ಸುದ್ದಿ

‘ಮಜಾ’ಕ್ಕಾಗಿ ಶೈನ್ ಶೆಟ್ಟಿಯನ್ನು ಬಳಸಿಕೊಳ್ಳುತ್ತಿದ್ದಾರೆಯೇ ಚೈತ್ರ ಕೊಟ್ಟೂರು.. ಹೀಗೆಲ್ಲ ಮಾಡ್ತಿರೋದು ಯಾಕೆ ಗೊತ್ತಾ?

55

ಪಾಸಿಟೀವೋ, ನೆಗೆಟಿವೋ.. ಒಟ್ನಲ್ಲಿ ಪ್ರಚಾರ ಸಿಕ್ಕರೆ ಸಾಕು ಅಂತ ಕೆಲ ಸಿನಿಮಾ ತಂಡವರು ಏನೇನೋ ಪ್ಲಾನ್ ಮಾಡ್ತಾರೆ. ನೆಗೆಟಿವ್ ಪಬ್ಲಿಸಿಟಿ ಆದರೂ ಪರ್ವಾಗಿಲ್ಲ, ಒಟ್ನಲ್ಲಿ ಹೆಚ್ಚು ಜನರನ್ನು ತಲುಪಲು ಗಾಂಧಿನಗರದ ಕೆಲ ಮಂದಿ ಸರ್ಕಸ್ ಮಾಡುವುದು ನಿಮಗೆಲ್ಲ ಗೊತ್ತೇ ಇದೆ.

ಸೇಮ್ ಟು ಸೇಮ್ ಇದೇ ಸ್ಟ್ರಾಟೆಜಿಯನ್ನ ನಟಿ ಮತ್ತು ಬರಹಗಾರ್ತಿ ಚೈತ್ರ ಕೊಟ್ಟೂರು ‘ಬಿಗ್ ಬಾಸ್’ ಮನೆಯಲ್ಲಿ ಅಪ್ಲೈ ಮಾಡುತ್ತಿರುವ ಹಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಮೂರು ಹೊತ್ತು ಸುಮ್ಮನೆ ಇದ್ದರೆ, ಕ್ಯಾಮರಾಗಳು ಕೂಡ ಝೂಮ್ ಹಾಕಲ್ಲ. ಹೀಗಾಗಿ ಫುಟೇಜ್ ಪಡೆಯಬೇಕು ಅಂದ್ರೆ ಏನಾದರು ಒಂದನ್ನ ಮಾಡುತ್ತಲೇ ಇರಬೇಕು.

ಕಾಲು ಕೆರೆದುಕೊಂಡು ರಗಳೆ ಮಾಡಿಕೊಳ್ಳದ ಚೈತ್ರ ಕೊಟ್ಟೂರು, ‘ಬಿಗ್ ಬಾಸ್’ ಮನೆಯೊಳಗೆ ಪ್ರೀತಿ-ಪ್ರೇಮದ ಆಟ ಆಡುತ್ತಿದ್ದಾರೆ. ಕಳೆದ ವಾರ ಶೈನ್ ಶೆಟ್ಟಿ ಹಿಂದೆ ಬಿದ್ದು ಇಡೀ ಮನೆಯಲ್ಲಿ ಹಾಟ್ ಟಾಪಿಕ್ ಆಗಿದ್ದ ಚೈತ್ರ ಕೊಟ್ಟೂರು ಈ ವಾರವೂ ಅದನ್ನೇ ಮುಂದುವರೆಸಿದ್ದಾರೆ.ಹೇಳಿ ಕೇಳಿ ಚೈತ್ರ ಕೊಟ್ಟೂರು ಬರಹಗಾರ್ತಿ ಆಗಿರುವುದರಿಂದ ‘ಬಚ್ಚಿಟ್ಟ ಒಲವ ಹೇಳಿಬಿಡು ಗೆಳೆಯ..’ ಎಂದು ಆರಂಭವಾಗುವ ಒಂದು ಕವನವನ್ನ ಬರೆದು ಯಾರಿಗೂ ಗೊತ್ತಾಗದಂತೆ ಶೈನ್ ಶೆಟ್ಟಿ ಸೂಟ್ ಕೇಸ್ ಒಳಗೆ ಹಾಕಿದ್ದಾರೆ.

”ಸುಮ್ನೆ ಒಂದು ಸಣ್ಣ ಕವನ ಬರೆದಿದ್ದೇನೆ. ಬರೆಯಬೇಕು ಅಂತ ಬರೆದಿದ್ದಲ್ಲ, ಸುಮ್ನೆ ಆಟಕ್ಕಾಗಿ ಬರೆದಿದ್ದೇನೆ. ತಪ್ಪಾಗಿದ್ದರೆ ಕ್ಷಮಿಸಿ. ಇದನ್ನ ಶೈನ್ ಬ್ಯಾಗ್ ಒಳಗೆ ಇಡಬೇಕು ಅಂದುಕೊಂಡಿದ್ದೇನೆ. ಇದರಲ್ಲಿ ನನ್ನ ಹೆಸರು ಬರೆದಿಲ್ಲ. ನಾನೇ ಬರೆದಿದ್ದು ಅಂತ ಯಾವ ಕಾರಣಕ್ಕೂ ಒಪ್ಪಿಕೊಳ್ಳಲ್ಲ. ಮಜಾ ಇರುತ್ತೆ ಅಂತ ಮಾಡ್ತಾ ಇದ್ದೀನಿ” ಎಂದು ಶೈನ್ ಶೆಟ್ಟಿ ಸೂಟ್ ಕೇಸ್ ಒಳಗೆ ಕವನವನ್ನ ಇಟ್ಟು ‘ಬಿಗ್ ಬಾಸ್’ ಮುಂದೆ ಚೈತ್ರ ಕೊಟ್ಟೂರು ಹೇಳಿಕೊಂಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಜೀವನಶೈಲಿ

    ನಿಮ್ಮ ದೇಹದ ಶಾಖವನ್ನು ಕಡಿಮೆ ಮಾಡಲು ಈ ಆಹಾರ ಕ್ರಮಗಳನ್ನು ಅನುಸರಿಸಿ…ತಿಳಿಯಲು ಈ ಲೇಖನ ಓದಿ…

    ದೇಹದಲ್ಲಿ ಬಿಸಿಯಾಗಲು ಮತ್ತು ಶರೀರ ತಾಪಮಾನ ಏರಿಕೆಗೆ ಹಲವು ಕಾರಣಗಳಿವೆ. ನಿಮ್ಮ ಸುತ್ತಲಿನ ಪರಿಸರದ ಕಾರಣದಿಂದಾಗಿ ನಿಮ್ಮ ದೇಹದಲ್ಲಿನ ಶಾಖಕ್ಕೆ ಕಾರಣ.

  • ಸುದ್ದಿ

    ಹಾಸ್ಟೆಲ್‍ನಲ್ಲಿ ಹುಡ್ಗೀರು ಸ್ನಾನ ಮಾಡೋದನ್ನು ಕದ್ದು ನೋಡಲು ಬಂದವ ಜೈಲು ಸೇರಿದ ಆರೋಪಿ……!

    ಹಾಸ್ಟೆಲ್‍ನಲ್ಲಿ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಯುವಕನೊಬ್ಬ ಪೈಪ್ ಲೈನ್ ಹತ್ತಿ ಬಂದು ಸಿಕ್ಕಿಬಿದ್ದಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ. ಮಧ್ಯಪ್ರದೇಶದ ಭೋಪಾಲ್ ಎಂ.ಪಿ.ನಗರದ ಬಾಲಕಿಯರ ಹಾಸ್ಟೆಲ್‍ನಲ್ಲಿ ಈ ಘಟನೆ ನಡೆದಿದೆ. ಅಮನ್ ಕುಮಾರ್ ಬಂಧಿತ ಆರೋಪಿ. ಹಾಸ್ಟೆಲ್ ಎರಡನೇ ಮಹಡಿಯಲ್ಲಿದ್ದು, ಕೆಳಗಿನ ಮಹಡಿಯಲ್ಲಿ ಒಂದು ಅಂಗಡಿಯಿದೆ. ಈ ಅಂಗಡಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದನು. ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿಯೇ ಬಾಲಕಿಯರ ಹಾಸ್ಟೆಲ್ ಇದ್ದುದರಿಂದ ಹುಡುಗಿಯರು ಸ್ನಾನ ಮಾಡುವುದನ್ನು ನೋಡಲು ಹೋಗಿದ್ದಾನೆ. ಈ ವೇಳೆ ಹುಡುಗಿಯೊಬ್ಬಳ ಕೈಗೆ ಯುವಕ…

  • ಆರೋಗ್ಯ

    ಪಿರಿಯಡ್ಸ್ ಸಮಯದಲ್ಲಿ ಆಗುವ ನೋವುಗಳಿಗೆ ಇಲ್ಲಿದೆ ಪರಿಹಾರ…ತಿಳಿಯಲು ಈ ಲೇಖನ ಓದಿ…

    ಋತುಸ್ರಾವದ ಸಂದರ್ಭದಲ್ಲಿ ಮಹಿಳೆಯರು ಬಹಳಷ್ಟು ನೋವನ್ನ ಅನುಭವಿಸುತ್ತಾರೆ, ಈ ನೋವನ್ನ ಹೇಗೆ ಕಾಪಾಡಿ ಕೊಳ್ಳ ಬಹುದು ಎಂಬುದು ಹಲವರಲ್ಲಿ ಕಾಡುವ ಪ್ರಶ್ನೆ. ಇಂತಹ ಸಂದರ್ಭದಲ್ಲಿ ನಾವು ಸೇವಿಸುವ ಆಹಾರದಲ್ಲಿಯೂ ನಾವು ಬದಲಾವಣೆಯನ್ನ ಮಾಡಿಕೊಳ್ಳ ಬೇಕು, ಹಾಗೂ ದಿನದ ಆಗು ಹೋಗುಗಳನ್ನ ಬದಲಾವಣೆ ಮಾಡಿಕೊಳ್ಳ ಬೇಕು.

  • ಸುದ್ದಿ

    ಅತಿ ಶೀಘ್ರವೇ ಬಿಡುಗಡೆಯಾಗಲಿದೆ ಜಿಯೋ ಗಿಗಾ ಫೈಬರ್: ಏನೆಲ್ಲ ಸೇವೆ ಉಚಿತ ಸಿಗುತ್ತೆ? ಇಲ್ಲಿದೆ ನೋಡಿ ಪೂರ್ಣ ಮಾಹಿತಿ..!

    ನವದೆಹಲಿ: ಉಚಿತವಾಗಿ ಮೊಬೈಲ್ ಡೇಟಾ ನೀಡಿ ದೇಶದಲ್ಲಿ ಡೇಟಾ ಕ್ರಾಂತಿ ಮಾಡಿದ್ದ ರಿಲಯನ್ಸ್ ಜಿಯೋ ಈಗ ಬ್ರಾಡ್‍ಬ್ಯಾಂಡ್ ಕ್ಷೇತ್ರಕ್ಕೆ ಎಂಟ್ರಿ ನೀಡಲು ಮುಂದಾಗಿದೆ. ಬ್ರಾಡ್‍ಬ್ಯಾಂಡ್, ಲ್ಯಾಂಡ್‍ಲೈನ್ ಮತ್ತು ಟಿವಿ ಕಾಂಬೋ ಮೂರು ಸೇವೆಗಳನ್ನು ತಿಂಗಳಿಗೆ 600 ರೂ.ಗೆ ನೀಡಲು ಜಿಯೋ ಮುಂದಾಗಿದೆ.ಜಿಯೋ ಗಿಗಾಫೈಬರ್ ಕಳೆದ ವರ್ಷದಿಂದ ಮುಂಬೈ ಮತ್ತು ದೆಹಲಿಯಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ. 100 ಜಿಬಿ ಡೇಟಾವನ್ನು 100 ಮೆಗಾಬೈಟ್ಸ್ ಪರ್ ಸೆಕೆಂಡ್(ಎಂಬಿಪಿಎಸ್) ವೇಗದಲ್ಲಿ ಜಿಯೋ ಗ್ರಾಹಕರಿಗೆ ನೀಡುತ್ತಿದೆ. ಮುಂದಿನ 2 ತಿಂಗಳ ಒಳಗಡೆ ಅಧಿಕೃತವಾಗಿ…

  • Village

    ನಿಮ್ಮ ಹಳ್ಳಿಯಲ್ಲಿ ಕರೊನಾ ಜಾಸ್ತಿ ಆಗಲು ಈ ಕಾರಣ ಇರಬಹುದು.

    ಕೊರೊನಾ ಈ ದೇಶಕ್ಕೆ ಕಾಲಿಟ್ಟಾಗ ಹಳ್ಳಿಗಳು ಕೊರೊನಾ ವೈರಸ್ ನಿಂದ ಬಹುದೂರದಲ್ಲಿದ್ದವು. ಪೇಟೆಗಳಲ್ಲಿ ಮಾತ್ರ ಜನ ಕೊರೊನಾಕ್ಕೆ ಬಲಿ ಆಗ್ತಾ ಇದ್ರು. ಆದ್ರೆ ಕೊರೊನಾ ಎರಡನೇ ಅಲೆ ಹಳ್ಳಿಗರನ್ನು ತೀವ್ರವಾಗಿ ಬಾಧಿಸುತ್ತಿದೆ. ಇದಕ್ಕೆ ಹಳ್ಳಿಗರ ಸ್ವಯಂಕೃತ ಅಪರಾಧವೇ ಕಾರಣವಾಗಿದೆ.

  • ಸ್ಪೂರ್ತಿ

    ಬದುಕನ್ನು ವ್ಯರ್ಥ ಮಾಡಬೇಡಿ, ಸಮಯವನ್ನು ಅರ್ಥ ಮಾಡಿಕೊಂಡು ಬದುಕಿ ರವಿ ಚನ್ನಣ್ಣನವರ್.

    ಗವಿಮಠದ ಕೈಲಾಸ ಮಂಟಪದಲ್ಲಿ ನಡೆದ ಸಮಾರೋಪದಲ್ಲಿ ಅತಿಥಿಯಾಗಿ ಮಾತನಾಡಿದ ರವಿ ಚನ್ನಣ್ಣನವರ್, ಮಠ-ಮಾನ್ಯಗಳು, ಶರಣ-ಸಂತರು ಸಮಾಜದ ಅಂಕು-ಡೊಂಕು ತಿದ್ದು ಕೆಲಸ ಮಾಡುತ್ತಿದ್ದಾರೆ. ಸರಿ ತಪ್ಪು ಜನರಿಗೆ ಹೇಳುವ ಕೆಲಸ ಮಾಡುತ್ತಿದ್ದು, ಕೊಪ್ಪಳ ಅಂದು ಜೈನ ಕಾಶಿ ಎಂದು ಪ್ರಸಿದ್ಧಿ ಪಡೆದಿತ್ತು. ಇಂದು ಜಾತ್ರೆಯಿಂದ ದಕ್ಷಿಣ ಕಾಶಿ ಎಂದೆನಿಸಿದೆ. ಈ ಹಿಂದೆ ಯಾಗಗಳು ನಡೆಯುತ್ತಿದ್ದವಂತೆ, ಅದರ ಮೂಲ ಉದ್ದೇಶ ಜನರ ಹಿತವಾಗಿತ್ತಂತೆ. ಈಗ ಲಕ್ಷ ದೀಪೋತ್ಸವದ ಮೂಲಕ ದೈವದ ಸಾಕ್ಷಾತ್ಕಾರ, ಲಕ್ಷ ವೃಕ್ಷ ನೆಡುವ ಮೂಲಕ ಪ್ರಕೃತಿ ಸಾಕ್ಷಾತ್ಕಾರವಾಗುತ್ತಿದೆ….