ವಾರ ಹಣ ಗೆಲ್ಲಲು ಒಂದಿಷ್ಟು ಗುರಿಗಳನ್ನು ನೀಡುತ್ತದೆ. ಸುಮಾರು 40 ಡಾಲರ್ ಹಣ ನೀವಿಲ್ಲಿ ಬೆಟ್ ಕಟ್ಟಬೇಕು. ಗುರಿ ಸಾಧಿಸದೆ ಹೋದರೆ ಇಷ್ಟನ್ನು ಕಳೆದುಕೊಳ್ಳಬೇಕಾಗುತ್ತದಲ್ಲ ಎಂಬ ಭಯಕ್ಕೇ ವರ್ಕೌಟ್ ಮಾಡೇಮಾಡುತ್ತೀರಿ.

5.ಹೈಜಿ : ಹೈಜಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡ ಬಳಿಕ ಹತ್ತಿರದ ಮೆಡಿಕಲ್ ಸ್ಟೋರ್ ಅಥವಾ ದೊಡ್ಡ ಆಹಾರ ಮಳಿಗೆಯಲ್ಲಿ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು. ಆ ಮೂಲಕ ನಿಮ್ಮ ತೂಕ, ಬಿಪಿ, ಪಲ್ಸ್, ಹೆಜ್ಜೆಗಳು, ಬಿಎಂಐ, ಜಿಮ್ ಚೆಕ್ ಇನ್, ಬಾಡಿ ಫ್ಯಾಟ್ ಎಲ್ಲವನ್ನೂ ಹೈಜಿಗೆ ಅಪ್ಡೇಟ್ ಮಾಡಿ ಟ್ರ್ಯಾಕ್ ಮಾಡಬಹುದು. ಇಲ್ಲಿ ಕೂಡಾ ನಡೆಯಲು, ಟಾಸ್ಕ್ ಕಂಪ್ಲೀಟ್ ಮಾಡಲುಪಾಯಿಂಟ್ಸ್ ಸಿಗುತ್ತವೆ. ಅವನ್ನು ಹಣವಾಗಿ ರಿಡೀಮ್ ಮಾಡಿಕೊಳ್ಳಬಹುದು. 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಬೆಂಗಳೂರಿನಲ್ಲಿ ದುಬಾರಿ ಬಡ್ಡಿಯನ್ನು ಪಡೆಯುತ್ತಿದ್ದ ಫೈನಾನ್ಸ್ ಗಳ ಮೇಲೆ ದಾಳಿ, 6 ಜನರ ಬಂಧನ

    ಬೆಂಗಳೂರು: ಹಣವನ್ನು ಸಾಲ ನೀಡಿ ದುಬಾರಿ ಬಡ್ಡಿ ನೀಡಬೇಂಕು ಎಂದು ಒತ್ತಾಯಿಸುತ್ತಿದ್ದ ನಗರದ ಏಳು ಪೈನಾನ್ಸ್ ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಒಟ್ಟು ಆರು ಜನರನ್ನು ಬಂಧಿಸಿದ್ದಾರೆ. ಲಲಿತ್ ಕಾನೂಗ (52), ಆಶೀಸ್ (28) ಹಾಗೂ ಸಂಜಯ್ ಸಚ್ ದೇವ್ (35) ಚಂದ್ರು (55), ಓಂ ಪ್ರಕಾಶ್ (56) ಹಾಗೂ ಮಾತಾ ಪ್ರಸಾದ್ (34) ಬಂಧಿತ ಆರೋಪಿಗಳು. ಲೇವಾದೇವಿಗಾರರು ಹಾಗೂ ಅವರ ಏಜೆಂಟ್ ಗಳು ಹಣವನ್ನು ಸಾಲ ನೀಡಿ, ಬಳಿಕ ಶೇ.20ರಿಂದ 25ರಷ್ಟು ದುಬಾರಿ…

  • ಜ್ಯೋತಿಷ್ಯ

    ರೈತರ ಗಮನಕ್ಕೆ: ‘ಕಿಸಾನ್ ಸಮ್ಮಾನ್’ ಗೆ ಅರ್ಜಿ ಸಲ್ಲಿಸಲು ಇನ್ನೆರಡೇ ದಿನ ಬಾಕಿ

    ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಕಿಸಾನ್ ಸಮ್ಮಾನ್’ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 30 ಅಂತಿಮ ದಿನವಾಗಿದೆ. ಇದುವರೆಗೂ ಅರ್ಜಿ ಸಲ್ಲಿಸದ ರೈತರು ಈ ಕೂಡಲೇ ಅರ್ಜಿ ಸಲ್ಲಿಸಬೇಕಿದೆ. ಈ ಯೋಜನೆಯನ್ವಯ ರೈತರಿಗೆ ಒಟ್ಟು ಮೂರು ಕಂತುಗಳಲ್ಲಿ 6000 ರೂ. ಸಹಾಯ ಧನ ನೀಡಲಾಗುತ್ತಿದ್ದು, ಫಲಾನುಭವಿಗಳು ನಾಡಕಚೇರಿ, ಅಟಲ್ ಜನ ಸ್ನೇಹಿ ಕೇಂದ್ರ ಸೇರಿದಂತೆ ವಿವಿಧೆಡೆ ಲಭ್ಯವಿರುವ ಅರ್ಜಿಗಳನ್ನು ಭರ್ತಿ ಮಾಡಿ ನೀಡಬೇಕಾಗುತ್ತದೆ. ರೈತರ ಖಾತೆಗೆ ನೇರವಾಗಿ ಹಣ ಬರಲಿದ್ದು,…

  • ಉಪಯುಕ್ತ ಮಾಹಿತಿ

    ಜೇನು ತುಪ್ಪದಲ್ಲಿದೆ ಔಷದಕಾರಿ ಗುಣಗಳು..!ತಿಳಿಯಲು ಈ ಲೇಖನ ಓದಿ ..

    ನಿಸರ್ಗ ನಮಗೆ ನೀಡಿದ ಒಂದು ವರ ಈ ಜೇನು ತುಪ್ಪ ಎಂದರೆ ತಪ್ಪಾಗಲಾರದು. ಜಗತ್ತಿನಲ್ಲಿ ಮಧು ಅರ್ಥಾತ್ ಜೇನುತುಪ್ಪ ಪರಮ ಪವಿತ್ರವಾದ ಸರ್ವೋಪಯೋಗಿಯಾದ ಮತ್ತು ಮಹತ್ವಪೂರ್ಣವಾದ ದಿವ್ಯ ಪದಾರ್ಥವಾಗಿದೆ.

  • ಜ್ಯೋತಿಷ್ಯ

    ವಿಘ್ನ ವಿನಾಯಕನನನ್ನು ಸ್ಮರಿಸಿ ಈ ದಿನದ ನಿಮ್ಮ ರಾಶಿಯ ಶುಭ ಫಲಗಳನ್ನು ತಿಳಿಯಿರಿ.

    ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ (ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು )9901077772 call/ what ಮೇಷ ನೀವು ಇಂದು ನಿಮಗಾಗಿ ಸಾಕಷ್ಟು ಸಮಯ ಹೊಂದಿರುವುದರಿಂದ ನಿಮ್ಮ ಒಳ್ಳೆಯ ಆರೋಗ್ಯದ ಸಲುವಾಗಿ ಒಂದು ಧೀರ್ಘ ನಡಿಗೆಗೆ ಹೋಗಿ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಇಂದು ನೀವು ಇತರರ ಅಗತ್ಯಗಳಿಗೆ ಗಮನ ನೀಡಬೇಕಾದರೂ ಮಕ್ಕಳೊಂದಿಗೆ ಅತೀ ಉದಾರತೆ ತೋರಿಸುವುದು…

  • ಸೌಂದರ್ಯ

    ಸೌತೆಕಾಯಿಯಲ್ಲಿದೆ ತೇವಾಂಶಭರಿತವಾದ ತ್ವಚೆಯ ಗುಟ್ಟು.! ತಿಳಿಯಲು ಈ ಲೇಖನ ಓದಿ..

    ಸೌತೆ ಕಾಯಿ ತೇವಾಂಶಭರಿತವಾದದ್ದು ಇದು ಎಲ್ಲಾರಿಗೂ ತಿಳಿದಿರುವ ವಿಷಯ. ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಹೆವಿಸುವುದು ಒಳ್ಳೆಯದು ಏಕೆಂದರೆ ಇದು ದೇಹದ ಉಷ್ಣಾಂಶವನ್ನ ಕಡಿಮೆ ಮಾಡುತ್ತದೆ. ಇದನ್ನ ಚಳಿಗಾಲದಲ್ಲಿ ತಿಂದರೆ ಶೀತವಾಗುತ್ತದೆ ಎಂದು ಎಲ್ಲರು ನಂಬುತ್ತಾರೆ, ಆದರೆ ಇದು ಚಳಿಗಾಲದಲ್ಲಿ ನಮ್ಮ ತ್ವಚೆಯಣ್ಣ ಕಾಪಾಡಿಕೊಳ್ಳಲು ಸಹಾಯಕವಾಗುತ್ತದೆ.

  • ಜ್ಯೋತಿಷ್ಯ

    ಶ್ರೀ ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸಿ ಈ ದಿನದ ನಿಮ್ಮ ರಾಶಿ ಭವಿಷ್ಯವನ್ನು ನೋಡಿ.

    ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು) 9901077772 call/ what ಮೇಷ ರಾಶಿಒಳ್ಳೆಯ…