News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೌತಮ ಬುದ್ಧನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..
ಬೆಳ್ಳುಳ್ಳಿ ತಿಂದರೆ ಕರೋನಾ ವೈರಸ್ ಸಾಯುತ್ತದೆಯೆ..? ಇಲ್ಲಿದೆ ಉತ್ತರ
ಚೈತ್ರ ಮಾಸದಲ್ಲಿ ಬೇವನ್ನು ತಿನ್ನುವುದು ಪ್ರಯೋಜನಕಾರಿ
ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್
ಕೊರೊನಾ 3ನೇ ಅಲೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ; ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಚರ್ಚೆ
ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?
ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು
ಉಬ್ಬಸ ಸಮಸ್ಯೆಗೆ ಮನೆ ಮದ್ದು
ಹೃದಯಾಘಾತ ( Heart attack ) ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್
ಮಂಗಳ ಗ್ರಹ
Place, ಸಿನಿಮಾ

KGF ಈ ದೇಶವನ್ನು ಹೇಗೆ ಉಳಿಸಿದೆ ನೋಡಿ ಅಂದು ನೆಹರೂ ಸರ್ಕಾರವನ್ನು ಮತ್ತು ಭಾರತವನ್ನು ಹೇಗೆ ಕಾಪಾಡಿತು ನೋಡಿ

995

ಭಾರತದಲ್ಲೇ ಮೊದಲ ವಿದ್ಯುತ್ ಪಡೆದ ನಗರ
ಭಾರತದಲ್ಲೇ ಅತಿ ಹೆಚ್ಚು ಚರ್ಚ್ಗಳನ್ನ ಒಂದಿರೊ ನಗರ
ರೈಲ್ವೆಯನ್ನು ಹೊಂದಿದ ಕರ್ನಾಟಕದ ಮೊದಲ ನಗರ

ಹೀಗೆ ಹಲವು ರೀತಿಯಲ್ಲಿ ಪ್ರಸಿದ್ಧ ಆಗಿರುವ ನಗರ ನಮ್ಮ ದೇಶವನ್ನು ಹೇಗೆ ಉಳಿಸಿದೆ ಮುಂದೆ ಓದಿ

ರಾಕಿಂಗ್​ ಸ್ಟಾರ್​ ಯಶ್​ ಅಭಿನಯದ ಕೆಜಿಎಫ್​ ಚಿತ್ರ ಸೃಷ್ಟಿಸಿರೋ ಹವಾ ಇಡೀ ಭಾರತೀಯ ಸಿನಿಮಾ ಇಂಡಸ್ಟ್ರಿಯಾದ್ಯಂತ ಬಿರುಗಾಳಿಯನ್ನೇ ಎಬ್ಬಿಸಿಬಿಟ್ಟಿದೆ. ಯಾವ ಮಟ್ಟಿಗೆ ಅಂದ್ರೆ, ಇಂಡಿಯನ್​ ಸಿನಿಮಾ ಇಂಡಸ್ಟ್ರಿಯ ಇತಿಹಾಸದಲ್ಲೇ ಕನ್ನಡದ ಚಿತ್ರವೊಂದು ಇಷ್ಟೊಂದು ಪ್ರಚಾರ ಪಡೆದದ್ದು ಇದೇ ಮೊದಲು. ನಿಜ ಹೇಳಬೇಕು ಅಂದ್ರೆ, ಕೆಜಿಎಫ್ ಚಿತ್ರದಂತೆಯೇ ಆ ಊರಿನ ಹೆಸರು ಭಾರತೀಯ ಇತಿಹಾಸದಲ್ಲಿ ಅತ್ಯಂತ ವೈಭವೋಪೇತ ಹೆಸರಾಗಿ ಉಳಿದಿದೆ. ಭವ್ಯ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ್ದೇ ಕೆಜಿಎಫ್​.

ಭಾರತೀಯ ಇತಿಹಾಸಕ್ಕೆ ಬಂಗಾರದ ಯುಗವನ್ನ ತಂದು ಕೊಟ್ಟ ಹೆಸರು ಕೆಜಿಎಫ್​. ಹೀಗಾಗಿಯೇ ಕೆಜಿಎಫ್​ನ್ನ ಬಂಗಾರದ ಊರು ಎಂದೇ ಕರೆಯಲಾಗಿತ್ತು. ಇಲ್ಲಿನ ಮಣ್ಣಿನ ಕಣ ಕಣದಲ್ಲೂ ಬಂಗಾರ ಬೆರೆತು ಹೋಗಿತ್ತು. ಇದೇ ಕಾರಣಕ್ಕೆ ಕೆಜಿಎಫ್​ನ್ನ ಬ್ರಿಟೀಷರು ಮಿನಿ ಲಂಡನ್​ ಎನ್ನುವ ಹೆಸರಿನಿಂದ ಕರೆದರು. ಕೆಜಿಎಫ್​ನ ಇತಿಹಾಸವೇ ರೋಮಾಂಚನಗೊಳಿಸುವಂಥಾದ್ದು. ಪ್ರತಿ ಕನ್ನಡಿಗ ಕೂಡ ಹೆಮ್ಮೆ ಪಡುವಂಥಾದ್ದು.

ಕೆಜಿಎಫ್​ನ್ನೇ ಅಡವಿಟ್ಟಿದ್ದರು ಪ್ರಧಾನಿ ನೆಹರು:
1947 ಆಗಸ್ಟ್​ 15ರಂದು ಭಾರತ ಸ್ವಾತಂತ್ರ್ಯಗೊಂಡಾಗ ದೇಶದಲ್ಲಿ ಬಡತನ ತಾಂಡವವಾಡುತ್ತಿತ್ತು. ನಿರಂತರ ಬರಗಾಲ, ನಿರುದ್ಯೋಗ, ದೇಶ ವಿಭಜನೆಯಿಂದಾಗಿ ಎಲ್ಲೆಡೆ ದೊಂಬಿ ಗಲಾಟೆ, ಕೋಮು ಗಲಭೆಗಳು, ಇಂಥಹ ಸಾಲು ಸಾಲು ಸಮಸ್ಯೆಗಳು ಪ್ರಧಾನಿ ಜವಾಹರಲಾಲ್​ ನೆಹರು ಅವರಿಗೆ ದೊಡ್ಡ ಸವಾಲನ್ನೇ ಮುಂದಿಟ್ಟಿದ್ದವು. ಭಾರತ ದೇಶವನ್ನ ಕಟ್ಟಬೇಕು ಅಂದರೆ, ವಿಶ್ವಬ್ಯಾಂಕ್​ನಲ್ಲಿ ಸಾಲ ಪಡೆಯಲೇಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು. ಆದರೆ ಭಾರತಕ್ಕೆ ಸಾಲ ಕೊಡಲು ವಿಶ್ವ ಬ್ಯಾಂಕ್​ ಸಿದ್ಧವಿರಲಿಲ್ಲ. ಯಾಕಂದ್ರೆ, ಭಾರತಕ್ಕೆ ಕೊಟ್ಟ ಸಾಲ ವಾಪಾಸ್​ ಬರುತ್ತೆ ಎನ್ನುವ ಯಾವುದೇ ಗ್ಯಾರಂಟಿ ವಿಶ್ವಬ್ಯಾಂಕ್​ಗೆ ಇರಲಿಲ್ಲ.

ವಿಶ್ವಬ್ಯಾಂಕ್​ನಿಂದ ಸಾಲ ಪಡೆಯೋಕೆ ನೆಹರು, ದೇಶದ ಯಾವುದಾದರು ಬೆಲೆ ಬಾಳುವ ಪ್ರದೇಶವನ್ನ ಅಡವಿಡುವ ಚಿಂತನೆ ಮಾಡುತ್ತಾರೆ. ಆಗ ಅವರ ನೆನಪಿಗೆ ಬಂದಿದ್ದೇ ಬಂಗಾರದ ಮೊಟ್ಟೆಗಳನ್ನ ತನ್ನೊಡಲಿನಲ್ಲಿ ಇಟ್ಟುಕೊಂಡಿದ್ದ ಕೆಜಿಎಫ್​. ಕೋಲಾರ ಗೋಲ್ಡ್​ ಫೀಲ್ಡ್​​​​ ಎನ್ನುವ ಚಿನ್ನದ ಭೂಮಿಯನ್ನ ಅಡವಿಡಲು ಪ್ರಧಾನಿ ನೆಹರು ನಿರ್ಧರಿಸಿದ್ದರು. ಕೆಜಿಎಫ್​ ಹೆಸರು ಕೇಳುತ್ತಿದ್ದಂತೆ ವಿಶ್ವಬ್ಯಾಂಕ್ ಭಾರತಕ್ಕೆ ಸಾಲವನ್ನ ವಿತರಿಸಿತ್ತು. ನಿಜ ಹೇಳಬೇಕು ಅಂದ್ರೆ, ಸ್ವತಂತ್ರ ಭಾರತದ ಅಭಿವೃದ್ಧಿಗೆ ಕೆಜಿಎಫ್​ನ ಪಾತ್ರ ಬಹಳಷ್ಟಿದೆ. ಕೆಜಿಎಫ್​ ಇಲ್ಲದೇ ಹೋಗಿದ್ದಿದ್ರೆ, ಸ್ವತಂತ್ರ ಭಾರತಕ್ಕೆ ಸಾಲ ಕೂಡ ಸಿಗುತ್ತಿರಲಿಲ್ಲ. ಕನ್ನಡಿಗರ ಹೆಮ್ಮೆಯ ಭೂಮಿಯನ್ನ ಅಡವಿಟ್ಟಂತಾ ನೆಹರು ಅವರು ಸಾಲ ಪಡೆದು ದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡರು. ಜಲಾಶಯಗಳನ್ನ ನಿರ್ಮಿಸಿದರು, ರಸ್ತೆಗಳನ್ನ ನಿರ್ಮಾಣ ಮಾಡಿದರು. ಶಾಲೆ, ಆಸ್ಪತ್ರೆ, ವಿಜ್ಞಾನ, ತಂತ್ರಜ್ಞಾನ, ಒಂದಾ ಎರಡಾ.. ಭಾರತ ಇಂದು ಇಷ್ಟೊಂದು ಎತ್ತರಕ್ಕೆ ಬೆಳೆದು ನಿಲ್ಲೋಕೆ ಬೇಕಾದ ಅಡಿಪಾಯವನ್ನ ನೆಹರು ಅಂದೇ ಹಾಕಿ ಕೊಟ್ಟರು. ನಮ್ಮ ದೇಶದ ಅಡಿಪಾಯ ಭದ್ರಗೊಳ್ಳೋಕೆ ಕಾರಣವೇ ಕನ್ನಡಿಗರ ಕೆಜಿಎಫ್​ ಎನ್ನುವುದನ್ನ ದೇಶ ಮರೆಯುವಂತಿಲ್ಲ.

About the author / 

admin

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ