ಸುದ್ದಿ

ಮದ್ವೆ ಆಗಲು ಏಳು ಸಮುದ್ರ ದಾಟಿ ಬಂದಳು!ಯಾವ ಲವ್ ಸ್ಟೋರಿಗೂ ಕಡಿಮೆಯಿಲ್ಲ ಇವರ ಪ್ರೀತಿ…

184

ಪ್ರೀತಿ ಕುರುಡು. ಅದಕ್ಕೆ ವಯಸ್ಸು, ಜಾತಿ, ಊರಿನ ನಿರ್ಬಂಧವಿಲ್ಲ. ಏಳು ಸಮುದ್ರಗಳನ್ನು ದಾಟಿ ಬರುವ ತಾಕತ್ತು ಪ್ರೀತಿಗಿದೆ ಎನ್ನಲಾಗುತ್ತದೆ. ಈ ಮಾತು ಮಧ್ಯಪ್ರದೇಶದ ಹೋಷಂಗಾಬಾದ್ ಯುವಕನ ಪ್ರೀತಿ ವಿಚಾರದಲ್ಲಿ ನಿಜವಾಗಿದೆ. ದೀಪಕ್ ರಜಪೂತ್ ಎಂಬಾತನನ್ನು ಅಮೆರಿಕಾ ಪ್ರೇಯಸಿ ಮದುವೆಯಾಗಿದ್ದಾಳೆ.

36 ವರ್ಷದ ದೀಪಕ್ ಹಾಗೂ ಅಮೆರಿಕಾದ 40 ವರ್ಷದ ಜೂಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂಲಿ, ಯುಎಸ್ಎಯ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಫೇಸ್ಬುಕ್ ನಲ್ಲಿ ಶುರುವಾದ ಸ್ನೇಹ, ವಾಟ್ಸಾಪ್, ಕರೆ ಮೂಲಕ ಪ್ರೀತಿಗೆ ತಿರುಗಿತ್ತು.

ಕಳೆದ ಎರಡು ತಿಂಗಳ ಹಿಂದೆ ಜೂಲಿ ಭಾರತಕ್ಕೆ ಬಂದಿದ್ದಳು. ಅನೇಕ ಬಾರಿ ಇಬ್ಬರು ಭೇಟಿಯಾಗಿದ್ದರು. ಹೋಳಿಯಂದು ನರ್ಮದಾ ಕಿನಾರೆಯಲ್ಲಿರುವ ಚಿತ್ರಗುಪ್ತ ಮಂದಿರದಲ್ಲಿ ವೈದಿಕ ವಿಧಿವಿಧಾನದಂತೆ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಜೆಲ್ಲಿಗೆ ಮೂರು ವರ್ಷಗಳಿಂದ ದೀಪಕ್ ಪರಿಚಯವಿದ್ದು, ದೀಪಕ್ ಬಿಕಾಂ ಪದವಿ ಓದಿದ್ದಾರೆ. ದೀಪಕ್ ತಾನು ಮಾತನಾಡುವ ವಿಷಯ ಮತ್ತು ಇಂಗ್ಲಿಷ್ ಮೂಲಕ ಜೆಲ್ಲಿಯ ಹೃದಯವನ್ನು ಗೆದ್ದಿದ್ದರು. ಸ್ನೇಹಿತರಂತೆ ಮಾತನಾಡುತ್ತಾ ದಿನಕಳೆದಂತೆ ಪ್ರೀತಿ ಮಾಡಿದ್ದಾರೆ. ನಂತರ ದೀಪಕ್ ಮದುವೆಯ ಬಗ್ಗೆ ಹೇಳಿದಾಗ ಜೆಲ್ಲಿ ಒಪ್ಪಿಕೊಂಡಿದ್ದಾರೆ. ಇಬ್ಬರ ಪ್ರೀತಿಯನ್ನು ಕುಟುಂಬದವರು ಒಪ್ಪಿ ಮದುವೆ ಮಾಡಿಸಿದ್ದಾರೆ.

ನಾವು ಮೂರು ವರ್ಷಗಳ ಹಿಂದೆ ಫೇಸ್‍ಬುಕ್ ಮೂಲಕ ನಮ್ಮ ಪರಿಚಯ ಆರಂಭವಾಯಿತು. ಕಳೆದ ಆರು ತಿಂಗಳುಗಳಿಂದ ನಾವು ವಾಟ್ಸಪ್ ಮತ್ತು ಫೋನಿನಲ್ಲಿ ಮಾತನಾಡುತ್ತಿದ್ದೆವು. 2 ತಿಂಗಳುಗಳಿಂದ ಜೆಲ್ಲಿ ಭಾರತ ಪ್ರವಾಸ ಮಾಡುತ್ತಿದ್ದರು. ಈ ವೇಳೆ ಆಕೆಗೆ ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ತುಂಬಾ ಇಷ್ಟವಾಗಿದೆ” ಎಂದು ದೀಪಕ್ ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಮನರಂಜನೆ

    ಕಿಶನ್ ಕಣ್ಣೀರು ಹಾಕ್ತಿದ್ದಂತೆ, ವೇದಿಕೆ ಮೇಲೆ ಸ್ಪೆಷಲ್ ಗಿಫ್ಟ್ ನೀಡಿದ ಕಿಚ್ಚ.

    ರಿಯಾಲಿಟಿ ಶೋ ‘ಬಿಗ್‍ಬಾಸ್ ಸೀಸನ್ 7’ ರ ಸ್ಪರ್ಧಿ ಡ್ಯಾನ್ಸರ್ ಕಿಶನ್ ವೇದಿಕೆಯ ಮೇಲೆ ಕಣ್ಣೀರು ಹಾಕಿದ ತಕ್ಷಣ ನಟ ಸುದೀಪ್ ತಾವು ಧರಿಸಿದ್ದ ಜಾಕೆಟ್ ಬಿಚ್ಚಿ ಗಿಫ್ಟ್ ಆಗಿ ಕೊಟ್ಟಿದ್ದಾರೆ. ‘ಬಿಗ್‍ಬಾಸ್ ಸೀಸನ್ 7’ ಇನ್ನೂ ಕೆಲವು ವಾರಗಳಲ್ಲಿ ಫೈನಲ್ ಹಂತ ತಲುಪಲಿದೆ. ಈ ವಾರ ಬಿಗ್‍ಬಾಸ್ ಮನೆಯಿಂದ ಡ್ಯಾನ್ಸರ್ ಕಿಶನ್ ಹೊರ ಬಂದಿದ್ದಾರೆ. ಈ ವೇಳೆ ಕಿಶನ್ ವೇದಿಕೆಯಲ್ಲಿ ತಮ್ಮ ಬಿಗ್‍ಬಾಸ್ ಜರ್ನಿಯ ವಿಡಿಯೋವನ್ನು ನೋಡಿದ್ದಾರೆ. ಅದನ್ನು ನೀಡಿದ ತಕ್ಷಣ ಕಿಶನ್ ಕಣ್ಣೀರು ಹಾಕಿದ್ದಾರೆ….

  • ಆರೋಗ್ಯ

    ಚಹಾ ಮತ್ತು ಕಾಫಿ ಪ್ರಿಯರಿಗೆ ಶಾಕಿಂಗ್ ಸುದ್ದಿ, ಓದಿ ಆರೋಗ್ಯ ಕಾಪಾಡಿಕೊಳ್ಳಿ.

    ನಮ್ಮ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ನಾವು ಚಹಾ ಮತ್ತು ಕಾಫಿಗೆ ಒಂದು ವಿಶೇಷವಾದ ಸ್ಥಾನವನ್ನ ಕೊಟ್ಟಿದ್ದೇವೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಕಾಫಿ ಮತ್ತು ಚಹಾ ಕುಡಿಯುವುದನ್ನ ನಾವು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದೇವೆ ಅಂದರೆ ಅದನ್ನ ಸೇವಿಸದೇ ಇದ್ದರೆ ನಮಗೆ ವಿಪರೀತ ತಲೆ ಬರುತ್ತದೆ ಅನ್ನುವಷ್ಟು. ಇನ್ನು ಬೆಳಿಗ್ಗೆ ಮತ್ತು ಸಂಜೆ ಒಮ್ಮೆ ಚಹಾ ಅಥವಾ ಕಾಫಿಯನ್ನ ಸೇವನೆ ಮಾಡಿದರೆ ದೇಹದಲ್ಲಿ ಏನೋ ಶಕ್ತಿ ಬಂದಷ್ಟು ಖುಷಿಯಾಗುತ್ತದೆ, ಇನ್ನು ಕೆಲಸದ ಒತ್ತಡದ ಸಮಯದಲ್ಲಿ ನಮ್ಮ ದೇಹಕ್ಕೆ ಮತ್ತು…

  • ಸುದ್ದಿ

    ಮದುವೆಯಾದ ಒಂದೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ರೈಲಿನಿಂದ ತಳ್ಳಿ ತಾನೂ ಹಾರಿದ…ಕಾರಣ ?

    ಮದುವೆಯಾಗಿ ಒಂದೇ ದಿನಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನಿಂದ ತಳ್ಳಿ ತಾನೂ ಹಾರಿದ ಘಟನೆ ಅಸ್ಸಾಂನ ಟೆನ್ಸುಕಿಯದ ರೈಲಿನಲ್ಲಿ ನಡೆದಿದೆ.ಈ ಘಟನೆ ಮಂಗಳವಾರ ನಡೆದಿದ್ದು, ತನ್ನ 18 ವರ್ಷದ ಪತ್ನಿ ಬೇಬಿಯನ್ನು ಚಲಿಸುತ್ತಿರುವ ರೈಲಿನಿಂದ ತಳ್ಳಿ ನಂತರ ಪತಿ ಹಿರಾನು ಕೂಡ ಹಾರಿದ್ದಾನೆ. ಆದರೆ ಈ ಘಟನೆಯಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಫತೇಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈಲ್ವೆ ಹಳಿಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ದಂಪತಿಯನ್ನು ಪೊಲೀಸರು ಹತ್ತಿರದ ಜಿಲ್ಲಾ ಆಸ್ಪತ್ರೆಯ ತುರ್ತು…

  • ಜ್ಯೋತಿಷ್ಯ

    ದಿನ ಭವಿಷ್ಯ ಶನಿವಾರ, ಈ ದಿನದ ನಿಮ್ಮ ರಾಶಿ ಭವಿಷ್ಯದ ಜೊತೆಗೆ ಅದೃಷ್ಟದ ಸಂಖ್ಯೆ ತಿಳಿಯಿರಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ 19 ಜನವರಿ, 2019 ಇತರರ ಮೇಲೆ ಪ್ರಭಾವ ಬೀರಲು ತುಂಬಾ ವೆಚ್ಚ ಮಾಡಬೇಡಿ. ನಿಮಗೆ ಗೊತ್ತಿದ್ದ…

  • ಸುದ್ದಿ

    ಅಭಿಮಾನಿಯೊಬ್ಬ ತನ್ನ ನೆಚ್ಚಿನ ನಟನನ್ನು ನೋಡಲು ಆಗಲಿಲ್ಲವೆಂದು ಡೆತ್ ನೋಟ್ ಬರೆದಿತ್ತು ಆತ್ಮಹತ್ಯ!ಆ ಡೆತ್ ನೋಟ್ ನಲ್ಲಿ ಏನಿದೆ ಗೊತ್ತಾ..?

    ಅಭಿಮಾನಿಗಳೇ ಹಾಗೆ ತಮ್ಮ ನೆಚ್ಚನ ನಟನಿಗಾಗಿ ಏನಾದ್ರೂ ಮಾಡಲು ತಯಾರಿರುತ್ತಾರೆ.ತಮ್ಮ ನೆಚ್ಚಿನ ನಟನ ಚಿತ್ರಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುತ್ತಾರೆ. ಒಂದು ವೇಳೆ ತಮ್ಮ ನೆಚ್ಚಿನ ನಟನನ್ನು ಒಂದು ಬಾರಿ ಭೇಟಿ ಮಾಡಿಬಿಟ್ಟರೆ ಅವರ ಜೀವನ ಸಾರ್ಥಕ ಆದಂತೆ ಅನ್ನುವಷ್ಟು ಮಟ್ಟಿಗೆ ಇಷ್ಟಪಡುವವರಿದ್ದಾರೆ. ಆದರೆ ಆಂಧ್ರದ ವಿಜಯವಾಡದ ತಮ್ಮ ನೆಚ್ಚಿನ ನಟನ ಅಭಿಮಾನಿಯೊಬ್ಬ ನೆಚ್ಚಿನ ನಟನನ್ನು ಭೇಟಿ ಮಾಡಲು ಆಗಲಿಲ್ಲವೆಂದು ಆತ್ಮಹತ್ಯೆ ಮಾಡಿಕೊಂಡಿರುವ ಇದಕ್ಕೆ ಹುಚ್ಚು ಅಭಿಮಾನ ಅನ್ನಬೇಕೋ, ಅತಿರೇಕದ ಅಭಿಮಾನ ಅನ್ನಬೇಕೋ ಗೊತ್ತಿಲ್ಲ.ತಾವು ಪ್ರೀತಿಸೋ ಆರಾಧಿಸುವ ಸ್ಟಾರ್…