News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !
ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
ಬಂಗಾರಪೇಟೆ (ಮೀ) ವಿಧಾನಸಭಾ ಕ್ಷೇತ್ರದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ
ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ
5 ಬಾರಿ ಶಾಸಕರಾಗಿ ಗೆದ್ದ ಇವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಈ ವ್ಯಕ್ತಿಯಿಂದ ರಾಜಕೀಯ ನಾಯಕರು ಕಲಿಯಬೇಕು
ಉತ್ತಮ ಆರೋಗ್ಯ ಟಿಪ್ಸ್
ಸುದ್ದಿ

ಕೆಲವು ವಸ್ತುಗಳ ಬೆಲೆ ಏರಿಕೆ ! ಕೆಲವು ವಸ್ತುಗಳ ಬೆಲೆ ಇಳಿಕೆ! ಮೋದಿ ಬಜೆಟ್​ ಏನೇನಿದೆ ಗೊತ್ತಾ…ತಿಳಿಯಿರಿ?

160

ಎರಡನೇ ಬಾರಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ. ಕೆಲ ವಸ್ತುಗಳು ಹಾಗೂ ಸೇವೆಗಳು ದುಬಾರಿಯಾದರೆ ,ಕೆಲವಸ್ತುಗಳ ಬೆಲೆಯಲ್ಲಿ ಇಳಿಕೆಯಾಗಿದೆ.ಯಾವ ವಸ್ತುಗಳ ಬೆಲೆ ಏರಿಕೆಯಾಗಲಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಲಿದೆ? ಎಂಬುದರ ಪೂರ್ತಿ ವಿವರ ಇಲ್ಲಿದೆ ನೋಡಿ..

ಯಾವ ವಸ್ತುಗಳ ಬೆಲೆ ಏರಿಕೆಯಾಗಿದೆ ಎಂಬುದರ ವಿವರ ಇಲ್ಲಿದೆ.
ಪ್ರಮುಖವಾಗಿ ಚಿನ್ನ ಮತ್ತು ಆಭರಣಗಳ ದರ ಏರಿಕೆಯಾಗಿದ್ದು, ಪೆಟ್ರೋಲ್ ಮತ್ತು ಡಿಸೇಲ್​ ಮೇಲಿನ ಸೆಸ್ ಏರಿಕೆಯಾಗಿದ್ದು, ಒಂದು ಲೀಟರ್​​ ಮೇಲೆ 1 ರೂಪಾಯಿ ದರ ಏರಿಕೆಯಾಗಿದೆ. ಇನ್ನುಳಿದಂತೆ, ತಂಬಾಕು, ತರಕಾರಿ, ಹಣ್ಣಿನ ಜ್ಯೂಸ್, ಸನ್ ಗ್ಲಾಸ್, ಸುಗಂಧ ದ್ರವ್ಯಗಳು, ಅಡುಗೆ ತಯಾರಿಸಲು ಬಳಸುವ ವಸ್ತುಗಳು, ಮೆನಿಕ್ಯೂರ್ ಮತ್ತು ಪೆಡಿಕ್ಯೂರ್,ಸಿಸಿ ಕ್ಯಾಮರಾ ದುಬಾರಿ,ಪೈಪ್, ಟೈಲ್ಸ್, ಡಿವಿಡಿ ಬೆಲೆ ಏರಿಕೆ. ಮದ್ಯ, ಸಿಗರೇಟ್,ಮೊಬೈಲ್, ಟಿವಿ, ಫ್ರಿಡ್ಜ್, ರಬ್ಬರ್ ಬೆಲೆ ಏರಿಕೆ ಆಮದು ಮಾಡಿಕೊಳ್ಳುವ ಎಲೆಕ್ಟ್ರಾನಿಕ್ ವಸ್ತುಗಳು

Gas Prices. Drop of gas in the format of the dollar sign.; Shutterstock ID 16024516; PO: 4700085152

ಸಿಸಿಟಿವಿ, HD ಕ್ಯಾಮೆರಾ, ಫರ್ನಿಚರ್ಸ್,ಆಟೋ ಪಾರ್ಟ್ಸ್,ವಾಟರ್ ಬ್ಲಾಕಿಂಗ್ ಟೇಪ್ಸ್, ಸೆರಾಮಿಕ್ ಟೈಲ್ಸ್,ಗೋಡಂಬಿ, ತಾಳೆ ಎಣ್ಣೆ, ಇಂಡಸ್ಟ್ರಿಯಲ್ ಆಸಿಡ್,ಪ್ಲಾಸ್ಟಿಕ್, ಸೀಲಿಂಗ್ ಕವರ್, ಫ್ಲೋರ್ ಕವರ್,AC ಹಾಗೂ ಎಲೆಕ್ಟ್ರಿಕ್ ವೈರ್ಗಳ ಬೆಲೆ ಏರಿಕೆ,ವಾಹನಗಳ ವೈಪರ್, ಸಿಗ್ನಲಿಂಗ್ ವಸ್ತುಗಳು ತುಟ್ಟಿ,ಇಂಜಿನ್ ಚಾಸಿಸ್, ವಾಹನದ ಲಾಕ್,ದ್ವಿಚಕ್ರ ವಾಹನಗಳ ಲೈಟಿಂಗ್ಸ್, ಹಾರ್ನ್ ಸಾಮಾಗ್ರಿ ತುಟ್ಟಿ ದುಬಾರಿಯಾಗಿದೆ.

ಇನ್ನು ಯಾವೆಲ್ಲ ವಸ್ತುಗಳ ಬೆಲೆ ಇಳಿಕೆಯಾಗಿದೆ ಅನ್ನೋದನ್ನು ಗಮನಿಸೋದಾದರೇ, ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ನೀಡಲಾಗಿದ್ದು, ಇ ವಾಹನಗಳ ಜಿ ಎಸ್ ಟಿ ದರವನ್ನು ಶೇಕಡಾ 12ರ ಬದಲು ಶೇಕಡಾ 5ಕ್ಕೆ ಇಳಿಕೆ ಮಾಡಲಾಗಿದೆ. ಗೃಹ ಸಾಲ ಇಳಿಕೆ ಕಿಡ್ನಿ ಕಸಿ, ಡಯಾಲಿಸಿಸ್ ಯಂತ್ರದ ಬೆಲೆ ಇಳಿಕೆ.ಸ್ವದೇಶಿ ಎಲೆಕ್ಟ್ರಾನಿಕ್ ಉತ್ಪನ್ನಗಳು,ಎಲೆಕ್ಟ್ರಿಕ್ ಕಾರು-ಬೈಕ್,ಆನ್ಲೈನ್ ವಹಿವಾಟು ಡಿಜಿಟಲ್ ಪಾವತಿಗೆ ಶುಲ್ಕ ಇಲ್ಲ,ಗೃಹಸಾಲದ ಮೇಲಿನ ಬಡ್ಡಿ ಕಡಿತ,ರಕ್ಷಣಾ ಸಾಮಗ್ರಿ,ಪಾಮ್ ಆಯಿಲ್ಫ್ಯಾಟಿ ಆಯಿಲ್ ಪೇಪರ್ ಅಗ್ಗ ,ಸೌರಫಲಕ, ಇಟ್ಟಿಗೆ, ಕಿವುಡು ಮೂಗರಿಗೆ ಬಳಸುವ ಸಾಧನಗಳು ಮೇಲಿನ ಬೆಲೆ ಇಳಿಕೆಯಾಗಿದೆ. ಒಟ್ಟಿನಲ್ಲಿ 2019 ರಲ್ಲಿ ಮೋದಿ ಬಜೆಟ್​ ನಿರಾಶಾದಾಯ ಎಂದೇ ಬಣ್ಣಿಸಲಾಗುತ್ತಿದ್ದು ಮಧ್ಯಮವರ್ಗದ ಜನರ ಜೀವನಕ್ಕೆ ನೆರವಾಗುವಂತ ಯಾವುದೇ ಸೌಲಭ್ಯಗಳಿಲ್ಲ ಎಂಬ ಟೀಕೆಗೊಳಗಾಗುತ್ತಿದೆ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ