ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಕೋಲಾರ ಜಿಲ್ಲೆಯ 6 ವಿಧಾನ ಸಭಾ ಮತ ಕ್ಷೇತ್ರಗಳ ಚುನಾವಣೆಗೆ ಸಿದ್ಧತೆಗಳು ಪೂರ್ಣ; ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿ; ನಿಗಾವಹಿಸಲು ವಿವಿಧ ತಂಡಗಳ ರಚನೆ: ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ
ಕೋಲಾರ(ಕರ್ನಾಟಕ ವಾರ್ತೆ)ಮಾ.29: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ವಿಧಾನ ಸಭೆ ಸಾರ್ವತ್ರಿಕ ಚುನಾವಣೆ-2023ಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆಯ ಆರು ವಿಧಾನ ಸಭಾ ಮತ ಕ್ಷೇತ್ರಗಳಲ್ಲಿ ಪಾರದರ್ಶಕ, ಮುಕ್ತ, ಶಾಂತಿಯುತ ಮತ್ತು ನಿಷ್ಪಕ್ಷಪಾತ ಚುನಾವಣೆಗಳನ್ನು ಜರುಗಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ವಿವಿಧ ತಂಡಗಳನ್ನು ರಚಿಸಿ ಅಧಿಕಾರಿಗಳನ್ನು ನೇಮಿಸಿ, ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು. ಅವರು ಇಂದು ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ಧಿಗೊಷ್ಠಿ ಜರುಗಿಸಿ, ಮಾತನಾಡಿದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಏಪ್ರೀಲ್ 13 ರಂದು ಜಿಲ್ಲೆಯ ಆರು ವಿಧಾನ ಸಭಾ ಮತ ಕ್ಷೇತ್ರಗಳಿಗೆ ಚುನಾವಣೆ ಜರುಗಿಸಲು ಅಧಿಸೂಚನೆ ಹೊರಡಿಸಲಾಗುತ್ತದೆ. ಏಪ್ರೀಲ್ 20ರ ವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆಯು ಏಪ್ರೀಲ್ 21 ರಂದು ನಡೆಯಲಿದೆ. ಎಪ್ರಿಲ್ 24 ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಮತ್ತು ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಮತ ಏಣಿಕೆ ಜರುಗಲಿದೆ. ಒಟ್ಟಾರೆ ಮೇ 15 ರಂದು ಎಲ್ಲ ಚುನಾವಣಾ ಪ್ರಕ್ರೀಯೆಗಳು ಮುಕ್ತಾಯವಾಗಲಿವೆ ಎಂದು ಅವರು ಹೇಳಿದರು.
ಮತದಾರರ ಸಂಖ್ಯೆ: ಜಿಲ್ಲೆಯಲ್ಲಿ ಆರು ವಿಧಾನಸಭಾ ಮತಕ್ಷೇತ್ರಗಳಿದ್ದು, ಒಟ್ಟು ಪುರುಷ 625644 ಮಹಿಳಾ 633192 ಹಾಗೂ ಇತರೆ 159 ಸೇರಿದಂತೆ ಒಟ್ಟು 1258995 ಮತದಾರರಿದ್ದಾರೆ.
ಶ್ರೀನಿವಾಸಪುರ ವಿಧಾನಸಭಾ ಮತ ಕ್ಷೇತ್ರ-144 : ಪುರುಷರು-106785 ಮಹಿಳೆಯರು-108213 ಇತರೆ-7. ಒಟ್ಟು ಮತದಾರರು- 215005
ಮುಳಬಾಗಿಲು ವಿಧಾನಸಭಾ ಮತ ಕ್ಷೇತ್ರ-145( ಪ ಜಾ): ಪುರುಷರು – 106430. ಮಹಿಳೆಯರು–107779 ಇತರೆ-10. ಒಟ್ಟು ಮತದಾರರು-214219
ಕೆ ಜಿ ಎಪ್ ವಿಧಾನಸಭಾ ಮತ ಕ್ಷೇತ್ರ-146( ಪ ಜಾ): ಪುರುಷರು-98054. ಮಹಿಳೆಯರು-99148. ಇತರೆ-40. ಒಟ್ಟು ಮತದಾರರು– 197242
ಬಂಗಾರಪೇಟೆ ವಿಧಾನಸಭಾ ಮತ ಕ್ಷೇತ್ರ-147( ಪ ಜಾ): ಪುರುಷರು-101284. ಮಹಿಳೆಯರು-102028. ಇತರೆ-40. ಒಟ್ಟು ಮತದಾರರು-203352
ಕೋಲಾರ ವಿಧಾನಸಭಾ ಮತ ಕ್ಷೇತ್ರ 148: ಪುರುಷರು-118159 ಮಹಿಳೆಯರು-120238. ಇತರೆ – 55. ಒಟ್ಟು ಮತದಾರರು–238452
ಮಾಲೂರು ವಿಧಾನಸಭಾ ಮತ ಕ್ಷೇತ್ರ-149: ಪುರುಷರು-94932. ಮಹಿಳೆಯರು-95786. ಇತರೆ-7. ಒಟ್ಟು ಮತದಾರರು-190725
ಮತಗಟ್ಟೆಗಳ ಸಂಖ್ಯೆ: ಜಿಲ್ಲೆಯಲ್ಲಿ ಒಟ್ಟು 1590 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳ ಪೈಕಿ 392 ಸೂಕ್ಷ್ಮ ಮತಗಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳಲ್ಲಿ ಮತದಾನದ ದಿನದಂದು ವಿಡಿಯೋಗ್ರಾಫಿ, ವೆಬ್‍ಕ್ಯಾಸ್ಟಿಂಗ್ ಮತ್ತು ಮೈಕ್ರೋ ಅಬ್ಸರ್ವರ್ಸ್‍ಗಳನ್ನು ನಿಯಮಾನುಸಾರ ನೇಮಕ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಯುವ ಮತದಾರರು: ಜಿಲ್ಲೆಯಲ್ಲಿ ಪ್ರಸ್ತುತ 2023ರ ವಿಧಾನ ಸಭಾ ಚುನಾವಣೆಗೆ ಒಟ್ಟು 32014 ಯುವ ಮತದಾರರಿದ್ದಾರೆ ಮತ್ತು 80 ವರ್ಷ ಹಾಗೂ ಮೇಲ್ಪಟ್ಟ ಸುಮಾರು 29338 ಹಿರಿಯ ಮತದಾರರಿದ್ದಾರೆ.
ಪ್ರಚಾರ ಸಾಮಗ್ರಿಗಳ ತೆರವು: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ವಿವಿಧ ಪಕ್ಷಗಳ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸುವ ಕಾರ್ಯವನ್ನು ಈಗಾಗಲೇ ಮಾಡಲಾಗುತ್ತಿದೆ. ಇವತ್ತಿನ ವರೆಗೆ ಗೊಡೆ ಬರಹ, ಪೋಸ್ಟರ್‍ಗಳು, ಬ್ಯಾನರಗಳು ಹಾಗೂ ಇತರೆ ಪ್ರಚಾರ ಸಾಮಗ್ರಿಗಳನ್ನು ಜಿಲ್ಲಾ ಚುನಾವಣಾ ಆಯೋಗದಿಂದ ತೆರವುಗೊಳಿಸಲಾಗಿದೆ ಮತ್ತು ಅನುಮತಿ ಇಲ್ಲದೇ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿ ಸಾರ್ವಜನಿಕ ಸ್ಥಳ ಅಂದಗೆಡಿಸಿದ್ದ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳ್ಳಿಸಲಾಗಿದೆ.
ಚುನಾವಣಾ ನೀತಿ ಸಂಹಿತೆಯು ಇಂದಿನಿಂದ ಜಾರಿಯಾಗಿದ್ದು, ಅನುಮತಿ ಇಲ್ಲದೆ ಯಾವುದೇ ರೀತಿಯ ಪ್ರಚಾರ ಸಾಮಗ್ರಿಗಳನ್ನು ಅಳವಡಿಸುವಂತಿಲ್ಲ. ನಿಯಮ ಮೀರಿದವರ ವಿರುದ್ಧ ಭಾರತ ಚುನಾವಾಣಾ ಆಯೋಗದ ನಿರ್ದೇಶನದಂತೆ ಮತ್ತು ಜಾರಿಯಲ್ಲಿರುವ ವಿವಿಧ ಕಾನೂನುಗಳಡಿ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಅವರು ಹೇಳಿದರು.
ಆಯುಧಗಳ ಠೇವಣಿಗೆ ಸೂಚನೆ: ಜಿಲ್ಲೆಯಲ್ಲಿ ಪರವಾಣಿಗೆ ಹೊಂದಿರುವ ಆಯುಧಗಳನ್ನು ಸ್ಕ್ರೀನಿಂಗ್ ಕಮಿಟಿ ಪರಿಶೀಲನೆಗೆ ಒಳಪಡಿಸಬೇಕು ಮತ್ತು ಚುನಾವಣಾ ಪ್ರಕ್ರೀಯೆ ಸಂಪೂರ್ಣವಾಗಿ ಮುಗಿಯುವವರೆಗೆ ತಮ್ಮ ಸಮೀಪದ ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಹಣ, ವಸ್ತು, ಇತರೆ ಸಾಮಗ್ರಿಗಳ ವಶ: ಸೂಕ್ತ ದಾಖಲೆ ಇಲ್ಲದೆ ಹೊಂದಿದ್ದ ಮತ್ತು ಚುನಾವಣಾ ಕಾರಣಕ್ಕೆ ಬಳಕೆಯಾಗುವ ಅನುಮಾನದಿಂದ ಕೆಲವು ಕಡೆ ಹಣ, ವಸ್ತು ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 1ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಹಣ, ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.
ಆರು ವಿಧಾನಸಭಾ ಮತಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿ:
ಶ್ರೀನಿವಾಸಪುರ ವಿಧಾನಸಭಾ ಮತಕ್ಷೇತ್ರ-144: ನವಲಗುಂದ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಶ್ರೀನಿವಾಸಪುರ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಜಿಲ್ಲಾಪಂಚಾಯತ್ ಉಪ ಕಾರ್ಯದರ್ಶಿ ನಂದಿನಿ(9480870001) ಚುಣಾವಣಾಧಿಕಾರಿಯಾಗಿದ್ದಾರೆ.
ಮುಳಬಾಗಿಲು ವಿಧಾನಸಭಾ ಮತಕ್ಷೇತ್ರ-145: ಮುಳಬಾಗಿಲು ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಮುಳಬಾಗಿಲು ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು ಉಪನಿರ್ದೇಶಕರು ,ಭೂಮಿ ಭಾಗ್ಯಮ್ಮ(9844410602) ಚುಣಾವಣಾಧಿಕಾರಿಯಾಗಿದ್ದಾರೆ.
ಕೆಜಿಎಫ್ ವಿಧಾನಸಭಾ ಮತಕ್ಷೇತ್ರ-145: ಕೆಜಿಎಫ್ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಕೆಜಿಎಫ್ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಜಂಟಿನಿರ್ದೇಶಕರಾದ ಮೊಹಮ್ಮದ್ ಅಫೀಕ್ ಉಲ್ಲಾ ಷರೀಫ್ (9845628883) ಚುಣಾವಣಾಧಿಕಾರಿಯಾಗಿದ್ದಾರೆ.
ಬಂಗಾರಪೇಟೆ ವಿಧಾನಸಭಾ ಮತಕ್ಷೇತ್ರ-147: ಬಂಗಾರಪೇಟೆ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಬಂಗಾರಪೇಟೆ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಶೃತಿ ಎಂ ಕೆ(9591056238)ಚುಣಾವಣಾಧಿಕಾರಿಯಾಗಿದ್ದಾರೆ.
ಕೋಲಾರ ವಿಧಾನಸಭಾ ಮತಕ್ಷೇತ್ರ-148: ಕೋಲಾರ ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಕೋಲಾರ ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ಕೋಲಾರ ಸಹಾಯಕ ಆಯುಕ್ತರಾದ ಹೆಚ್ ಎಸ್ ವೆಂಕಟಲಕ್ಷ್ಮೀ (8105595859) ಚುಣಾವಣಾಧಿಕಾರಿಯಾಗಿದ್ದಾರೆ.
ಮಾಲೂರು ವಿಧಾನಸಭಾ ಮತಕ್ಷೇತ್ರ-149: ಮಾಲೂರು ವಿಧಾನ ಸಭಾ ಮತಕ್ಷೇತ್ರದ ಚುನಾವಣಾ ಅಧಿಕಾರಿಗಳ ಕಚೇರಿಯನ್ನು ಮಾಲೂರು ತಹಶೀಲ್ದಾರ ಕಚೇರಿಯಲ್ಲಿ ತೆರೆಯಲಾಗಿದ್ದು, ತೋಟಗಾರಿಕೆ ಉಪನಿರ್ದೇಶಕರಾದ ಕುಮಾರಸ್ವಾಮಿ(9900590596) ಚುಣಾವಣಾಧಿಕಾರಿಯಾಗಿದ್ದಾರೆ.
ಚುನಾವಣಾಧಿಕಾರಿಗಳು ವಿಧಾನ ಸಭಾ ಮತಕ್ಷೆತ್ರ ವ್ಯಾಪ್ತಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಸಭೆ, ಸಮಾರಂಭ, ವಾಹನ ಪರವಾಣಿಗೆ ಮುಂತಾದವುಗಳ ಅರ್ಜಿಗಳನ್ನು ಸು-ವಿಧಾ ತಂತ್ರಾಂಶದ ಮೂಲಕ ಸಲ್ಲಿಸಿದ್ದಲ್ಲಿ ಪರವಾನಿಗೆ ನೀಡುವ ಕುರಿತು ಕ್ರಮವಹಿಸಬೇಕು. ಮತ್ತು ಜಿಲ್ಲಾ ವ್ಯಾಪ್ತಿಗೆ ಸಂಬಂಧಿಸಿದಂತೆ ಈ ಕುರಿತು ಅರ್ಜಿಗಳಿದ್ದಲ್ಲಿ ಜಿಲ್ಲಾ ಚುನಾವಣಾ ಕಾರ್ಯಾಲಯದಿಂದ ಕ್ರಮವಹಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಮಾದರಿ ನೀತಿ ಸಂಹಿತೆ ಕುರಿತು ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು:
ಮಾಧ್ಯಮ ಉಸ್ತುವಾರಿ ಕೇಂದ್ರಕ್ಕೆ ಮೇಲ್ವಿಚಾರಣೆಗಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ಮತ್ತು ದೂರು ನಿರ್ವಹಣಾ ತಂಡ(1950)ವನ್ನು ನೇಮಿಸಲಾಗಿದೆ. ಈ ಎರಡು ಕೇಂದ್ರಗಳು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತವೆ. ಸಾರ್ವಜನಿಕರು ಅಥವಾ ಯಾರೇ ಆಗಲಿ ಚುನಾವಣಾ ಸಂಬಂಧಿತ ದೂರುಗಳಿದ್ದಲ್ಲಿ ಸು-ವಿಧಾ ತಂತ್ರಾಂಶ ಅಥವಾ 1950 ಸಹಾಯವಾಣಿ ಮೂಲಕ ಸಲ್ಲಿಸಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಾದ ಎಂ.ನಾರಾಯಣ ಅಪರ ಜಿಲ್ಲಾಧಿಕಾರಿ ಡಾ.ಸಂಕರಗೌಡ ವಣಿಕ್ಯಾಳ್ ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ಶಾಖೆಯ ತಹಶೀಲ್ದಾರ ನಾಗವೇಣಿ, ಶಿರಸ್ತೆದಾರ ಮಂಜುಳಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಇತ್ತೀಚಿನ ಜೀವನ ಶೈಲಿಯಲ್ಲಿ ಎಲ್ಲವು ಕಷ್ಟವಾಗುತ್ತಿವೆ. ಕೀಲು ನೋವು, ಮೂಳೆ ಸವೆತ ಮಂಡಿ ನೋವು ಇತ್ತೀಚೆಗೆ 30, 40 ವರ್ಷದವರಿಗೆ ದೊಡ್ಡವರಿಗೆ ಮಾತ್ರ ಮಂಡಿ ನೋವು ಅಥವಾ ಕೀಲುಗಳ ನೋವು ಕಾಣಿಸುಕೊಳ್ಳುತಿತ್ತು, ಆದರೆ ಈಗ ಎಲ್ಲಾ ಬದಲಾಗಿದೆ.
ಇತಿಹಾಸ ಸೃಷ್ಟಿಸಿದ RRR ಚಿತ್ರ ದಕ್ಷಿಣ ಭಾರತ ಚಲನಚಿತ್ರ ಒಂದಕ್ಕೆ ಮೊದಲ ಆಸ್ಕರ್ ಪ್ರಶಸ್ತಿಯ ಗೌರವ ನಾಟು ನಾಟು..’, ‘ಲಿಫ್ಟ್ ಮಿ ಅಪ್’, ‘ದಿಸ್ ಈಸ್ ಲೈಫ್’, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಹಾಡುಗಳು ರೇಸ್ನಲ್ಲಿದ್ದವು. ಈ ಪೈಕಿ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ‘ಆರ್ಆರ್ಆರ್’ ಚಿತ್ರದ ‘ನಾಟು ನಾಟು..’ ಹಾಡು ದಾಖಲೆ ಬರೆದಿದೆ. 95ನೇ ಸಾಲಿನ ಅಕಾಡೆಮಿ ಅವಾರ್ಡ್ ಕರ್ಯಕ್ರಮದಲ್ಲಿ ಈ ಹಾಡು ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಆಸ್ಕರ್ ಬಾಚಿಕೊಂಡಿದೆ. ಎಂ.ಎಂ. ಕೀರವಾಣಿ…
ಚಿತ್ರ ರಂಗದಲ್ಲಿ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ. ಅವರಿದ್ದ ಜಾಗಕ್ಕೆ ಇವರು ಕಾಲಿಡುವುದೂ ಇಲ್ಲ. ವೃತ್ತಿ ಮತ್ಸರದಿಂದ ಬದುಕುವವರೇ ಜಾಸ್ತಿ ಅಂತ ನಾವೆಲ್ಲರೂ ಮಾತನಾಡುತ್ತೇವೆ ಮತ್ತು ಅವರು ಸಹ ಹಾಗೆಯೇ ಇರುತ್ತಾರೆ ಎಂದು ಹೇಳಿಕೊಳ್ಳುತ್ತಾರೆ ಮತ್ತು ಚಿತ್ರರಂಗ ವಲಯದಿಂದ ಸಹ ಮಾತುಗಳು ಕೇಳಿಬರುತ್ತವೆ. ಆದರೆ, 80ರ ದಶಕದ ತಾರೆಯರು ಈ ಮಾತನ್ನು ಸುಳ್ಳು ಮಾಡಿದ್ದಾರೆ. ಇದಕ್ಕೆ ಸಾಕ್ಷಿ ‘ಮೆಗಾ ಸ್ಟಾರ್’ ಚಿರಂಜೀವಿ, ಅವರ ಮನೆಯಲ್ಲಿ ನಡೆದ ಪಾರ್ಟಿಯೇ ಸಾಕ್ಷಿ. ಪ್ರತಿವರ್ಷ 80ರ ದಶಕದ ದಕ್ಷಿಣ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ಪ್ರತಿದಿನದಂತೆ ಎಲ್ಲವೂ ಸರಿಯಾಗಿದೆ ಎಂದುಕೊಂಡಾಗಲೇ ಕುತಂತ್ರಿಗಳಿಂದ ತೊಂದರೆ ಎದುರಾಗುವ ಸಾಧ್ಯತೆ ಇದೆ. ಈ ಬಗ್ಗೆ ಸಾಕಷ್ಟು ಪೂರ್ವಭಾವಿ ತಯಾರಿ ಮಾಡಿಕೊಂಡೇ ಅವರನ್ನು ಎದುರಿಸಿದಾಗ ಅವರು ಕೇವಲ ಪೇಪರ್ ಹುಲಿಗಳೆಂದು…
ಸಂಯುಕ್ತ ಅರಬ್ ಎಮಿರೇಟ್ಸ್ (UAE) ಸದ್ಯ ಭಾರೀ ಮಳೆ, ಗುಡುಗು ಹಾಗೂ ಸಿಡಿಲುಗಳಿಗೆ ಸಾಕ್ಷಿಯಾಗಿದೆ. ಇದೇ ವೇಳೆ ಒಂದು ವಿಶಿಷ್ಟ ಚಿತ್ರವೊಂದನ್ನು ಸೆರೆಹಿಡಿದಿರುವ ಛಾಯಾಗ್ರಾಕನೊಬ್ಬ ತನ್ನ ಬಹುದಿನಗಳ ಕನಸೊಂದನ್ನು ಈಡೇರಿಸಿಕೊಂಡಿದ್ದಾನೆ. ಜಗತ್ತಿನ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾ ನೆತ್ತಿ ಮೇಲೆ ಸಿಡಿಲು ಬಡಿದಿದೆ.ಈ ಅದ್ಭುತ ಘಳಿಗೆಯನ್ನು ಸೆರೆ ಹಿಡಿದ ಝೋಹೆಯ್ಬ್ ಅಂಜುಮ್, ಈ ಘಳಿಗೆಗೆಂದು ಸತತ ಏಳು ವರ್ಷಗಳ ಕಾಲ ಈ ಕ್ಷಣಕ್ಕಾಗಿ ಕಾದು ಕುಳಿತಿದ್ದರಂತೆ. ದುಬಾಯ್ನಲ್ಲಿ ಮಳೆ ಆದಾಗಲೆಲ್ಲ ರಾತ್ರಿಗಳನ್ನು ಆಚೆಯೇ ಕಳೆಯುತ್ತಿದ್ದ ಈತನ…
ಒಂದೆಕರೆ ಕ್ಷಣದಲ್ಲೇ ಪರಿಹಾರ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು 9739124121ಶ್ರೀ ಕ್ಷೇತ್ರ ಧರ್ಮಸ್ಥಳ ನುಡಿದಂತೆ ನಡೆಯುವುದು ಮೇಷ:- ನಿಮ್ಮ ನಿಯಂತ್ರಣವನ್ನು ಮೀರಿ ಖರ್ಚು ವೆಚ್ಚಗಳು ಏರವ ಸಾಧ್ಯತೆಗಳಿವೆ. ಈ ಬಗ್ಗೆ ಎಚ್ಚರ ಇರಲಿ. ಅಂತೆಯೇ ನಿಮ್ಮ ಸುತ್ತಮುತ್ತ ಹೊಗಳು ಭಟ್ಟಂಗಿಗಳು ಇರುವರು. ಇವರ ಬಗ್ಗೆ ಹೆಚ್ಚಿನ ಜಾಗರೂಕತೆಯಿಂದ…