ಸುದ್ದಿ

ಕನ್ನಡದ ಕೋಟ್ಯಧಿಪತಿಯಲ್ಲಿ ಪುನೀತ್ ಬದಲು ಬೇರೆ ನಿರೂಪಕಿ! ಯಾರು?

30

ರಚಿತಾ ರಾಮ್ ‘ಅನುಬಂಧ ಅವಾರ್ಡ್ಸ್2019’ರಲ್ಲಿ ಮೊದಲ ಬಾರಿಗೆ ನಿರೂಪಣೆಮಾಡುತ್ತಿದ್ದಾರೆ. ಚೆನ್ನಾಗಿದೆ ಅಂದ್ರೆ ಚೆನ್ನಾಗಿದೆ ಹೇಳಿ,ತಪ್ಪಿದ್ರೆ ಡಿಂಪಲ್ ನೋಡಿ ಕ್ಷಮಿಸಿಎಂದಿದ್ದರು. ಈಗ ಅವರು ಕೋಟ್ಯಧಿಪತಿಯಲ್ಲಿ ಪುನೀತ್ ಜಾಗವನ್ನು ಆಕ್ರಮಿಸಿಕೊಂಡರಾ? ಅಥವಾ ಅಪ್ಪು ಅವರೇಆ ಹುದ್ದೆ ಬಿಟ್ಟುಕೊಟ್ಟರಾ?ಎಂಬ ಪ್ರಶ್ನೆ ಮೂಡಬಹುದು. ಪುನೀತ್ ರಾಜ್‌ಕುಮಾರ್ ‘ಕನ್ನಡದ ಕೋಟ್ಯಧಿಪತಿ’ಯಲ್ಲಿ ನಿರೂಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಆದರೆ ರಚಿತಾ ರಾಮ್ ಅಪ್ಪು ಜಾಗದಲ್ಲಿ ಕೂತು ಅಪ್ಪುಗೆ ಪ್ರಶ್ನೆ ಕೇಳುತ್ತಾರೆ, ಅದರ ಜೊತೆಗೆ ನಾಲ್ಕು ಆಪ್ಶನ್ ಕೊಡ್ತಾರೆ. ಹಾಟ್‌ಸೀಟ್‌ ಅಲ್ಲಿ ಕುಳಿತುಕೊಳ್ಳುವ ಸ್ಪರ್ಧಿಗಳಿಗೆ ಹೇಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆಯೋ ಅದೇ ರೀತಿ ಪವರ್‌ಸ್ಟಾರ್‌ಗೂ ಕೂಡ ಪ್ರಶ್ನೆ ಕೇಳಲಾಗುತ್ತದೆ.

ರಚಿತಾ ರಾಮ್ ಸ್ಪೆಷಲ್ ಗೆಸ್ಟ್ ಆಗಿ ಕೋಟ್ಯಧಿಪತಿಯ ಈ ಸೀಸನ್‌ಗೆ ಆಗಮಿಸಿದ್ದಾರೆ. ಈ ಎಪಿಸೋಡ್‌ನ ಚಿತ್ರೀಕರಣ ನಡೆದಿದ್ದು, ನವೆಂಬರ್‌ನಲ್ಲಿ ಈ ಎಪಿಸೋಡ್ ಪ್ರಸಾರವಾಗಲಿದೆ. ಕೋಟ್ಯಧಿಪತಿ ಶೋ ಬಗ್ಗೆ, ಅವರ ಫ್ರೆಂಡ್‌ಶಿಪ್, ಸ್ಟಾರ್ಸ್ ,ಫ್ಯಾಮಿಲಿ, ಹವ್ಯಾಸಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದು ಕೇವಲ ಫನ್‌ಗಾಗಿ ಮಾತ್ರ. ಪುನೀತ್ ದುಡ್ಡಿಗಾಗಿ ಅಲ್ಲ, ಪ್ರೀತಿಗಾಗಿ ಆಡಲಿದ್ದಾರಂತೆ.

ಈ ಹಿಂದೆ ಜಗ್ಗೇಶ್ ಅವರು ಕೋಟ್ಯಧಿಪತಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಹಾಟ್‌ ಸೀಟ್‌ನಲ್ಲಿ ಕುಳಿತಿದ್ದ ಅವರಿಗೆ ಅಪ್ಪು ಪ್ರಶ್ನೆ ಕೇಳುತ್ತಿದ್ದರು, ಅಪ್ಪು ಪ್ರಶ್ನೆಯಾದಮೇಲೆ ಅವರ ವೈಯಕ್ತಿಕ ಜೀವನ, ಸಿನಿಮಾ, ತಂದೆ-ತಾಯಿ ಬಗ್ಗೆ ಜಗ್ಗೇಶ್ ವಾಪಾಸ್ ಪುನೀತ್ ಅವರಿಗೆ ಪ್ರಶ್ನೆ ಕೇಳಿದ್ದರು. ಈ ವೇಳೆ ಪುನೀತ್ ಅವರ ಜಾತಕಫಲದ ಬಗ್ಗೆಯೂ ನವರಸನಾಯಕ ಮಾತನಾಡಿದ್ದರು. ಪ್ರಸ್ತುತ ರಚಿತಾ ರಾಮ್ ಮಜಾಭಾರತದ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕನ್ನಡದ ಕೋಟ್ಯಧಿಪತಿಯ ಮೂರನೇ ಸೀಸನ್‌ನನ್ನು ರಮೇಶ್ ಅರವಿಂದ್ ಹೋಸ್ಟ್ ಮಾಡಿದ್ದರು.

‘ಕನ್ನಡದ ಕೋಟ್ಯಾಧಿಪತಿ’ಎಂಬುದು ಕಿರುತೆರೆಯಲ್ಲಿ ಜ್ಞಾನ ಹೆಚ್ಚಿಸಿಕೊಳ್ಳಲು ಇರುವ ರಿಯಾಲಿಟಿ ಶೋ. ಸಾಮಾನ್ಯ ಜನರೂ ಕೂಡ ಇಲ್ಲಿ ಭಾಗವಹಿಸಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟು ಹಣ ಗೆಲ್ಲಬಹುದು. ಇಲ್ಲಿ ಗೆದ್ದ ಹಣದಿಂದ ಬಹಳಷ್ಟು ಜನರ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಹಾಗೆಯೇ ಎಷ್ಟೋ ಮಂದಿ ಸೆಲೆಬ್ರಿಟಿಗಳು ಕೂಡ ಇಲ್ಲಿ ಬಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ತಾವು ಆಟದಲ್ಲಿ ಗೆದ್ದ ಹಣವನ್ನು ಸಾಮಾಜಿಕ ಕೆಲಸಕ್ಕೆ ಬಳಸುತ್ತಾರೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ