ಬಿಜೆಪಿ ವಲಯದಿಂದ ನೂತನ ಸಚಿವರ ಲೀಸ್ಟ್ ರಿಲೀಸ್ ಆಗಿದ್ದು, 17 ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ. ಅಲ್ಲದೇ, ಅಥಣಿ ಮಾಜಿ ಶಾಸಕ ಲಕ್ಷ್ಮಣ್ ಸವದಿಗೂ ಕೂಡ ಸಚಿವ ಸ್ಥಾನ ಸಿಕ್ಕಿರೋದು ವಿಶೇಷ.
ಇಂದು ರಾಜಭವನದಲ್ಲಿ ಪ್ರಮಣವಚನ ಕಾರ್ಯಕ್ರಮವಿರುವ ಹಿನ್ನೆಲೆ ರಾಜಭವನ ಸುತ್ತಮುತ್ತ ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ರಾಜಭವನದ ಸುತ್ತಮುತ್ತ 7 ಜನ ಡಿಸಿಪಿ ಸೇರಿ 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ವಿಧಾನಸೌಧ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಇನ್ನು ರಾಜಭವನದ ಮುಂಭಾಗದ ಭದ್ರತೆ ನೇತೃತ್ವವನ್ನ ಕೇಂದ್ರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ವಹಿಸಿಕೊಂಡಿದ್ದಾರೆ. ಪೂರ್ವ ವಿಭಾಗ ಟ್ರಾಫಿಕ್ ಡಿಸಿಪಿ ಜಗದೀಶ್ ಟ್ರಾಫಿಕ್ ನಿಯಂತ್ರಣದ ಜವಾಬ್ದಾರಿ ಹೊತ್ತಿದ್ದಾರೆ.
ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯ ತನಕ ರಾಜಭವನ ರಸ್ತೆ ಪ್ರವೇಶ ನಿರ್ಬಂಧ ಹೇರಲಾಗಿದ್ದು, ರಾಜಭವನ ಪ್ರವೇಶಕ್ಕೆ ಪಾಸ್ ಇರುವವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ರಾಜಭವನದ ಒಳಗಡೆ 1500 ಮಂದಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ರಾಜಭವನದ ಮುಂಭಾಗದ ರಸ್ತೆಯಲ್ಲಿ ಎರಡು ಎಲ್.ಇ.ಡಿ. ಸ್ಕ್ರೀನ್ಗಳನ್ನ ಅಳವಡಿಸಲಾಗಿದೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಯಶಸ್ಸು, ಸಂಪತ್ತುಗಳಿಕೆ, ಸಂವೃದ್ಧಿ ಇವುಗಳು ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು. ಜೀವನದ ಆಸೆಗಳನ್ನು ಶ್ರೀಮಂತಿಕೆಯ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಸಾನ್ನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಮತ್ತು ನೆಮ್ಮದಿ ಸಿಗುವುದು, ಅದು ಖಂಡಿತವಾಗಿಯೂ ನಿಜವೇ.
ಈ ಬಾರಿಯ ಎಸ್ಎಸ್ಎಲ್ ಸಿ ಫಲಿತಾಂಶದಲ್ಲಿ ಹಾಸನ ಮೊದಲ ಸ್ಥಾನ ಪಡೆದಿದ್ದು, ಈ ಮೂಲಕ ಜಿಲ್ಲೆ ಹೊಸ ದಾಖಲೆ ಬರೆದಿದೆ. ಹೌದು. ಫಲಿತಾಂಶದಲ್ಲಿ ಅರೆ ಮಲೆನಾಡು ರಾಜ್ಯದಲ್ಲೇ ನಂಬರ್ 1 ಸ್ಥಾನ ಪಡೆದಿದೆ. ಕಳೆದ ವರ್ಷ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 7ನೇ ಸ್ಥಾನದಲ್ಲಿತ್ತು. ಆದರೆ ಈ ಬಾರಿ ಮೊದಲ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಹಾಸನ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹಿಂದಿಕ್ಕಿದೆ. ಹಾಸನ ಪ್ರಥಮ ಸ್ಥಾನದ ಜೊತೆಗೆ ಹಾಸನದ ಇಬ್ಬರು ವಿದ್ಯಾರ್ಥಿಗಳು…
ಹಸಿ ಕೊತ್ತಂಬರಿ ಸೊಪ್ಪನ್ನು ಪ್ರತಿದಿನ ಆಹಾರದಲ್ಲಿ ಬಳಸುವುದರಿಂದ ಎ.ಬಿ1, ಬಿ2, ಸಿ ಜೀವಸತ್ವಗಳು ಮತ್ತು ಕಬ್ಬಿಣ ಇವುಗಳ ಅಭಾವದಿಂದ ತಲೆದೋರುವ ವ್ಯಾಧಿಗಳ ಭಯವಿರುವುದಿಲ್ಲ. ಒಂದು ಟೀ ಚಮಚ ಕೊತ್ತಂಬರಿ ಸೊಪ್ಪಿನ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪ ದೊಂದಿಗೆ ಮಿಶ್ರಮಾಡಿ ಪ್ರತಿದಿನ ರಾತ್ರಿ ಸೇವಿಸುತ್ತ್ತಿದ್ದರೆ ಮೆದುಳಿನ ಕ್ರಿಯಾಶಕ್ತಿ ಹೆಚ್ಚುವುದು. ಕಣ್ಣು, ಕಿವಿ, ಹೃದಯ, ಶ್ವಾಸಕೋಶ ಕ್ರಿಯೆ ಚುರುಕಿನಿಂದ ನಡೆಯುವುದು. ಕ್ಷಯ ಮತ್ತು ಉಬ್ಬಸ ರೋಗಗಳ ಬಾಧೆ ಇರುವುದಿಲ್ಲ. ಕೊತ್ತಂಬರಿ ಸೊಪ್ಪನ್ನು ಹಲ್ಲುಗಳಿಂದ ಅಗಿಯುವುದರಿಂದ ದಂತಕ್ಷಯ ನಿವಾರಣೆಯಾಗುವುದು. ಬಾಯಿಯಿಂದ ದುರ್ಗಂಧ…
ಮೂವರು ಅಪರಿಚಿತ ವ್ಯಕ್ತಿಗಳು ಸ್ಥಳೀಯ ಕ್ರಿಕೆಟಿಗನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಾಣಿಜ್ಯ ನಗರಿ ಮುಂಬೈನ ಭಂಡುಪ್ ಪ್ರದೇಶದಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಸುಮಾರು 12 ಗಂಟೆಯಲ್ಲಿ ಈ ಘಟನೆ ನಡೆದಿದ್ದು, ಮೃತ ಕ್ರಿಕೆಟಿಗನನ್ನು ರಾಕೇಶ್ ಪನ್ವಾರ್ ಎಂದು ಗುರುತಿಸಲಾಗಿದೆ. ಮೂವರು ದುಷ್ಕರ್ಮಿಗಳು ಬೈಕಿನಲ್ಲಿ ಬಂದು ರಾಕೇಶ್ಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ರಾಕೇಶ್ನನ್ನು ಸಮೀಪ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ…