ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಹುತೇಕ ದ್ವಿಚಕ್ರ ವಾಹನಗಳು ಪೆಟ್ರೋಲ್ ಎಂಜಿನ್ ಸಹಾಯದಿಂದ ಚಲಿಸುತ್ತಿರುವುದು ಎಂದು ನಮಗೆಲ್ಲಾ ತಿಳಿದೇ ಇದೆ. ಜೊತೆಗೆ ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳು ಕೂಡಾ ಬಿಡುಗಡೆಯಾಗುತ್ತಿದ್ದು, ಪೆಟ್ರೋಲ್ ಎಂಜಿನ್ ಬೈಕ್ಗಳಿಗೆ ಟಕ್ಕರ್ ನೀಡುವುದಕ್ಕೆ ಸಜ್ಜಾಗುತ್ತಿವೆ. ಹೀಗಿರುವಾಗ ಇಲ್ಲೊಬ್ಬ ಅಸಾಮಿ ಕೋಕಾಕೋಲಾದಿಂದ ಬೈಕ್ ಚಾಲನೆ ಮಾಡುವ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾನೆ.
ವಾಹನಗಳ ಇಂಧನಗಳ ಬೆಲೆ ಕಡಿತಗೊಳಿಸುವುದಕ್ಕೆ ಜಗತ್ತಿನಾದ್ಯಂತ ಹಲವು ಹೊಸ ಇಂಧನ ಮಾದರಿಗಳನ್ನು ಪತ್ತೆಹಚ್ಚಲು ಹತ್ತಾರು ಸಂಶೋಧನೆಗಳು ನಡೆಯುತ್ತಿದ್ದು, ಇಲ್ಲೊಬ್ಬ ಯುವಕ ಮಾತ್ರ ಒಂದು ಸಾಧಾರಣ ಕೂಲ್ ಡ್ರಿಂಕ್ನಿಂದಲೂ ಬೈಕ್ ಚಾಲನೆ ಮಾಡಬಹುದಾ ಎನ್ನುವ ಕುರಿತು ಹೊಸ ಸಂಶೋಧನೆಗೆ ಕೈ ಹಾಕಿದ್ದಾನೆ. ಹಾಗಾದ್ರೆ ಆ ಯುವಕನ ಐಡಿಯಾ ವರ್ಕೌಟ್ ಆಯ್ತಾ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ..
ಮೊದಲಿಗೆ ಈತ ತನ್ನ ಬೈಕಿನಲ್ಲಿದ್ದ ಕೊನೆಯ ಹನಿಯವರೆಗು ಪೆಟ್ರೋಲ್ ಅನ್ನು ಹೊರತೆಗೆದು ಫ್ಯುಯೆಲ್ ಟ್ಯಾಂಕ್ನಲ್ಲಿಕೋಕಾಕೋಲಾ ತುಂಬಿಸಿದ್ದ. ನಂತರ ಬೈಕ್ ಸ್ಟಾರ್ಟ್ ಆಯಿತು. ಆದ್ರೆ ಕೋಕಾಕೋಲ ಬೈಕ್ ಎಂಜಿನ್ಗೆ ಸಹಕರಿಸುತ್ತಾ ಎನ್ನುವುದೇ ಎಲ್ಲರ ಮನದ ಪ್ರಶ್ನೆ.
ಈತ ಮಾಡಿದ ಈ ಸಂಶೋಧನೆಯಿಂದ ಬಂದ ಉತ್ತರ ಏನೆಂದರೆ, ಕೋಕಾಕೋಲಾದಿಂದ ಬೈಕ್ ಚಲಾಯಿಸಲು ಸಾಧ್ಯವೇ ಇಲ್ಲವೆಂಬುವುದು. ನೀವು ವಿಡಿಯೋ ಗಮನಿಸಿದ್ದಲ್ಲಿ ಬೈಕ್ ಶುರುವಾಗಿ ಕೆಲ ದೂರ ಮಾತ್ರವೇ ಸಾಗುತ್ತೆ. ಇದು ಹೇಗೆಂದರೆ ಪೆಟ್ರೋಲ್ ಎಲ್ಲವನ್ನು ಹೊರ ತೆಗೆದ ನಂತರ ಕಾರ್ಬೋರೆಟರ್ನಲ್ಲಿದ್ದ ಪೆಟ್ರೋಲ್ನ ಸಹಾಯದಿಂದ. ಆದ್ರೂ ಪೆಟ್ರೋಲ್ಗೆ ಅದರದ್ದೆ ಆದ ಕೆಲ ಗುಣಗಳನ್ನು ಹೊಂದಿರುತ್ತೆ. ಅವುಗಳ ಸ್ಥಾನವನ್ನು ಪಡೆಯಲು ಬೇರೆ ಯಾವ ಅನೀಲಕ್ಕು ಸಾಧ್ಯವಿಲ್ಲ ಎಂದು ತಿಳಿಯುತ್ತೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಪಕ್ಕದಲ್ಲಿರುವವರ ನಿದ್ದೆ ಹಾಳು ಮಾಡುವ ಸುಲಭ ಉಪಾಯ ಗೊರಕೆ. ನಿದ್ದೆಯಲ್ಲಿ ಗೊರಕೆ ಸಾಮಾನ್ಯ. ಆದ್ರೆ ಪಕ್ಕದಲ್ಲಿ ಮಲಗಿರುವವರಿಗೆ ಈ ಗೊರಕೆ ಕಿರಿಕಿರಿಯನ್ನುಂಟು ಮಾಡುತ್ತೆ.ನಿಮ್ಮ ಈ ಗೊರಕೆಗೆ ಕಾರಣಗಳೇನು ಗೊತ್ತೇ? ತೂಕ ನಷ್ಟ ಮತ್ತು ವ್ಯಾಯಾಮ :- ಅತಿಯಾದ ತೂಕ ಅಥವಾ ದೊಡ್ಡ ಕುತ್ತಿಗೆ ಸುತ್ತಳತೆ ಹೊಂದುವ ಕೊಬ್ಬುನ್ನು ಕರಗಿಸುವುದು, ಹಾಗೂ ಪ್ರತಿನಿತ್ಯ ವ್ಯಾಯಾಮ ಪ್ರಾರಂಭಿಸುವುದು, ಇವೆಲ್ಲವೂ ಗಮನಾರ್ಹವಾಗಿ ಅನೇಕ ವ್ಯಕ್ತಿಗಳಲ್ಲಿ ಗೊರಕೆ ಕಡಿಮೆ ಮಾಡಲು ಸಹಕಾರಿಯಾಗುತ್ತವೆ. ಮಲಗುವ ಸ್ಥಿತಿ ಬದಲಿಸಿ :- ಒಂದು ಬದಿಯಲ್ಲಿ ನಿದ್ರಿಸುವುದನ್ನು…
ಸತತ ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಆಭರಣ ಪ್ರೀಯರಲ್ಲಿ ಸಂತಸ ತರುವಂತೆ ಮಾಡಿದೆ. ಅಕ್ಟೋಬರ್ ಆರಂಭದಿಂದಲೇ ನಿರಂತರವಾಗಿ ಚಿನ್ನದ ದರ ಇಳಿಕೆಯಾಗುತ್ತಿರುವ ಬಗ್ಗೆ ಎಲ್ಲರಿಗು ಗೊತ್ತು ಆದರೆ ಇಂದು ಮತ್ತಷ್ಟು ಇಳಿಕೆ ಕಂಡಿದೆ. ಚಿನ್ನದ ದರದಲ್ಲಿ ಒಟ್ಟು ಶೇ.0.23ರಷ್ಟು ಇಳಿದಿದ್ದು, ಮಲ್ಟಿ ಕಮೋಡಿಟಿ ಎಕ್ಸಚೇಂಜ್’ನಲ್ಲಿ 10ಗ್ರಾಂ ಚಿನ್ನಕ್ಕೆ38,072 ರೂ. ಆಗಿದೆ. ಅದರಂತೆ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, ಖರೀದಿಯ ಭರಾಟೆ ಜೋರಾಗಿದೆ. ಬೆಳ್ಳಿ ದರದಲ್ಲಿ ಒಟ್ಟು ಶೇ.0.34ರಷ್ಟು…
ಇಂದಿರಾ ಕ್ಯಾಂಟೀನ್ ಪಾಲಿಕೆಗೆ ಹೊರೆಯಾಗುವುದೋ ಅಥವಾ ಇಲ್ಲವೋ ಎಂಬುದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ತೀರ್ಮಾನದ ಮೇಲೆ ನಿಂತಿದೆ. ಏಕೆಂದರೆ, ರಾಜ್ಯ ಸರ್ಕಾರ ಪ್ರಸಕ್ತ ಬಜೆಟ್ನಲ್ಲಿ ಅನುದಾನ ನೀಡದ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಶೇ.50 ರಷ್ಟಾದರೂ ಅನುದಾನ ನೀಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಗೆ ಹಣಕಾಸು ಇಲಾಖೆಯ ಸಂಪೂರ್ಣ ಒಪ್ಪಿಗೆ ದೊರಕಿಲ್ಲ. ಇಲಾಖೆಯು ಕ್ಯಾಂಟೀನ್ ನಿರ್ವಹಣೆಗೆ ಶೇ.25ರಷ್ಟು ಹಣ ಮಾತ್ರ ನೀಡುವುದಾಗಿ ತಿಳಿಸಿದೆ. ಈ ಸಂಬಂಧ ಕಡತ ಪ್ರಸ್ತುತ ಸಿಎಂ ಅವಗಾಹನೆಗೆ ಬಂದಿದ್ದು, ಮುಖ್ಯಮಂತ್ರಿ ಯವರು ಈ ಬಗ್ಗೆ…
ನಾವು ದಿನಾಲೂ ಬಳಸುವ ಕೆಲವು ತಿಂಡಿ ತಿನಿಸುಗಳಿಂದ, ನಮಗೆ ಅರಿವಿಲ್ಲದಂತಯೇ ಕೆಲವೊಂದು ಪ್ರಭಾವಗಳು ನಮ್ಮ ದೇಹದ ಮೇಲೆ ಆಗುತ್ತವೆ.ಅದರಲ್ಲಿ ನಿದ್ದೆಯೂ ಒಂದು. ಹೌದು, ಕೆಲವೊಂದು ತಿಂಡಿಗಳು ನಮಗೆ ಗೊತ್ತಿಲ್ಲದೇ ನಿದ್ದೆ ಬರಿಸುತ್ತವೆ.
ಸಾಮಾನ್ಯವಾಗಿ ನಮ್ಮಲ್ಲಿ ಒಂದು ವಾಡಿಕೆಯಿದೆ, ಅದೇನಂದ್ರೆ ಯಾರಾದರೂ ಮಾಡಬಾರದ ತಪ್ಪು ಮಾಡಿದ್ರೆ, ನೀನು ಸತ್ತಾಗ ನರಕ್ಕೆ ಹೋಗೋದು ಅಂತ ಶಾಪ ಹಾಕ್ತಾರೆ. ಹಿಂದೂ ಧರ್ಮದ ಪ್ರಕಾರ ಮನುಷ್ಯರು ಮಾಡಿದ ಪಾಪ ಅಥವಾ ಪುಣ್ಯಗಳನ್ನು ಅನುಸರಿಸಿ ,ಅವರು ಸತ್ತನಂತರ ಅವರ ಆತ್ಮಗಳು ಸ್ವರ್ಗಕ್ಕೆ ಅಥವಾ ನರಕಕ್ಕೆ ಹೋಗುತ್ತವೆಂದು ಎಲ್ಲರ ವಿಶ್ವಾಸ.
ಮೈ ನವಿರೇಳಿಸುವ ಅತ್ಯದ್ಭುತ ಆಲ್ಬಂ ಒಂದನ್ನು ರೋರಿಂಗ್ ಸ್ಟಾರ್ ಶ್ರೀ ಮುರುಳಿ ರವರು ಬಿಡುಗಡೆ ಮಾಡಿದ್ದಾರೆ.. ಅದೇ “ತಾಯಿ ಕನ್ನಡ”.. ಹೆಣ್ಣನ್ನು ಪ್ರಧಾನವಾಗಿಟ್ಟುಕೊಂಡು ಮಾಡಿರುವ ಈ ಕನ್ನಡದ ಆಲ್ಬಂಗೆ ಬಿಡುಗಡೆಯಾದ ಕೆಲವೇ ಘಂಟೆಗಳಲ್ಲಿ ಎಲ್ಲಾ ಕಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ..