ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
100 ವರ್ಷ ವಯಸ್ಸಿನ ವೃದ್ಧ ತಾಯಿಯ ಪಿಂಚಣಿ ಹಣಕ್ಕಾಗಿ ಮಗಳು ಮಂಚದ ಸಮೇತ ಆಕೆಯನ್ನು ಬ್ಯಾಂಕಿಗೆ ಕರೆತಂದ ಘಟನೆಯೊಂದು ನಡೆದಿದೆ. ಮಗಳು ತನ್ನ ತಾಯಿಯನ್ನು ಮಂಚದ ಸಮೇತ ಕರೆದೊಯ್ಯುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಿಂಚಣಿ ಹಣವನ್ನು ಡ್ರಾ ಮಾಡಲು ಆಕೆಯೇ ಬರಬೇಕು ಎಂದು ಬ್ಯಾಂಕ್ ಸಿಬ್ಬಂದಿ ಸೂಚನೆ ನೀಡಿದ್ದಾರೆ. ಆದರೆ ತಾಯಿಗೆ ಎದ್ದು ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ಬ್ಯಾಂಕಿಗೆ ಬರಲು ಆಗುತ್ತಿಲ್ಲ ಎಂದು ಹೇಳಿದರೂ ಸಿಬ್ಬಂದಿ ಕೇಳುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ವೃದ್ಧೆಯ ಮಗಳು ಗುಂಜ ದೇವಿ ಬೇರೆ ದಾರಿಯಿಲ್ಲದೆ ಈ ರೀತಿಯಾಗಿ ಬ್ಯಾಂಕಿಗೆ ಕರೆತಂದಿದ್ದಾರೆ.

27 ನಿಮಿಷದ ವಿಡಿಯೋದಲ್ಲಿ 60 ವರ್ಷದ ಮಹಿಳೆ ಬಾರ್ಗಾಂವ್ ಗ್ರಾಮದಲ್ಲಿ ತನ್ನ ವೃದ್ಧ ತಾಯಿಯನ್ನು ಮಂಚದ ಮೇಲೆ ಮಲಗಿಸಿಕೊಂಡು ಎಳೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಹೀಗೆ ತನ್ನ ತಾಯಿಯನ್ನು ಮಗಳು ಕರೆದುಕೊಂಡು ಹೋಗುತ್ತಿರುವುದು ಉತ್ಕಲ್ನ ಗ್ರಾಮೀಣ ಬ್ಯಾಂಕಿಗೆ.
In Odisha, A woman dragged her 100-year-old mother to the Bank on a cot. She wanted to get pension money,but bank manager demanded physical verification.
— Sandeep Dhar (@sandeepdhar10) June 15, 2020
Dear @narendramodi can’t v perform verification at home for our aged citizens? pic.twitter.com/Bc14PK9Ojq
ಈ ವಿಡಿಯೋ ಸಾಮಾಜಿಕ ವೈರಲ್ ಆದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಗುಂಜ, ನನ್ನ ತಾಯಿಯ ಹಣವನ್ನು ಡ್ರಾ ಮಾಡಿಕೊಳ್ಳಲು ನನಗೆ ಅವಕಾಶ ನೀಡಿ ಎಂದು ಬ್ಯಾಂಕ್ ಮ್ಯಾನೇಜರ್ ಅವರನ್ನು ಪರಿಪರಿಯಾಗಿ ಬೇಡಿಕೊಂಡೆ. ಯಾಕೆಂದರೆ ಆಕೆಗೆ ಎದ್ದು ನಡೆಯಲು ಆಗುತ್ತಿಲ್ಲ. ನಮಗೆ ಹಣದ ಅವಶ್ಯಕತೆ ಇದೆ. ಹೀಗಾಗಿ ದಯಮಾಡಿ ಹಣ ಡ್ರಾ ಮಾಡಲು ಅವಕಾಶ ನೀಡಿ ಎಂದು ಮನವಿ ಮಾಡಿಕೊಂಡೆ. ಆದರೆ ಬ್ಯಾಂಕ್ ಮ್ಯಾನೇಜರ್ ಇದಕ್ಕೆ ಸುತರಾಂ ಒಪ್ಪಲಿಲ್ಲ. ಬದಲಾಗಿ ಭೌತಿಕ ಪರಿಶೀಲನೆ ನಡೆಸಬೇಕು. ಹೀಗಾಗಿ ಅಗತ್ಯವಾಗಿ ನೀವು ಅವರನ್ನು ಕರೆದುಕೊಂಡು ಬರಲೇಬೇಕು ಎಂದರು.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಪ್ರೀತಿ ಕುರುಡು. ಅದಕ್ಕೆ ವಯಸ್ಸು, ಜಾತಿ, ಊರಿನ ನಿರ್ಬಂಧವಿಲ್ಲ. ಏಳು ಸಮುದ್ರಗಳನ್ನು ದಾಟಿ ಬರುವ ತಾಕತ್ತು ಪ್ರೀತಿಗಿದೆ ಎನ್ನಲಾಗುತ್ತದೆ. ಈ ಮಾತು ಮಧ್ಯಪ್ರದೇಶದ ಹೋಷಂಗಾಬಾದ್ ಯುವಕನ ಪ್ರೀತಿ ವಿಚಾರದಲ್ಲಿ ನಿಜವಾಗಿದೆ. ದೀಪಕ್ ರಜಪೂತ್ ಎಂಬಾತನನ್ನು ಅಮೆರಿಕಾ ಪ್ರೇಯಸಿ ಮದುವೆಯಾಗಿದ್ದಾಳೆ. 36 ವರ್ಷದ ದೀಪಕ್ ಹಾಗೂ ಅಮೆರಿಕಾದ 40 ವರ್ಷದ ಜೂಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂಲಿ, ಯುಎಸ್ಎಯ ಮಾನವ ಸಂಪನ್ಮೂಲ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದಾಳೆ. ಫೇಸ್ಬುಕ್ ನಲ್ಲಿ ಶುರುವಾದ ಸ್ನೇಹ, ವಾಟ್ಸಾಪ್, ಕರೆ ಮೂಲಕ ಪ್ರೀತಿಗೆ ತಿರುಗಿತ್ತು….
ನಾವು ಇಲ್ಲಿ ಅ, ಆ ಅಕ್ಷರಗಳಿಂದ ಪ್ರಾರಂಭವಾಗುವ ಎಲ್ಲಾ ಕನ್ನಡ ಸಿನಿಮಾಗಳ ಪಟ್ಟಿಯನ್ನು ಕೊಟ್ಟಿದ್ದೇವೆ.ಅ ಮತ್ತು ಆ ಅಕ್ಷರಗಳಿಂದ ಪ್ರಾರಂಭವಾಗುವ ಯಾವುದಾದರೂ ಸಿನಿಮಾ ಹೆಸರು ತಪ್ಪಿ ಹೋಗಿದ್ದಾರೆ ಕಾಮೆಂಟ್ ಮಾಡಿ ತಿಳಿಸಿ… 1. ಅಗ್ರಜ 2.ಅಜ್ಜು 3.ಅಣ್ಣ ಬಾಂಡ್ 4.ಅನುರಾಗ ಸಂಗಮ 5.ಅಪ್ಪಾಜಿ 6.ಅಮೃತಧಾರೆ 7.ಅರಮನೆ 8.ಅರುಣರಾಗ 9.ಅಲ್ಲಮ 10.ಅವಳೇ ನನ್ನ ಹೆಂಡತಿ 11.ಅವ್ವ 12.ಅಹಂ ಪ್ರೇಮಾಸ್ಮಿ 13.ಆಕಾಶ ಗಂಗೆ 14.ಆಕಾಶ್ 15.ಆಕ್ಸಿಡೆಂಟ್ ೨೦೦೮ 16.ಆಗೋದೆಲ್ಲ ಒಳ್ಳೇದಕ್ಕೆ 17.ಆಘಾತ 18.ಆಟಗಾರ 19.ಆದಿ 20.ಆಪ್ತ ರಕ್ಷಕ 21.ಆಪ್ತಮಿತ್ರ 22.ಆಯುಧ 23.ಆಹಾ ನನ್ನ…
ಟೀಂ ಇಂಡಿಯಾ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಸದ್ಯದಲ್ಲೇ ಹಸೆಮಣೆ ಏರುತ್ತಿದ್ದಾರೆ.ಈ ವಿಚಾರವನ್ನು ಸ್ವತಃ ವೇದಾ ಅವರೇ ರಿವೀಲ್ ಮಾಡಿದ್ದಾರೆ. ಕನ್ನಡ ನಾಡಿನ ವೇದಾ ಮೂಲತಃ ಚಿಕ್ಕಮಗಳೂರು ಜಿಲ್ಲೆ ಕಡೂರಿನವರಾಗಿದ್ದು ತಾವು ವಿವಾಹವಾಗುತ್ತಿರುವ ಲಲಿತ್ ಚೌಧರಿ ಎಂಬ ಯುವಕನ ಫೋಟೋವನ್ನು ಪೋಸ್ಟ್ ಮಾಡಿದ್ದರು. ವೇದಾ ಅವ್ರ ಪೋಸ್ಟ್ ಅನುಸಾರ ಅವರು ಲಲಿತ್ ಚೌಧರಿ ಎಂಬ ಯುವಕನನ್ನು ವರಿಸಲಿದ್ದಾರೆ. ಆದರೆ ಆ ಯುವಕನ ಕುರಿತಂತೆಯಾಗಲಿ, ವಿವಾಹದ ದಿನಾಂಕ ಸ್ಥಳದ ಮಾಹಿತಿಯಾಗಲಿ ಇನ್ನೂ ಲಭ್ಯವಾಗಿಲ್ಲ. ಶೀಘ್ರವೇ ಈ…
ಬಿಹಾರ ರಾಜ್ಯದಲ್ಲಿ ರೌದ್ರಾವತಾರ ತೋರುತ್ತಿರುವ ರಣಬಿಸಿಲ ತಾಪಕ್ಕೆ ಬಲಿಯಾದವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದ್ದು, ಈವರೆಗೆ ಬಿಸಿಲ ಝಳಕ್ಕೆ 117 ಮಂದಿ ಮೃತಪಟ್ಟಿದ್ದಾರೆ.ಕಳೆದ 48 ಗಂಟೆಗಳಲ್ಲಿ ಮುಂಗರ್ನಲ್ಲಿ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, ಔರಂಗಾಬಾದ್ ನಲ್ಲಿ 60, ಗಯಾದಲ್ಲಿ 35, ನವಾಡಾದಲ್ಲಿ 7, ಕೈಮುರ್ ನಲ್ಲಿ 2, ಅರ್ರಾ, ಸಮಸ್ತಿಪುರ್ ನಲ್ಲಿ ತಲಾ 1 ಮತ್ತು ನಳಂದದಲ್ಲಿ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ರಣ ಬಿಸಿಲಿಗೆ ಸಾರ್ವಜನಿಕರು ಮೃತಪಡುತ್ತಿರುವ ಹಿನ್ನೆಲೆಯಲ್ಲಿ ಗಯಾ ಜಿಲ್ಲಾಧಿಕಾರಿ ಅಭಿಷೇಕ್…
ಮುಂದಿನ ಕೆಲ ದಿನಗಳಲ್ಲಿ ಭಾರತಕ್ಕೆ 5ಜಿ ತಂತ್ರಜ್ಞಾನ ತರಲು Huawei ತುದಿಗಾಲಲ್ಲಿ ನಿಂತಿದೆ, ಭಾರತೀಯರು 4ಜಿ ತಂತ್ರಜ್ಞಾನದ ರುಚಿ ಸವಿಯುತ್ತಿರುವ ಬೆನ್ನಲ್ಲೇ ಇದೀಗ ೫ಜಿ ತಂತ್ರಜ್ಞಾನವು ಭಾರತಕ್ಕೆ ಬರುತ್ತಿರುವುದು ಕೌತುಕಕ್ಕೆ ಕಾರಣವಾಗಿದೆ.
ಡ್ರೈವಿಂಗ್ ಲೈಸೆನ್ಸ್ ನವೀಕರಣ ಅಥವಾ ಅದರಲ್ಲಿನ ವಿಳಾಸ ಬದಲಾವಣೆಗೆ ಸಾರಿಗೆ ಇಲಾಖೆ ಕಚೇರಿಗಳಿಗೆ ಇನ್ನು ಮುಂದೆ ಪದೇ ಪದೇ ಅಲೆಯಬೇಕಿಲ್ಲ. ಅಲ್ಲದೇ, ಈ ಪ್ರಕ್ರಿಯೆಗೆ ಯಾವುದೇ ನಿರಾಕ್ಷೇಪಣಾ ಪತ್ರ ಅವಶ್ಯಕತೆ ಇಲ್ಲ ಎಂದು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೇಳಿದೆ. ಬಹುತೇಕ ಜನ ಸ್ವಂತ ಊರಿನ ವ್ಯಾಪ್ತಿಯ ಆರ್.ಟಿ.ಓ. ಕಚೇರಿಯಲ್ಲಿ ಡಿಎಲ್ ಮಾಡಿಸಿಕೊಂಡಿರುತ್ತಾರೆ ಕಾರಣಾಂತರದಿಂದ ಅವರು ಬೇರೆ ನಗರ ಅಥವಾ ರಾಜ್ಯದಲ್ಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಡಿಎಲ್ ನವೀಕರಣ ಮತ್ತು ವಿಳಾಸ ಬದಲಾವಣೆಗೆ ಆರ್.ಟಿ.ಓ….