ಸುದ್ದಿ

ಜ್ಯೋತಿಷಿಗಳು ಹೇಳಿದ ಸಮಯದಲ್ಲೇ ಮಂಡ್ಯಕ್ಕೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಜೆಡಿಯಸ್!

82

ಮಂಡ್ಯದಲ್ಲಿ ನಡೆಯುತ್ತಿರುವ ಜೆಡಿಎಸ್ ಸಮಾವೇಶದಲ್ಲಿ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಶಾಸಕರ ಸಮ್ಮುಖದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರ ಹೆಸರನ್ನು ಘೋಷಿಸಿದ್ದಾರೆ.

ಅದರಲ್ಲೂ ವಾಸ್ತು, ಜೋತಿಷ್ಯಗಳಲ್ಲಿ ಹೆಚ್ಚು ನಂಬಿಕೆ ಇಟ್ಟಿರುವ ದೇವೇಗೌಡ ಕುಟುಂಬದವರು ಇಂದು ಶುಭ ಲಗ್ನವನ್ನು ನೋಡಿಕೊಂಡು ನಿಖಿಲ್ ಮಂಡ್ಯದ ಅಧಿಕೃತ ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.
ಹೆಸರು ಘೋಷಣೆ ಮಾಡಿದ ನಂತರ ಮಧ್ಯಾಹ್ನ 12:01ಕ್ಕೆ ನಿಖಿಲ್ ವೇದಿಕೆ ಮೇಲೆ ಬಂದಿದ್ದಾರೆ.

ರಾಜಕೀಯವಾಗಿ ಏರಬೇಕು, ಬೆಳಯಬೇಕು ಎನ್ನುವ ಉದ್ದೇಶದಿಂದ 12 ಗಂಟೆಗೆ ಅಭಿಜಿತ್ ಲಗ್ನದಲ್ಲಿ ರೇವಣ್ಣ ಸೂಚನೆ ಮೇರೆಗೆ ಪುಟ್ಟರಾಜು ನಿಖಿಲ್ ಹೆಸರನ್ನು ಘೋಷಿಸಿದ್ದಾರೆ ಎನ್ನಲಾಗುತ್ತದೆ. ಮಂಡ್ಯದಲ್ಲಿ ಇಂದು ಜೆಡಿಎಸ್‌ ಬೃಹತ್‌ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದು ಈ ಸಭೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭಾಗವಹಿಸಲಿದ್ದಾರೆ.

ದೇವೇಗೌಡರೇ ಮಂಡ್ಯ ಕ್ಷೇತ್ರಕ್ಕೆ ಮೈತ್ರಿ ಸರ್ಕಾರದ ಸರ್ವಾನುಮತದ ಅಭ್ಯರ್ಥಿಯಾಗಿ ನಿಖಿಲ್‌ ಹೆಸರನ್ನು ಘೋಷಿಸುತ್ತಾರೆಂದೇ ನಿರೀಕ್ಷಿಸಲಾಗಿತ್ತು. ಆದರೆ ಹನ್ನೆರಡು ಗಂಟೆಯೊಳಗೆ ಅಭ್ಯರ್ಥಿಯ ಹೆಸರನ್ನು ಘೋಷಿಸಬೇಕಾಗಿದ್ದ ಅನಿವಾರ್ಯತೆ ಇದ್ದುದರಿಂದ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರೇ ವೇದಿಕೆಯಲ್ಲಿ ನಿಖಿಲ್‌ ಹೆಸರನ್ನು ಪ್ರಕಟಿಸಿದ್ದಾರೆ.

ಜ್ಯೋತಿಷಿಗಳ ಸೂಚನೆಯಂತೆ ಹನ್ನೆರಡು ಗಂಟೆಯೊಳಗೆ ನಿಖಿಲ್‌ ಅಭ್ಯರ್ಥಿತನವನ್ನು ಘೋಸಿಸಬೇಕಾದ ಅನಿವಾರ್ಯತೆ ಇದ್ದಿರಬಹದೆಂದು ಇದೀಗ ಊಹಿಸಲಾಗುತ್ತಿದೆ

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಿನಿಮಾ

    ಟ್ರೊಲ್ ಪೇಜ್ ಗಳಿಗೆ ಆಗ ತುತ್ತಾಗಿದ್ದಅಗ್ನಿಶಾಕ್ಷಿ ಈಗ ಪುಟ್ಟಗೌರಿ ಧಾರಾವಾಹಿ

    ಗೌರಿಯನ್ನ ಅತಿ ಎತ್ತರದ ಬೆಟ್ಟದಿಂದ ತಳ್ಳಲಾಗಿದೆ. ಹೀಗೆ, ಬೆಟ್ಟದಿಂದ ಬಿದ್ದ ಗೌರಿ ಸಾಯಲೇ ಇಲ್ಲ. ಅಲ್ಲಿಂದ ಆದ ಅದ್ಭುತಗಳು ಒಂದೆರಡಲ್ಲ. ಇದನ್ನ ಕಂಡು ಟ್ರೋಲ್ ಪೇಜ್ ಗಳು ಪುಟ್ಟಗೌರಿಯನ್ನ ಟ್ರೋಲ್ ಮಾಡಿದ್ದಾರೆ.

  • inspirational

    ಇಡೀ ಪ್ರಪಂಚ ತಲೆಕೆಡಿಸಿದ ಈ ಕ್ಯಾಪ್ಸಿಕಂ ಒಳಗೆ ಏನಿತ್ತು ಗೊತ್ತಾ?

    ಪ್ರಕೃತಿಯ ವಿಸ್ಮಯಗಳನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ. ಕೆಲುವೊಂದಕ್ಕೆ ಉತ್ತರ ಸಿಗಲ್ಲ. ಹೀಗೆ ಉತ್ತರ ಸಿಗದ ಅದೇಷ್ಟೋ ಪ್ರಶ್ನೆಗಳು ಹಾಗೇ ಉಳಿದುಕೊಂಡಿವೆ. ಇಂತಹ ಘಟನೆ ಹಿಂದೆಂದೂ ನಡೆದಿರಲಿಲ್ಲ. ಒಬ್ಬ ಮಹಿಳೆ ಮಾರುಕಟ್ಟೆಗೆ ಹೋಗಿ ಕ್ಯಾಪ್ಸಿಕಂ ತಂದು ಅಡುಗೆ ಮಾಡುವಾಗ ಅದನ್ನು ಕಟ್ ಮಾಡುತ್ತಿದ್ದಾಗ ಕ್ಯಾಪ್ಸಿಕಂ ಒಳಗೆ ಇದದ್ದು ಏನು ಗೊತ್ತಾ..? ಇಡೀ ಪ್ರಪಂಚವನ್ನು ಚಿಂತಿಸುವಂತೆ ಮಾಡಿದ ಆ ಘಟನೆ ನಡೆದದ್ದು ಹೇಗೆ ಗೊತ್ತಾ..? ಕೆನಡಾಗೆ ಸೇರಿದ ನಿಕೋಲೆ ಎಂಬ ಮಹಿಳೆ ರಾತ್ರಿ ಅಡುಗೆ ಮಾಡುವ ಸಲುವಾಗಿ ಹತ್ತಿರದ…

  • ಸ್ಪೂರ್ತಿ

    ದೇಶ ಕಾಯೋ ಈ ಸೈನಿಕ ತನ್ನ ಊರಿಗಾಗಿ ಮಾಡಿದ ಕೆಲಸ ಕೇಳಿದ್ರೆ ಶಾಕ್ ಆಗ್ತೀರಾ.!ತಿಳಿಯಲು ಈ ಲೇಖನ ಓದಿ ಮರೆಯದೇ ಶೇರ್ ಮಾಡಿ…

    ನೀವು ಈ ರೀತಿಯ ಸ್ಟೋರಿಯನ್ನು ಸಿನಿಮಾದಲ್ಲಿ ಅಥವಾ ಕಥೆ ಬರಹಗಳಲ್ಲಿ ನೋಡಿರುತ್ತೀರಿ ಆದರೆ ನಿಜ ಜೀವನದಲ್ಲಿ ಇವರು ಮಾಡಿರುವಂತ ಕೆಲಸಕ್ಕೆ ನೀವು ಹೆಮ್ಮೆ ಪಡುತ್ತೀರ. ಪ್ರಸ್ತುತ ದಿನಗಳಲ್ಲಿ ಜನರು ತಮ್ಮ ಬಗ್ಗೆ ಹಾಗು ತಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುತ್ತಾರೆ ವಿನಃ ತಾವು ವಾಸಿಸುವಂತ ಅಕ್ಕ ಪಕ್ಕದ ವಾತಾವರಣದ ಬಗ್ಗೆ ತಲೆ ಕೆಡಿಸಿ ಕೊಳ್ಳುವುದಿಲ್ಲ ಅಂತಹದರಲ್ಲಿ ಇವರು ಮಾಡಿರುವಂತ ಕೆಲಸ ನಿಜಕ್ಕೂ ಅದ್ಭುತವಾದದ್ದು ಅನ್ನಬಹುದು. 4 ಲಕ್ಷ ರೂಗಳ ದಾನ… ಹೆಸರು ಭಗೂರಾಮ್ ಮೌರ್ಯ ವಾರಣಾಸಿಯಿಂದ 20…

  • ಉಪಯುಕ್ತ ಮಾಹಿತಿ

    ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು

    ಗೃಹ ಲಕ್ಷ್ಮಿ ಯೋಜನೆಗೆ ಎಲ್ಲಿ ಯಾವಾಗ ಅರ್ಜಿ ಸಲ್ಲಿಸಬೇಕು ಎಂಬುದು ನಿಮಗೆ ಸರಕಾರದಿಂದ ಸಂದೇಶ ಬರಲಿದೆ ಹಾಗೂ ಈ ಲಿಂಕ್ ಮುಖಾಂತರ ತಿಳಿದುಕೊಳ್ಳಬಹುದು 8147500500  ಸಂಖ್ಯೆ ಗೆ ರೇಷನ್ ಕಾರ್ಡ್ ನಂಬರ್ SMS ಮಾಡಿದ ಬಳಿಕ ನೋಂದಣಿ ಸ್ಥಳ ದಿನಾಂಕ ಮತ್ತು ಸಮಯ ತಿಳಿಯ ಬಹುದು ಈ ಲಿಂಕ್ ತೆರೆದು ರೇಷನ್ ಕಾರ್ಡ್ ನಂಬರ್ ಹಾಕಿದರೆ ದಿನಾಂಕ ಸ್ಥಳ ಮತ್ತು ಸಮಯವನ್ನು ತಿಳಿಯ ಬಹುದು ಅಥವಾ 8147500500 ಸಂಖ್ಯೆ ಗೆ ರೇಷನ್ ಕಾರ್ಡ್ ನಂಬರ್ SMS ಮಾಡಿದ ಬಳಿಕ…

  • ಜ್ಯೋತಿಷ್ಯ

    ರಾಘವೇಂದ್ರ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ನಿಮ್ಮ ರಾಶಿಯಲ್ಲೇನಿದೆ ನೋಡಿ…

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(11 ಏಪ್ರಿಲ್, 2019) ನೀವು ಜೀವನವನ್ನು ಸಂತೋಷದಿಂದ ಅನುಭವಿಸಲು ಸಿದ್ಧವಾಗುತ್ತಿದ್ದ ಹಾಗೆ ನಿಮಗೆ ಸಂತೋಷ ಹಾಗೂ ಆನಂದ. ಇಂದು…