karnataka

ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

47

ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.

ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ.

ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು ಉತ್ಪನ್ನವಾಗಿ ಕೇಂದ್ರ ಸರಕಾರವು ಗುರುತಿಸಿ ಗೌರವಿಸಿದೆ. ಈ ಹಿನ್ನೆಲೆಯಲ್ಲಿ ಅಂಚೆ ಇಲಾಖೆಯು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡುವ ಕಾರ್ಯಕ್ರಮವನ್ನು ಆಯೋಜಿಸಿತ್ತು.

ಸ್ವತಃ ಟೊಮೇಟೋ ಬೆಳೆಗಾರರು ಮತ್ತು ಮಾರಾಟಗಾರರು ಆಗಿರುವ ರೋಟರಿ ಸೆಂಟ್ರಲ್ ಅಧ್ಯಕ್ಷ ಹಾಗೂ ಜೆಡಿಎಸ್ ಕೋಲಾರ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ವಿಶೇಷ ಅಂಚೆ ಲಕೋಟೆಯನ್ನು ಪ್ರಾಯೋಜಿಸಿದ್ದರು.

ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಸುಮಾರು ಎರಡು ಸಾವಿರ ವಿಶೇಷ ಅಂಚೆ ಲಕೋಟೆ ಮುದ್ರಿಸಲಾಗಿದೆ. ಮೈಸೂರು, ಬೆಂಗಳೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಪ್ರಧಾನ ಅಂಚೆ ಕಚೇರಿಯಲ್ಲಿ ಮಾರಾಟಕ್ಕೆ ಲಭ್ಯ ಇವೆ ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ ಮಾತನಾಡಿ ಸರಕಾರವು ಒಂದು ಜಿಲ್ಲೆ ಒಂದು ಬೆಳೆ ಮಾದರಿಯಲ್ಲಿ ರೈತರು ಟೊಮೇಟೋಗೆ ಉತ್ತೇಜನ ನೀಡಲು ಹೊರಟಿದ್ದಾರೆ ಮಾರುಕಟ್ಟೆಗೆ ಪೂರಕವಾದ ಬೆಲೆ ಇಲ್ಲದಿಂದರೂ ರೈತರು ಮಾತ್ರ ಟೊಮೇಟೋ ಬೆಳೆಯುವುದು ಮಾತ್ರ ಕಡಿಮೆಯಾಗಿಲ್ಲ ಸರಕಾರವು ಪೋತ್ಸಾಹಧನ ನೀಡುವ ಮೂಲಕ ರೈತರ ಆರ್ಥಿಕವಾಗಿ ಬೆಂಬಲ ನೀಡುವ ಕೆಲಸವು ನಡೆಯುತ್ತಾ ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.ಅಂಚೆ ಅಧೀಕ್ಷಕ ಆರ್. ಸುಭಾನಿ, ಪೋಸ್ಟ್ ಮಾಸ್ಟರ್ ಭಾಗ್ಯಲಕ್ಷ್ಮಿ, ಒಂದು ಬೆಳೆ ಒಂದು ಉತ್ಪನ್ನ ಜಿಲ್ಲಾ ಸಮನ್ವಯಾದಕಾರಿ ಸೋಮಶೇಖರ್, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್, ರೋಟರಿ ಸುಧಾಕರ್, ಅಂಚೆ ಇಲಾಖೆಯ ಬಿ.ವಿ.ಸತೀಶ್ ಕುಮಾರ್ ಶಶಿಕುಮಾರ್ ಅಂಚೆ ಲಕೋಟೆ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದರು.

About the author / 

KOLAR NEWS CHANDRU

KOLAR NEWS CHANDRU editor : kolar news paper/ www.nammakolar.com presschandrukolar@gmail.com mobile-9448715409 kolar.karnataka.563101

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜ್ಯೋತಿಷ್ಯ

    ದಿನ ಭವಿಷ್ಯ ಭಾನುವಾರ, ಈ ರಾಶಿಗಳಿಗೆ ವಿಪರೀತ ಧನಲಾಭವಿದ್ದು,ಇದರಲ್ಲಿ ನಿಮ್ಮ ರಾಶಿಯೂ ಇದೆಯಾ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 20 ಜನವರಿ, 2019 ನಿಮ್ಮ ಹಾಸ್ಯಪ್ರಜ್ಞೆ ಜಾಗೃತವಾಗಿರಲಿ ಮತ್ತು ನಿಮ್ಮ ಸ್ವರಕ್ಷಣೆ ಕಡಿಮೆಯಿರಲಿ. ಹೀಗಿದ್ದಲ್ಲಿ ಟೀಕೆಯನ್ನು…

  • ತಂತ್ರಜ್ಞಾನ

    ಶೌಚಾಲಯಗಳ ಸ್ವಚ್ಛತೆಗೆ ರೈಲ್ವೆ ಇಲಾಖೆ 42 ಕೋಟಿ ಮೌಲ್ಯದ ಹಸುವಿನ ಬೆರಣಿ ಖರೀದಿಸ್ತಿ ಏಕೆ..?ತಿಳಿಯಲು ಇದನ್ನು ಓದಿ..

    ಭಾರತೀಯ ರೈಲ್ವೆ ಇಲಾಖೆ ಶೌಚಾಲಯಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿದೆ. ಸಿಎಜಿ ನೀಡಿರುವ ವರದಿ ಪ್ರಕಾರ 25,000 ಬಯೋ ಟಾಯ್ಲೆಟ್ ಗಳು ಅಧೋಗತಿಗೆ ತಲುಪಿವೆ. ಅದನ್ನು ದುರಸ್ತಿ ಮಾಡುವುದು ರೈಲ್ವೆ ಇಲಾಖೆ ಮುಂದಿರೋ ಬಹು ದೊಡ್ಡ ಸವಾಲು.

  • ಸುದ್ದಿ

    ಅಧ್ಯಯನ ಮುಂದುವರೆಸಿದ ಇಸ್ರೋ HOPE FOR THE BEST ಎಂದ ಮೋದಿ,..!

    ದೇಶದ ಮಹತ್ವದ ಚಂದ್ರಯಾನ-2 ದ ವಿಕ್ರಂ ಲ್ಯಾಂಡರ್​  ಸಂಪರ್ಕ ಕಡಿತಗೊಂಡಿದ್ದರೂ ನೀರಿಕ್ಷೆಗಳು ಮುಗಿದಿಲ್ಲ. ಹೌದು ಇಸ್ರೋ ಚಂದ್ರಾನ್ವೇಷಣೆ ಯತ್ನದಲ್ಲಿ ಇನ್ನೂ ಕೊನೆಯ ನಿರೀಕ್ಷೆಗಳು ಇದ್ದೇ ಇವೆ. ಕೊನೆ ಹಂತದಲ್ಲಿ ಸಂಪರ್ಕ ಕಡಿದುಕೊಂಡ ವಿಕ್ರಮ್​​ ಲ್ಯಾಂಡರ್​​​ ಬಗ್ಗೆ ಇಸ್ರೋ ಅಧ್ಯಯನ ಮುಂದುವರೆಸಿದ್ದು, ಯಾವುದೇ ಕ್ಷಣದಲ್ಲಾದರೂ ವಿಕ್ರಮ್​ ಲ್ಯಾಂಡರ್​ ಮಾಹಿತಿ ರವಾನಿಸಬಹುದೆಂಬ ನೀರಿಕ್ಷೆಯಲ್ಲಿದೆ ಇಸ್ರೋ. ಚಂದ್ರನ ದಕ್ಷಿಣ ಧ್ರುವಕ್ಕೆ ಸ್ಪರ್ಶ ಮಾಡುವ ಹಂತದಲ್ಲಿ ವಿಕ್ರಂ ಲ್ಯಾಂಡರ್​​​​​​​ ಸಂಪರ್ಕ ಕಡಿತಕೊಂಡಿತ್ತು. 2.1 ಕಿಲೋ ಮೀಟರ್​ ದೂರದಲ್ಲಿ ಇಸ್ರೋ ಹಿಡಿತಕ್ಕೆ ಸಿಗದೇ ಮುಂಜಾನೆ 1.55ರ…

  • ಸ್ಪೂರ್ತಿ

    ತಿಂಗಳಿಗೆ 35 ಸಾವಿರ ದುಡಿಯುತ್ತಿರುವ 3 ನೇ ತರಗತಿ ಓದಿರುವ ಹುಡುಗ, ಹೇಗೆ ಗೊತ್ತಾ.

    ನಮ್ಮ ಸಮಾಜದಲ್ಲಿ ಹೈಷಾರಾಮಿ ಜೀವನ ನಡೆಸುವ ಜನರಿಗಿಂತ ಒಪ್ಪತ್ತಿನ ಊಟಕ್ಕಾಗಿ ದಿನಗೂಲಿ ಮಾಡುವ ಮಂದಿ ಜಾಸ್ತಿ. ಅಲ್ಲದೇ ಪೋಷಕರ ಜೊತೆ ತಮ್ಮ ಮಕ್ಕಳು ಕೂಡ ಕೆಲಸ ಮಾಡಿ ಜೀವನ ಸಾಗಿಸುತ್ತಿರುತ್ತಾರೆ. ಹೀಗೆ ಆಂಧ್ರಪ್ರದೇಶದ ರೈಲಿನಲ್ಲಿ ಒಬ್ಬ ಹುಡುಗ ಬಹಳ ಆಯಾಸದಿಂದ ಕುಳಿತ್ತಿದ್ದ. ಇದನ್ನು ಕಂಡ ಸಾಫ್ಟವೇರ್ ಉದ್ಯಮಿ ಏನ್ ತಮ್ಮ ಬಹಳ ಆಯಾಸದಿಂದ ಕುಳಿತ್ತಿದ್ದೀಯಾ? ಸಮೋಸ ಎಲ್ಲಾ ಮಾರಿಬಿಟ್ಟೆಯಾ? ಎಂದು ಕೇಳಿದ. ಇದಕ್ಕೆ ಉತ್ತರಿಸಿದ ಸಮೋಸ ಮಾರುವ ಹುಡುಗ, ಹೌದು ಸಾರ್ ಎಲ್ಲಾ ಮಾರಿಬಿಟ್ಟೆ, ಇನ್ನೇನ್ ಮಾಡುವುದು…

  • Cinema

    ಪ್ರಥಮ್ ಈಗ ಬಿಲ್ಡಪ್ ರಾಜ!ಈ ನನ್ಮಗಂದ್ ಇದೇ ಆಯ್ತು ಗುರೂ!ಶಾಕ್ ಆಗ್ಬೇಡಿ…ಈ ಲೇಖನಿ ಓದಿ…

    ನಮ್ಮ ಹಳ್ಳಿ ಹೈದ,ಬಿಗ್‌ಬಾಸ್ ಶೋ ವಿನ್ನರ್ ಪ್ರಥಮ್ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಾಗ್ತಾನೆ ಇರ್ತಾರೆ.  ಇತ್ತೀಚೆಗಷ್ಟೇ ತಮ್ಮ ಬಿಗ್‌ಬಾಸ್ ಸ್ನೇಹಿತ ಹಾಗೂ ಖಾಸಗಿ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಸಿರಿಯಲ್’ನಲ್ಲಿ ನಟಿಸುತ್ತಿರುವ ಭುವನ್’ರವರನ್ನು ಕಚ್ಚಿ ಸುದ್ದಿಯಾಗಿದ್ದರು.

  • ಸುದ್ದಿ

    ಏರ್ಟೆಲ್ ಬಂಪರ್ ಆಫರ್! ಪ್ರಿಪೇಡ್ ಪ್ಲಾನ್ ಜೊತೆಗೆ 4 ಲಕ್ಷ ವಿಮೆ ಸೌಲಭ್ಯ ಪಡೆಯಬಹುದು…!

    ದೇಶದ ಟೆಲಿಕಾಂ ರಂಗದಲ್ಲಿ ಭಾರೀ ಪೈಪೋಟಿ ಬೆಳೆದಿರುವ ಹಿನ್ನೆಲೆಯಲ್ಲಿ ಎಲ್ಲಾ ಪ್ರಮುಖ ಟೆಲಿಕಾಂ ಕಂಪನಿಗಳನ್ನು ಗ್ರಾಹಕರನ್ನು ಆಕರ್ಷಿಸಲು ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಿವೆ. ಈ ನಿಟ್ಟಿನಲ್ಲಿ ಏರ್ಟೆಲ್ ಕೂಡ ಹಿಂದೆ ಬಿದ್ದಿಲ್ಲ. ಆರ್ಥಿಕವಾಗಿ ಸುರಕ್ಷಿತವಾದ ಭಾರತವನ್ನು ನಿರ್ಮಿಸಲು ಮೊಬೈಲ್ ಸೇವೆಗಳ ಕಾರ್ಯತಂತ್ರದ ಭಾಗವಾಗಿ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ವಿಮಾ ರಕ್ಷಣೆಯ ರಕ್ಷಣೆಯೊಂದಿಗೆ ಪ್ರಿಪೇಡ್ ಯೋಜನೆಯನ್ನು ನೀಡಲು ಭಾರ್ತಿ ಆಕ್ಸಾ ಲೈಫ್ ಇನ್ಶುರೆನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಏರ್ಟೆಲ್ ರೂ. 599 ಯೋಜನೆ ಭಾರ್ತಿ ಏರ್ಟೆಲ್ ಭಾರ್ತಿ ಆಕ್ಸಾ…