News

ದರ್ಶನ್ ಕುರುಕ್ಷೇತ್ರ, ಸುದೀಪ್ ಪೈಲ್ವಾನ್, ಅಭಿಷೇಕ್ ಅಮರ್ ಚಿತ್ರಗಳ ಸ್ಟೈಲಿಶ್ ಟೀ ಶರ್ಟ್ ಗಳು..ಕೊಂಡುಕೊಳ್ಳಲು ಈ ಫೋಟೋ ಮೇಲೆ ಕ್ಲಿಕ್ ಮಾಡಿ ನೋಡಿ…
ವಾಹನ ಚಾಲಕರಿಗೆ ಹೊಸ ರೂಲ್ಸ್…..ಏನೆಂದು ತಿಳಿಯಿರಿ?
ನೀವು ಇನ್ಸೂರೆನ್ಸ್ ಬಳಕೆದಾರರೇ? ಆಗದರೆ ತಪ್ಪದೇ ಇದನ್ನು ಒಮ್ಮೆ ಓಧಿ…..!
ಪ್ರವಾಹ ಸಂಕಷ್ಟಕ್ಕೆ ಸಿಲುಕಿದ ಬಿಹಾರ: 31 ಮಂದಿ ಸಾವು, 40 ಲಕ್ಷ ಜನರ ಸ್ಥಳಾಂತರ….
ಗರ್ಭಿಣಿಯರೇ ಉಷಾರ್…! 3 ಗಂಟೆಗಳವರೆಗೂ ಸಂಭವಿಸಲಿದೆ ಚಂದ್ರಗ್ರಹಣ…..
7 ವರ್ಷಗಳಲ್ಲಿ 7 ಬಾರಿ ಗರ್ಭಪಾತ ; ಕರಳು ಚಿಮ್ಮುತ್ತೆ ಮಹಿಳೆಯ ಹೃದಯ ವಿದ್ರಾವಕ ಕಥೆ….
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದೆ ತಪ್ಪಾಯಿತು : 19ರ ಯುವಕನ ದುರ್ಮರಣ…..!
ಚಂದ್ರಗ್ರಹಣ ದೋಷ ನಿವಾರಣೆಗೆ ಇಲ್ಲಿದೆ ಪರಿಹಾರ ಏನೆಂದು ತಿಳಿಯಿರಿ….!
ದಿನ ಭವಿಷ್ಯ , ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ….
ಪರ್ಸಿನಲ್ಲಿ ಸತ್ತವರ ಫೋಟೊ ಇಟ್ಟರೆ ಏನಾಗುತ್ತೆ ಗೊತ್ತಾ…?
‘ಗುರು ಪೂರ್ಣಿಮೆ’ಯ ವಿಷೆಶತೆ ಏನು ಗೊತ್ತಾ…?
ಸುದ್ದಿ

ಕೀನ್ಯಾ ನಿಂದ 200 ರೂ ಸಾಲ ತೀರಿಸಲು 30 ವರ್ಷಗಳ ಬಳಿಕ ಭಾರತಕ್ಕೆ ಬಂದ ಭೂಪ…!

ಔರಂಗಾಬಾದ್, ಜು.11: ಸುಮಾರು ಮೂರು ದಶಕಗಳ ಹಿಂದೆ, 1985-1989ರ ಅವಧಿಯಲ್ಲಿ ಕೀನ್ಯಾ ಸಂಜಾತ ರಿಚರ್ಡ್ ಟೊಂಗಿ ಅವರು ಔರಂಗಾಬಾದ್ ನಗರದ ಮೌಲಾನ ಆಝಾದ್ ಕಾಲೇಜಿನಲ್ಲಿ ಮ್ಯಾನೇಜ್ಮೆಂಟ್ ವಿಷಯದ ವಿದ್ಯಾರ್ಥಿಯಾಗಿದ್ದ ವೇಳೆ ಅವರ ಬಳಿ ಹೆಚ್ಚಿನ ಹಣವಿರಲಿಲ್ಲ. ಆಗ ಅವರಿಗೆ ಸ್ಥಳೀಯ ದಿನಸಿ ಅಂಗಡಿ ಮಾಲಕ ಕಾಶೀನಾಥ್ ಗಾವ್ಲಿ ಎಂಬವರು ಅಲ್ಪಸ್ವಲ್ಪ ಸಹಾಯವನ್ನು ಆಗಾಗ ಮಾಡುತ್ತಿದ್ದರು.ಮುಂದೆ ಶಿಕ್ಷಣ ಪೂರೈಸಿ ರಿಚರ್ಡ್ ಕೀನ್ಯಾಗೆ ಮರಳಿದಾಗ ಕಾಶೀನಾಥ್ ಗೆ ಇನ್ನೂ ರೂ 200 ಕೊಡುವುದು ಬಾಕಿಯಿತ್ತು. ಇದೀಗ ಮೂವತ್ತು ವರ್ಷಗಳ ನಂತರ ಆ ಬಾಕಿ ಹಣ ಚುಕ್ತಾ ಮಾಡಿದ್ದಾರೆ ರಿಚರ್ಡ್.

ಈ ಕಥೆ ಸ್ವಾರಸ್ಯಕರ. ಇದೀಗ ಕೀನ್ಯಾದಲ್ಲಿ ಸಂಸದರಾಗಿರುವ ರಿಚರ್ಡ್ ಸೋಮವಾರ ಔರಂಗಾಬಾದ್ ನಗರಕ್ಕೆ ತಮ್ಮ ಪತ್ನಿ ಸಮೇತ ಭೇಟಿ ನೀಡಿ  ಗಾವ್ಲಿ ಅವರನ್ನು ಹುಡುಕಿ ಅವರನ್ನು ಕಂಡು ಮಾತನಾಡಿಸಿ, 200 ರೂ.  ವಾಪಸ್ ನೀಡಲು ಮುಂದಾದಾಗ ಅವರ ಪ್ರಾಮಾಣಿಕತೆಗೆ ಹೃದಯ ತುಂಬಿ ಬಂದು ಕಾಶೀನಾಥ್ ನಯವಾಗಿ ನಿರಾಕರಿಸಿದರು. ಆದರೂ ರಿಚರ್ಡ್ ಅವರು ಗಾವ್ಲಿ ಕುಟುಂಬದ ಮಕ್ಕಳಿಗೆ ಕೆಲ ಯುರೋ (ಸುಮಾರು ರೂ 19,900) ತಮ್ಮ ಕಾಣಿಕೆಯಾಗಿ ನೀಡಿದರು.

ಸದ್ಯ ರಿಚರ್ಡ್ ಅವರು ಕೆನ್ಯಾ ಸಂಸತ್ತಿನಲ್ಲಿ ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಸಮಿತಿಯ ಉಪಮುಖ್ಯಸ್ಥರಾಗಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಯಾದ ಕೀನ್ಯಾದ ನಿಯೋಗದಲ್ಲಿ ಅವರಿದ್ದರು.  ಪ್ರಧಾನಿ ಭೇಟಿಯ ನಂತರ ಔರಂಗಾಬಾದ್ ನಲ್ಲಿ ತಮ್ಮ ಅಚ್ಚುಮೆಚ್ಚಿನ `ಕಾಶಿನಾಥ್ ಕಾಕಾ’ ಅವರನ್ನು ಭೇಟಿಯಾಗಲು ನಿರ್ಧರಿಸಿದ್ದರು. ಹಿಂದೆ ವಾಂಖೆಡೆ ನಗರದಲ್ಲಿ ದಿನಸಿ ಅಂಗಡಿ ಹೊಂದಿದ್ದ ಗಾವ್ಲಿ ಈಗ ದೊಡ್ಡ  ಮಳಿಗೆ ಹೊಂದಿದ್ದಾರಲ್ಲದೆ, ನಾಲ್ಕು ಅಂತಸ್ತಿನ ಮನೆಯನ್ನೂ ಕಟ್ಟಿಸಿದ್ದಾರೆ.

ಔರಂಗಾಬಾದ್ ನಗರಕ್ಕೆ ಆಗಮಿಸಿದ ರಿಚರ್ಡ್ ಮತ್ತವರ ಪತ್ನಿ ಮಿಶೆಲ್ ಅವರಿಗೆ ಗಾವ್ಲಿ ಅವರನ್ನು ಹುಡುಕಲು ಎರಡು ದಿನಗಳೇ ತಗಲಿತ್ತು.ಸೋಮವಾರ ತಮ್ಮ ಬಳಿ ಬಂದ ರಿಚರ್ಡ್ ಅವರನ್ನು ಗುರುತಿಸಲು ಗಾವ್ಲಿ ಅವರಿಗೆ ಸ್ವಲ್ಪ ಹೊತ್ತು ಬೇಕಾಯಿತು, ಆಗ ರಿಚರ್ಡ್ ತಾವು ನೀಡಬೇಕಾದ ಬಾಕಿ ಹಣದ ಬಗ್ಗೆ ಹೇಳಿದಾಗ ಕಾಶಿನಾಥ್ ಅವರ ಕಣ್ತುಂಬಿ ಬಂದಿತ್ತು. ರಿಚರ್ಡ್ ಅವರ ಕಣ್ಣಾಲಿಗಳೂ ತುಂಬಿ ಬಂದಿದ್ದವು. ಇಬ್ಬರೂ ನಂತರ ಸಂತೋಷದಿಂದ ಹಳೆಯ ದಿನಗಳನ್ನು ಮೆಲುಕು ಹಾಕಿದರು.

Follow Us on Facebook

Categories

ಇಂದಿನ ಅವಮಾನ
0C
humidity: 0%
wind: 0km/h
H 0 • L 0

Date wise

  • 6ನೇ ವೇತನ ಆಯೋಗದ ಗಾಳಿಸುದ್ದಿಗೆ ಕಿವಿ ಕೊಡಬೇಡಿ – ಇಲ್ಲಿದೆ ನಿಜವಾದ ಭಜೆಟ್ನ ಸುದ್ದಿ

    ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ. ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ.

ಏನ್ ಸಮಾಚಾರ