ತುಮಕೂರು, ಜು. 27- ಬಾಣಂತನಕ್ಕೆ ಹೋಗಿದ್ದ ಪತ್ನಿಯನ್ನು ಮನೆಗೆ ಕರೆಸದ ತಾಯಿ ಜತೆ ಜಗಳವಾಡಿ ಪದೇ ಪದೇ ಅವರ ಮೇಲೆ ಹಲ್ಲೆ ನಡೆಸುತ್ತಿದ್ದ ಅಣ್ಣನ ವರ್ತನೆಯಿಂದ ಕುಪಿತಗೊಂಡ ತಮ್ಮ ರಾತ್ರಿ ಅಣ್ಣನ ಕುತ್ತಿಗೆಗೆ ಚಾಕುವಿನಿಂದ ಬಲವಾಗಿ ಇರಿದು ಕೊಲೆ ಮಾಡಿರುವ ಧಾರುಣ ಘಟನೆ ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ರಾಮಗೊಂಡನಹಳ್ಳಿಯ ಮಹೇಶ್ (35) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ತಮ್ಮ ಅಂಜನಮೂರ್ತಿ ಪೊಲೀಸರ ಅತಿಥಿಯಾಗಿದ್ದಾನೆ. ಚಿಕ್ಕಹನುಮಯ್ಯ-ಗಂಗಮ್ಮ ದಂಪತಿಯ ಮೊದಲ ಮಗನಾದ ಮಹೇಶ್ ನಿಗೆ ಮದುವೆಯಾಗಿದ್ದು ಬಾಣಂತನಕ್ಕೆಂದು ಪತ್ನಿ ತನ್ನ ತವರು ಮನೆಯಾದ ಆಂಧ್ರಪ್ರದೇಶಕ್ಕೆ 8 ತಿಂಗಳ ಹಿಂದೆ ಹೋಗಿದ್ದು ವಾಪಸಾಗಿಲ್ಲ.
ಲಾರಿ ಚಾಲಕ ವೃತ್ತಿ ಮಾಡುತ್ತಿದ್ದ ಮಹೇಶ ತನ್ನ ಪತ್ನಿಯನ್ನು ಕರೆಸುವಂತೆ ತಾಯಿ ಜತೆ ಆಗಾಗ್ಗೆ ಕುಡಿದು ಬಂದು ಜಗಳವಾಡುತ್ತಿದನು. ಸಹೋದರ್ಮ ಅಂಜನಮೂರ್ತಿ ಬುದ್ದಿವಾದ ಹೇಳಿದರೂ ತನ್ನ ಚಾಳಿ ಮುಂದುವರೆಸಿದನು. ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಕುಡಿದುಕೊಂಡು ಮನೆಗೆ ಬಂದ ಮಹೇಶ ಪತ್ನಿಯನ್ನು ಕರೆಸಿಲ್ಲ ಎಂದು ಮತ್ತೊಮ್ಮೆ ಜಗಳವಾಡಿ ತಾಯಿಗೆ ಮನಬಂದಂತೆ ಹೊಡೆದಿದ್ದಾನೆ.
ನೆರೆಮನೆಯವರು ಜಗಳ ಬಿಡಿಸಿ ಸಮಾಧಾನ ಪಡಿಸಿದ್ದಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಮನೆಯಿಂದ ಹೊರಗೆ ಹೋದ ಮಹೇಶ ರಾತ್ರಿ 8 ಗಂಟೆ ಸುಮಾರಿನಲ್ಲಿ ಮತ್ತೆ ಕುಡಿದು ಬಂದು ತಾಯಿಯನ್ನು ಹುಡುಕಾಡಿದ್ದಾನೆ. ಈತನ ವರ್ತನೆಯಿಂದ ಭಯಗೊಂಡ ತಾಯಿ ಮನೆಯ ಹಿಂಬದಿ ಬಚ್ಚಿಟ್ಟುಕೊಂಡಿದ್ದಾರೆ. ಕೆಲ ಸಮಯದ ನಂತರ ಮಹೇಶ ನಿದ್ರೆಗೆ ಜಾರಿದ್ದಾನೆ.ರಾತ್ರಿ 9ಗಂಟೆ ಸುಮಾರಿನಲ್ಲಿ ಎರಡನೇ ಮಗ ಅಂಜನಮೂರ್ತಿ ಮನೆಗೆ ಬಂದಾಗ ಮನೆಯಲ್ಲಿ ತಾಯಿ ಇಲ್ಲದಿರುವುದನ್ನು ಗಮನಿಸಿ ಎಲ್ಲ ಕಡೆ ಹುಡುಕಾಡಿದ್ದಾನೆ. ಮಗನ ಧ್ವನಿ ಕೇಳಿದ ಗಂಗಮ್ಮ ಬಚ್ಚಿಟ್ಟುಕೊಂಡಿದ್ದ ಸ್ಥಳದಿಂದ ಬಂದು ಮಧ್ಯಾಹ್ನ ನಡೆದ ಘಟನೆಯ ವಿವರವನ್ನು ತಿಳಿಸಿದ್ದಾರೆ.
ಅಣ್ಣನ ವರ್ತನೆ ಪ್ರತಿದಿನ ಮಿತಿಮೀರುತ್ತಿದೆ, ಎಷ್ಟು ಬುದ್ಧಿ ಹೇಳಿದರೂ ಕೇಳುವುದಿಲ್ಲ ಎಂದು ಆಕ್ರೋಶಗೊಂಡ ಅಂಜನಮೂರ್ತಿ ಅಡುಗೆಮನೆಯಲ್ಲಿದ್ದ ಚಾಕುವನ್ನು ತಂದು ಮಲಗಿದ್ದ ಅಣ್ಣನ ಮೇಲೆ ಕುಳಿತು ಕುತ್ತಿಗೆ ಕುಯ್ದು ಕೊಲೆ ಮಾಡಿ ನಂತರ ಮನೆ ಹೊರಗೆ ಕುಳಿತಿದ್ದ ತಾಯಿಗೆ ಅಣ್ಣನನ್ನು ಕೊಲೆ ಮಾಡಿರುವುದಾಗಿ ಹೇಳಿ ಅಲ್ಲಿಂದ ಪರಾರಿಯಾಗಿದ್ದಾನೆ.ಈ ಘಟನೆಯಿಂದ ಕಂಗಾಲಾದ ತಾಯಿ ಚೀರುತ್ತಾ ಮನೆಯೊಳಗೆ ಹೋಗಿದ್ದನ್ನು ಗಮನಿಸಿದ ನೆರೆಹೊರೆಯವರು ಮನೆ ಬಳಿ ಬಂದು ನೋಡಿದಾಗ ಮಹೇಶ ಕೊಲೆಯಾಗಿರುವುದುನ್ನು ಕಂಡು ತಕ್ಷಣ ಕೋರಾ ಠಾಣೆ ಪೆÇಲೀಸರಿಗೆ ವಿಷಯ ತಿಳಿಸಿದ್ದಾರೆ. ಸಬ್ ಇನ್ಸ್‍ಪೆಕ್ಟರ್ ಶೇಷಾದ್ರಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಡಿವೈಎಸ್‍ಪಿ ತಿಪ್ಪೇಸ್ವಾಮಿ, ವೃತ್ತನಿರೀಕ್ಷಕ ಮಧುಸೂಧನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ಕೋನವಂಶಿಕೃಷ್ಣ ಅವರು, ಆರೋಪಿ ಪತ್ತೆಗೆ ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಮಧುಸೂಧನ್, ಸಬ್ ಇನ್ಸ್‍ಪೆಕ್ಟರ್ ಶೇಷಾದ್ರಿ, ಸಿಬ್ಬಂದಿ ಶ್ರೀನಿವಾಸ್ ಅವರನ್ನೊಳಗೊಂಡ ವಿಶೇಷ ತಂಡ ರಚಿಸಿದ್ದರು.ಈ ತಂಡ ಆರೋಪಿ ಬಗ್ಗೆ ಮಾಹಿತಿ ಕಲೆ ಹಾಕಿದಾಗ ಈತ ಆಂಧ್ರಪ್ರದೇಶಕ್ಕೆ ಪರಾರಿಯಾಗುತ್ತಿದ್ದಾನೆಂಬ ಸುಳಿವಿನ ಮೇರೆಗೆ ತಕ್ಷಣ ಕಾರ್ಯಪ್ರವೃತ್ತರಾಗಿ ರಾತ್ರಿಯಿಡಿ ಕಾರ್ಯಾಚರಣೆ ನಡೆಸಿ ಬೆಳಗಿನ ಜಾವ ಆರೋಪಿ ಅಂಜನಮೂರ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಸ್ಯಾಂಡಲ್‍ವುಡ್ ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಎಂದರೆ ನಮ್ಮೆಲ್ಲರ ಅಚ್ಚುಮೆಚ್ಚಿನ ಜೋಡಿ. ರಾಧಿಕಾ ಪಂಡಿತ್ ಅವರು ಇಂದು ಮುಂಜಾನೆ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದು, ಈ ವೇಳೆ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ರಾಕಿಂಗ್ ಕುಟುಂಬದವರು ತಿಳಿಸಿದ್ದಾರೆ. ಸದ್ಯ ಮನೆಯಲ್ಲಿ ಜೂನಿಯರ್ ಯಶ್ ಆಗಮನದಿಂದ ಯಶ್ ಮನೆಯವರು ಮತ್ತು ರಾಕಿಂಗ್ ಜೋಡಿ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿಮಾನಿಗಳು ತುಂಬಾ ಖುಷಿಯಾಗಿದ್ದಾರೆ. ಇತ್ತೀಚೆಗೆ ರಾಧಿಕಾ ಪಂಡಿತ್…
ಮುಂಬರುವ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ತಯಾರಿ ಆಂಧ್ರಪ್ರದೇಶದಲ್ಲಿ ಜೋರಾಗಿ ನಡೆಯುತ್ತಿದೆ. ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮಹತ್ವದ ಘೋಷಣೆ ಮಾಡಿದ್ದಾರೆ. ನಾಯ್ಡು ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ 10 ಸಾವಿರ ರೂಪಾಯಿ ಹಾಗೂ ಒಂದು ಮೊಬೈಲ್ ಫೋನ್ ನೀಡಲಿದ್ದಾರಂತೆ. ಅಮರಾವತಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನಾಯ್ಡು ಈ ಘೋಷಣೆ ಮಾಡಿದ್ದಾರೆ. ಹಣ ಮಹಿಳೆಯರಿಗೆ ಮೂರು ಹಂತದಲ್ಲಿ ಸಿಗಲಿದೆ. ಫೆಬ್ರವರಿಯಲ್ಲಿ ಮೊದಲ ಚೆಕ್ ವಿತರಣೆಯಾಗಲಿದೆ.ಮಹಿಳೆಯರಿಗೆ ಫೆಬ್ರವರಿಯಲ್ಲಿ 2500 ರೂಪಾಯಿ ಚೆಕ್ ಸಿಗಲಿದೆ. ಶೀಘ್ರವೇ ಸ್ಮಾರ್ಟ್ಫೋನ್ ನೀಡುವುದಾಗಿ ಅವರು…
ಹುಡುಗಿಯರು ಮತ್ತಷ್ಟು ಸುಂದರವಾಗಿ ಕಾಣಲು ಅನವಶ್ಯಕ ಕೂದಲನ್ನು ತೆಗೆಯುತ್ತಾರೆ.ಇದಕ್ಕಾಗಿ ಥ್ರೆಡ್ಡಿಂಗ್ ಮಾಡಿಸಿಕೊಳ್ತಾರೆ. ಥ್ರೆಡ್ಡಿಂಗ್ ಸೂಕ್ಷ್ಮ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಥ್ರೆಡ್ಡಿಂಗ್ ಮಾಡಿದ ಜಾಗದಲ್ಲಿ ಮೊಡವೆಗಳು ಏಳುತ್ತವೆ. ಒಂದು ಮಾಡಲು ಹೋಗಿ ಇನ್ನೊಂದಾಯ್ತು ಅಂತಾ ಗೊಣಗ್ತಾರೆ. ಇನ್ನು ಈ ಬಗ್ಗೆ ಬೇಸರ ಮಾಡಿಕೊಳ್ಳಬೇಕಾಗಿಲ್ಲ. ಈ ಮೊಡವೆಗಳಿಂದ ಸುಲಭವಾಗಿ ಮುಕ್ತಿ ಹೊಂದುವ ಉಪಾಯ ಇಲ್ಲಿದೆ.ಥ್ರೆಡ್ಡಿಂಗ್ ಮಾಡಿಸಿಕೊಳ್ಳುವ ಮೊದಲು ಚರ್ಮವನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದರಿಂದ ಥ್ರೆಡ್ಡಿಂಗ್ ಮಾಡುವ ವೇಳೆ ನೋವಾಗುವುದಿಲ್ಲ. ನಂತರ ಕಾಟನ್ ಬಟ್ಟೆಯಿಂದ ಚರ್ಮವನ್ನು ಮೃದುವಾಗಿ…
ಇದು ಪ್ಲಾಸ್ಟಿಕ್ ಯುಗ ಮನುಷ್ಯ ಪ್ರತಿಯೊಂದಕ್ಕೂ ಪ್ಲಾಸ್ಟಿಕ್ ಮೇಲೆ ಅವಲಂಬಿತವಾಗಿದ್ದಾರೆ. ತಾನು ಬಳಸುವ ದಿನನಿತ್ಯದ ಹಲವು ವಸ್ತುಗಳು ಅಷ್ಟಲ್ಲದೆ ತಿನ್ನಲು, ಕುಡಿಯಲು ಬಳಸುವ ವಸ್ತು ಸಹ ಪ್ಲಾಸ್ಟಿಕ್ ನಿಂದಲೇ ಕೂಡಿರುತ್ತದೆ. ಆದರೆ ಈ ಪ್ಲಾಸ್ಟಿಕ್ ಮನುಷ್ಯನ ಜೀವಕ್ಕೆ ಮುಂದೊಂದು ದಿನ ಕುತ್ತು ತರುತ್ತದೆ ಎಂದು ತಿಳಿದು ಎಚ್ಚೆತ್ತುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಆರೋಗ್ಯ ಹದಗೆಡದಂತೆ ಕಾಪಾಡಿಕೊಳ್ಳಬೇಕಾದ ಸಣ್ಣದೊಂದು ಈ ಸಲಹೆಯನ್ನು ಅನುಸರಿಸಿ. ಏನಾದು ಅಂತೀರಾ? ಹೌದು ನಾವು ದಿನನಿತ್ಯ ಬಳಸುವ ಕೆಲವು ಪ್ಲಾಸ್ಟಿಕ್ ತಟ್ಟೆ, ಪ್ಲಾಸ್ಟಿಕ್ ಲೋಟ,…
ಒತ್ತಡದ ಜೀವನಶೈಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ, ಅದರಲ್ಲೊಂದು ರಕ್ತದೊತ್ತಡ. ರಕ್ತದೊತ್ತಡ ಸಮಸ್ಯೆಯಿಂದ ಹೃದಯಾಘತ, ಹೃದಯ ಸ್ತಂಭನ ಉಂಟಾಗುವುದು. ಇಲ್ಲಿ ರಕ್ತದೊತ್ತಡವನ್ನು ನಿಯತ್ರದಲ್ಲಿಡುವ ಟಿಪ್ಸ್ ನೀಡಿದ್ದೇವೆ ನೋಡಿ.ಅಧಿಕ ರಕ್ತದೊತ್ತಡದ ಸಮಸ್ಯೆ ಹೆಚ್ಚಿನವರಲ್ಲಿ ಕಂಡು ಬರುತ್ತದೆ. ಕೆಲಸದ ಒತ್ತಡ, ಮಾನಸಿಕ ಒತ್ತಡ ಈ ರಕ್ತದೊತ್ತಡ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುವುದು. ರಕ್ತದೊತ್ತಡ ಹೆಚ್ಚಾದರೆ ಸ್ಟ್ರೋಕ್(ಪಾರ್ಶ್ವವಾಯು), ಹೃದಯಾಘಾತ, ಹೃದಯ ಸ್ತಂಭನ ಮುಂತಾದ ಸಮಸ್ಯೆ ಕಂಡು ಬರುವುದು. ಆರೋಗ್ಯಕರ ಜೀವನಶೈಲಿ, ಧ್ಯಾನ, ವ್ಯಾಯಾಮ ರಕ್ತದೊತ್ತಡ ನಿಯಂತ್ರಣದಲ್ಲಿಡುವಲ್ಲಿ ಸಹಕಾರಿ. ರಕ್ತದೊತ್ತಡ ಸಮಸ್ಯೆ ಇರುವವರು…
ಭಾರತದ ಮಾಜಿ ನಾಯಕ ಮತ್ತು ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಇಂದು ಜನವರಿ 6, 2022 ರಂದು ತಮ್ಮ 63 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬಹುಶಃ ಭಾರತವು ನಿರ್ಮಿಸಿದ ಶ್ರೇಷ್ಠ ಆಲ್‌ರೌಂಡರ್ ಮತ್ತು ಭಾರತ ಪ್ರಸ್ತುತಪಡಿಸಿದ ಮೊದಲ ನಿಜವಾದ ವೇಗಿಗಳಲ್ಲಿ ಒಬ್ಬರು ಜಗತ್ತಿಗೆ, ಕಪಿಲ್ ದೇವ್ 1978 ರಲ್ಲಿ ಪ್ರಾರಂಭವಾದ ಅಂತಸ್ತಿನ ವೃತ್ತಿಜೀವನವನ್ನು ಹೊಂದಿದ್ದರು. ಭಾರತದ ಮಾಜಿ ನಾಯಕ ಮತ್ತು ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕಪಿಲ್ ದೇವ್ ಇಂದು ಜನವರಿ 6, 2022…