ಸುದ್ದಿ

ದೇವಾಲಯಕ್ಕೆ ಹೋಗ್ತಿದ್ದ ವಿವಾಹಿತೆ ಮಹಿಳೆಯ ಮೇಲೆ ಅತ್ಯಾಚಾರವೆಸೆಗಿದ ಕಾಮುಕರು -ವಿಡಿಯೋ ಮಾಡಿ ಅಪ್ಲೋಡ್…!

199

ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಘಟನೆ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.30 ವರ್ಷದ ಸಂತ್ರಸ್ತೆ ಮೇಲೆ ಕಾಮುಕರು ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ ನಂತರ ಸೋಮವಾರ ಐವರಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆ ತನ್ನ ಸ್ನೇಹಿತೆಯೊಂದಿಗೆ ದೇವಾಲಯಕ್ಕೆ ಹೋಗುತ್ತಿದ್ದರು. ಆಗ ಐವರು ಆರೋಪಿಗಳು ಬಂದು ಬಲವಂತವಾಗಿ ಮಹಿಳೆಯನ್ನು ಎಳೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳು ಅತ್ಯಾಚಾರದ ವಿಡಿಯೋವನ್ನು ಕೂಡ ರೆಕಾರ್ಡ್ ಮಾಡಿದ್ದಾರೆ. ಬಳಿಕ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.

ಭಾನುವಾರ ಸಂಜೆ ಐದು ಆರೋಪಿಗಳ ವಿರುದ್ಧ ಸಂತ್ರಸ್ತೆ ಬಂದು ದೂರು ದಾಖಲಿಸಿದ್ದಾರೆ. ಅವರ ವಿರುದ್ಧ ಗ್ಯಾಂಗ್‍ರೇಪ್, ದೌರ್ಜನ್ಯ ಮತ್ತು ಐಪಿಸಿ ಸೆಕ್ಷನ್ ವಿಭಾಗಗಳ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಕಿಶೋರ್ ಸಿಂಗ್ ಭಾಟಿ ಹೇಳಿದರು.

ನಾಲ್ಕು ಆರೋಪಿಗಳಾದ ಜಿತೇಂದ್ರ ಭಟ್ (20), ಗೋವಿಂದ್ ಭಟ್ (20), ದಿನೇಶ್ ಭಟ್ (24) ಮತ್ತು ಮಹೇಂದ್ರ ಭಟ್ (22) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಸಂಜಯ್ ಭಟ್ ನಾಪತ್ತೆಯಾಗಿದ್ದು, ಆತನಿಗೆ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.ಸದ್ಯಕ್ಕೆ ಆರೋಪಿಗಳನ್ನು ವಿಚಾರಣೆಯ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸಂತ್ರಸ್ತೆಯ ಪತಿ ಕಾರ್ಮಿಕನಾಗಿ ಕೆಲಸ ಮಾಡುತ್ತಾನೆ ಎಂದು ಭಾಟಿ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ದೇವರು-ಧರ್ಮ

    ಶಿವರಾತ್ರಿಯಂದು ಶಿವ ಲಿಂಗವನ್ನು ಹೇಗೆ ಪೂಜಿಸಬೇಕು..?ಹೇಗೆ ಪೂಜಿಸಬಾರದು..?ತಿಳಿಯಲು ಈ ಲೇಖನ ಓದಿ…

    ನೀವು ಯಾವುದೇ ದೇವರ ಪೂಜೆಯನ್ನುಮಾಡಿ, ಆದ್ರೆ ಪೂಜೆಯನ್ನುಮಾಡಿ ಮಾಡುವಾಗ ಪ್ರಮುಖವಾಗಿ ನೆನಪಿಟ್ಟುಕೊಳ್ಳಲೇಬೇಕಾದ ಅಂಶಗಳು ನಂಬಿಕೆ ಹಾಗೂ ಶ್ರದ್ಧೆ.ಇವೆರಡು ಅಂಶಗಳು ಮನಸ್ಸಿನಲ್ಲಿಲ್ಲದಿದ್ದರೆ ಮಾಡುವ ಪೂಜಾವಿಧಾನಗಳು ವ್ಯರ್ಥವೆನಿಸುತ್ತವೆ…

  • India, nation, ಆಧ್ಯಾತ್ಮ

    ಅದ್ಭುತ ವಾಸ್ತುಶಿಲ್ಪದ ಅಕ್ಷರ್ಧಮ್ ಮಂದಿರ

    ಸ್ವಾಮಿನಾರಾಯಣ್ ಅಕ್ಷರ್ಧಮ್ ನವದೆಹಲಿ ಹಿಂದೂ ದೇವಾಲಯ, ಮತ್ತು ಭಾರತದ ನವದೆಹಲಿಯಲ್ಲಿರುವ ಆಧ್ಯಾತ್ಮಿಕ-ಸಾಂಸ್ಕೃತಿಕ ಆವರಣ. ಅಕ್ಷರ್ಧಮ್ ದೇವಸ್ಥಾನ ಅಥವಾ ದೆಹಲಿ ಅಕ್ಷರ್ಧಮ್ ಎಂದೂ ಕರೆಯಲ್ಪಡುವ ಈ ಸಂಕೀರ್ಣವು ಸಾಂಪ್ರದಾಯಿಕ ಮತ್ತು ಆಧುನಿಕ ಹಿಂದೂ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ವಾಸ್ತುಶಿಲ್ಪದ ಸಹಸ್ರಮಾನಗಳನ್ನು ಪ್ರದರ್ಶಿಸುತ್ತದೆ. ಯೋಗಿಜಿ ಮಹಾರಾಜ್ ಅವರಿಂದ ಸ್ಫೂರ್ತಿ ಪಡೆದ ಮತ್ತು ಪ್ರಮುಖ್ ಸ್ವಾಮಿ ಮಹಾರಾಜ್ ರಚಿಸಿದ ಇದನ್ನು ಬಿಎಪಿಎಸ್ ನಿರ್ಮಿಸಿದೆ. ಈ ದೇವಾಲಯವನ್ನು  ನವೆಂಬರ್ 6, 2005 ರಂದು ಪ್ರಮುಖ್ ಸ್ವಾಮಿ ಮಹಾರಾಜ್ ಅವರು ಡಾ. ಎ. ಪಿ….

  • ಉಪಯುಕ್ತ ಮಾಹಿತಿ

    ಬಟ್ಟೆ ಶಾಪಿಂಗ್ ಮಾಡೋವಾಗ ಈ ಮಿಸ್ಟೇಕ್ಸ್ ಖಂಡಿತ ಮಾಡ್ಬೇಡಿ..!ತಿಳಿಯಲು ಈ ಲೇಖನ ಓದಿ ..

    ಶಾಪಿಂಗ್‍ಗೆ ಅಂತ ಹೋದ್ರೆ ಹೆಣ್ಣುಮಕ್ಕಳು ಯಾವತ್ತೂ ಬೇಗನೆ ಅಂಗಡಿಯಿಂದ ಹೊರಬರಲ್ಲ ಅನ್ನೋದು ಸಾಮಾನ್ಯವಾಗಿ ಕೇಳಿಬರೋ ಮಾತು. ಆದ್ರೆ ಶಾಪಿಂಗ್ ಮಾಡೋದೂ ಒಂದು ಕಲೆ ಅನ್ನೋದು ನೆನಪಿರಲಿ. ಕಣ್ಣಿಗೆ ಚೆನ್ನಾಗಿ ಕಂಡಿದ್ದೆಲ್ಲಾ ಆರಿಸಿಕೊಂಡು ಬಿಲ್ ಮಾಡಿಸೋದು, ಅರ್ಜೆಂಟ್‍ನಲ್ಲಿ ಯಾವುದೋ ಒಂದು ಸೆಲೆಕ್ಟ್ ಮಾಡಿ ಖರೀದಿಸಿಬಿಡೋದು, ಇಂತಹ ತಪ್ಪುಗಳನ್ನ ಮಾಡಿದ್ರೆ ಕೊನೆಗೆ ಕೊಟ್ಟ ಹಣಕ್ಕೆ ತಕ್ಕ ಬಟ್ಟೆ ಖರೀದಿಸಲಿಲ್ಲವಲ್ಲ ಅಂತ ಪರಿತಪಿಸಬೇಕಾಗುತ್ತದೆ.

  • ದೇಶ-ವಿದೇಶ

    ಈ ಮಹಿಳೆ ಪ್ರಧಾನಿ ಮೋದಿಯನ್ನೇ ಮದುವೆಯಾಗ್ಬೇಕಂತೆ..!ಎಷ್ಟು ತಿಂಗಳಿಂದ ಧರಣಿ ಕುಳಿತ್ತಿದ್ದಾರೆ ಗೊತ್ತಾ..?

    ಪ್ರಧಾನಿ ನರೇಂದ್ರ ಮೋದಿಅವರನ್ನು ಮದುವೆಯಾಗಬೇಕು ಅಂತ 40 ವರ್ಷದ ಮಹಿಳೆಯೊಬ್ಬರು,ಸೆಪ್ಟೆಂಬರ್ 8ರಿಂದ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ಕುಳಿತಿದ್ದಾರೆ.

  • ರಾಜಕೀಯ

    ಚಾಮುಂಡೇಶ್ವರಿ ಕ್ಷೇತ್ರದ ವಿಧಾಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಸೋಲಲು ಇದೇ ಕಾರಣ ಎಂದ ದೇವೇಗೌಡರು..?

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಾಭವಗೊಂಡಿದ್ದರು. ಇದಕ್ಕೆ ಜೆಡಿಎಸ್ ನಾಯಕರೇ ಕಾರಣವೆಂಬುದನ್ನು ಹಲವು ಸಂದರ್ಭಗಳಲ್ಲಿ ಸಿದ್ದರಾಮಯ್ಯ ಪರೋಕ್ಷವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಚಾಮುಂಡೇಶ್ವರಿಯಲ್ಲಿನ ಸಿದ್ದರಾಮಯ್ಯನವರ ಸೋಲಿನ ಕುರಿತು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮಾತನಾಡಿದ್ದಾರೆ. ಹಾಸನದಲ್ಲಿ ಮಾತನಾಡಿರುವ ಅವರು, ಸಿದ್ದರಾಮಯ್ಯನವರ ಸೋಲಿಗೆ ಜಿ.ಟಿ. ದೇವೇಗೌಡ ಕಾರಣರಲ್ಲ. ಅಲ್ಲದೇ ತಾವೂ ಅಲ್ಲಿಗೆ ಪ್ರಚಾರಕ್ಕೆ ತೆರಳಿರಲಿಲ್ಲ ಎಂದಿದ್ದಾರೆ. ಜನತೆಯ ವಿರೋಧದ ಕಾರಣಕ್ಕೆ ಸಿದ್ದರಾಮಯ್ಯ ಸೋಲಬೇಕಾಯಿತು ಎಂದು ದೇವೇಗೌಡ ವಿಶ್ಲೇಷಿಸಿದ್ದಾರೆ….

  • ಸಿನಿಮಾ

    ಬಿಚ್ಚಮ್ಮ ಸನ್ನಿ ಲಿಯೋನ್ ಮೇಲೆ ಎಫ್‍ಐಆರ್!ಅಸಲಿ ಕಾರಣ ಏನು ಗೊತ್ತಾ?

    ಇತ್ತೀಚೆಗಷ್ಟೇ ಜೂನಿಯರ್ ಇಂಜಿನಿಯರ್ ಲಿಸ್ಟ್ ನಲ್ಲಿ ಟಾಪರ್ ಆಗಿ ಆಯ್ಕೆ ಆಗಿದ್ದ ಸನ್ನಿ ಲಿಯೋನ್ ವಿರುದ್ಧ ಈಗ ಎಫ್‍ಐಆರ್ ದಾಖಲಾಗಿದೆ. ಆದರೆ ಈ ಬಗ್ಗೆ ಸನ್ನಿ ಲಿಯೋನ್ ಅಭಿಮಾನಿಗಳು ಬೇಸರಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಕೇಸ್ ದಾಖಲಾಗಿರುವುದು “ಸನ್ನಿ ಲಿಯೋನ್” ಹೆಸರಿನಲ್ಲಿ ನಕಲಿ ದಾಖಲೆ ಸಲ್ಲಿಸಿ ಆಯ್ಕೆ ಆಗಿರುವ ಅಭ್ಯರ್ಥಿ ಮೇಲೆ. ಬಿಹಾರದ ಪಬ್ಲಿಕ್ ಹೆಲ್ತ್ ಇಂಜಿನಿಯರಿಂಗ್ ಡಿಪಾರ್ಟ್‍ಮೆಂಟ್ (ಪಿಎಚ್‍ಇಡಿ)ನ ಜೂನಿಯರ್ ಇಂಜಿನಿಯರ್ ಮೆರಿಟ್ ಲಿಸ್ಟ್ ನಲ್ಲಿ ಸನ್ನಿ ಲಿಯೋನ್ ಹೆಸರು ಟಾಪರ್ ಸ್ಥಾನದಲ್ಲಿತ್ತು. ಆಕೆ ಶೇ. 98.50…