ರೆಸಿಪಿ

ಬೇಕರಿ ಸ್ಟೈಲ್ ಸಿಹಿ ಬೂಂದಿ & ಖಾರಾ ಬೂಂದಿ ಮಾಡುವ ವಿಧಾನ.

173

ಸಿಹಿ ಬೂಂದಿ ಮಾಡಲು ಬೇಕಾದ ಪದಾರ್ಥಗಳು : ಕಡ್ಲೆ ಹಿಟ್ಟು 2 ಕಪ್, ಅಡುಗೆ ಸೋಡ 1/4 ಚಮಚ, ಉಪ್ಪು ಚಿಟಿಕೆ, ದ್ರಾಕ್ಷಿ 2 ಚಮಚ, ಗೋಡಂಬಿ 2 ಚಮಚ, ತುಪ್ಪ 2 ಚಮಚ, ಸಕ್ಕರೆ 1/2ಕಪ್, ಏಲಕ್ಕಿ ಪುಡಿ 1/2 ಚಮಚ, ಅಡುಗೆ ಎಣ್ಣೆ 2 ಕಪ್.

ಮಾಡುವ ವಿಧಾನ : ಕಡ್ಲೆಹಿಟ್ಟು , ಉಪ್ಪುಚಿಟಿಕೆ , ಅಡುಗೆ ಸೋಡ ಚೆನ್ನಾಗಿ ಮಿಶ್ರ ಮಾಡಿ. ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ ,ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ ಕೊಳ್ಳಿ. ಸಕ್ಕರೆ ಪಾಕ ಒಂದು ಕಪ್ ಸಕ್ಕರೆ ಗೆ ಮುಕ್ಕಾಲು ಕಪ್ ನೀರು ಸೇ ರಿಸಿ ಕುದಿಸಿ, 5 ನಿಮಿಷ ಏಲಕ್ಕಿ ಪುಡಿಯನ್ನು ಸೇರಿಸಿ. ಸ್ಟೌ ಆರಿಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ. ಕಾದಮೇಲೆ ಕಲಸಿದ ಹಿಟ್ಟನ್ನು ಬೂಂದಿ ಜರಡಿ ಯಲ್ಲಿ ಹಾಕಿ. ಕಾದ ಎಣ್ಣೆಗೆ ಉದುರಿಸಿ. ಗರಿಗರಿಯಾಗಿ ಕರಿದು ತೆಗೆದು, ಸಕ್ಕರೆ ಪಾಕಕ್ಕೆ ಹಾಕಿ, 2 ನಿಮಿಷಗಳ ಕಾಲ ನೆನೆಯಲಿ. ನಂತರ ತೆಗೆದು ಬೇರೆ ಪಾತ್ರೆಗೆ ಹಾಕಿ. ಆರಲು ಬಿಡಿ. ದ್ರಾಕ್ಷಿ ಗೋಡಂಬಿ ತುಪ್ಪದಲ್ಲಿ ಹುರಿದು ಉದುರಿಸಿ. ಸಿಹಿ ಬೂಂದಿ ಸವಿಯಲು ಸಿದ್ಧ.

ಖಾರಾ ಬೂಂದಿ : 2ಕಪ್ ಕಡ್ಲೆ ಹಿಟ್ಟು, ಅಚ್ಚಖಾರದಪುಡಿ 2 ಚಮಚ , ಹಿಂಗು, ಉಪ್ಪು, ಸ್ವಲ್ಪ ಅರಿಶಿನ ಸೇರಿಸಿ ಚೆನ್ನಾಗಿ ಕಲಸಿ. ಸ್ವಲ್ಪ ಸ್ವಲ್ಪ ನೀರು ಚಿಮುಕಿಸಿ (ಇಡ್ಲಿ ಹಿಟ್ಟಿನ ಹದಕ್ಕೆ) ಚೆನ್ನಾಗಿ ಕಲಸಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾಯಿಸಿ ಬೂಂದಿ ಜರಡಿಯಲ್ಲಿ ಕಲಸಿದ ಹಿಟ್ಟನ್ನು ಉದುರಿಸಿ ಕರಿಯಿರಿ. ಕಡ್ಲೆಬೀಜ 1/2 ಕಪ್, ಸಣ್ಣಗೆ ಹೆಚ್ಚಿದ, ಕೊಬ್ಬರಿ 1/4 ಕಪ್, ಹುರಿಗಡಲೆ 1/2 ಕಪ್, ಕರಿಬೇವಿನ ಸೊಪ್ಪು ಒಂದು ಹಿಡಿ, ಒಣಮೆಣಸಿನಕಾಯಿ 7-8 ಚೂರು ಗಳು ಎಲ್ಲವನ್ನೂ ಬೇರೆ ಬೇರೆ ಕರಿಯಿರಿ. ನಂತರ ಕರಿದಿರುವ ಬೂಂದಿಯನ್ನು ಮಿಶ್ರ ಮಾಡಿ.
ಚೆನ್ನಾಗಿ ಮಿಶ್ರ ಮಾಡಿ. ಖಾರಾ ಬೂಂದಿ ಸವಿಯಲು ಸಿದ್ಧ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ