ಹೆಸರು ಹಾಗೂ ವ್ಯಕ್ತಿ ಮಧ್ಯೆ ಒಂದು ಬಂಧವಿದೆ. ಅನೇಕ ಗಣ್ಯರು, ಸೆಲೆಬ್ರಿಟಿಗಳು ಯಶಸ್ಸಿಗಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಹೆಸ್ರು ಪ್ರತಿಯೊಬ್ಬ ವ್ಯಕ್ತಿ ಮೇಲೂ ಪರಿಣಾಮ ಬೀರುತ್ತದೆ. ಪ್ರತಿಯೊಂದು ಅಕ್ಷರಕ್ಕೂ ತನ್ನದೇ ಆದ ಶಕ್ತಿ ಹಾಗೂ ಗುಣಲಕ್ಷಣವಿದೆ.
ನಿಮ್ಮ ಹೆಸ್ರು ಯಾವ ಅಕ್ಷರದಿಂದ ಶುರುವಾಗ್ತಿದೆ ಎಂಬುದರ ಮೇಲೆ ನಿಮ್ಮ ಸ್ವಭಾವವನ್ನು ಹೇಳಬಹುದು. ಕೆಲ ಅಕ್ಷರಗಳನ್ನು ಪ್ರಭಾವಶಾಲಿ ಎನ್ನಲಾಗುತ್ತದೆ. ಎ, ಜೆ, ಒ ಮತ್ತು ಎಸ್ ಅಕ್ಷರಗಳು ಪ್ರಭಾವಶಾಲಿಯಾಗಿರುತ್ತವೆ. ನಿಮ್ಮ ಅಕ್ಷರ ಎ ನಿಂದ ಶುರುವಾಗ್ತಿದ್ದರೆ ನಿಮ್ಮ ಸ್ವಭಾವದ ಬಗ್ಗೆ ತಿಳಿದುಕೊಳ್ಳಿ.
ಎ ಅಕ್ಷರ ಪ್ರಭಾವಶಾಲಿ ಅಕ್ಷರವೆಂದು ಪರಿಗಣಿಸಲಾಗಿದೆ. ನಿಮ್ಮ ಹೆಸರು ಎ ಅಕ್ಷರದಿಂದ ಶುರುವಾಗ್ತಿದ್ದರೆ ನೀವು ಧೈರ್ಯವಂತ ಹಾಗೂ ಸಾಹಸಿ ಸ್ವಭಾವ ಹೊಂದಿರುತ್ತೀರಿ. ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿರುತ್ತದೆ. ನಿಮ್ಮದೇ ನಿಯಮಗಳಡಿ ನೀವು ಜೀವನ ನಡೆಸುತ್ತೀರಿ.
ಎ ಅಕ್ಷರದ ಮಂದಿ ಎಲ್ಲ ಕ್ಷೇತ್ರಗಳಲ್ಲೂ ಮುಂದಿರಲು ಬಯಸ್ತಾರೆ. ಬಹಳ ಮಹತ್ವಕಾಂಕ್ಷಿಗಳಾಗಿರುತ್ತಾರೆ. ನಾಯಕತ್ವ ಅವ್ರಿಗೆ ಇಷ್ಟವಾಗುತ್ತದೆ. ಎ ಅಕ್ಷರ ಅನೇಕ ಬಾರಿ ಆಕ್ರಮಣಕಾರಿಯಾಗಿರುತ್ತದೆ. ಎ ಅಕ್ಷರದ ವ್ಯಕ್ತಿಗಳು ಸ್ಮಾರ್ಟ್ ಹಾಗೂ ಬುದ್ದಿವಂತರಾಗಿರುತ್ತಾರೆ. ಕಡಿಮೆ ರೋಮ್ಯಾಂಟಿಕ್ ವ್ಯಕ್ತಿತ್ವ ಹೊಂದಿರುವ ಇವ್ರಿಗೆ ಗಂಭೀರ ಸಂಬಂಧ ಇಷ್ಟವಾಗುವುದಿಲ್ಲ. ಆದ್ರೆ ಯಾರನ್ನು ಪ್ರೀತಿ ಮಾಡ್ತಾರೋ ಅವ್ರನ್ನು ಸದಾ ಖುಷಿಯಾಗಿಡಲು ಬಯಸ್ತಾರೆ. ಸಾರ್ವಜನಿಕ ಸ್ಥಳದಲ್ಲಿ ಪ್ರೀತಿ ವ್ಯಕ್ತಪಡಿಸಲು ಇವ್ರಿಗೆ ಇಷ್ಟವಿರುವುದಿಲ್ಲ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ವಿಶ್ವ ಆಹಾರ ದಿನದ ಹಿನ್ನೆಲೆ ಆಹಾರ ವಿಷವಾಗಲು ಕಾರಣಗಳೇನು, ಅದಕ್ಕೆ ಚಿಕಿತ್ಸೆ ಹಾಗೂ ಪರಹಾರವೇನು ಎಂದು ಮುಂದೆ ಲೇಖನದಲ್ಲಿ ತಿಳಿಯೋಣ. ಆಹಾರಕ್ಕಾಗಿಯೇ ಮನುಷ್ಯ ದಿನವಿಡೀ ನಾನಾ ಸರ್ಕಸ್ ಮಾಡಿಕೊಂಡು ಜೀವನ ಸಾಗಿಸುತ್ತಾನೆ. ಆದರೆ ಮನುಷ್ಯ ಕೆಲವೊಮ್ಮೆ ತಿನ್ನುವಂತಹ ಆಹಾರವು ವಿಷವಾಗುವುದು ಇದೆ. ಇಂತಹ ಸಮಸ್ಯೆಯು ಹೆಚ್ಚಿನವರನ್ನು ಕಾಡುವುದು ಇದೆ. ಆಹಾರವು ವಿಷವಾಗುವ ಪರಿಣಾಮ ಹಲವಾರು ರೀತಿಯ ಅಡ್ಡಪರಿಣಾಮಗಳು ದೇಹದ ಮೇಲೆ ಆಗಬಹುದು. ಆಹಾರ ವಿಷವಾಗುವುದು ಹೇಗೆ, ಅದಕ್ಕೆ ಪರಿಹಾರವೇನು ಎಂದು ನಾವು ಈ ಲೇಖನದ ಮೂಲಕ ತಿಳಿಯುವ….
ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮಗ ಅಭಿಷೇಕ್ ಎಂದರೆ ಅಚ್ಚುಮೆಚ್ಚು, ಮಗನ ಮದುವೆ ಮಾಡಬೇಕು, ಅವನ ಮೊದಲ ಚಿತ್ರವನ್ನು ನೋಡಬೇಕು ಎಂದು ಕನಸು ಕಂಡಿದ್ದರು. ಅಂಬರೀಶ್ ಅವರಿಗೆ ಇದ್ದಿದ್ದು ಎರಡೇ ಆಸೆ. ಒಂದು ಮುದ್ದಿನ ಮಗ ಅಭಿಷೇಕ್ ಅವರ ಮದುವೆ ಮಾಡ್ಬೇಕು, ಇನ್ನೊಂದು ಮಗನ ಮೊದಲ ಸಿನಿಮಾ ಅಮರ್ ಚಿತ್ರವನ್ನು ನೋಡಬೇಕು ಅಂತಾ. ರೆಬೆಲ್ ಸ್ಟಾರ್ ಎಂದಿಗೂ ಅವರ ಮಗನಿಗೆ ನೀನು ಹೀಗೆ ಇರಬೇಕು, ಇಂತದ್ದೆ ಮಾಡಬೇಕು ಎಂದು ಹೇಳಿದವರಲ್ಲ. ಅಂಬರೀಶ್ ಅವರ ಹಾಗೆ…
ಈ ಸಂಧಿವಾತದಲ್ಲಿ ಅತಿ ಹೆಚ್ಚಾಗಿ ನೋವು, ಮೂಳೆಗಳಲ್ಲಿ ಬಿಗಿತ ಹಾಗೂ ಊತ ಕಂಡು ಬರುತ್ತದೆ. ಈ ಖಾಯಿಲೆಯು ತಂಡಿಯ ವಾತಾವರಣ ಹಾಗೂ ಬೆಳಗಿನ ಕಾಲದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಇದೊಂದು ವಂಶಪಾರಂಪರಿಕ ರೋಗವಾಗಿದೆ.
ಪತಂಜಲಿ ಸಂಸ್ಥೆ 5 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂದು ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಅತ್ಯುತ್ತಮ ಮಾರ್ಗ. ಕಳೆದ 40 ವರ್ಷಗಳಿಂದ ನಾನು ಬೆಳಗ್ಗೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಚಟುವಟಿಕೆಯಿಂದ ಜೀವನ ನಡೆಸುತ್ತಿದ್ದೇನೆ ಎಂದು ಯೋಗ ಗುರು ಬಾಬಾ ರಾಮ್ದೇವ್ ಹೇಳಿದ್ದಾರೆ. ಮಾಧ್ಯವೊಂದರ ಜೊತೆ ಬಾಬಾ ರಾಮ್ದೇವ್ ಮಾತನಾಡಿ ಸ್ವಾವಲಂಬಿ (ಆತ್ಮನಿರ್ಭರ್) ಭಾರತಕ್ಕಾಗಿ ಅಳವಡಿಸಿಕೊಳ್ಳಬಹುದಾದ…