ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಭಾರತ 89 ರನ್‍ಗಳ ಭರ್ಜರಿ ಜಯಗಳಿಸಿದೆ. ಈ ಹಿನ್ನೆಲೆಯಲ್ಲಿ ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬ್ಯಾನರ್ ಹಿಡಿದು ನಿಂತಿರುವ ಕೆಲ ಅಭಿಮಾನಿಗಳ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವಿರಾಟ್ ಕೊಹ್ಲಿ ನಮಗೆ ಬೇಕು, ನಮಗೆ ಕಾಶ್ಮೀರ ಬೇಡ ವಿರಾಟ್ ಕೊಹ್ಲಿ ಬೇಕು ಎಂದು ಪಾಕಿಸ್ತಾನಿಗಳು ಬೇಡಿಕೆ ಇಟ್ಟಿರುವುದಾಗಿ ಎಂದು ಹೇಳಲಾಗುವ ಫೋಟೋವನ್ನು ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕಾಶ್ಮೀರ ಮೂಲದ ಇಬಾ ಸಿನಾ ಎಂಬವರು ಈ ಫೋಟೋವನ್ನು ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ಇವಾಗ ಖುಷಿನಾ ಎಂದು ಬರೆದುಕೊಂಡಿದ್ದಾರೆ. ಇದೇ ಸಿನಾ ಪಿನ್ ಮಾಡಿಕೊಂಡಿರುವ ಟ್ವೀಟ್ ನಲ್ಲಿ ನಾನೋರ್ವ ಮುಸ್ಲಿಂ, ಆದ್ರೆ ಹಿಂದೂಗಿಂತ ಕಡಿಮೆ ಏನಿಲ್ಲ. ನನ್ನ ಧರ್ಮ ಇಸ್ಲಾಂ, ಆದ್ರೆ ನನ್ನ ಸಂಸ್ಕೃತಿ ಹಿಂದೂ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್‍ನ್ನು ಸಾಹಿತಿ ಮಧು ಕಿಶ್ವರ್ ರೀಟ್ವೀಟ್ ಮಾಡಿದ್ದು, ಒಂದು ಕಾಲದಲ್ಲಿ ಪಾಕಿಸ್ತಾನದವರು ನಟಿ ಮಾಧುರಿಯವರನ್ನು ಕೊಡಿ ಪಾಕಿಸ್ತಾನ ತೆಗೆದುಕೊಳ್ಳಿ ಎಂದು ಜಪಿಸಿದ್ದರು. ಈಗ ಪಂದ್ಯ ಸೋತ ಹತಾಶೆಯಲ್ಲಿ ಹೊಸ ಬೇಡಿಕೆಯನ್ನು ಇಟ್ಟಿದ್ದಾರೆ ಎಂದು ಪಾಕ್ ಕಾಲೆಳೆದಿದ್ದಾರೆ.
ವೈರಲ್ ಫೋಟೋ ನಿಜಾನಾ?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋ ಸುಳ್ಳು ಎಂದು ರಾಷ್ಟ್ರೀಯ ಪತ್ರಿಕೆಗಳು ವರದಿ ಮಾಡಿವೆ. 2016ರಲ್ಲಿ ಕಶ್ಮೀರಾ ಕಣಿವೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುರ್ಹಾನ್ ವಾನಿಯ ಭಾರತೀಯ ಸೇನೆ ಹತ್ಯೆ ಮಾಡಿತ್ತು. ಇದನ್ನು ಖಂಡಿಸಿ ಕೆಲ ಕಾಶ್ಮೀರಿ ಯುವಕರು ಪಾಕ್ ಪರ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದರು.
ಅಂದು ಕಾಶ್ಮೀರಿ ಕೆಲ ಯುವಕರು ಹಸಿರು ಬಣ್ಣದ ದೊಡ್ಡ ಬ್ಯಾನರ್ ಜೊತೆ ಪಾಕಿಸ್ತಾನ ಧ್ವಜಗಳನ್ನು ಹಿಡಿದು ನಿಂತಿದ್ದರು. ಹಸಿರು ಬ್ಯಾನರ್ ಮೇಲೆ ನಮಗೆ ಸ್ವಾತಂತ್ರ ಬೇಕೆಂದು ಬರೆಯಲಾಗಿತ್ತು. ಇದೀಗ ಅದೇ ಫೋಟೋವನ್ನು ಎಡಿಟ್ ಮಾಡಿ, ನಮಗೆ ಕಾಶ್ಮೀರ ಬೇಡ ಕೊಹ್ಲಿ ಬೇಕು ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ.
ಕಾರ್ಗಿಲ್ ಯುದ್ಧದಷ್ಟೇ ಕಾವು ಪಡೆದ ಮತ್ತು ಕ್ರಿಕೆಟ್ ಲೋಕದ ಅತಿದೊಡ್ಡ ಕಾದಾಟವೆಂದೇ ಹೇಳಲಾಗುವ ಭಾರತ ಮತ್ತು ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಭಾರತದ ವಿರುದ್ಧದ ಸೋಲನ್ನು ಸಹಿಸಿಕೊಳ್ಳಲಾಗದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಪಾಕ್ ತಂಡದ ವಿರುದ್ಧ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ, ಹಿರಿಯ ಆಟಗಾರರು ಕೂಡ ನಾಯಕ ಸರ್ಫರಾಜ್ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಆತ್ಮೀಯ ಸ್ನೇಹಿತರೆ ನಮ್ಮದೊಂದು ಕೋರಿಕೆ, ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ ಮತ್ತು ನಿಮ್ಮ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ…
ಅಭಿವೃದ್ಧಿ ಚರ್ಚೆಗೆ ಸಿದ್ಧ ಎಂಬ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಜಿಲ್ಲೆಯಲ್ಲಿಂದು ಮಗ ನಿಖಿಲ್ ಪರ ಪ್ರಚಾರ ಮಾಡಿದ ಕುಮಾರಸ್ವಾಮಿ, ಯಾವ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಾರೆ. ನನ್ನ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತನ ಜೊತೆ ಚರ್ಚೆ ಮಾಡುವುದಕ್ಕೂ ಅವರ ಕೈಯಲ್ಲಿ ಶಕ್ತಿಯಿಲ್ಲ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಮಂಡ್ಯ ಜಿಲ್ಲೆಗೆ ದೇವೇಗೌಡ ಕುಟುಂಬ ಕೊಟ್ಟಿರುವ ಕೊಡುಗೆ, ಅಭಿವೃದ್ಧಿ ಬಗ್ಗೆ ಚರ್ಚೆ ಮಾಡುತ್ತಾರೋ ಅಥವಾ ಇನ್ನು ಯಾರ…
ಅಪಾರ ಔಷಧ ಗುಣ ಹೊಂದಿರುವ ನುಗ್ಗೆ ಸೊಪ್ಪನ್ನು ನೇರವಾಗಿ ಮಾರಾಟ ಮಾಡಿದರೆ ಮಾರುಕಟ್ಟೆಯಲ್ಲಿ ಬೆಲೆ ಕಡಿಮೆ ಎಂದು ತಿಳಿದ, ತಾಲೂಕಿನ ತಾವರಗೇರಾ ಪ್ರದೇಶದ ರೈತರೊಬ್ಬರು, ಸೊಪ್ಪಿನಿಂದ ತಯಾರಿಸಿದ ಪುಡಿಯನ್ನು ವಿದೇಶಗಳಿಗೆ ರಫ್ತುಮಾಡಿ ಗಮನಸೆಳೆದಿದ್ದಾರೆ. ಮೂಲತಃ ಗಂಗಾವತಿ ತಾಲೂಕಿನವರಾದ ಬಸಯ್ಯ ಹಿರೇಮಠ, ತಾವರಗೇರಾ ಪ್ರದೇಶದಲ್ಲಿ 30ಎಕರೆ ಜಮೀನು ಖರೀದಿಸಿ, ನುಗ್ಗೆ ಬೇಸಾಯದಲ್ಲಿ ತೊಡಗಿದ್ದಾರೆ. ತೋಟಗಾರಿಕೆ ಕೃಷಿಯನ್ನು ವಿಶಿಷ್ಟ ರೀತಿಯಲ್ಲಿ ಕೈಗೊಳ್ಳಲು ಅವರಿಗೆ ಸಾಮಾಜಿಕ ಜಾಲತಾಣ ನೆರವಿಗೆ ಬಂದಿದೆ. ನುಗ್ಗೆ ಸೊಪ್ಪನ್ನು ನಿಗದಿತ ಉಷ್ಣಾಂಶದಲ್ಲಿ ಒಣಗಿಸಿ ಪೌಡರ್ ಆಗಿ ಪರಿವರ್ತಿಸಿದರೆ…
ದೇಶದ ಪ್ರಖ್ಯಾತ ಉದ್ಯಮಿಳಗ ಸಾಲಿನಲ್ಲಿ ಮೇರು ಸಾಲಿನಲ್ಲಿ ಕಾಣಸಿಕೊಳ್ಳುವ ಹೆಸರು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರಾ ಮುಖೇಶ್ ಅಂಬಾನಿ ಅಂದ ಹಾಗೇ ದೇಅಂಬಾನಿ ಅವರು ತಮ್ಮ ಕಾರ್ ಚಾಲಕನಿಗೆ ಪ್ರತಿ ತಿಂಗಳು ಎಷ್ಟು ಸಂಬಳ ನೀಡ್ತಾರೆ ಎಂಬ ಬಗ್ಗೆ ತಿಳಿದಿದೆಯಾ?
ಇನ್ನುಮುಂದೆ ಎಲ್ಲಾ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯವಾಗಲಿದೆ. ಒಂದೊಮ್ಮೆ ನಿಮ್ಮ ವಾಹನಗಳಲ್ಲಿ ಫಾಸ್ಟ್ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಟಿ ಮುಂದೆ ಹೋಗಬೇಕಾಗುತ್ತದೆ. ಹೌದು ಇದು ಸತ್ಯ, ಡಿಸೆಂಬರ್ನಲ್ಲಿ ಈ ನಿಯಮ ದೇಶಾದ್ಯಂತ ಜಾರಿಗೆ ಬರಲಿದೆ.ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಹಾಗೂ ಕಾಯುವ ಸಮಯವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಟೋಲ್ನ ಎಲ್ಲ ಲೇನ್ಗಳನ್ನೂ ಫಾಸ್ಟ್ಟ್ಯಾಗ್ ಲೇನ್ಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಡಿಸೆಂಬರ್ 1 ರಿಂದ ಇದು ಜಾರಿಗೆ ಬರಲಿದೆ. ಫಾಸ್ಟ್ ಟ್ಯಾಗ್ನಲ್ಲಿ ಸ್ವಯಂಚಾಲಿತವಾಗಿ ಟೋಲ್ ಶುಲ್ಕ ಕಡಿತಗೊಳ್ಳುತ್ತದೆ.ಇದೇ ವೇಳೆ ಒಂದು ಹೈಬ್ರಿಡ್…
ಪ್ರತಿಯೊಬ್ಬರ ಪರ್ಸ್ ನಲ್ಲಿಯೂ ನಾಣ್ಯಗಳು ಇದ್ದೇ ಇರುತ್ವೆ. ಕೆಲವರ ಪರ್ಸ್ ನಲ್ಲಿ 10 ರೂಪಾಯಿ ನಾಣ್ಯವಿದ್ರೆ ಇನ್ನು ಕೆಲವರ ಪರ್ಸ್ ನಲ್ಲಿ 2 ರೂಪಾಯಿ, ಒಂದು ರೂಪಾಯಿ ನಾಣ್ಯವಿರುತ್ತದೆ. ಶಾಸ್ತ್ರದ ಪ್ರಕಾರ, ರಾಶಿಗನುಗುಣವಾಗಿ ನಾಣ್ಯವನ್ನು ಪರ್ಸಿನಲ್ಲಿಟ್ಟರೆ ಶುಭಕರ. ಪ್ರತಿಯೊಂದು ರಾಶಿಗೂ ಬೇರೆ ಬೇರೆ ಲೋಹ ಶುಭ ಫಲ ನೀಡುತ್ತವೆ. ಹಾಗಾಗಿ ರಾಶಿಗನುಗುಣವಾಗಿ ಲೋಹದ ನಾಣ್ಯಗಳನ್ನು ಪರ್ಸಿನಲ್ಲಿ ಇಟ್ಟುಕೊಂಡರೆ ಎಂದೂ ಪರ್ಸ್ ಖಾಲಿಯಾಗುವುದಿಲ್ಲ. ಮೇಷ : ಈ ರಾಶಿಯವರು ಪರ್ಸ್ ನಲ್ಲಿ ತಾಮ್ರದ ನಾಣ್ಯವನ್ನು ಇಟ್ಟುಕೊಳ್ಳಬೇಕು. ವೃಷಭ : ಈ ರಾಶಿಯವರು…