ಬೆಂಗಳೂರು, ಮೇ 14: ಎಫ್ಸಿ ಆರ್ ಎ ಕಾಯ್ದೆ ಉಲ್ಲಂಘನೆ ಮಾಡಿರುವ ಆರೋಪಕ್ಕೆ ಬೆಂಗಳೂರು ಮೂಲದ ಇನ್ಫೋಸಿಸ್ ಪ್ರತಿಷ್ಠಾನವು ಪ್ರತಿಕ್ರಿಯೆ ನೀಡಿದೆ. ವಿದೇಶದಿಂದ ಯಾವುದೇ ‘ಫಂಡಿಂಗ್’ ಪಡೆದಿಲ್ಲ, ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಪ್ರತಿಕಾ ಪ್ರಕಟಣೆ ಹೊರಡಿಸಿದೆ. ಬೆಂಗಳೂರು ಮೂಲದ ಎನ್ ಜಿಒ ಇನ್ಫೋಸಿಸ್ ಫೌಂಡೇಷನ್, ವಿದೇಶದಿಂದ ಪಡೆದ ದೇಣಿಗೆ ಮೊತ್ತಕ್ಕೆ ಸೂಕ್ತ ದಾಖಲೆ ಒದಗಿಸಿದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ ಎಂದು ಪಿಟಿಐ ವರದಿ ಮಾಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಇನ್ಫೋಸಿಸ್ ಪ್ರತಿಷ್ಠಾನದ ಮುಕ್ಯಸ್ಥೆ ಸುದಾ ಮೂರ್ತಿ, ನಮ್ಮ ಸಂಸ್ಥೆ FCRA ಅಡಿಯಲ್ಲಿ ಬರುವುದಿಲ್ಲ. 2016ರಲ್ಲಿ ಕಾಯ್ದೆಗೆ ತಿದ್ದುಪಡಿಯಾಗಿದೆ. ಈ ಬಗ್ಗೆ ಇಲಾಖೆಗೆ ತಿಳಿಸಲಾಗಿದೆ ಎಂದು ಕಾರ್ಪೊರೆಟ್ ವ್ಯವಹಾರಗಳ ಸಂವಹನ ವಿಭಾಗದ ರಿಷಿ ಬಸು ಎಂದು ಪ್ರತಿಕ್ರಿಯಿಸಿದ್ದಾರೆ.
ಜನವರಿ 2016ರಲ್ಲಿ ಇನ್ಫೋಸಿಸ್ ಸಂಸ್ಥೆ FCRA ಕಾಯ್ಡೆಯಡಿಯಲ್ಲಿತ್ತು. ಆದರೆ, ಮೇ 2016ರಲ್ಲಿ ಈ ಕಾಯ್ದೆಯಡಿಯಿಂದ ಹೊರ ಬಂದಿದೆ. ಸದರಿ ಕಾಯ್ದೆಗೆ 2010ರಲ್ಲಿ ತಿದ್ದುಪಡಿಯಾಗಿದೆ. ಹೀಗಾಗಿ, ನಮ್ಮ ಸಂಸ್ಥೆ ಈ ಕಾಯ್ಡೆಯಡಿಯಲ್ಲಿ ಬರುವುದಿಲ್ಲ. ಸತತ ಮನವಿ ನಂತರ 2016ರಲ್ಲಿ FCRA ಕಾಯ್ಡೆಯಡಿ ಬರುವ ಎನ್ ಜಿಒಗಳ ಪಟ್ಟಿಯಿಂದ ಇನ್ಫೋಸಿಸ್ ಹೊರ ಬಂದಿದೆ. ಈ ಕುರಿತಂತೆ ಸರ್ಕಾರ ನೀಡಿದ ಪತ್ರವು ನಮ್ಮ ಬಳಿ ಇದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ವಕ್ತಾರರು ಹೇಳಿದ್ದಾರೆ.
2016 ರಿಂದ 2018ರ ಆರ್ಥಿಕ ವರ್ಷದ ತನಕ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ. ಮೇಲ್ಕಂಡ ಕಾಯ್ದೆಯಡಿಯಿಂದ ಹೊರಬಂದಿರುವುದರಿಂದ ಈ ಬಗ್ಗೆ ಯಾವುದೇ ದಾಖಲೆ ಒದಗಿಸಿಲ್ಲ. ವಿದೇಶದಿಂದ ದೇಣಿಗೆ ಪಡೆಯುತ್ತಿಲ್ಲ ಎಂದು ತೋರಿಸಲು ಜುಲೈ 2018ರಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಸರ್ಕಾರಕ್ಕೆ ದಾಖಲೆ ನೀಡಲಾಗಿದೆ. ಇದಾದ ಬಳಿಕ ಏಪ್ರಿಲ್ 2018ರ ನಂತರ FCRA ಆಡಿಯಲ್ಲಿ ರಿಟರ್ನ್ಸ್ ಸಲ್ಲಿಸುವಂತೆ ಇಲಾಖೆಯಿಂದ ಇನ್ಫೋಸಿಸ್ ಫೌಂಡೇಷನ್ ಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ರಿಷಿ ಬಸು(ರಾಜರ್ಷಿ ಬಸು) ಸ್ಪಷ್ಟಪಡಿಸಿದ್ದಾರೆ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಹುಚ್ಚ ವೆಂಕಟ್…..ತಮ್ಮ ಯಡವಟ್ಟುಗಳಿಂದಲೇ ಫೇಮಸ್ ಆದವರು. ಜೊತೆಗೆ ಬಿಗ್ ಬಾಸ್ಗೆ ಹೋಗಿ ಮತ್ತಷ್ಟು ಹೆಸರು ಮಾಡಿದ್ರು. ಕಾವೇರಿ ನೀರು, ಕನ್ನಡ ಭಾಷೆ ಬಗ್ಗೆ ಹೇಳುತ್ತಾ, ಒಂದೆರಡು ಚಿತ್ರಗಳನ್ನೂ ಮಾಡಿ, ಮಾತ್ ಮಾತಿಗೂ ನನ್ನ ಎಕ್ಕಡ ಎಂದು ಡೈಲಾಗ್ ಡೆಲವರಿ ಮಾಡುತ್ತಿದ್ದವರು ಹುಚ್ಚಾ ವೆಂಕಟ್. ಒಂದಿಲ್ಲೊಂದು ಗಲಾಟೆ ಮಾಡಿಕೊಳ್ತಾ, ಸುದ್ದಿಯಲ್ಲಿದ್ದ ಹುಚ್ಚ ವೆಂಕಟ್ ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಚೆನ್ನೈನ ಬೀದಿಗಳಲ್ಲಿ ಹುಚ್ಚ ವೆಂಕಟ್ ಬರಿಗಾಲಲ್ಲಿ ಓಡಾಡ್ತಿರೋ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಅವರ ಕಾಲಲ್ಲಿ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(8 ಫೆಬ್ರವರಿ, 2019) ನಿಮ್ಮ ಮನೆಗೆ ಸಂಬಂಧಿಸಿದ ಹೂಡಿಕೆ ಲಾಭದಾಯಕವಾಗಿರುತ್ತದೆ. ಹಳೆಯ ಸಂಪರ್ಕಗಳು ಮತ್ತು ಸಂಬಂಧಗಳಪುನಶ್ಚೇತನಕ್ಕೆ ಒಳ್ಳೆಯ…
ಬರೋಬ್ಬರಿ 20 ವರ್ಷ ತ್ರಿಪುರಾ ರಾಜ್ಯದ ಪ್ರಾಮಾಣಿಕ ಮುಖ್ಯಮಂತ್ರಿಯಾಗಿ ತಮ್ಮ ಸೇವೆ ಸಲ್ಲಿಸಿದ್ದಾರೆ ಮಾಣಿಕ್ ಸರ್ಕಾರ್.ಅಂದ ಹಾಗೆ ಇಷ್ಟು ವರ್ಷ ಮುಖ್ಯಮಂತ್ರಿಯಾಗಿದ್ದರೂ ಇವರ ಹತ್ತಿರ ವಾಸಿಸಲು ಒಂದು ಸ್ವಂತ ಮನೆ ಕೂಡ ಇಲ್ಲ.
ಮತಗಟ್ಟೆಗೆ ಹೋಗುವ ನಾವು, ನಮಗೆ ಇಷ್ಟವಾದ ಪಕ್ಷಕ್ಕೋ, ಅಭ್ಯರ್ಥಿಗೋ ವೋಟ್ ಹಾಕಿ ಬಂದುಬಿಡ್ತಿವಿ.ಆದರೆ ನಾವು ಹಾಕಿದ ವೋಟ್, ನಾವು ಚುನಾಯಿಸಿದ ಅಭ್ಯರ್ಥಿಗೆ ಅಥವಾ ಪಕ್ಷಕ್ಕೆ ಬಿದ್ದಿದೆಯೇ ಎಂಬುವ ಗ್ಯಾರಂಟಿ ಯಾರು ಕೊಡುತ್ತಾರೆ..? ಹೌದು, ಇದು ಸಹಜವಾಗಿ ಎಲ್ಲರಲ್ಲೂ ಮೂಡುವ ಪ್ರಶ್ನೆ. ಹಾಗಾದ್ರೆ ನಾವು ಚುನಾಯಿಸಿದ ಅಭ್ಯರ್ಥಿ ಅಥವಾ ಪಕ್ಷಕ್ಕೆ ನಮ್ಮ ವೋಟ್ ಬಿದ್ದಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಹೇಗೆ..? ವಿವಿಪ್ಯಾಟ್ ಅಂದ್ರೆ ಏನು..? ವಿವಿಪ್ಯಾಟ್ ಅಂದರೆ “ವೋಟರ್ ವೆರಿಫಯಬಲ್ ಆಡಿಟ್ ಟ್ರಯಲ್” ಎಂದು. ಇದನ್ನು ಇಲೆಕ್ಟ್ರಾನಿಕ್ ವೋಟಿಂಗ್ ಮಷಿನ್’ಗೆ ಜೋಡಿಸಲಾಗಿರುತ್ತದೆ.ಇದರಿಂದ…