ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಖಂಡಿಸುವ ಬರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರ ಪರ ಪ್ರಚಾರದ ವೇಳೆ ಮಾತನಾಡಿದ ಎಚ್.ವಿಶ್ವನಾಥ್ ಅವರು, ಮೋದಿಯವರೇ ನಿಮಗೆ ಸೌಟ್ನಿಂದ ಹೊಡಿಬೇಕಾ? ಅಥವಾ ಗ್ಯಾಸ್ನಿಂದ ಹೊಡಿಬೇಕಾ? ಐದು ವರ್ಷಗಳಲ್ಲಿ ಏನು ಮಾಡಿದ್ದೀರಿ? ಗ್ಯಾಸ್ ಬೆಲೆ ಏರಿಕೆಯಾಯಿತು. ಕೇಂದ್ರ ಸರ್ಕಾರದ ಯೋಜನೆಗಳು ಸರಿಯಾಗಿ ಜನರಿಗೆ ತಲುಪಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಅವರ ವೈಫಲ್ಯದ ಬಗ್ಗೆ ಮಾತನಾಡಿದವರು ದೇಶದ್ರೋಹಿಗಳಾಗುತ್ತಾರೆ. ಮೋದಿ ಅವರು 2014ರಲ್ಲಿ ದೇಶದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಲಿಲ್ಲ. ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದರು. ವಿದೇಶದಲ್ಲಿ ಇರುವ ಕಪ್ಪು ಹಣವನ್ನು ತರುವುದಾಗಿ ಹೇಳಿದ್ದರು. ಇಂತಹ ಅನೇಕ ಭರವಸೆಗಳನ್ನು ಮೋದಿ ಅವರು ಮರೆತಿದ್ದಾರೆ. ಚುನಾವಣೆ ಬಳಿಕ ಬಿಎಸ್ಎನ್ಎಲ್ ಸಂಪೂರ್ಣವಾಗಿ ಸ್ಥಗಿತವಾಗಲಿದೆ. ಇದರಿಂದ ಅನೇಕರು ನಿರುದ್ಯೋಗಿಗಳಾಗುತ್ತಾರೆ ಎಂದು ಹೇಳಿದರು.
ನರೇಂದ್ರ ಮೋದಿ ಅವರು ಜಿಯೋ ಕಂಪನಿಯ ರಾಯಬಾರಿಯಾಗಿದ್ದಾರೆ. ನಾನೇ ಅಂತರ್ಜಾಲದಲ್ಲಿ ಕ್ರಾಂತಿ ಮಾಡಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೂ ಮೊದಲೇ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು, ದೂರವಾಣಿ ಸಂಪರ್ಕದಲ್ಲಿ ಕ್ರಾಂತಿ ಮಾಡಿದ್ದರು. ಎಲ್ಲವನ್ನೂ ನಾನೇ ಮಾಡಿದೆ ಅಂತ ಹೇಳುವುದು ಸರಿಯಲ್ಲ ಎಂದರು.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಈ ತರಕಾರಿ ವ್ಯಾಪಾರಿಯ ಸಮಯೋಚಿತ ನಿರ್ಧಾರದಿಂದ ಆಗಬಹುದಾದ ಭಾರೀ ಅನಾಹುತ ತಪ್ಪಿದೆ. ಕಂಜೂರ್ ಮಾರ್ಗ್ ಮತ್ತು ಭಂದೂಪ್ ರೈಲು ನಿಲ್ದಾಣಗಳ ನಡುವೆ ಸುಮಾರು ಒಂದೂವರೆ ಅಡಿಗಳಷ್ಟು ರೈಲು ಹಳಿ ಕಾಣಿಸದಿರುವುದನ್ನು ಈ ವ್ಯಾಪಾರಿ ಗಮನಿಸಿದ್ದಾರೆ. ಅದೇ ವೇಳೆಗೆ ರೈಲೊಂದು ಬರುತ್ತಿರುವುದನ್ನೂ ನೋಡಿದ್ದಾರೆ. ರೈಲು ಇಲ್ಲಿಗೆ ಬಂದರೆ ಭಾರೀ ಅನಾಹುತ ಸಂಭವಿಸುವುದು ಗ್ಯಾರಂಟಿ ಎಂಬುದನ್ನು ಅರಿತ ಆತ ತಡ ಮಾಡದೇ ತನ್ನ ಕೈಲಿದ್ದ ಛತ್ರಿಯನ್ನು ಓಪನ್ ಮಾಡಿ ರೈಲು ಹಳಿಗಳ ಮಧ್ಯೆ ನಿಂತು ರೈಲು ನಿಲ್ಲಿಸುವಂತೆ ಸೂಚಿಸಿದ್ದಾರೆ. ಇದನ್ನು…
ಚೈತ್ರಾ ಕೋಟೂರ್ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಎರಡನೇ ಬಾರಿಗೆ ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರೆಲ್ಲರಿಗೂ ತುಂಬಾನೇ ಶಾಕ್ ಆಗಿತ್ತು. ಚೈತ್ರಾ ಅವರು ಬಿಗ್ ಬಾಸ್ ಮನೆಗೆ ಬಂದಾಗ ಅಲ್ಲಿದ್ದವರು ಎಲ್ಲರೂ ಚೈತ್ರಾರವರನ್ನೇ ನೋಡುತ್ತಿದ್ದರು ಅವರು ಧರಿಸಿರುವ ವಸ್ತ್ರವಿನ್ಯಾಸ ಕೂಡ ಬದಲಾಗಿದ್ದೂ, ಬಿಗ್ ಮನೆಯ ಸ್ಪರ್ಧಿಗಳಿಗೆ, ಅಷ್ಟೇ ಅಲ್ಲದೆ ಪ್ರೇಕ್ಷಕರಿಗೂ ಕೂಡ ಶಾಕ್ ನೀಡಿದೆ. ಚೈತ್ರಾ ಡ್ರೆಸ್ಸಿಂಗ್ ಸೆನ್ಸ್ ಬದಲಾಗಿದ್ದೇಕೆ? “ನಾನು, ಚಂದನ್ ಯಾವಾಗಲೂ ಟಾರ್ಗೆಟ್ ಆಗಿರುತ್ತಿದ್ದೆವು, ಏನೆ ಕಮೆಂಟ್ ಬಂದರೂ, ಬಿರುದು ಅದನ್ನು ನಾನು ನಗುನಗುತ್ತ…
ವಯಸ್ಸಾಗೋದನ್ನ ತಡೆಯೋಕಾಗಲ್ಲ. ಕೆಲವರು ಯಂಗ್ ಆಗಿ ಕಾಣ್ಬೇಕು ಅಂತ ಏನೆಲ್ಲಾ ಪ್ರಯತ್ನ ಮಾಡ್ತಾರೆ. ಇನ್ನೂ ಕೆಲವರಿಗೆ ಕಾಂತಿಯುತವಾದ ತ್ವಚೆ ಇದ್ದು, ಯಂಗ್ ಆಗಿ ಕಾಣಿಸಿದ್ರೂ ಅವರ ವಯಸ್ಸನ್ನ ಊಹಿಸಿಬಿಡಬಹುದು. ಆದ್ರೆ ಇಂಡೋನೇಷ್ಯಾದಲ್ಲಿ ಮಹಿಳೆಯೊಬ್ಬರಿಗೆ ವಯಸ್ಸು
ಈಗಂತೂ ಮನೆ ಖರ್ಚುಗಳನ್ನು ಸರಿದೂಗಿಸಲು ಏನೇನೋ ಪ್ಲಾನ್’ಗಳನ್ನೂ ಮಾಡ್ತಾರೆ. ತಿಂಗಳು ಮುಗಿಯಿತು ಎಂದರೆ ಬಿಲ್’ಗಳ ಕಾಟ ಹೆಚ್ಚಾಗುತ್ತದೆ.ಕೇಬಲ್ ಬಿಲ್,ಕರೆಂಟ್ ಬಿಲ್.ವಾಟರ್ ಬಿಲ್ ಹೀಗೆ ಹಲವಾರು ಬಿಲ್’ಗಳು ಸಾಲಾಗಿ ಬಂದು ನಿಮ್ಮ ನಿಮ್ಮ ಮನೆಯ ಬಾಗಿಲಿನಲ್ಲಿ ಬೀಳುತ್ತವೆ. ಸ್ಯಾಲರಿ ಪಡೆದು ಬಡ್ಜೆಟ್ ಮೂಲಕ ಸಂಸಾರ ನೀಗಿಸುವವರಿಗೆ ಇದರ ಪ್ರಾಮುಖ್ಯತೆ ಏನೆಂಬುದು ತಿಳಿದಿರುತ್ತದೆ..ಬರುವ ಬಿಲ್ ನಲ್ಲಿ ನಾವು ಕಡಿಮೆ ಮಾಡಬಹುದಾದದ್ದು ಎಂದರೆ ಅದು ಕರೆಂಟ್ ಬಿಲ್.. ಹೌದು ಕರೆಂಟ್ ಬಿಲ್ ಕಡಿಮೆ ಬರಲು ಈ ಕೆಳಗಿನ ಕ್ರಮಗಳನ್ನು ಪಾಲಿಸಿ.. 1.ಮನೆಯಲ್ಲಿ…
ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.