ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
19 ವರ್ಷದ ಸಹೋದರಿಯೊಬ್ಬಳು ತನ್ನ ಬಾವನನ್ನು ಮದುವೆಯಾಗಲು ಸ್ವಂತ ಅಕ್ಕನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಅಭಿಲಾಷಾ ಕೊಲೆಯಾದ ಸಹೋದರಿ. ಈ ಘಟನೆ ಜಬಲ್ಪುರದ ಕೈಥಾಲಾದಲ್ಲಿ ನಡೆದಿದೆ. ಆರೋಪಿ ಸಾಕ್ಷಿ ಅಕ್ಕನ ಪತಿಯನ್ನು ವಿವಾಹವಾಗಲು 7 ತಿಂಗಳ ಗರ್ಭಿಣಿಯಾಗಿದ್ದ ತನ್ನ ಸೋದರಿಯನ್ನು ಅನೇಕ ಬಾರಿ ಚಾಕುವಿನಿಂದ ಇರಿದು ಅಮಾನವೀಯವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲಿಸರು ತಿಳಿಸಿದ್ದಾರೆ.

ಬಾತ್ರೂಮಿನಲ್ಲಿ ಗರ್ಭಿಣಿ ಮಹಿಳೆಯ ಶವ ಪತ್ತೆಯಾಗಿದ್ದು, ಕತ್ತು, ಹೊಟ್ಟೆ ಭಾಗದಲ್ಲಿ ಇರಿದ ಗಾಯಗಳು ಕಂಡುಬಂದಿದೆ. ಅದೇ ಜಾಗದಲ್ಲಿ ಕೃತ್ಯಕ್ಕೆ ಬಳಸಲಾಗಿದ್ದ ಚಾಕು ಕೂಡ ಪತ್ತೆಯಾಗಿದೆ ಎಂದು ಶಾಪುರಾ ಪೊಲೀಸರು ತಿಳಿಸಿದ್ದರು. ಈ ಕುರಿತು ತನಿಖೆ ನಡೆಸಿದಾಗ ಮುಖದ ಸುತ್ತ ಬಟ್ಟೆಯೊಂದನ್ನು ಸುತ್ತಿಕೊಂಡು ಯುವತಿಯೊಬ್ಬಳು ಬಾತ್ರೂಮ್ನಿಂದ ಹೊರಗೆ ನಡೆದುಕೊಂಡು ಹೋಗುವುದನ್ನು ನೋಡಿದ್ದೇವೆ ಎಂದು ನೆರೆಹೊರೆಯವರು ತಿಳಿಸಿದ್ದರು. ನಂತರ ಅನುಮಾನದ ಮೇರೆಗೆ ಶಹಪುರ-ನರಸಿಂಗ್ಪುರ ರಸ್ತೆ ಬಳಿ ಆರೋಪಿ ಸಾಕ್ಷಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ಅಭಿಲಾಷಾ ಅನಾರೋಗ್ಯಕ್ಕೆ ಒಳಗಾದ ನಂತರ ನಾನು ಸಹೋದರಿಯ ಮನೆಗೆ ಹೋಗಿದ್ದೆ. ಈ ಹಿಂದೆಯೂ ನಾನು ಸಹೋದರಿಯನ್ನು ಕೊಲೆ ಮಾಡಲು ಯತ್ನಿಸಿದ್ದೆ. ಆದರೆ ನನ್ನ ಪ್ರಯತ್ನಗಳು ವಿಫಲವಾಗಿತ್ತು ಎಂದು ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.

ಆರೋಪಿ ಸಾಕ್ಷಿ ತನ್ನ ಬಾವ ಅನ್ಮೋಲ್ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಳು. ಈ ವಿಚಾರ ಮೃತ ಅಕ್ಕನಿಗೆ ತಿಳಿದಿತ್ತು. ಆಗ ಅಭಿಲಾಷಾ ನೀನು ಇಲ್ಲಿ ಇರುವುದು ಬೇಡ ಮನೆಗೆ ಹೋಗು ಎಂದು ಹೇಳಿದ್ದಳು. ಅಷ್ಟೇ ಅಲ್ಲದೇ ಆಕೆಯ ಸಹೋದರ ಕೂಡ ಸಾಕ್ಷಿಯನ್ನು ಮನೆಗೆ ಕಳುಹಿಸುವಂತೆ ತಿಳಿಸಿದ್ದನು. ಇದರಿಂದ ಕೋಪಗೊಂಡ ಆರೋಪಿ ಸಾಕ್ಷಿ ಸಹೋದರಿಯನ್ನು ಕೊಲೆ ಮಾಡಿದ್ದಾಳೆ ಎಂದು ಜಿಲ್ಲಾ ಎಸ್ಪಿ ಆರ್.ಕೆ.ನಾರ್ವಾರಿಯಾ ಹೇಳಿದ್ದಾರೆ.ಸದ್ಯಕ್ಕೆ ಆರೋಪಿ ಸಾಕ್ಷಿ ಹೇಳಿಕೆಯ ನಂತರ ಆಕೆಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ಅವಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಜೀವನದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ತಾನೂ ತುಂಬಾ ಎತ್ತರಕ್ಕೆ ಬೆಳೆಯಬೇಕು,ಎಲ್ಲರಂಚೆನ್ನಾಗಿ ಬದುಕಬೇಕು, ತಾವು ಶ್ರೀಮಂತರಾಗಬೇಕು ಎಂಬ ಆಸೆಯಿಂದ, ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ, ಆದ್ರೆ ತಾವು ಎಷ್ಟು ದುಡಿದ್ರೂ ಕೆಲವರಿಗೆ ಮುಂದೆ ಬರಲು ಸಾಧ್ಯವಾಗುವುದಿಲ್ಲ.ಇದಕ್ಕೆ ಹಲವಾರು ಕಾರಣಗಳಿವೆ.
ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡ ಈ ದಿನ ಸಮಸ್ತ ದೇವತೆಗಳಿಗೂ ಪೂಜೆ ಹಾಗೂ ಪ್ರಾರ್ಥನೆಯನ್ನುಸಲ್ಲಿಸಬೇಕು. ಈ ದಿನ ಹರಿ-ಹರರ ಭಕ್ತರು ತಮ್ಮ ದೇವರಿಗಾಗಿ ವಿಶೇಷ ಉಪವಾಸ ವ್ರತಗಳನ್ನು ಕೈಗೊಂಡರೆ ಅವರು ಪ್ರಸನ್ನರಾಗುವರು. ಜೊತೆಗೆ ಭಕ್ತರ ಜೀವನೋದ್ಧಾರಕ್ಕೆ ಆಶೀರ್ವದಿಸುವರು ಎನ್ನಲಾಗುವುದು. ಕಾರ್ತಿಕ ಹುಣ್ಣಿಮೆಯನ್ನು ಈ ಬಾರಿ ನವೆಂಬರ್12 ರಂದು ಆಚರಿಸಲಾಗುತ್ತದೆ, ಇದನ್ನು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುವುದು. ಕೆಲವು ಪುರಾಣ ಕಥೆಗಳ…
ಟೀ ಪ್ರಿಯರಿಗೆ ಹೊಸ ಸಿಹಿ ಸುದ್ದಿ . ಇದುವರೆಗೂ ಟೀ ಪ್ರಿಯರು ಮಸಾಲಾ ಟೀ, ಲೈಮ್ ಟೀ, ಹರ್ಬಲ್ ಟೀ, ಗ್ರೀನ್ ಟೀ, ಮಶ್ರೂಮ್ ಟೀ ಎಂದೆಲ್ಲ ಹೊಸ ಹೊಸ ಟೀಗಳನ್ನು ಜನರು ಟೆಸ್ಟ್ ಮಾಡಿರಬಹುದು ಇದೀಗಾ ಈ ಟೀಗಳ ಸಾಲಿಗೆ ಹೊಸ ಟೀಂ ಒಂದು ಸೇರ್ಪಡೆಯಾಗುತ್ತಿದೆ. ಯಾವುದಪ್ಪಾ ಅದು ಅಂತೀರಾ? ಹೌದು ಭಾರತಕ್ಕೆ ಬಬಲ್ ಟೀ ಎಂಬ ಹೊಸ ಟೀ ಬಂದಿದೆ. ಬಬಲ್ ಟೀ ಎಂದೊಡನೆ ಟೀ ನಲ್ಲಿ ಬಬಲ್ ಇರಬಹುದು ಎಂದು ಊಹಿಸಬೇಡಿ ….
ಸ್ಮಾರ್ಟ್ಫೋನ್ಸ್ ಇಂದು ನಮ್ಮ ಜೀವನವನ್ನು ಯಾವುದೋ ಒಂದು ವಿಧದಲ್ಲಿ ಪ್ರಭಾವಿಸುತ್ತಿದೆ ಎಂದು ಎಲ್ಲರಿಗೂ ಗೊತ್ತಿರುವುದೇ. ಅಂಗೈಯಲ್ಲಿ ಜಗತ್ತನ್ನು ತೋರಿಸುವ ಹೈಸ್ಪೀಡ್ ಇಂಟರ್ನೆಟ್, ಸಾಮಾಜಿಕ ನೆಟ್ವರ್ಕಿಂಗ್, ಮ್ಯಾಪ್ಸ್, ಗೇಮ್ಸ್, ಎಂಟರ್ ಟೇನ್ಮೆಂಟ್…. ಹೀಗೆ ಸಾಕಷ್ಟು ರೀತಿಯಲ್ಲಿ ಸ್ಮಾರ್ಟ್ಫೋನ್ಸ್ನ್ನು ನಾವು ಬಳಸುತ್ತಿದ್ದೇವೆ. ಅತ್ಯಂತ ಕಡಿಮೆ ಬೆಲೆಗೆ ಇವು ಈಗ ನಮಗೆ ಲಭ್ಯವಾಗುತ್ತಿವೆ
ಹಲವರಲ್ಲಿ ನಿಶ್ಯಕ್ತಿ ಸಿಕ್ಕಾಪಟ್ಟೆ ಕಾಟ ಕೊಡ್ತಿರುತ್ತೆ. ಸ್ವಲ್ಪನೇ ಕೆಲಸ ಮಾಡಿದ್ರು ಜಾಸ್ತಿ ಸುಸ್ತಾಗೋವಂತ ತುಂಬಾ ಜನ ನಮ್ಮ ಮಧ್ಯನೇ ಇದಾರೆ. ಸುಸ್ತು ಖಾಯಿಲೆಯ ಗುರುತಾಗಿರಬಹುದು.ಥೈರಾಯಿಡ್ ಸಮಸ್ಯೆ, ಅಜೀರ್ಣ, ಮಲಬದ್ಧತೆ, ಮಧುಮೇಹ, ಅಧಿಕ ರಕ್ತದೊತ್ತಡ, ಅಪೌಷ್ಟಿಕತೆ, ರಕ್ತಹೀನತೆ, ಮಾನಸಿಕ ಒತ್ತಡ ಇತರೆ ಹತ್ತು ಹಲವು ಸಮಸ್ಯೆಗಳು ನಿಶ್ಯಕ್ತಿಗೆ ಮೂಲ ಕಾರಣವಾಗಿರಬಹುದು.
ಈಗಂತೂ ಸರ್ಕಾರಿ ಸಂಸ್ಥೆಗಳಲ್ಲಿ ನಮಗೆ ಬೇಕಾದ ದಾಖಲಾತಿಗಳನ್ನು ಪಡೆಯುವುದು ಅಷ್ಟು ಸುಲಭವಲ್ಲ…ಆದರೆ ನಮಗೆ ಗೊತ್ತಿಲ್ಲದ ವಿಷಯವೇನೆಂದರೆ ಕೆಲವೊಂದು ಸೌಲಭ್ಯಗಳನ್ನು ತುಂಬಾ ಸರಳವಾಗಿ ನಾವು ಪಡೆದುಕೊಳ್ಳಬಹುದು.ಅದರಲ್ಲಿ ಒಂದು, ನಮ್ಮ ಜಮೀನುಗಳಿಗೆ ಸಂಬಂದಪಟ್ಟಪಹಣಿ (RTC), ಮತ್ತು ಮಿಟೆಶನ್ ಗಳನ್ನೂ ನಾವು ನಿಮ್ಮ ಮೊಬೈಲ್ನಲ್ಲಿ ಚೆಕ್ ಮಾಡಿಕೊಳ್ಳಬಹುದು.