ಸುದ್ದಿ

ಒಂದು ದಿನದ ಮಟ್ಟಿಗೆ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಎಸ್‌ಡಿಎಂ ಅಧಿಕಾರಿಯಾದ ಪಿಯೋನ್ ಮಗಳು.

95

ಹಿಮಾಚಲ ಪ್ರದೇಶದ ಕಾಂಗ್ರಾ ಎಂಬಲ್ಲಿ ಶುಕ್ರವಾರದಂದು 10 ನೇ ತರಗತಿಯ ವಿದ್ಯಾರ್ಥಿನಿಯನ್ನು ಒಂದು ದಿನದ ಮಟ್ಟಿಗೆ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಎಸ್‌ಡಿಎಂ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ.

10ನೇ ತರಗತಿಯಲ್ಲಿ ಶೇಕಡ 94 ರಷ್ಟು ಅಂಕವನ್ನು ಗಳಿಸಿ ತೇರ್ಗಡೆ ಹೊಂದಿರುವ ವಿದ್ಯಾರ್ಥಿನಿ ಹೀನಾ ಠಾಕೂರ್ ಎಂಬವರಿಗೆ ಈ ಅದೃಷ್ಟ ಒಲಿದು ಬಂದಿದೆ. ಹೀನಾ ಅವರ ತಂದೆ ಕಾಂಗ್ರಾ ಉಪವಿಭಾಗದಲ್ಲಿ ಮ್ಯಾಜಿಸ್ಟ್ರೇಟ್‌ನಲ್ಲಿ ಪಿಯೋನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಪೀಯೊನ್ ತಮ್ಮ ಮಗಳ ಸಾಧನೆಗೆ ಗೌರವ ಸಲ್ಲಿಸಿ ಈ ವಿದ್ಯಾರ್ಥಿನಿಯನ್ನು ಒಂದು ದಿನದ ಮಟ್ಟಿಗೆ ಅಧಿಕಾರಿಯಾಗಿ ಮಾಡಲು ಕಾಂಗ್ರಾ ಎಸ್‌ಡಿಎಂ ಜತಿನ್ ಲಾಲ್ ನಿರ್ಧಾರ ಮಾಡಿದ್ದರು.

ಎಸ್‌ಡಿಎಂ ಮಾರ್ಗದರ್ಶನದಲ್ಲಿ ಹೀನಾ ಕಚೇರಿ ಸಭೆಗಳನ್ನು ನಡೆಸಿದರು. ಅಲ್ಲದೆ ಸಂದರ್ಶಕರ ಸಮಸ್ಯೆಗಳನ್ನು ಆಲಿಸಿದರು. ತದನಂತರ ಹೀನಾ ನನ್ನ ಕನಸು ನನಸಾಗಿದೆ. ಮುಂದೆ ಒಂದು ದಿನ ನಾನು ಡಾಕ್ಟರ್ ಆಗುತ್ತೇನೆ ತದನಂತರ ಐಎಎಸ್ ಆಫೀಸರ್ ಎಂದು ತಮ್ಮ ಕನಸನ್ನು ಹೇಳಿಕೊಂಡಿದ್ದಾರೆ.

ಹೀನಾ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸಿನ ಬಗ್ಗೆ ತಿಳಿದಾಗ. ಹೀನಾ ಕನಸು ನನಸಾಗಲು ನೆರವಾಗಲು ಬಯಸಿದ್ದೆ ಎಂದು ಜತಿನ್ ಲಾಲ್ ಪ್ರತಿಕ್ರಿಯೆ ನೀಡಿದ್ದಾರೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ