ದೇಗುಲ ದರ್ಶನ

ಮೊದಲ ದಿನವೇ ಅಯ್ಯಪ್ಪ ಸ್ವಾಮಿ ಹುಂಡಿಗೆ ದಾಖಲೆಯ ಹಣ . ಮೊದಲ ದಿನ ಅಯ್ಯಪ್ಪ ಸ್ವಾಮಿ ದರ್ಶನ ಪಡೆದ ಭಕ್ತರು ಎಷ್ಟು ಗೊತ್ತಾ?

37

ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಾಗಿಲು ತೆಗೆದ ಶನಿವಾರ 3.32 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ಬಾರಿ ಮೊದಲ ದಿನ ಗಳಿಸಿದ 1.28 ಕೋಟಿ ರೂ.ಗಳಿಗೆ ಹೋಲಿಸಿದಲ್ಲಿ ಸುಮಾರು ಎರಡೂವರೆ ಪಟ್ಟು ಹೆಚ್ಚಾದಂತಾಗಿದೆ. ದೇವಾಲಯದ ಬಾಗಿಲು ತೆಗೆದ ನಂತರ ಇದುವರಗೆ 70000 ಭಕ್ತಾದಿಗಳು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಟ್ರಾವಂಕೋರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎನ್.ವಾಸು ಈ ವಿಷಯವನ್ನು ತಿಳಿಸಿದ್ದು, ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಈ ವರ್ಷ ಹೆಚ್ಚಿನ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

ಪ್ರತಿದಿನ 4೦,೦೦೦ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿದ್ದು, ಸಾಕಷ್ಟು ನೀರು ಮತ್ತು ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಶಬರಿಮಲೈಯನ್ನು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಾಡಲು ಪ್ರಯತ್ನ ನಡೆದಿದ್ದು, ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ವಾಸು ಹೇಳಿದರು.
ದೇವಸ್ಥಾನದ ಸಮೀಪದ ಪ್ರದೇಶಗಳಾದ ಪಾಂಬಾ ಮತ್ತು ನಿಲಕ್ಕಲ್‌ಗಳಲ್ಲಿ ಕೂಡ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.

ಕಳೆದ ಬಾರಿ, ಎಲ್ಲ ವಯೋಮಾನದ ಮಹಿಳೆಯರಿಗೆ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅನುಷ್ಠಾನಗೊಳಿಸಲು ಕೇರಳ ಸರ್ಕಾರ ನಿರ್ಧರಿಸಿದ್ದರಿಂದ ದೇವಾಲಯದ ಆವರಣ ಭಾರಿ ಪ್ರತಿಭಟನೆಗಳು ನಡೆದಿದ್ದವು. ಆದರೆ ಈ ಬಾರಿ ಹಿಂದಿನ ಸಂಪ್ರದಾಯ ಮುಂದುವರಿಸಲು ನಿರ್ಧರಿಸಿರುವುದು ಭಕ್ತಾದಿಗಳಲ್ಲಿ ಸಂತಸ ತಂದಿದೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಗಜಕೇಸರಿ, ಐರಾವತ ಬಂದ್ರೂ ಗೆಲ್ಲೋದು ‘ಅಭಿಮನ್ಯು’?ದಚ್ಚು ಪ್ರಚಾರ ಮಾಡಿದ್ರೆ ಸೋಲ್ತಾರೆ ಎಂದ್ರು..?

    ಮಂಡ್ಯ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಸುಮಲತಾ ಅಂಬರೀಶ್ ಪರವಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಚಾರ ನಡೆಸಲಿದ್ದಾರೆ. ಇದಕ್ಕೆ ಮಂಡ್ಯ ಜೆಡಿಎಸ್ ಕಾರ್ಯಕರ್ತರಿಂದ ವಿರೋಧ ವ್ಯಕ್ತವಾಗಿದ್ದು, ಸಿನಿಮಾ ರಂಗದವರು ಬಂದರೆ ಮಂಡ್ಯದ ಜನ ಮರುಳಾಗುವುದಿಲ್ಲ ಎಂದು ಹೇಳಿದ್ದಾರೆ. ‘ಗಜಕೇಸರಿ’, ‘ಐರಾವತ’ ಬಂದರೂ, ಗೆಲ್ಲುವುದು ‘ಅಭಿಮನ್ಯು’ ನಿಖಿಲ್ ಎಂದು ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರೆ. ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಚಾರ ಮಾಡಿ ಸಿದ್ದರಾಮಯ್ಯ, ಆನಂದ ಅಪ್ಪುಗೋಳ, ಕೆ….

  • ರಾಜಕೀಯ

    ರಾಜ್ಯದಲ್ಲಿ ಯಾವ ಯಾವ ಪಕ್ಷ ಮುನ್ನಡೆ…?

    ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕೆಲವೇ ಕ್ಷಣಗಳು ಬಾಕಿಯಿದೆ. ಆರಂಭಿಕ ಮತ ಎಣಿಕೆಯಲ್ಲಿ ಎನ್ಡಿಎ ಮುನ್ನಡೆ ಕಾಯ್ದುಕೊಂಡಿದ್ದರೆ ಯುಪಿಎ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಬಲ ಪಡೆದಿರುವ ರಾಜ್ಯಗಳಲ್ಲಿ ಕೂಡ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉತ್ತರ ಪ್ರದೇಶದ 54 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಮಧ್ಯಪ್ರದೇಶದಲ್ಲಿ 27, ರಾಜಸ್ತಾನದಲ್ಲಿ 23 ಹಾಗೂ ಬಿಹಾರದಲ್ಲಿ ಬಿಜೆಪಿ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ 40, ಗುಜರಾತಿನಲ್ಲಿ ಬಿಜೆಪಿ 26, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 22 ಕ್ಷೇತ್ರಗಳಲ್ಲಿ ಮುನ್ನಡೆ…

  • ಸುದ್ದಿ

    ಈ ಕಿರಾತಕನೆ ನಮ್ಮ ಸೈನಿಕರನ್ನು ಕೊಂದವನು…ಇವನು ವಿಡಿಯೋದಲ್ಲಿ ಹೇಳಿದ್ದೇನು ಗೊತ್ತಾ?

    ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪಟ್ಟಣದಲ್ಲಿ ಸಿಆರ್​ಪಿಎಫ್​ ಬೆಂಗಾವಲು ಪಡೆಯ ಮೇಲೆ ನಡೆದ ಭೀಕರ ಆತ್ಮಾಹುತಿ ಉಗ್ರರ ದಾಳಿಯ ನಂತರ ದಾಳಿಯ ಹೊಣೆ ಹೊತ್ತ ಜೈಶ್​-ಇ-ಮೊಹಮ್ಮದ್​ ಉಗ್ರ ಸಂಘಟನೆ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಆತ್ಮಾಹುತಿ ದಾಳಿ ನಡೆಸಿದ ಉಗ್ರ ದಾಳಿಗೆ ಮುನ್ನ ಮಾತನಾಡಿದ ಕೊನೆಯ ವಿಡಿಯೊ ವೈರಲ್ ಆಗಿದೆ. ಹಿಂದೆ ಜೈಶ್ ಸಂಘಟನೆಯ ಧ್ವಜವನ್ನು ಹೊಂದಿರುವ ವಿಡಿಯೋದಲ್ಲಿ ದಕ್ಷಿಣ ಕಾಶ್ಮೀರದ ಕಾಕಪೊರದ ಆದಿಲ್​ ಅಲಿಯಾಸ್​ ವಕಾಸ್​ ಎಂಬ ಉಗ್ರ ಮಾತನಾಡಿದ್ದಾನೆ. ಅವನ ಸುತ್ತ ಹಲವು ಅತ್ಯಾಧುನಿಕ…

  • ಜ್ಯೋತಿಷ್ಯ

    ಗುರುವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ..?ಶುಭವೋ ಅಶುಭವೋ ನೋಡಿ ತಿಳಿಯಿರಿ…

    ಗುರುವಾರ, 22/03/2018, ಇಂದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ… ಮೇಷ:– ವಿದ್ಯಾರ್ಥಿಗಳಿಗೆ ನಿರೀಕ್ಷಿತ ಪ್ರಗತಿ. ಭೂಮಿ ಖರೀದಿ, ಮನೆ ನಿರ್ಮಾಣ ಕಾರ್ಯಗಳಿಗೆ ಒಳ್ಳೆಯ ಕಾಲ. ವಿನಾಕಾರಣ ಮನಸ್ತಾಪ ಬೇಡ. ದೂರ ಪ್ರಯಾಣದ ಸಾಧ್ಯತೆ. ಹಣಕಾಸಿನ ವಿಚಾರದಲ್ಲಿ ನೀವು ಉತ್ತಮ. ವೃಷಭ:- ತೊಂದರೆಗಳು ಹಂತಹಂತವಾಗಿ ಪರಿಹಾರವಾಗಲಿವೆ.ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಆರೋಗ್ಯಭಾಗ್ಯ ಉತ್ತಮವಾಗಿದೆ. ಮಕ್ಕಳು ಹೆಚ್ಚು ಶ್ರಮವಹಿಸಬೇಕು. ವಿನಾಕಾರಣ ಮನೆಯಲ್ಲಿ ಮನಸ್ತಾಪ. ಮಿಥುನ:– ಉದ್ಯೋಗಿಗಳಿಗೆ ಭಡ್ತಿ.ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರದಿಂದ ಅಧಿಕ ಲಾಭ. ವಾದ-ವಿವಾದಗಳ ಬಗ್ಗೆ ಹೆಚ್ಚಿನ ಜಾಗ್ರತೆ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ…

  • Sports

    2ನೇ ಟೆಸ್ಟ್ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

    2ನೇ ಟೆಸ್ಟ್ ಪಂದ್ಯ  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ಕೆಎಲ್ ರಾಹುಲ್ ಈ ಪಂದ್ಯಕ್ಕೆ ನಾಯಕ.  ಬೆನ್ನುನೋವಿನ ಸೆಳೆತದಿಂದ ವಿರಾಟ್ ಕೊಹ್ಲಿ ಅಲಭ್ಯ,ಹನುಮ ವಿಹಾರಿ ಕಣಕ್ಕೆ ಅಂತಿಮ 11ರ ಬಳಗ  ಭಾರತ ಮಾಯಾಂಕ್ ಅಗರ್ವಾಲ್ ಕೆ ಎಲ್ ರಾಹುಲ್(ನಾಯಕ) ಚೇತೇಶ್ವರ ಪೂಜಾರಾ ಅಜಿಂಕ್ಯ ರಹಾನೆ ಹನುಮ ವಿಹಾರಿ ರಿಷಭ್ ಪಂತ್ (ವಿ.ಕೀ) ರವಿಚಂದ್ರನ್ ಅಶ್ವಿನ್ ಶಾರ್ದೂಲ್ ಠಾಕೂರ್ ಮೊಹಮ್ಮದ್ ಶಮಿ ಜಸ್ಪ್ರೀತ್ ಬುಮ್ರಾ ಮೊಹಮ್ಮದ್ ಸಿರಾಜ್ ದಕ್ಷಿಣ ಆಫ್ರಿಕಾ ಡೀನ್ ಎಲ್ಗರ್(ನಾಯಕ) ಐಡೆನ್…

    Loading

  • ದೇಗುಲ ದರ್ಶನ

    ಕಣ್ಮರೆಯಾಗಿ ಮತ್ತೆ ಪ್ರತ್ಯಕ್ಷ ವಾಗುವ ಶಿವನ ದೇವಾಲಯ. ಈ ವೇಳೆ ಹೊಳಗೆ ಹೋಗುವ ಹಾಗಿಲ್ಲ.!

    ಸ್ತಂಭೇಶ್ವರ ಮಹಾದೇವ ದೇವಸ್ಥಾನವು 150 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯ. ಇದು ಗುಜರಾತ್ನ ವಡೋದರಾ ಬಳಿಯ ಕವಿ ಕಾಂಬೊಯ್ ಪಟ್ಟಣದಲ್ಲಿದ್ದು, ವಡೋದರಾ ಬಳಿಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ. 4 ಅಡಿ ಎತ್ತರದ ಶಿವಲಿಂಗ ಸ್ತಂಭೇಶ್ವರ ಮಹಾದೇವ ದೇವಾಲಯವು ಶಿವನಿಗೆ ಅರ್ಪಿತವಾಗಿದೆ. ವಾಸ್ತುಶಿಲ್ಪವು ತುಂಬಾ ಸರಳವಾಗಿದ್ದು, ದೇವಾಲಯವು ಮುಖ್ಯವಾಗಿ ಸ್ತಂಭಗಳ ಮೇಲೆ ಬೆಂಬಲಿತವಾಗಿದೆ. ಆದ್ದರಿಂದ ಇದನ್ನು ‘ಸ್ತಂಭೇಶ್ವರ ಮಹಾದೇವ’ ಎಂದು ಕರೆಯುತ್ತಾರೆ. ಕಣ್ಮರೆಯಾಗುವ ಶಿವ ದೇವಾಲಯ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಾಲಯವು ವಿಶಿಷ್ಟವಾಗಿದೆ. ಏಕೆಂದರೆ ಈ…