ಸುದ್ದಿ

ಗಂಡು ಹೆಣ್ಣು ಹಾರ ಬದ್ಲಾಯಿಸಿಕೊಂಡ ನಂತರ ವರನ ದುರ್ಮರಣ……?ಯಾಕೆ

99

ವಧುವಿನೊಂದಿಗೆ ಹಾರ ಬದಲಾಯಿಸಿಕೊಂಡ ನಂತರ ಸಂಭ್ರಮಾಚರಣೆಯಲ್ಲಿ ಸ್ನೇಹಿತ ಗುಂಡು ಹಾರಿಸಿದ್ದ ಪರಿಣಾಮ ಬುಲೆಟ್ ವರನಿಗೆ ಬಿದ್ದು ಮೃತಪಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.ಸತ್ಯೇಂದ್ರ ಕುಮಾರ್ ಮೃತ ವರ. ಈ ಘಟನೆ ಭಾನುವಾರ ರಾತ್ರಿ ಶಹಾಪೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗುಂಡು ಬಿದ್ದ ತಕ್ಷಣ ವರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿದ್ದಾನೆ. ಈ ಘಟನೆಯಲ್ಲಿ ವರನ ಸಹೋದರನಿಗೂ ಗಾಯಗಳಾಗಿದ್ದು, ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಏನಿದು ಪ್ರಕರಣ?
ಮೃತ ಕುಮಾರ್ ಮದುವೆ ಭಾನುವಾರ ನಿಗದಿಯಾಗಿತ್ತು. ವರ ಕುಮಾರ್ ಅಖಿಲ್‍ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹರ್ಷಮ್ ಚಕ್ ಗ್ರಾಮದನಾಗಿದ್ದು, ಭಾನುವಾರ ರಾತ್ರಿ ಸುಮಾರು 10 ಗಂಟೆಗೆ ವಧುವಿನ ಮನೆಗೆ ಬಂದಿದ್ದನು. ನಂತರ ನವಜೋಡಿ ಹೂ ಮಾಲೆಗಳನ್ನು ಬದಲಾಯಿಸಿಕೊಂಡಿದ್ದಾರೆ. ಈ ವೇಳೆ ವರನ ಸ್ನೇಹಿತರು ವೇದಿಕೆ ಮೇಲೆ ಬಂದು ಡ್ಯಾನ್ಸ್ ಮಾಡುತ್ತಿದ್ದರು. ಆಗ ವರನ ಸ್ನೇಹಿತರೊಬ್ಬ ವೇದಿಕೆ ಮೇಲೆ ಬಂದೂಕನ್ನು ಹೊರತೆಗೆದು ಗಾಳಿಯಲ್ಲಿ ಗುಂಡು ಹಾರಿಸಲಾರಂಭಿಸಿದನು.

ಈ ವೇಳೆ ಬಂದೂಕಿನಲ್ಲಿ ಸಿಲುಕಿದ್ದ ಮೂರು ಗುಂಡುಗಳನ್ನು ತೆರವುಗೊಳಿಸಲು ಯತ್ನಿಸುತ್ತಿದ್ದಾಗ ಮೂರು ಗುಂಡುಗಳು ಆಕಸ್ಮಿಕವಾಗಿ ಹಾರಿವೆ. ಅದರಲ್ಲಿ ಒಂದು ವರನಿಗೆ ಮತ್ತು ಆತನ ಸಹೋದರ ಗುಡ್ಡುವಿಗೆ ತಗುಲಿವೆ. ಕೂಡಲೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು,. ಆದರೆ ಚಿಕಿತ್ಸೆ ಫಲಿಸದೆ ಸೋಮವಾರ ವರ ಕುಮಾರ್ ಮೃತಪಟ್ಟಿದ್ದಾನೆ. ಸದ್ಯಕ್ಕೆ ವರನ ಸಹೋದರ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

ಸದ್ಯ ಅಪರಾಧಿ ಯಾರು ಎಂದು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಸಂಭ್ರಮಾಚರಣೆ ನಡೆಸಿ ಗುಂಡು ಹಾರಿಸಿದ್ದ ವರನ ಸ್ನೇಹಿತ ಪರಾರಿಯಾಗಿದ್ದಾನೆ. ಸದ್ಯಕ್ಕೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿದೆ ಎಂದು ದಾನ್‍ಪುರದ ಸಹಾಯಕ ಪೊಲೀಸ್ ಕಮೀಷನರ್ ಅಶೋಕ್ ಮಿಶ್ರಾ ತಿಳಿಸಿದ್ದಾರೆ.ಸದ್ಯ ಎಫ್‍ಐಆರ್ ದಾಖಲಿಸಿರುವ ಪೊಲೀಸರು, ಘಟನೆ ಕುರಿತಂತೆ ವಿಡಿಯೋ ದೃಶ್ಯಾವಳಿಯನ್ನು ಕಲೆಹಾಕಲು ಮುಂದಾಗಿದ್ದಾರೆ. ಸಾಮಾಜಿಕ ಕಾರ್ಯಕ್ರಮಗಳಲ್ಲಿ ಬಿಹಾರ ಪೊಲೀಸರು ಸಂಭ್ರಮಾಚರಣೆ ಫೈರಿಂಗ್‍ನ್ನು ನಿಷೇಧಿಸಿದ್ದರೂ ಕೂಡ ಇಂತಹ ಅವಘಡಗಳು ನಡೆಯುತ್ತಲೇ ಇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸಾಧನೆ, ಸುದ್ದಿ

    7 ವರ್ಷ ಕಾದು, ಕೊನೆಗೂ ವಿಶ್ವದ ಅತೀ ಎತ್ತರದ ಬಿಲ್ಡಿಂಗ್ ಗೆ ಮಿಂಚು ಬಡಿಯೋದನ್ನ ಸೆರೆಹಿಡಿದ.

    ಸಂಯುಕ್ತ ಅರಬ್ ಎಮಿರೇಟ್ಸ್‌ (UAE) ಸದ್ಯ ಭಾರೀ ಮಳೆ, ಗುಡುಗು ಹಾಗೂ ಸಿಡಿಲುಗಳಿಗೆ ಸಾಕ್ಷಿಯಾಗಿದೆ. ಇದೇ ವೇಳೆ ಒಂದು ವಿಶಿಷ್ಟ ಚಿತ್ರವೊಂದನ್ನು ಸೆರೆಹಿಡಿದಿರುವ ಛಾಯಾಗ್ರಾಕನೊಬ್ಬ ತನ್ನ ಬಹುದಿನಗಳ ಕನಸೊಂದನ್ನು ಈಡೇರಿಸಿಕೊಂಡಿದ್ದಾನೆ. ಜಗತ್ತಿನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ನೆತ್ತಿ ಮೇಲೆ ಸಿಡಿಲು ಬಡಿದಿದೆ.ಈ ಅದ್ಭುತ ಘಳಿಗೆಯನ್ನು ಸೆರೆ ಹಿಡಿದ ಝೋಹೆಯ್ಬ್ ಅಂಜುಮ್, ಈ ಘಳಿಗೆಗೆಂದು ಸತತ ಏಳು ವರ್ಷಗಳ ಕಾಲ ಈ ಕ್ಷಣಕ್ಕಾಗಿ ಕಾದು ಕುಳಿತಿದ್ದರಂತೆ. ದುಬಾಯ್‌ನಲ್ಲಿ ಮಳೆ ಆದಾಗಲೆಲ್ಲ ರಾತ್ರಿಗಳನ್ನು ಆಚೆಯೇ ಕಳೆಯುತ್ತಿದ್ದ ಈತನ…

  • ಸುದ್ದಿ

    ನೀವು ತಿರುಪತಿ ತಿಮ್ಮಪ್ಪನಿಗೆ ಮೂಡಿ ಅರ್ಪಿಸುತ್ತಿದ್ದೀರಾ ಯಾಕೆ ಅಂತ ಕಾರಣ ಗೊತ್ತಾ?ಗೊತ್ತಿಲ್ಲದಿದ್ದರೆ ತಿಳಿಯಿರಿ,!

    ತಲೆ ಬೋಳಿಸುದನ್ನ ಕೆಲವು ಹರಕೆ ಎಂದು ಹೇಳಿದರೆ ಇನ್ನೂ ಕೆಲವರು ಇದನ್ನ ಬಿಸಿನೆಸ್ ಎಂದು ಹೇಳುತ್ತಾರೆ, ಹಾಗಾದರೆ ತಿರುಪತಿ ತಿಮ್ಮಪ್ಪನಿಗೆ ಮೂಡಿ ಕೊಡುವುದು ಯಾಕೆ ಮತ್ತು ಈ ಮೂಡಿ ಕೊಡುವ ಹರಕೆಯ ಹಿಂದೆ ಇರುವ ರೋಚಕ ಸತ್ಯ ಏನು ಎಂದು ತಿಳಿದರೆನೀವು ಆಶ್ಚರ್ಯ ಪಡುತ್ತೀರಾ. ಹಾಗಾದರೆ ಮೂಡಿ ಕೊಡುವ ಹಿಂದೆ ಇರುವ ರೋಚಕ ಸತ್ಯ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆನಿಮ್ಮ ಅನಿಸಿಕೆಯನ್ನ ನಮಗೆ…

  • ಸ್ಪೂರ್ತಿ

    ಬಸ್ ನಲ್ಲಿ ಸಿಕ್ಕ ಒಂದು ಲಕ್ಷವನ್ನು ಕಂಡಕ್ಟರ್ ಮಾಡಿದ್ದೇನು ಗೊತ್ತಾ..?

    ಅಚಾನಕ್ಕಾಗಿ ಯಾರಾದರೂ ದುಡ್ ಸಿಕ್ರೆ ಏನ್ ಮಾಡ್ತಾರೆ? ಕಿಸೆಗೆ ಹಾಕಿಕೊಂಡು ನಡೆದೇ ಬಿಡ್ತಾರೆ. ಆದರೆ ಇಲ್ಲೊಬ್ಬ ಕಂಡಕ್ಟರ್ ತನ್ನ ಬಸ್ ನಲ್ಲಿ ಸಿಕ್ಕ ಒಂದು ಲಕ್ಷ ರೂ. ಹಣವನ್ನು ಸಂಬಂಧಪಟ್ಟವರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಸುಭದ್ರ ಎಂಬ ಪ್ರಯಾಣಿಕರು ಎಸ್ಟೀಂ ಮಾಲ್ ಬಳಿ ಬಸ್ ಇಳಿಯುವಾಗ ಹಣದ ಬ್ಯಾಗ್ ಮರೆತು ಬಸ್ ನಲ್ಲಿ ಬಿಟ್ಟು ಇಳಿದಿದ್ದರು.ಅನಾಥವಾಗಿ ಬಿದ್ದಿದ್ದ ಬ್ಯಾಗನ್ನು ಪರಿಶೀಲಿಸಿದ ಕಂಡಕ್ಟರ್ ಯಲ್ಲಪ್ಪ ಬೆಟಗೇರಿ, ಪರಿಶೀಲನೆ ನಡೆಸಿದಾಗ ಅದರಲ್ಲಿ ಹಣ ಇರುವುದು ಕಂಡುಬಂದಿದೆ. ಅಷ್ಟರಲ್ಲಾಗಲೇ ಆತಂಕಗೊಂಡಿದ್ದ ಸುಭದ್ರ…

  • ಸುದ್ದಿ

    ಶೀಘ್ರದಲ್ಲೇ ಇನ್ಮುಂದೆ ದೇಶದ ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕುಡಿಕೆಗಳಲ್ಲಿ ಬಿಸಿ ಬಿಸಿ ಟೀ ಲಭ್ಯ…!

    ಎಲ್ಲ ಪ್ರಮುಖ ರೈಲ್ವೆ ನಿಲ್ದಾಣಗಳು, ಬಸ್ ಡಿಪೋಗಳು, ಏರ್ಪೋರ್ಟ್ಗಳು ಮತ್ತು ಮಾಲ್ಗಳಲ್ಲಿ ನೀವು ‘ಟೀ’ಯನ್ನು ಮಣ್ಣಿನ ಲೋಟಗಳಲ್ಲಿ(ಕುಲ್ಹಾದ್) ಕುಡಿಯುವ ಅವಕಾಶ ಸದ್ಯದಲ್ಲೇ ಸಿಗಲಿದೆ. ಇಂಥದ್ದೊಂದು ವ್ಯವಸ್ಥೆ ಜಾರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಒಲವು ತೋರಿಸಿದ್ದಾರೆ. ಇದೇ ವೇಳೆ ಕೇಂದ್ರ ಸಚಿವ ನಿತಿನ್ ಗಡ್ಕರಿ, ಬೇಡಿಕೆಗೆ ಅನುಗುಣವಾಗಿ ಮಣ್ಣಿನ ಲೋಟಗಳ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುವಂತೆ ಖಾದಿ ಮತ್ತು ಗ್ರಾಮೋದ್ಯಮ ಆಯೋಗಕ್ಕೂ ನಿರ್ದೇಶನ ನೀಡಿದ್ದಾರೆ ಮಣ್ಣಿನ ಲೋಟಗಳನ್ನು ಬಳಸುವ ಪರಿಸರಸ್ನೇಹಿ ವ್ಯವಸ್ಥೆಯನ್ನು ದೇಶದ ಪ್ರಮುಖ100 ರೈಲ್ವೆ…

  • ಸುದ್ದಿ

    ಪರೀಕ್ಷೆಗೆ ಲೇಟಾಗುತ್ತೆ ಎಂದು ಓನ್ ವೇ ನಲ್ಲಿ ಬೈಕ್ ಓಡಿಸಿಕೊಂಡು ಹೋದ ವಿಧ್ಯಾರ್ಥಿನಿ. ಅಡ್ಡಗಟ್ಟಿದ ಟ್ರಾಫಿಕ್ ಪೋಲಿಸ್ ಮಾಡಿದ್ದೇನು ಗೊತ್ತಾ?

    ನಮ್ಮ ಸುರಕ್ಷತೆಗೋಸ್ಕರ ಟ್ರಾಫಿಕ್ ರೂಲ್ಸ್ ಗಳನ್ನು ಪಾಲಿಸಿ ನಾವು ವಾಹನ ಚಲಾಯಿಸಬೇಕಾಗುತ್ತದೆ. ಆದರೆ ಕೆಲವೊಂದು ಸಮಯಗಳಲ್ಲಿ ಮಾತ್ರ ನಿಯಮ ಉಲ್ಲಂಘಿಸಿ ವಾಹನ ಚಲಾಯಿಸದೇ ಬೇರೆ ವಿದಿಯೇ ಇಲ್ಲ. ಇದೇ ರೀತಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿಧ್ಯಾರ್ಥಿಯೊಬ್ಬಳು ಪರೀಕ್ಷೆಗೆ ತಡವಾಗುತ್ತದೆ ಎಂಬ ಕಾರಣದಿಂದ ರಸ್ತೆ ನಿಯಮ ಉಲ್ಲಂಘಿಸಿ ಗಾಡಿ ಚಲಾಯಿಸಿದ ಕಾರಣ ಪೊಲೀಸರು ತಡೆದಿದ್ದಾರೆ. ಈ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಪರೀಕ್ಷೆಗೆ ವಿಳಂಬವಾಗುತ್ತದೆ ಎಂಬ ಕಾರಣದಿಂದ ಓನ್ ವೇನಲ್ಲಿ ಬೈಕ್ ಚಲಾಯಿಸಿಕೊಂಡು ಹೋಗಿದ್ದಾಳೆ. ಇದನ್ನು ಗಮನಿಸಿದ ರಸ್ತೆ ಸಂಚಾರ…

  • ಉದ್ಯೋಗ

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ನೇಮಕಾತಿಯ ಅಧಿಸೂಚನೆ ಪ್ರಕಟಿಸಿದೆ

    ಬೆಂಗಳೂರು –  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಿದೆ. ಇಲಾಖೆಯ ಜಲ ಜೀವನ ಮಿಷನ್‌ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಕೇಂದ್ರ ಕಛೇರಿ ಹಾಗೂ ಜಿಲ್ಲೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ತಾತ್ಕಾಲಿಕವಾಗಿ ಗುತ್ತಿಗೆ/ ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ. ಹುದ್ದೆಗಳ ವಿವರದಾಖಲಾತಿ ತಜ್ಞರು 01ಹಿರಿಯ ಭೂ ವಿಜ್ಞಾನಿ o1ಸಮಾಲೋಚಕರು 02ಹಿರಿಯ ಸಮಾಲೋಚಕರು 02ಕಿರಿಯ ಸಮಾಲೋಚಕರು 01ಘನ ಮತ್ತು ದ್ರವತ್ಯಾಜ್ಯ ನಿರ್ವಹಣೆ ಸಮಾಲೋಚಕರು 05ಸಪೋರ್ಟ್‌…