ರಾಜಕೀಯ

ಮೋದಿ ನೇತೃತ್ವದ: ಷೇರುಪೇಟೆಯಲ್ಲಿ ಹೂಡಿಕೆದಾರರಿಗೆ ಬಂಪರ್, 2 ದಿನದಲ್ಲಿ 3.86 ಲಕ್ಷ ಕೋಟಿ ರೂ. ಲಾಭ!

44

ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಭರ್ಜರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರುತ್ತಿದ್ದು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರು ಬಂಪರ್ ಲಾಭ ಗಳಿಸಿದ್ದಾರೆ.ನರೇಂದ್ರ ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿಯಾಗಿ ಮರಳುತ್ತಿರುವುದು ಷೇರು ಮಾರುಕಟ್ಟೆಯಲ್ಲಿ ಭಾರಿ ಜಿಗಿತಕ್ಕೆ ಕಾರಣವಾಗಿದ್ದು, ಸೋಮವಾರ ಮುಂಬೈ ಷೇರು ಪೇಟೆಯ ಸೆನ್ಸೆಕ್ಸ್‌ ಮತ್ತು ರಾಷ್ಟ್ರೀಯ ಷೇರು ಮಾರುಕಟ್ಟೆಯ ನಿಪ್ಟಿ ಮತ್ತೊಂದು ದಾಖಲೆಯ ಎತ್ತರವನ್ನು ತಲುಪಿದೆ.

ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಬಿಎಸ್ ಇ 871.9 ಅಂಕಗಳ ಜಿಗಿತವನ್ನು ದಾಖಲಿಸಿದ್ದು, ಸೋಮವಾರ ಸೆನ್ಸೆಕ್ಸ್‌ ದಿನದ ವಹಿವಾಟನ್ನು 248.57 ಅಂಕಗಳ ಏರಿಕೆಯೊಂದಿಗೆ 39,683.29 ಅಂಕಗಳ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿತು. ಇದರ ಪರಿಣಾಮ ಹೂಡಿಕೆದಾರರಿಗೆ 3.86 ಲಕ್ಷ ಕೋಟಿ ರೂ. ಲಾಭ ಆಗಿದೆ.

ಇದೇ ರೀತಿ ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 80.65 ಅಂಗಕಳ ಜಿಗತವನ್ನು ದಾಖಲಿಸಿ ದಿನದ ವಹಿವಾಟನ್ನು 11,924.75ರ ಅಂಕಗಳ ದಾಖಲೆಯ ಮಟ್ಟದಲ್ಲಿ ಕೊನೆಗೊಳಿಸಿತು.ಇಂದಿನ ವಹಿವಾಟಿನಲ್ಲಿ ಟಾಟಾ ಸ್ಟೀಲ್‌ ಶೇ.5.78ರ ಜಿಗಿತವನ್ನು ದಾಖಲಿಸಿ ಅತೀ ದೊಡ್ಡ ಗೇನರ್‌ ಎನಿಸಿಕೊಂಡಿತು.

ಇಂದು ಮುಂಬೈ ಷೇರು ಮಾರುಕಟ್ಟೆಯಲ್ಲಿ ಒಟ್ಟು ಕಂಪೆನಿಗಳ 2,766 ಷೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 1,793 ಷೇರುಗಳು ಮುನ್ನಡೆ ಸಾಧಿಸಿದರೆ, 785 ಷೇರುಗಳು ಹಿನ್ನಡೆಗೆ ಗುರಿಯಾದವು. 188 ಷೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಕರ್ನಾಟಕ

    ರಾಷ್ಟ್ರಪತಿ ಕರ್ನಾಟಕದ ಬಗ್ಗೆ ಹಾಗೂ ಕರ್ನಾಟಕದ ಗಣ್ಯರ ಬಗ್ಗೆ ಹೊಗಳಿದ್ದಾರೆ…!ತಿಳಿಯಲು ಇದನ್ನು ಓದಿ..

    ಟಿಪ್ಪು ಸುಲ್ತಾನ್ ಜಯಂತಿಯ ವಿಚಾರದಲ್ಲಿ ಕಾಂಗ್ರೆಸ್ -ಬಿಜೆಪಿ ನಡುವೆ ನಡೆಯುತ್ತಿರುವ ವಾಕ್ಸಮರದ ಮಧ್ಯೆಯೇ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಟಿಪ್ಪು ಗುಣಗಾನ ಮಾಡಿದ್ದಾರೆ.

  • ಸುದ್ದಿ

    ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಈತ 100 ಕಿ.ಮೀ. ದೂರದಿಂದ ಎದ್ದು ಬಂದಿದ್ದೇಗೆ ಗೊತ್ತಾ?

    ಆತ್ಮಹತ್ಯೆ ಮಾಡಿಕೊಳ್ಳಲೆಂದು ನದಿಗೆ ಧುಮುಕಿದ ವ್ಯಕ್ತಿಯ ಹಣೆಬರಹದಲ್ಲಿ ದೈವ ಬೇರೆಯದ್ದೇ ಯೋಜನೆ ರೂಪಿಸಿದ್ದ. ಸಾಯಲೆಂದು ನದಿಗೆ ಧುಮುಕಿದ್ದ ಕೆಲವೇ ಕ್ಷಣಗಳಲ್ಲಿ ಆತನ ಮನಸ್ಸು ಬದಲಾಗಿತ್ತು. ನೀರಿಗೆ ಬಿದ್ದ ತಕ್ಷಣ ತಾನು ಬದುಕಬೇಕು ಎಂದೆನಿಸಿತ್ತಂತೆ.ಹೌದು, ಇಂತದ್ದೊಂದು ಘಟನೆ ಗುವಾಹಟಿಯಿಂದ ವರದಿಯಾಗಿದ್ದು, ರಭಸದಿಂದ ಹರಿಯುತ್ತಿದ್ದ ಬ್ರಹ್ಮಪುತ್ರ ನದಿಗೆ ಲಕ್ಷ್ಮಣ್‌ ಸ್ವರ್ಗೀಯರಿ ಎಂಬಾತ ಧುಮುಕಿ ಆತ್ಮಹತ್ಯೆಗೆ ಮುಂದಾಗಿದ್ದ. ಆದರೆ ಆತನ ಮನಸ್ಸು ಬದಲಾಯಿತು. ನದಿಯ ಪ್ರವಾಹಕ್ಕೆ ಸಿಲುಕಿದ ಈತ 10 ಗಂಟೆಗಳಲ್ಲಿ 100 ಕಿ.ಮೀ. ದೂರಕ್ಕೆ ಸುರಕ್ಷಿತವಾಗಿ ತಲುಪಿದ್ದಾನೆ. ಬಕ್ಸಾ ಜಿಲ್ಲೆಯ…

  • ಸಿನಿಮಾ, ಸುದ್ದಿ

    ತನ್ನ ಯಜಮಾನ ಚಿರುವನ್ನು ನೋಡಲು ಹಠ ಮಾಡುತ್ತಿರೋ ಅವರ ಪ್ರೀತಿಯ ಶ್ವಾನ.

    ಸ್ಯಾಂಡಲ್ ವುಡ್ ನಟ ಚಿರು ಅವರ ಪ್ರೀತಿಯ ಶ್ವಾನ ದ್ರೋಣ ಇದೀಗ ತನ್ನ ಯಜಮಾನನನ್ನು ಕಳೆದುಕೊಂಡು ದುಃಖದಲ್ಲಿದೆ. ಹೌದು. ದ್ರೋಣ, ಚಿರು ಅವರ ಮುದ್ದಿನ ಶ್ವಾನವಾಗಿದೆ. ಆದರೆ ಇದೀಗ ಚಿರು ಅವರು ಹೃದಯಾಘಾತಕ್ಕೆ ಒಳಗಾಗಿ ಚಿರನಿದ್ರೆಗೆ ಜಾರಿದ್ದು, ತನ್ನ ಯಜಮಾನನನ್ನ ನೋಡಲು ದ್ರೋಣ ಹಠ ಮಾಡುತ್ತಿದ್ದಾನೆ. ರೆಬೆಲ್ ಸ್ಟಾರ್ ಅಂಬರೀಶ್ ಕೊಟ್ಟಿರುವ ನಾಯಿಯೊಂದು ಚಿರು ಮನೆಯಲ್ಲಿದೆ. ಆ ಶ್ವಾನಂದರೆ ಅಂದ್ರೆ ಚಿರು ಸರ್ಜಾಗೆ ತುಂಬಾನೇ ಇಷ್ಟ. ಪ್ರಾಣಿಗಳನ್ನ ತುಂಬಾನೇ ಪ್ರೀತಿ ಮಾಡ್ತಾ ಇದ್ದ ಚಿರು, ಇತ್ತೀಚಿಗಷ್ಟೇ ದರ್ಶನ್‍ಗೆ…

  • ಸುದ್ದಿ

    ಬಿಹಾರದ ರಣಬಿಸಿಲಿಗೆ 117 ಜನ ಬಲಿ- ಗಯಾದಲ್ಲಿ ಸೆಕ್ಷನ್ 144 ಜಾರಿ……!

    ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.ಕಳೆದ 48 ಗಂಟೆಗಳಲ್ಲಿ ಮುಂಗರ್‍ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್…

  • ಸುದ್ದಿ

    ಹಸುವಿನ ಹೊಟ್ಟೆ ಮೇಲೆ ತಾಯಿಯ ಮಡಿಲಿನಲ್ಲಿ ಮಗುವಿನ ಆರೈಕೆಯ ದೃಶ್ಯ.

    ಸಾಮಾನ್ಯವಾಗಿ ಹಸುವಿನ ಹೊಟ್ಟೆ ಮೇಲೆ ಕಪ್ಪು-ಬಿಳುಪು ಬಣ್ಣವಿರುವ  ನಾನಾ ರೀತಿಯ ಚಿತ್ರಗಳು ಕಾಣಸಿಗುತ್ತವೆ. ಇದೀಗ ಇಂತದ್ದೇ ಹಸುವಿನ ಹೊಟ್ಟೆ ಮೇಲೆ ತಾಯಿಯ ಮಡಿಲಿನಲ್ಲಿ ಮಗುವಿನ ಆರೈಕೆಯ ಚಿತ್ರವೊಂದು ಮೂಡಿ ಎಲ್ಲರ ಗಮನ ಸೆಳೆದಿದೆ.  ಮೂಲತಃ ಕೃಷಿ ಜೊತೆಗೆ ಹೈನುಗಾರಿಕೆ ಮಾಡುವ ಜಾಧವ್ ಕುಟುಂಬ ನಾಲ್ಕು ವರ್ಷಗಳ ಹಿಂದೆ ಮಹಾರಾಷ್ಟ್ರದ ಮೀರಜ್ ಜಾನುವಾರು ಮಾರುಕಟ್ಟೆಯಿಂದ ಬಿಳಿ – ಕಪ್ಪು ಬಣ್ಣದ ಜರ್ಸಿ ಪ್ರಬೇಧದ ಹಸುವನ್ನು ತಂದಿದ್ದರು. ಕಳೆದ ಮೂರು ವರ್ಷಗಳಿಂದ ಹೊಟ್ಟೆಯ ಮೇಲೆ ಈ ರೀತಿ ಹಚ್ಚೆ ಮೂಡಲು ಆರಂಭವಾಗಿ…