ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಅಭಿಮಾನಿ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ರಷ್ಯಾದ ಅಭಿಮಾನಿಯೊಬ್ಬರು ವಿಡಿಯೋ ಮಾಡಿ ಅವರ ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ನೋಡಿ ಕಿಚ್ಚ ಸುದೀಪ್ ಅವರು ರಷ್ಯಾದ ಅಭಿಮಾನಿಗೆ ಬೆರಗಾಗಿದ್ದಾರೆ ಮರೀನಾ ಕಾರ್ಟಿಂಕಾ ಎಂಬವರು ಈ ವಿಡಿಯೋದಲ್ಲಿ ಸುದೀಪ್ ಅವರ ನಟನೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಮರೀನಾ ವಿಡಿಯೋದಲ್ಲಿ ತಿಳಿಸಿದ್ದಾರೆ .

ವಿಡಿಯೋದಲ್ಲಿ ಏನಿದೆ? :ನಾನು ನಿಮ್ಮ ಬಹುದೊಡ್ಡ ಅಭಿಮಾನಿ. ನೀವು ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮವನ್ನು ನಾನು ನೋಡಲು ಪ್ರಯತ್ನಿಸುತ್ತೇನೆ. ನೀವು ಅತ್ಯುತ್ತಮ ನಟರಾಗಿದ್ದು, ನಾನು ನಿಮ್ಮ ಸಿನಿಮಾಗಳನ್ನು ನೋಡಲು ಇಷ್ಟಪಡುತ್ತೇನೆ. ನೀವು ನಟಿಸಿದ ಪುಲಿ, ಕೋಟಿಗೊಬ್ಬ, ಹೆಬ್ಬುಲಿ, ಪೈಲ್ವಾನ್ ಸಿನಿಮಾಗಳನ್ನು ನೋಡಿದ್ದೇನೆ. ನೀವು ಯಾವಾಗಲೂ ಸಂತೋಷವಾಗಿ ಹಾಗೂ ಆರೋಗ್ಯವಾಗಿ ಇರಬೇಕು ಎಂದು ಬಯಸುತ್ತೇನೆ. ನೀವು ನಮಗೆ ಮನರಂಜನೆ ನೀಡುತ್ತಿರುವುದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಸುದೀಪ್, ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸಿದ್ದ ‘ಸೈರಾ ನರಸಿಂಹರೆಡ್ಡಿ’ ಚಿತ್ರ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಸುದೀಪ್ ಅವುಕು ರಾಜನ ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರಕ್ಕೆ ಫಿದಾ ಆದ ಅಭಿಮಾನಿಗಳು ಅವುಕು ರಾಜು ಫ್ಯಾನ್ ಗರ್ಲ್ ಎಂದು ಟ್ವಿಟ್ಟರ್ ಖಾತೆ ತೆರೆದಿದ್ದರು. ರಷ್ಯಾ ಅಭಿಮಾನಿಯ ಈ ವಿಡಿಯೋವನ್ನು ಅವುಕು ರಾಜು ಫ್ಯಾನ್ ಗರ್ಲ್ಸ್ ಟ್ವಿಟ್ಟರಿನಲ್ಲಿ ಟ್ವೀಟ್ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ಅಭಿಮಾನಿ ಮರೀನಾ ಕಾರ್ಟಿಂಕಾಗೆ ಧನ್ಯವಾದ ತಿಳಿಸಿದ್ದಾರೆ. ಸದ್ಯ ಸುದೀಪ್ ಅವರು ‘ಕೋಟಿಗೊಬ್ಬ-3’ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಬಳಿಕ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಸಮಸ್ಯೆ ಇದೆ ಎನ್ನುವ ಮಾಹಿತಿ ನೀಡುವ ಗೂಗಲ್ ಕಂಪನಿಗೆ ವ್ಯಕ್ತಿಯೊಬ್ಬ ಚಮಕ್ ಕೊಟ್ಟ ಘಟನೆ ಜರ್ಮನಿಯಲ್ಲಿ ನಡೆದಿದೆ. ಗೂಗಲ್ ಮ್ಯಾಪ್ ಸಂಚಾರದ ಸಂದರ್ಭದಲ್ಲಿ ಜಿಪಿಎಸ್ ಸಾಧನಗಳು ಎಷ್ಟು ಆನ್ ಆಗಿದೆ ಎನ್ನುವುದನ್ನು ತಿಳಿದುಕೊಂಡು ಜನರಿಗೆ ಪ್ರದೇಶದಲ್ಲಿ ಎಷ್ಟು ಸಂಚಾರ ದಟ್ಟಣೆಯಿದೆ ಎನ್ನುವ ವಿವರ ಇರುವ ಸಂದೇಶವನ್ನು ನೀಡುತ್ತಿರುತ್ತದೆ. ಈ ವಿಚಾರವನ್ನು ತಿಳಿದ ವ್ಯಕ್ತಿಯೊಬ್ಬ ಗೂಗಲ್ ಕಂಪನಿ ಮುಂದೆ ಕೃತಕವಾಗಿ ಟ್ರಾಫಿಕ್ ಜಾಮ್ ಸೃಷ್ಟಿಸಿ ಸುದ್ದಿ ಮಾಡಿದ್ದಾನೆ. ಜರ್ಮನಿಯ ಕಲಾವಿದ ಸೈಮನ್ ವೆಕರ್ಟ್ ಬರ್ಲಿನ್…
ವೃತ್ತಿಪರ ಕೋರ್ಸ್ಗಳ ಸರ್ಕಾರಿ ಕೋಟದ ಸೀಟುಗಳಿಗೆ ಆನ್ಲೈನ್ ನೋಂದಣಿ, ಆಪ್ಶನ್ ಎಂಟ್ರಿ, ಶುಲ್ಕಪಾವತಿ ಮಾಡುವ ಅಭ್ಯರ್ಥಿಗಳು ಮುಂದಿನ ಸಾಲಿನಿಂದ ಸೈಬರ್ ಕೆಫೆ ಸೇರಿದಂತೆ ಕಂಪ್ಯೂಟರ್ ಮೊರೆ ಹೋಗುವ ಅಗತ್ಯವಿಲ್ಲ. ಇದನ್ನೆಲ್ಲಾ ಬೆರಳ ತುದಿಯಲ್ಲೇ ಮಾಡಿ ಮುಗಿಸಬಹುದು.
ನಾವೆಲ್ಲಾ ತಿಳಿದಂತೆ ಪಾರ್ವತಿ-ಪರಶಿವನ ಪುತ್ರನಾದ ಗಣೇಶನ ಶಿರವನ್ನು ಶಿವ ತನ್ನ ತ್ರಿಶೂಲದಿಂದ ಕಡಿದುರುಳಿಸಿದ ಬಳಿಕ ಆತನಿಗೆ ಆನೆಯ ಮುಖವೊಂದನ್ನು ಜೋಡಿಸಲಾಗುತ್ತದೆ. ಅಂದಿನಿಂದ ಇಂದಿನವರೆಗೂ ಗಣಪತಿಯನ್ನು ಗಜಮುಖ ರೂಪದಲ್ಲಿಯೇ ಪೂಜಿಸುತ್ತೇವೆ. ಆದರೆ ನಮಗೆಲ್ಲ ತಿಳಿಯದಿರುವ ವಿಚಾರವೆಂದರೆ ತಮಿಳುನಾಡಿನ ತಿಲತರ್ಪಣ ಪುರಿಯಲ್ಲಿ ನರ ಮುಖದ ಗಣೇಶನನ್ನು ಪೂಜಿಸಲಾಗುತ್ತದೆ ಎನ್ನುವುದು. ಗಣೇಶನನ್ನು ಆತನ ಮೂಲ ರೂಪವಾದ ‘ಆದಿ ವಿನಾಯಕ’ ರೂಪದಲ್ಲಿ ಪೂಜಿಸುವ ಜಗತ್ತಿನ ಏಕೈಕ ದೇವಾಲಯವಿದು. ತಮಿಳುನಾಡಿನ ಕುತ್ನೂರಿನಿಂದ ಎರಡು ಕಿ.ಮೀ ದೂರದಲ್ಲಿರುವ ತಿಲತರ್ಪಣ ಪುರಿ ದೇವಸ್ಥಾನದಲ್ಲಿ ನರಮುಖ ಆದಿವಿನಾಯಕನನ್ನು ಪೂಜಿಸಲಾಗುತ್ತದೆ….
ಲಾರಿಯಲ್ಲಿ ಲೋಡುಗಟ್ಟಲೆ ಸಿಗುತ್ತಿದ್ದ ಮರಳು ಈಗ ಅಕ್ಕಿಯಂತೆ ಮೂಟೆಯಲ್ಲಿಯೂ ಸಿಗುತ್ತೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರದಿಂದ ಮರಳು ಭಾಗ್ಯ ಯೋಜನೆ ರೂಪಿಸಲಾಗಿದೆ.
ಮೈಸೂರು ಅರಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಮಹಾರಾಣಿ ತ್ರಿಶಿಕಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಯದುವಂಶಕ್ಕೆ ವಾರಸುದಾರನನ್ನು ನೀಡಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿನ ಅರಮನೆಯಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ.
7 ವರ್ಷದ ಬಾಲಕಿಯಬ್ಬಳು 14 ವಾಹನಗಳನ್ನು ಚಾಲನೆ ಮಾಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲೆ ನಿರ್ಮಿಸಿದ್ದಾಳೆ. ಮೈಸೂರಿನ 2ನೇ ತರಗತಿ ವಿದ್ಯಾರ್ಥಿ ಈ ಸಾಹಸ ಮಾಡಿದ್ದಾಳೆ. 2ನೇ ತರಗತಿ ಓದುತ್ತಿರುವ ರಿಫಾ ತಸ್ಕೀನ್ ದಾಖಲೆ ನಿರ್ಮಿಸಿರುವ ಪುಟ್ಟ ಬಾಲಕಿಯಾಗಿದ್ದಾಳೆ. ದ್ವಿಚಕ್ರ ವಾಹನದಿಂದ ಬಹುಚತ್ರದ ಲಾರಿಯ ಸ್ವೀ ರಿಂಗ್ ಹಿಡಿದು ಕು ಳಿತ ಬಾಲಕಿ ದೂಳೆಬ್ಬಿಸುವ ವೇಗದಲ್ಲಿ ಮೈಸೂರಿನ ಈದ್ಗಾ ಮೈದಾನದಲ್ಲಿ ಹಲವು ಸುತ್ತುಗಳನ್ನು ಹಾಕುವ ಮೂಲಕ ನೆರೆದಿದ್ದ ಜನರಲ್ಲಿ ಅಚ್ಚರಿಯನ್ನುಂಟು ಮಾಡಿದಳು. ಬಳಿಕ ಬನ್ನಿಮಂಟಪದ ಸಂತ ಸೋಸೆಫ್…