ಸುದ್ದಿ

ದೀಪಾವಳಿಯ ಹಬ್ಬಕ್ಕೆ-ಮನೆಯ ಮುಂಭಾಗ ಎಷ್ಟು ದೀಪಗಳಿರಬೇಕು ಗೊತ್ತಾ?

30

ದೀಪಾವಳಿ ಬಂದ್ರೆ ಸಾಕು ಮಹಿಳೆಯರಿಗೆ ಮನೆ ಮುಂದೆ ದೀಪಗಳನ್ನು ಜೋಡಿಸುವುದೇ ಒಂದು ಸಂಭ್ರಮ. ಬಾಗಿಲು, ಕಿಟಕಿ, ರಂಗೋಲಿ, ಕಾಂಪೌಂಡ್, ಹೂ ಕುಂಡಗಳಲ್ಲಿ ಹೀಗೆ ಅನಕೂಲವಾಗುವ ಸ್ಥಳಗಳಲ್ಲಿ ದೀಪಗಳನ್ನಿಟ್ಟು ಮನೆಯನ್ನು ಅಲಂಕರಿಸುತ್ತಾರೆ. ಆದ್ರೆ ದೀಪಗಳನ್ನು ಇಂತಿಷ್ಟೇ ಸಂಖ್ಯೆಯಲ್ಲಿ ಹಚ್ಚಬೇಕೆಂದು ನಿಯಮಾವಳಿಗಳಿವೆ.

ಪೂಜಾ ಗೃಹದಲ್ಲಿ ಗಜಲಕ್ಷ್ಮಿ ಸ್ವರೂಪದಲ್ಲಿರುವ ಕಾಮಾಕ್ಷಿ ದೀಪಗಳನ್ನು ಹಚ್ಚಬೇಕು. ದೀಪಗಳಿಗೆ ಮೂರು ಅಥವಾ ಐದುಬಗೆಯ ಎಣ್ಣೆಯನ್ನು ಹಾಕುತ್ತಿರಬೇಕು. ಮನೆಯ ಮುಂಭಾಗ ಅಲಂಕರಿಸಲು ವ್ಯವಸ್ಥಿತ ದೀಪಗಳನ್ನು ಜೋಡಿಸಬೇಕೆಂದು ಹಿರಿಯರು ಹೇಳುತ್ತಾರೆ. ಹಾಗೆಯೇ ವ್ಯವಸ್ಥಿತವಾಗಿ ದೀಪಾಲಂಕಾರ ಮಾಡಬೇಕು.

ನಿಮ್ಮ ಶಕ್ತಿಗನುಸಾರವಾಗಿ 12, 21, 28, 48,54, 78, 108, 1008 ದೀಪಗಳನ್ನಿಟ್ಟು ದೀಪಾರಾಧನೆ ಮಾಡಬೇಕು. 12 ದೀಪಗಳಿಂದ ಆರಂಭವಾಗಿ 1008 ದೀಪಗಳವರೆಗೆ ನಿಮ್ಮ ಶಕ್ತಿಗನುಸಾರವಾಗಿ ಇರಿಸಿ ದೀಪಾರಾಧನೆ ಮಾಡಿದರೆ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ. ಅಲಂಕಾರ ಎಂದು ಹೆಚ್ಚು ದೀಪಗಳನ್ನು ಇರಿಸುವ ಬದಲು ಮಿತವಾಗಿ ದೀಪಗಳನ್ನು ಇರಿಸಿದರೆ ಉತ್ತಮ.

ವ್ಯವಸ್ಥಿತವಾಗಿ ದೀಪಗಳನ್ನು ಇರಿಸುವುದರಿಂದ ದರಿದ್ರತನ, ಆಲಸ್ಯತನ ನಿವಾರಣೆಯಾಗಿ ಸುಲಭವಾಗಿ ಕಷ್ಟದ ಕೆಲಸ ಕಾರ್ಯಗಳು ನೆರವೇರುತ್ತವೆ.ಹೀಗೆ ವ್ಯವಸ್ಥಿತ ಮತ್ತು ಕ್ರಮಬದ್ಧ ದೀಪಾರಾಧನೆಯಿಂದ ಮಹಾಲಕ್ಷ್ಮಿಯ ಕೃಪೆಗೆ ಪಾತ್ರರಾಗಬಹುದು ಎನ್ನುವ ನಂಬಿಕೆಯಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ