ಸುದ್ದಿ

ನಿಮ್ಮ ಕಿಡ್ನಿಗೆ ಅಪಾಯ ತರುವಂತಹ 10 ಸಂಗತಿಗಳು ಗಮನವಿರಲಿ…!

145

ಜೀವನಶೈಲಿ ನಮ್ಮ ಆರೋಗ್ಯದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ದೇಹದ ಎಲ್ಲ ಅಂಗಗಳ ಜೊತೆಗೆ ಕಿಡ್ನಿ ಕೂಡ ಬಹುಮುಖ್ಯ ಅಂಗ. ಕಿಡ್ನಿಗಳಿಗೆ ಡ್ಯಾಮೇಜ್ ಆದರೆ ಜೀವನ ನರಕವಾಗುತ್ತೆ. ಆದರೆ ನಾವು ಬೇಕಂತಲೋ ಅಥವಾ ಮರೆತೋ ಮಾಡುವ ಶೇ. 10 ಸಂಗತಿಗಳು ಕಿಡ್ನಿಗೆ ತುಂಬಾ ಅಪಾಯಕಾರಿ. ಅವು ಯಾವವು ಅನ್ನೋದನ್ನು ನೋಡೋಣ.

ತುಂಬಾ ಪ್ರೋಟೀನ್ ಯುಕ್ತ ಆಹಾರ ಸೇವಿಸುವುದು ಕಿಡ್ನಿಗೆ ಅಪಾಯಕಾರಿ. ಅದರಲ್ಲೂ ಮುಖ್ಯವಾಗಿ ಕೆಂಪು ಮಾಂಸ ಕಿಡ್ನಿಯನ್ನು ಡ್ಯಾಮೇಜ್ ಮಾಡುತ್ತೆ. ವಿಟಮಿನ್ ಬಿ6 ಹಾಗೂ ವಿಟಮಿನ್ ಡಿ ಕೊರತೆ ಕೂಡ ಕಿಡ್ನಿಗೆ ಅಪಾಯಕಾರಿ ಹಾಗೂ ಕಿಡ್ನಿಯಲ್ಲಿನ ಕಲ್ಲು ಸಮಸ್ಯೆಗೆ ನಾಂದಿ ಹಾಡುತ್ತೆ.
ದೇಹಕ್ಕೆ ಸಾಕಾಗುವಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯದೇ ಇರುವುದು ಕೂಡ ಕಿಡ್ನಿಗೆ ಅಪಾಯ.

ಮೂತ್ರ ವಿಸರ್ಜನೆಯನ್ನು ತಡೆಹಿಡಿಯುವುದು ಕೂಡ ಸರಿಯಲ್ಲ. ಇದೂ ಕೂಡ ಕಿಡ್ನಿ ಸಮಸ್ಯೆ ತಂದೊಡ್ಡುತ್ತದೆ.
ಹೆಚ್ಚು ಉಪ್ಪು ತಿನ್ನುವುದು ಕೂಡ ಕಿಡ್ನಿಗೆ ಅಪಾಯಕಾರಿ.
ತುಂಬಾ ಸಿಹಿ ಪದಾರ್ಥಗಳನ್ನೂ ಸೇವಿಸುವುದರಿಂದ ಸಕ್ಕರೆ ಕಾಯಿಲೆ ಬರುತ್ತದೆ. ಡಯಾಬಿಟಿಸ್ ಅನ್ನೋದು ಕಿಡ್ನಿ ಸಮಸ್ಯೆಯ ಮೂಲ ಅನ್ನೋದನ್ನು ಮರೆಯಬಾರದು.

ಪ್ರತಿನಿತ್ಯ ವ್ಯಾಯಾಮ ಮಾಡದೇ ಇರುವುದು ಕೂಡ ಕಿಡ್ನಿ ಸಮಸ್ಯೆಗೆ ದಾರಿ.
ಪ್ರತಿಯೊಂದಕ್ಕೂ ಹೆಚ್ಚು ಹೆಚ್ಚು ಮಾತ್ರೆಗಳನ್ನುಸೇವಿಸುವುದೂ ಒಳ್ಳೆಯದಲ್ಲ.
ನಿಯಮಿತವಾಗಿ ರಕ್ತದೊತ್ತಡವನ್ನು ಪರೀಕ್ಷಿಸುವುದು ಕಿಡ್ನಿ ಆರೋಗ್ಯಕ್ಕೂ ಒಳ್ಳೆಯದು.
ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವನೆ ಕಿಡ್ನಿಗೆ ಮಾರಕ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ