ಸುದ್ದಿ

ಕೇವಲ 21 ವರ್ಷಕ್ಕೆ ಜಗತ್ತಿನ ಎಲ್ಲ ‘ದೇಶ’ ಸುತ್ತಿ ಬಂದಂತಹ ಯುವತಿ…!

79

ನಮ್ಮ ದೇಶದಲ್ಲಿ ಮಕ್ಕಳು 21 ವರ್ಷದವರಾದರೆ ಅವರು ಇನ್ನು ಬಹುತೇಕ ಕಾಲೇಜಿನಲ್ಲಿರುತ್ತಾರೆ. ಪ್ರಮುಖವಾಗಿ ತಮ್ಮ ಓದನ್ನು ಮುಗಿಸಿಕೊಳ್ಳುವ ಒತ್ತಡವಿರುತ್ತದೆ. ಪ್ರವಾಸವೊಂದು ಐಷಾರಾಮಿ ಬದುಕಾಗಿರುತ್ತದಷ್ಟೇ.

ಆದರೆ ಅಮೆರಿಕದ ಲೆಕ್ಸಿ ಅಲ್ಫೋರ್ಡ್ ಎನ್ನುವ ಯುವತಿ 21 ವರ್ಷ ದಾಟುವಷ್ಟರಲ್ಲಿ 196 ದೇಶಗಳಲ್ಲಿ ಹೋಗಿ ಜಗತ್ತಿನ ಎಲ್ಲ ದೇಶಗಳಲ್ಲಿ ಪ್ರಯಾಣಿಸಿದ, ಅತ್ಯಂತ ಕಿರಿಯ ವ್ಯಕ್ತಿ ಎಂದು ಗಿನ್ನಿಸ್ ಬುಕ್ ಆಫ್ ರೇಕಾರ್ಡ್ಸ್‌ನಲ್ಲಿ ಸೇರಿದ್ದಾರೆ. ಮೇ 31ರಂದು ಉತ್ತರ ಕೊರಿಯಾ ಪ್ರವೇಶಿಸಿದ ನಂತರ ಅವರು ಈ ದಾಖಲೆಗೆ ಭಾಜನರಾಗಿದ್ದಾರೆ. ಈ ಹಿಂದೆ ಈ ದಾಖಲೆ ಇಂಗ್ಲೆಂಡಿನ ಜೇಮ್ಸ್ ಅಕ್ವಿಟ್ ಅವರ ಹೆಸರಲ್ಲಿತ್ತು. ಅವರು 24 ನೇ ವಯಸ್ಸಿನಲ್ಲಿ ಈ ದಾಖಲೆ ಬರೆದಿದ್ದರಂತೆ.

ಲೆಕ್ಸಿ ಅಲ್ಫೋರ್ಡ್ ತಂದೆ-ತಾಯಿ ಪ್ರವಾಸ ಏಜೆನ್ಸಿ ನಡೆಸುತ್ತಿದ್ದು, ಮಗಳಿಗೆ ಚಿಕ್ಕ ವಯಸ್ಸಿನಿಂದಲೇ ಹಲವು ದೇಶಗಳಿಗೆ ಪ್ರವಾಸಕ್ಕೆ ಕಳಿಸುತ್ತಿದ್ದರಂತೆ. ಜಗತ್ತಿನ ಎಲ್ಲ ರೀತಿಯ ಜೀವನ ಅವಳಿಗೆ ಅರ್ಥವಾಗಲಿ ಎಂದು ಅವರ ಆಶಯವಾಗಿತ್ತಂತೆ.

ಲೆಕ್ಸಿಗೆ ತನ್ನ ಈ ದಾಖಲೆ ಜಗತ್ತಿನ ಮಹಿಳೆಯರಿಗೆ ಪ್ರೇರಣೆಯಾಗಬಹುದು ಎಂಬ ಆಶಯವಂತೆ. ನಾವು ಅಪಾಯಕಾರಿ ಅಂದುಕೊಂಡ ದೇಶಗಳಲ್ಲೂ ಒಳ್ಳೆಯವರಿರುತ್ತಾರೆ ಎಂದು ಹೇಳಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಚುನಾವಣೆ

    ಮೇ 3ನೇ ವಾರದಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ..?

    ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಮೇ ತಿಂಗಳ 3ನೇ ವಾರದಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗ ಸಿದ್ದತೆ ನಡೆಸಿದ್ದು, ಈ ಬಾರಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣೆಗೆ ಅಗತ್ಯವಿರುವ ಸಿದ್ದತೆಗಳು ಬಹುತೇಕ ಪೂರ್ಣ ಗೊಳಿಸಿರುವ ಆಯೋಗ ಏಪ್ರಿಲ್ ತಿಂಗಳ 2ನೇ ವಾರದಲ್ಲಿ ದಿನಾಂಕವನ್ನು ಘೋಷಣೆ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮತದಾರರ ಅಂತಿಮ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಕಾರಿಗಳು ಪೂರ್ಣಗೊಳಿಸಿರುವುದು, ಇವಿಎಂ ಯಂತ್ರ ಉಪಯೋಗಿಸುವ ಕುರಿತಂತೆ ತರಬೇತಿ, ಭದ್ರತೆ ಸೇರಿದಂತೆ ಚುನಾವಣೆಗೆ ಬೇಕಿರುವ ಪ್ರಕ್ರಿಯೆಗಳು…

  • ಉಪಯುಕ್ತ ಮಾಹಿತಿ

    ಅಕ್ಕಿಯಲ್ಲಿ ಹುಳ ಬಾರದಂತೆ ಮಾಡುವ ವಿಧಾನ ನಿಮ್ಗೆ ಗೊತ್ತಾ ..?ತಿಳಿಯಲು ಈ ಲೇಖನ ಓದಿ ..

    ಹಳ್ಳಿ ಪ್ರದೇಶಗಳಲ್ಲಿ ಜನರು ತಮ್ಮ ಹೊಲದಲ್ಲಿ ಬೆಳೆದ ಭತ್ತವನ್ನು ಅಕ್ಕಿ ಮಾಡಿ ಅದನ್ನು ಒಂದು ವರ್ಷದವರೆಗೂ ಉಪಯೋಗಿಸುತ್ತಾರೆ. ಹೀಗೆ ವರ್ಷಗಟ್ಟಲೆ ಅಕ್ಕಿಯನ್ನು ಶೇಖರಿಸಿ ಇಡುವುದರಿಂದ ಅದರಲ್ಲಿ ಹುಳಗಳು ಹುಟ್ಟುತ್ತವೆ.

  • ಸಿನಿಮಾ

    ಮತದಾನ ಮಾಡದ ಸಿಟಿ ಮಂದಿಗೆ ಬೆಂಡೆತ್ತಿದ ಜಗ್ಗೇಶ್ ಆಕ್ರೋಶದಿಂದ ಹೇಳಿದ್ದೇನು ಗೊತ್ತಾ..?

    ಮತ ಹಾಕದ ಸಿಲಿಕಾನ್ ಸಿಟಿ ಮಂದಿ ಪ್ರಜ್ಞಾವಂತ ಮುಖವಾಡದ ನಿಷ್ಪ್ರಯೋಜಕ ನತದೃಷ್ಟರು. ಅವರು ಬದುಕಿರುವ ಶವಗಳು ಎಂದು ನವರಸ ನಾಯಕ ಜಗ್ಗೇಶ್ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಗುರುವಾರದಂದು 2019ರ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆದಿದೆ. ಮತದಾನ ಮಾಡಲು ಹಳ್ಳಿಗರು, ಅನಕ್ಷರಸ್ಥರು, ವೃದ್ಧರು, ಅಂಗವಿಕಲರು, ತುಂಬು ಗರ್ಭಿಣಿಯರು ಕೂಡ ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಆದ್ರೆ ಹೆಚ್ಚು ಪ್ರಜ್ಞಾವಂತರಿರುವ ಗಾರ್ಡನ್ ಸಿಟಿಯಲ್ಲಿಯೇ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗಿದೆ. ಬೆಂಗಳೂರು ದಕ್ಷಿಣದಲ್ಲಿ 53.47%…

  • inspirational

    ಈಕೆ ಹೇಗೆ IPS ಆಫೀಸರ್ ಆದಳು ಎಂದು ಗೊತ್ತಾದರೆ ನಿಂತಲ್ಲಿಯೇ ಸೆಲ್ಯೂಟ್ ಹೊಡೆಯುತ್ತೀರಾ.

    ಎಲ್ಲರ ಜೀವನ ಅವರು ಅಂದುಕೊಂಡಷ್ಟು ಸುಲಭವೂ ಸುಗಮವೂ ಆಗಿರಲ್ಲ. ಇಂದು ನೀವು ಯಾರನ್ನು ಯಶಸ್ವಿ ವ್ಯಕ್ತಿಗಳು ಎಂದು ಗುರುತಿಸುತ್ತೀರೋ ಅವರು ಹುಟ್ಟಿದಾಗಿನಿಂದ ಯಶಸ್ಸು ಪಡೆದು ಬಂದವರಲ್ಲ ಬದಲಿಗೆ ಅವಮಾನ ಸನ್ಮಾನ ಎಲ್ಲವನ್ನು ಮೆಟ್ಟಿ ನಿಂತು ಸಮಾಜದಲ್ಲಿ ತಲೆ ಎತ್ತಿ ಬದುಕಿದವರು. ನೆನಪಿರಲಿ ಬದುಕಿನ ದಾರಿಯಲ್ಲಿ ನಮ್ಮವರಿಂದಲೇ ನಮಗೆ ವಾಮನ ನಮ್ಮವರಿಂದಲೇ ಸನ್ಮಾನ. ಅದೇನೇ ಇರಲಿ ಇಲೊಬ್ಬಳು ಹೆಣ್ಣುಮಗಳಿದ್ದಾಳೆ ಆಕೆ ಹೇಗೆ ಐಪಿಎಸ್ ಅಧಿಕಾರಿ ಆದಳು ಎನ್ನುವ ಸ್ಟೋರಿಯನ್ನು ನಿಮ್ಮ ಮುಂದೆ ಬಿಚ್ಚಿಡುತ್ತಿದ್ದೇವೆ. ಈ ಸ್ಟೋರಿ ಕೇಳಿದ ನೀವು…

  • ಸುದ್ದಿ

    ಜಿಯೋ ಗ್ರಾಹಕರಿಗೆ ಹೊಸ ವರ್ಷಕ್ಕೆ ಬಂಪರ್ ಆಫರ್. ಏನದು ಈಗಲೇ ತಿಳಿದುಕೊಳ್ಳಿ.!

    ಹೌದು, ಮುಖೇಶ್ ಅಂಬಾನಿ ನೇತೃತ್ವದ ಜಿಯೋ ಸಂಸ್ಥೆಯು ತನ್ನ ಚಂದಾದಾರರಿಗೆ ‘ಹ್ಯಾಪಿ ನ್ಯೂ ಇಯರ್’ ಆಫರ್ ಅನ್ನು ಬಿಡುಗಡೆ ಮಾಡಿದೆ. 2020 ರೂ. ಬೆಲೆಯಲ್ಲಿ ಎರಡು ಭರ್ಜರಿ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಒಂದು ಪ್ಲ್ಯಾನ್ ಜಿಯೋ ಚಂದಾದಾರರಿಗೆ ವಾರ್ಷಿಕ ಅವಧಿಯ ಪ್ರಯೋಜನೆಗಳನ್ನು ಒದಗಿಸಿದರೇ, ಇನ್ನೊಂದು ಕೊಡುಗೆಯು ಜಿಯೋ ಫೋನ್ ಗ್ರಾಹಕರಿಗೆ ವಾರ್ಷಿಕ ಧಮಾಕ ನೀಡಲಿದೆ. ಹಾಗಾದರೇ ಜಿಯೋದ ಹ್ಯಾಪಿ ನ್ಯೂ ಇಯರ್-2020 ಕೊಡುಗೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿರಿ. ಸ್ನೇಹಿತರೆ ರಿಲಯನ್ಸ್ ಜಿಯೋ ಹೊಸ…