ಸುದ್ದಿ

ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷದವರಿಂದ ಕುದುರೆ ವ್ಯಾಪಾರ: ಸಿಎಂ ಕಮಲ್‍ನಾಥ್ ಹೇಳಿಕೆ….!

31

ಲೋಕಸಮರದ ಫಲಿತಾಂಶಕ್ಕೂ ಮುನ್ನ ಮಧ್ಯಪ್ರದೇಶದ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿದೆ. ಈಗಾಗಲೇ ಆಡಳಿತರೂಢ ಸರ್ಕಾರಕ್ಕೆ ಬಹುಮತವಿಲ್ಲ ವಿಶೇಷ ಅಧಿವೇಶನ ಕರೆಯಬೇಕೆಂದು ಬಿಜೆಪಿ ರಾಜ್ಯಪಾಲರಿಗೆ ಪತ್ರ ಬರೆದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಸಿಎಂ ಕಮಲ್‍ನಾಥ್ ಬಿಜೆಪಿ ರಾಜ್ಯದಲ್ಲಿ ಕುದುರೆ ವ್ಯಾಪಾರಕ್ಕೆ ಮುಂದಾಗಿದೆ ಎಂದು ಆರೋಪಿಸಿದ್ದಾರೆ.


ಸುಮಾರು 10 ಕಾಂಗ್ರೆಸ್ ಶಾಸಕರನ್ನು ಆಪರೇಷನ್ ಕಮಲದಡಿಯಲ್ಲಿ ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ನಮ್ಮ ಶಾಸಕರಿಗೆ ಆಫರ್ ಸುರಿಮಳೆಯ ಫೋನ್ ಕರೆಗಳು ಬರುತ್ತಿವೆ. ಬೇಕಾದರೆ ಆ 10 ಶಾಸಕರ ಹೆಸರನ್ನು ಬಹಿರಂಗಗೊಳಿಸಬಲ್ಲೆ ಎಂದು ಕಮಲ್ ನಾಥ್ ಹೇಳಿದ್ದಾರೆ.

ಕಾಂಗ್ರೆಸ್ ಶಾಸಕರಿಗೆ ಪಕ್ಷ ತೊರೆಯಲು ಒಬ್ಬರಿಗೆ 50 ಕೋಟಿಯ ಆಫರ್ ನೀಡಲಾಗಿದೆ ಎಂದು ಸಚಿವ ಪ್ರದ್ಯುಮನ್ ಸಿಂಗ್ ತೋಮರ್ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ. ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ, ಬಿಜೆಪಿ ನಾಯಕರು ಯಾವೆಲ್ಲ ಆಫರ್ ನೀಡುತ್ತಿದ್ದಾರೆ ಎಂಬುವುದು ಗೊತ್ತಿಲ್ಲ ಎಂದರು. ಬಿಜೆಪಿ ಮಾತ್ರ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ ಎಂಬ ವಾದವನ್ನು ಮಂಡಿಸುತ್ತಿದೆ.


2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 230 ಕ್ಷೇತ್ರಗಳ ಪೈಕಿ 114ರಲ್ಲಿ ಗೆಲುವಿನ ನಗೆ ಬೀರಿತ್ತು. ಬಿಜೆಪಿ 109, ಬಹುಜನ ಸಮಾಜ ಪಾರ್ಟಿ 2 ಮತ್ತು ಸಮಾಜವಾದಿ ಪಾರ್ಟಿ 1, ನಿರ್ದಲಿಯ ಪಕ್ಷ 4 ಕ್ಷೇತ್ರಗಳಲ್ಲಿ ಗೆಲುವು ಕಂಡಿತ್ತು. ಬಿಎಸ್‍ಪಿ ಬೆಂಬಲ ಪಡೆದ ಕಾಂಗ್ರೆಸ್, ಮಧ್ಯಪ್ರದೇಶದಲ್ಲಿ ಕಮಲನಾಥ್ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಕಬ್ಬು ಬೆಳೆಗಾರರಿಗೊಂದು ‘ಸಿಹಿ ಸುದ್ದಿ’…ಇದನೊಮ್ಮೆ ಓದಿ

    ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ ಮಳೆ, ನೆರೆ ಹಾನಿಯಿಂದಾಗಿ ಹಾಳಾದ ವಾಣಿಜ್ಯ ಬೆಳೆಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ನಿಯೋಗ ತೆರಳಿ ಕೇಂದ್ರಕ್ಕೆ ಮನವಿ ಮಾಡಲು ತೀರ್ಮಾನಿಸಲಾಗಿದೆ. ಹಾನಿಯಾದ, ವಿಮೆ ವ್ಯಾಪ್ತಿಗೆ ಬಾರದ ಕಬ್ಬು, ಕಾಫಿ ತೋಟಗಾರಿಕೆ ಬೆಳೆಗಳಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಒತ್ತಾಯಿಸಿ ಕೇಂದ್ರಕ್ಕೆ ನಿಯೋಗ ಹೋಗಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಪುಟ ಸಭೆಯ ಬಳಿಕ ಸಚಿವ ಜೆಸಿ ಮಾಧುಸ್ವಾಮಿ ತಿಳಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ…

  • ವ್ಯಕ್ತಿ ವಿಶೇಷಣ

    ಚಾರ್ಲಿ ಚಾಪ್ಲಿನ್’ಹಾಸ್ಯ ಲೋಕದ ಈ ಸಾಮ್ರಾಟ ಆರಂಭಿಕ ಸಿನಿಮಾ ಸಂಬಳ ಎಷ್ಟು ಗೊತ್ತಾ..?ತಿಳಿಯಲು ಈ ಲೇಖನ ಓದಿ..

    ಚಾರ್ಲಿ ಚಾಪ್ಲಿನ್ ಹೆಸರು ಕೇಳದವರಿಲ್ಲ. ಹಾಸ್ಯ ಲೋಕದ ಈ ಸಾಮ್ರಾಟ 1913ರಂದು ಡಿಸೆಂಬರ್ 16ರಂದು ವಾರಕ್ಕೆ 150 ಡಾಲರ್‍ಗಳಿಗೆ ಸಿನಿಮಾ ವೃತ್ತಿ ಆರಂಭಿಸಿದರು. ಈ ಜಗದ್ವಿಖ್ಯಾತ ಕಾಮಿಡಿ ಸೂಪರ್‍ಸ್ಟಾರ್ ಬಗ್ಗೆ ಚುಟುಕು ಸುದ್ದಿ. ಇಂಗ್ಲಿಷ್ ಹಾಸ್ಯ ನಟ, ಸಿನಿಮಾ ನಿರ್ಮಾಪಕ ಮತ್ತು ಸಂಯೋಜಕ ಸರ್ ಚಾರ್ಲೆಸ್ ಸ್ಪೆನ್ಸರ್ ಚಾರ್ಲಿ ಚ್ಲಾಪಿನ್ ಜನಿಸಿದ್ದು 16ನೇ ಏಪ್ರಿಲ್ 1889ರಲ್ಲಿ.

  • ಸುದ್ದಿ

    ಮದ್ವೆ ಆಗಲು ಏಳು ಸಮುದ್ರ ದಾಟಿ ಬಂದಳು!ಯಾವ ಲವ್ ಸ್ಟೋರಿಗೂ ಕಡಿಮೆಯಿಲ್ಲ ಇವರ ಪ್ರೀತಿ…

    ಪ್ರೀತಿ ಕುರುಡು. ಅದಕ್ಕೆ ವಯಸ್ಸು, ಜಾತಿ, ಊರಿನ ನಿರ್ಬಂಧವಿಲ್ಲ. ಏಳು ಸಮುದ್ರಗಳನ್ನು ದಾಟಿ ಬರುವ ತಾಕತ್ತು ಪ್ರೀತಿಗಿದೆ ಎನ್ನಲಾಗುತ್ತದೆ. ಈ ಮಾತು ಮಧ್ಯಪ್ರದೇಶದ ಹೋಷಂಗಾಬಾದ್ ಯುವಕನ ಪ್ರೀತಿ ವಿಚಾರದಲ್ಲಿ ನಿಜವಾಗಿದೆ. ದೀಪಕ್ ರಜಪೂತ್ ಎಂಬಾತನನ್ನು ಅಮೆರಿಕಾ ಪ್ರೇಯಸಿ ಮದುವೆಯಾಗಿದ್ದಾಳೆ. 36 ವರ್ಷದ ದೀಪಕ್ ಹಾಗೂ ಅಮೆರಿಕಾದ 40 ವರ್ಷದ ಜೂಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂಲಿ, ಯುಎಸ್ಎಯ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಫೇಸ್ಬುಕ್ ನಲ್ಲಿ ಶುರುವಾದ ಸ್ನೇಹ, ವಾಟ್ಸಾಪ್, ಕರೆ ಮೂಲಕ ಪ್ರೀತಿಗೆ ತಿರುಗಿತ್ತು….

  • ಸೌಂದರ್ಯ

    ಈಕೆಯ ವಯಸ್ಸು ನೀವ್ ಅನ್ಕೊಂಡಿರ ಹಾಗೆ ಇಲ್ಲ!ಶಾಕ್ ಆಗ್ತೀರಾ..ಈ ಲೇಖನಿ ಓದಿ…

    ವಯಸ್ಸಿಗೆ ಸಭಂದಪಟ್ಟ ವಿಷಯ ಬಂದಾಗ ಯಾರನ್ನಾದರೂ ನೋಡಿದ್ರೆ, ಅಂದಾಜು ಅವರ ವಯಸ್ಸನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಆದ್ರೆ ಕೆಲವೊಬ್ಬರನ್ನು ನೋಡಿದಾಗ ಅದು ಕಷ್ಟ ಸಾಧ್ಯವೆನಿಸಬಹುದು. ಅಂತವರೇ ಆದ ಒಬ್ಬರ ಬಗ್ಗೆ ನಾವು ಹೇಳುತ್ತಿದ್ದೇವೆ.

  • ಸುದ್ದಿ

    ಜನವರಿ 8ರಿಂದ ಬ್ಯಾಂಕ್ ಗಳು ಬಂದ್ ಆಗಲಿವೆ. ಏನಾದರೂ ಬ್ಯಾಂಕ್ ವ್ಯವಹಾರಗಳು ಇದ್ದರೆ ಈಗಲೇ ಮುಗಿಸಿಕೊಳ್ಳಿ…

    ಜನವರಿ 8 ಮತ್ತು 9 ಭಾರತ ಬಂದ್ ನಡೆಯಲಿದೆ. ಕೇಂದ್ರ ಸರ್ಕಾರದ ವಿರದ್ಧ ಕಾರ್ಮಿಕ ಸಂಘಟನೆಗಳು ಬಂದ್ ಗೆ ಕರೆ ನೀಡಿವೆ. ಕೇಂದ್ರ ಸರ್ಕಾರವು ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ ಎಂದು ಕಾರ್ಮಿಕ ಸಂಘಟೆಗಳು ಅಪಾದಿಸಿವೆ. ಇದಕ್ಕೆ ಇಂಡಿಯನ್ ಬ್ಯಾಂಕ್​ ಅಸೋಸಿಯೇಷನ್ ಸಹ ಬೆಂಬಲ ನೀಡಿದೆ ಎಂದು ತಿಳಿದುಬಂದಿದೆ.ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘಟನೆ (ಎಐಬಿಇಎ) ಮತ್ತು ಬ್ಯಾಂಕ್ ಎಂಫ್ಲಾಯಿಸ್​ ಫೆಡರೇಷನ್ ಆಫ್ ಇಂಡಿಯಾ ಅಸೋಸಿಯೇಷನ್​​ (ಬಿಇಎಫ್​ಐಎ) ಸಂಘಟನೆಗಳು ಬ್ಯಾಂಕ್ ಆಫ್ ಇಂಡಿಯಾ…